ಕುಂದಾಪುರದಲ್ಲಿ ಚಕ್ರವರ್ತಿ ಟ್ರೋಫಿ: ನ್ಯಾಶ್ ಬೆಂಗಳೂರು ಚಾಂಪಿಯನ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಡಿ.24ರಿಂದ ನಾಲ್ಕು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯಾಶ್ ಬೆಂಗಳೂರು ತಂಡ ಚಕ್ರವರ್ತಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರೇ. ಬಿಬಿಸಿ ಅಗ್ರಾಹರ ರನ್ನರ್ ಆಗಿ ಮೂಡಿಬಂದಿತು.

Call us

Click Here

ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ 43 ತಂಡಗಳು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟವನ್ನು ತೋರಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಕ್ಕಿತ್ತು. ಪಂದ್ಯಕೂಟದ ಆರಂಭಿಕ ಹಂತದಿಂದಲೂ ಉತ್ತಮ ಪ್ರದರ್ಶನ ನೀಡಿದ ನ್ಯಾಶ್ ಬೆಂಗಳೂರು ತಂಡ ವಿಜಯ ದಾಖಲಿಸುವಲ್ಲಿ ಯಶಸ್ಸನ್ನು ಕಂಡಿತು. ಸೆಮಿ ಫೈನಲ್‌ನ್ನು ಪ್ರವೇಶಿಸಿದ ನ್ಯಾಶ್ ಬೆಂಗಳೂರು ತಂಡ ಎ. ಕೆ. ಸ್ಪೋರ್ಟ್ಸ್ ಉಡುಪಿ ತಂಡವನ್ನು 27 ರನ್ನಗಳ ಅಂತರದಲ್ಲಿ ಮತ್ತು ಬಿಬಿಸಿ ಅಗ್ರಹಾರ ತಂಡ ಗ್ರೀನ್ ಕ್ರಿಕೆಟರ್ಸ್ ಸಾಗರ ತಂಡವನ್ನು 23ರನ್‌ಗಳ ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದವು. ನ್ಯಾಶ್ ಬೆಂಗಳೂರು ಮತ್ತು ಬಿಬಿಸಿ ಅಗ್ರಹಾರ ತಂಡಗಳು ಬಲಿಷ್ಠ ತಂಡಗಳಾಗಿ ಹೊರ ಹೊಮ್ಮಿ ಫೈನಲ್ ಪ್ರವೇಶಿಸುತ್ತಿದ್ದಂತೆ ಜಿದ್ದಾಜಿದ್ದಿನ ವಾತಾವರಣ ನಿರ್ಮಾಣಗೊಂಡು ವಿಜಯಲಕ್ಷ್ಮೀ ಯಾರಿಗೆ ಒಲಿಯುವಳು ಎಂಬ ಕೂತೂಹಲದಲ್ಲಿ 20ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಪ್ರೇಕ್ಷಕರ ಮುಗಿಲು ಮುಟ್ಟುವ ಕರತಾಡನದಲ್ಲಿ ಆರಂಭವಾದ ಫೈನಲ್ ಹಣಾಹಣಿಯಲ್ಲಿ ಬಿಬಿಸಿ ಅಗ್ರಹಾರ ತಂಡ ನಿಗದಿತ 8ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 45ರನ್ ಕಲೆಹಾಕಿತು. ರಚನಾತ್ಮಕ ಆಟದ ಪ್ರದರ್ಶನ ನೀಡಿದ ನ್ಯಾಶ್ ಬೆಂಗಳೂರು ತಂಡ ನಿಗದಿತ ಓವರ್‌ನ ಮುಕ್ತಾಯಕ್ಕೆ 5 ಎಸೆತ ಬಾಕಿ ಇರುವಾಗಲೇ ನ್ಯಾಶ್ ಬೆಂಗಳೂರು ತಂಡದ ದಾಂಡಿಗ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ೪೬ರನ್‌ಗಳನ್ನು ಸಿಡಿಸಿ ರೋಚಕ ವಿಜಯವನ್ನು ಸಾಧಿಸಿತು.
(ಕುಂದಾಪ್ರ ಡಾಟ್ ಕಾಂ)

ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು 65ರನ್ ಹಾಗೂ 9 ವಿಕೆಟ್ ಪಡೆದ ಬಿಬಿಸಿ ತಂಡದ ಸ್ವಸ್ತಿಕ್ ನಾಗರಾಜ್ ಪಡೆದುಕೊಂಡರೇ, ಬೆಸ್ಟ್ ಬ್ಯಾಂಟ್ಸ್ ಮನ್ ಅವಾರ್ಡ್ 107 ರನ್ ಪೇರಿಸಿದ ನ್ಯಾಶ್ ತಂಡದ ಆಟಗಾರ ಅಕ್ಷಯ್ ಪಾಲಾಯಿತು. 11 ವಿಕೆಟ್ ಕಬಳಿಸಿದ ನ್ಯಾಶ್ ತಂಡದ ವಿನಯ್ ಬೆಸ್ಟ್ ಬೌಲರ್ ಆಗಿ ಮೂಡಿಬಂದರು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನ್ಯಾಶ್ ಬೆಂಗಳೂರು ತಂಡದ ಅಪೆಕ್ಸ್ ಪಡೆದುಕೊಂಡರು.

ಈ ಪಂದ್ಯಕೂಟದ ವಿಜೇತ ತಂಡಕ್ಕೆ ನಗದು ರೂ. 3,03,333/- ಹಾಗೂ ವಿಶ್ವಕಪ್ ಮಾದರಿಯ ಚಕ್ರವರ್ತಿ ಟ್ರೋಫಿ 2015 ಹಾಗೂ ರನ್ನರ್ ಅಪ್ ತಂಡಕ್ಕೆ ನಗದು ರೂ.2,02,222/- ಹಾಗೂ ಚಕ್ರವರ್ತಿ ಟ್ರೋಫಿ 2015 ನೀಡಲಾಯಿತು. ಉಪಾಂತ್ಯ ಪಂದ್ಯದಲ್ಲಿ ಪರಾಜಿತ ಎರಡು ತಂಡಗಳಿಗೆ ರೂ.25,000/- ನಗದು ಬಹುಮಾನ ಹಾಗೂ ಕ್ವಾಟರ್ ಫೈನಲ್ ಪರಾಜಿತ ನಾಲ್ಕು ತಂಡಗಳಿಗೆ ರೊ.15,000/- ನಗದು ಬಹುಮಾನ ನೀಡಲಾಯಿತು.

ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನ ಜಂಟಿ ಕಾರ್ಯದರ್ಶಿ ಪಿ.ವಿ ಶೆಟ್ಟಿ, ಉದ್ಯಮಿ ವಿ. ಕೆ. ಮೋಹನ್, ಶ್ರೀನಾಥ ಉಪಾಧ್ಯ, ಸೋಮಶೇಖರ ಉಪಾಧ್ಯ, ವಿ. ಶ್ರೀಧರ್ ಆಚಾರ್ಯ, ಕೆ.ಆರ್. ನಾಯ್ಕ್, ಆರ್. ಫೆಲಿಕ್ಸ್ ಡಿಸೋಜಾ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಲ್ತೂರು ಮೋಹನದಾಸ ಶೆಟ್ಟಿ ಅತಿಥಿಗಳಾಗಿದ್ದರು. ಚಕ್ರವರ್ತಿ ಕ್ರಿಕೆಟ್ ಕ್ಲಬ್ ನ ಗೌರವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಸಂಚಾಲಕ ಅಭಿನಂದನ ಶೆಟ್ಟಿ, ಅಧ್ಯಕ್ಷ ಶ್ರೀಪಾದ್ ಉಪಾದ್ಯ, ಉಪಾಧ್ಯಕ್ಷ ಸತೀಶ್ ಕೋಟ್ಯಾನ್, ಮರತ್ತೂರು ಸುರೇಶ್ ಶೆಟ್ಟಿ, ಕಾರ್ಯದರ್ಶಿ ಪ್ರದೀಪ್ ವಾಸ್, ಖಜಾಂಚಿ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರೂಪಿಸಿದರು. (ಕುಂದಾಪ್ರ ಡಾಟ್ ಕಾಂ)

Click here

Click here

Click here

Click Here

Call us

Call us

ಪಂದ್ಯಾಕೂಟದ ರೂವಾರಿ ಶ್ರೀಪಾದ ಉಪಾಧ್ಯ, ಸತೀಶ್ ಕೋಟ್ಯಾನ್ ಇನ್ನಿತರ ಚಕ್ರವರ್ತಿ ಬಳಗದ ಸದಸ್ಯರ ಪರಿಶ್ರಮದ ಫಲ ಕರಾವಳಿ ಭಾಗದಲ್ಲ್ಚಿ ಅಂತರಾಷ್ರೀಯ ಮಾದರಿಯಲ್ಲಿ ಪ್ರಥಮ ಭಾರಿಗೆ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಹತ್ತಾರು ವಿಶೇಷತೆಗಳಿಂದ ಕೂಡಿರಲು ಸಾಧ್ಯವಾಯಿತು. ಪಂದ್ಯಾಟದ ನೇರಪ್ರಸಾರ, ಲೈವ್ ಸ್ಕೋರ್ ವ್ಯವಸ್ಥೆ, ಥರ್ಡ್ ಅಂಪೈರ್, ಆಟಗಾರರಿಗೆ ತಂಪು ಪಾನಿಯ ನೀಡುವ ಡೈನೋಸರ್, ಡಿಜೆ ಸಂಗೀತ, ಎಲ್.ಸಿ.ಡಿ ಸ್ಕ್ರೀನ್ ಮೂಲಕ ಪಂದ್ಯಾಟ ವೀಕ್ಷಣೆ, ಸಿಡಿಮದ್ದುಗಳ ಪ್ರದರ್ಶನ ಮುಂತಾದವು ಕ್ರಿಕೆಟ್ ಪ್ರಿಯರಿಗೆ ಅಂತರಾಷ್ಟ್ರೀಯ ಮಾದರಿಯ ಕ್ರಿಕೆಟ್ ಪಂದ್ಯಾಟದ ಅನುಭವ ನೀಡಿದರೇ, ಚಿತ್ರರಂಗ ದಂಡು ಆಗಮಿಸಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು. ನಟ, ವಿಜಯ ರಾಘವೇಂದ್ರ, ಶ್ರೀನಗರ ಕಿಟ್ಟಿ, ಬಾಲಚಂದ್ರ, ಹಾಸ್ಯನಟ ಸಾಧುಕೋಕಿಲ, ನಟಿ ಹರ್ಷಿತಾ ಪೂಣಚ್ಚ, ಮಯೂರಿ ಪಂದ್ಯಾಟದ ಕೊನೆಯ ದಿನ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದ್ದರು. ಸುಮಾರು ೪೩ ವರ್ಷಗಳ ಇತಿಹಾಸವನ್ನು ಹೊಂದಿರುವ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಿದೆ. (ಕುಂದಾಪ್ರ ಡಾಟ್ ಕಾಂ)

ಇವನ್ನೂ ಓದಿ:
* ಕುಂದಾಪುರ: ಡಿ.24ರಿಂದ ಚಕ್ರವರ್ತಿ ಕ್ರಿಕೆಟ್ ಕ್ಲಬ್‌ ಆಶ್ರಯದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ – http://kundapraa.com/?p=9456
* ಇಂದಿನಿಂದ ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ. ಚಕ್ರವರ್ತಿ ಟ್ರೋಫಿಗೆ ಸೆಣಸಾಟ. – http://kundapraa.com/?p=9530
* ಕುಂದಾಪುರದಲ್ಲಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ. ಚಕ್ರವರ್ತಿ ಟ್ರೋಫಿಗೆ ವೈಭವದ ಚಾಲನೆ http://kundapraa.com/?p=9583
* ಚಕ್ರವರ್ತಿ ಟ್ರೋಫಿ: ಪಂದ್ಯಾಟ ವೀಕ್ಷಿಸಲು ಕುಂದಾಪುರದಲ್ಲಿ ನಟರ ದಂಡು – http://kundapraa.com/?p=9639


news Chakravarthi cricket club 2news Chakravarthi cricket club 3news Chakravarthi cricket club 4IMG-20151228-WA0027news Chakravarthi cricket club 1

One thought on “ಕುಂದಾಪುರದಲ್ಲಿ ಚಕ್ರವರ್ತಿ ಟ್ರೋಫಿ: ನ್ಯಾಶ್ ಬೆಂಗಳೂರು ಚಾಂಪಿಯನ್

Leave a Reply