Author: Kundapra.com

ಕುಂದಾಪುರ: ಉಡುಪಿ ಜಿಲ್ಲೆಯನ್ನು ತಂಬಾಕುಮುಕ್ತಗೊಳಿಸುವ ನಿಟ್ಟಿನಲ್ಲಿ ಕೊಟ್ಪಾ (ಸಿಗರೇಟ್ ಮತ್ತು ಇನ್ನಿತರ ತಂಬಾಕು ಉತ್ಪನ್ನ ಕಾಯ್ದೆ) ಕಾಯ್ದೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಕೊಟ್ಪಾ ಕಾಯ್ದೆಯ ವಿಶೇಷ ನೋಡೆಲ್ ಅಧಿಕಾರಿ ಡಾ| ಜಾನ್ ಭಾರತದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದರೇ, ಕರ್ನಾಟಕವೊಂದರಲ್ಲೇ 60,000 ಜನರು ಸಾಯುತ್ತಿದ್ದಾರೆ. ಪ್ರತಿದಿನ ರಾಜ್ಯದಲ್ಲಿ ಸರಾಸರಿ 20 ಜನ ಸಾವನ್ನಪ್ಪುತ್ತಿದ್ದಾರೆ ಇದನ್ನು ತಡೆಗಟ್ಟಲು ತಂಬಾಕು ನಿಷೇಧ ಜಾರಿಗೊಳಿಸುವುದು ಅಗತ್ಯ. ಆದರೆ ತಂಬಾಕು ಸೇವನೆ ನಮ್ಮ ಸಂಸ್ಕೃತಿಯ ಜೊತೆಗೆ ಬೆಳೆದು ಬಂದಿರುವುದರಿಂದ ಒಂದೇ ಬಾರಿಗೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲವಾದರೂ ಹಂತ ಹಂತವಾಗಿ ಜಾಗೃತಿ ಮೂಡಿಸಬಹುದಾಗಿದೆ. ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಮಾರಾಟ ನಿಷೇಧದ ಬಗ್ಗೆ 2003 ಕಾನೂನು ಜಾರಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಗದಗ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲಾಗಿದೆ. ಕೋಲಾರದಲ್ಲಿಯೂ ಈ ಆಂದೋಲನವನ್ನು ಕೈಗೆತ್ತಿಕೊಂಡಿದ್ದೆವು. ಈಗ ಉಡುಪಿ…

Read More

ಮರಳಿ ಬಂದಿದೆ ಯುಗಾದಿ. ಮತ್ತದೇ ಹೊಸತನದೊಂದಿದೆ. ಎಲ್ಲೆಲ್ಲೂ ಹೊಸ ಚಿಗುರು, ಹೊಸ ಹೂವು, ಹೊಸ ಫಲ, ಹೊಸ ನಿರೀಕ್ಷೆಗಳು, ಪ್ರಕೃತಿಯಲ್ಲಿ ನವ ಚೈತನ್ಯ. ಮನೆ ಮನೆಯಲ್ಲೂ ಯುಗಾದಿಯ ಸಡಗರ. ಸಂಪ್ರದಾಯದಂತೆ ಈ ದಿನದಂದು ಸೇವಿಸುವ ಬೇವು-ಬೆಲ್ಲ ಜೀವನದ ಸುಖ – ದುಃಖ ಎರಡನ್ನೂ ಸಮನಾಗಿವ ಸ್ವೀಕರಿಸುವ ಪ್ರತೀಕ. ಹಿಂದಿನ ವರುಷದ ಕಹಿ ಅನುಭವಗಳನ್ನು ಮರೆತು, ಮುಂಬರುವ ಭವಿಷ್ಯದ ಆನಂದಕ್ಕಾಗಿ ನಿರೀಕ್ಷಿಸುವ, ಹಾರೈಸುವ ದಿನವಿದು.      ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆ ದಿನ. ಹಿಂದೂ ಪಂಚಾಂಗದ ಮೊದಲನೆ ದಿನ. ಯುಗ ಎಂದರೆ ಅದೊಂದು ಕಾಲ ಗಣನೆ. ಕಾಲದ ಒಂದು ಭಾಗ ಮತ್ತೆ ಆರಂಭವಾಗುತ್ತಿದೆ ಎಂಬುದರ ಸೂಚನೆಯಾಗಿದೆ. ಆಚರಣೆ ಮತ್ತು ಹಿನ್ನೆಲೆ:       ಯುಗಾದಿಯಲ್ಲಿ ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ಇದು ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು…

Read More