Author: Kundapra.com

ಕುಂದಾಪ್ರ ಡಾಟ್ ಕಾಂ.ನಾಗಾರಾಧನೆ ಎಂಬುದು ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಗಾರಾಧನೆ ಅತ್ಯಂತ ಪವಿತ್ರ ಹಾಗೂ ಪೂಜನೀಯವೇನಿಸಿದೆ. ನಾಗ ಮೂಲದ ಆಧಾರದಲ್ಲಿಯೇ ಪ್ರತಿಯೊಂದು ಕೌಟುಂಬಿಕ ಮೌಲ್ಯ, ಆಚರಣೆಗಳು, ಸಂಪ್ರದಾಯಗಳು ಚಾಲ್ತಿಯಲ್ಲಿವೆ. ನಮ್ಮ ಕರಾವಳಿ ಭಾಗದ ಮಾತೃ ಪ್ರಧಾನ ವ್ಯವಸ್ಥೆಯು ನಿಂತಿರುವುದೇ ಈ ನಾಗಾರಾಧನೆ ಮತ್ತು ನಾಗ ಮೂಲದ ಗುರುತಿಸುವಿಕೆಯ ಆಧಾರದಿಂದಾಗಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಹಿಂದೂಗಳಿಗೆ ತುಂಬಾ ವಿಶೇಷ ಹಬ್ಬ. ನಾಗರ ಹಾವಿನೆಡೆಗೆ ಮನುಷ್ಯನ ಸಹಜ ಭಯ, ಭಕ್ತಿಯನ್ನು ತೋರಿಸಿಕೊಳ್ಳುವ ನಾಗರಪಂಚಮಿ ದಿನದಂದು ಹುತ್ತಕ್ಕೆ ಹಾಲೆರೆದರೆ ಒಳಿತಾಗುವುದು ಎನ್ನುವುದು ಸಂಪ್ರದಾಯ. ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಇಂದು ಎಲ್ಲೆಡೆ ನಾಗಾರಾಧನೆ ಭರದಿಂದ ಸಾಗಿದೆ. ಪ್ರತಿಯೊಂದು ಕುಟುಂಬವೂ ತನ್ನ ನಾಗ ಮೂಲವನ್ನು ಅರಸಿಕೊಂಡು ನಾಗಾರಾಧನೆ ಮಾಡಿಕೊಂಡು ಬರುವಲ್ಲಿ ಶ್ರದ್ಧೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.12ರ ಶುಕ್ರವಾರ ಒಟ್ಟು ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 21 ಪ್ರಕರಣ ಮಹಾರಾಷ್ಟ್ರ ಮೂಲದ್ದಾಗಿದೆ. ಓರ್ವ ಸ್ಥಳೀಯ ವೃದ್ಧರಿಗೆ ಪಾಸಿಟಿವ್ ಬಂದಿದೆ.  ಎಲ್ಲರಿನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 22 ಮಂದಿಯಲ್ಲಿ 13 ಮಂದಿ ಪುರುಷರು, 6 ಮಂದಿ ಮಹಿಳೆಯರು ಹಾಗೂ 3 ಮಕ್ಕಳಿಗೆ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 990 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 581ಮಂದಿ ಬಿಡುಗಡೆಯಾಗಿದ್ದು, 408 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

Read More

ಪರಶುರಾಮನ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ (ಕರ್ನಾಟಕದಲ್ಲಿನ ‘ಸಪ್ತ ಮುಕ್ತಿಸ್ಥಳ’) ಒಂದಾದ ಕೊಲ್ಲೂರು ಕುಂದಾಪುರ ತಾಲ್ಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿ, ದಟ್ಟವಾದ ಕಾನನದ ನಡುವೆ ನೆಲೆಸಿಹ ಮೂಕಾಂಬಿಕೆ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಸಹಸ್ರ ಸಹಸ್ರ ಭಕ್ತರನ್ನು ಹೊಂದಿರುವ ಜಗನ್ಮಾತೆ, ಶ್ರೀ ಮೂಕಾಂಬಿಕೆ. ಇತಿಹಾಸ: ಹಿಂದೆ ಮೂರನೇ ಮನ್ವಂತರದಲ್ಲಿ ಮಹಾತಪಸ್ವಿಯಾದ ಕೋಲಮಹರ್ಷಿಯು ಒಂದು ಪರ್ಣಶಾಲೆಯನ್ನು ಸೌಪರ್ಣಿಕಾ ನದಿಯ ದಂಡೆಯಲ್ಲಿ ಕಟ್ಟಿ ತಪಸ್ಸನ್ನಾಚರಿಸುತ್ತಿದ್ದಾನಂತೆ. ಆಶ್ರಮದ ಹಸುವೊಂದು ನಿತ್ಯವೂ ಅಲ್ಲಿಯೇ ಅರಣ್ಯದ ಮಧ್ಯದಲ್ಲಿ ಉದ್ಭವವಾಗಿದ್ದ ಲಿಂಗದ ಕಲ್ಲಿಗೆ ಹಾಲೆರದು ಬರುತ್ತಿದ್ದುದ್ದನ್ನು ಕಂಡ ಮಹರ್ಷಿಗಳು ಅದನ್ನು ನಿತ್ಯ ನೇಮಗಳಿಂದ ಪೂಜಿಸತೊಡಗಿದರು. ತನ್ನ ತಪೋಬಲದಿಂದ ಶಿವನನ್ನು ಪ್ರತ್ಯಕ್ಷ ಮಾಡಿಕೊಂಡು ಈ ಸ್ಥಳವು ತನ್ನ ಹೆಸರಿನಲ್ಲೇ ಉಳಿಯಬೇಕೆಂದು ಪ್ರಾರ್ಥಿಸಿದರಂತೆ. ಅದರಿಂದಾಗಿ ಕೋಲಾಪುರವೆಂದು ನಾಮಕರಣವಾಯಿತೆನ್ನುತ್ತಾರೆ. ಅದೇ ವೇಳೆಯಲ್ಲಿ ಕಂಹಾಸುರನೆಂಬ ಅಸುರನೊಬ್ಬನೂ ಕೂಡ ಮಹಾಬಲಾಢ್ಯನಾಗಿ ಮಹರ್ಷಿಗಳನ್ನು ಪೀಡಿಸಲಾರಂಭಿಸಿದನಂತೆ. ಆಗ ದಿಕ್ಕೆಟ್ಟ ಕೋಲ ಋಷಿಯು ಮತ್ತು ಇತರ ಋಷಿವರೇಣ್ಯರು ತ್ರಿಮೂರ್ತಿಗಳನ್ನು ಮೊರೆ ಹೊಕ್ಕರಂತೆ. ಅವರು ತ್ರಿಪುರ ಭೈರವಿಯನ್ನು…

Read More

ಕುಂದಾಪ್ರ ಡಾಟ್ ಕಾಂ ಪರಶುರಾಮ ಸೃಷ್ಟಿಯ ಸಪ್ತ ಮೊಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಕೋಟಿಲಿಂಗೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ಧ ಶಿವಕ್ಷೇತ್ರ. ಭಕ್ತಾದಿಗಳಿಂದ ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ಶ್ರೀ ಕ್ಷೇತ್ರವು ಕೋಟಿಲಿಂಗ ಸ್ವರೂಪಿಯಾದ ಶಿವನ ದಿವ್ಯ ತಾಣ. ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಶ್ರೀ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನವು ಜನತೆ ಭಕ್ತಿಯಿಂದ ತಮ್ಮನ್ನು ಸಮರ್ಪಿಸಿಕೊಳ್ಳುವ ದೇವತಾ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಷಣ್ಮುಖನು ಕೋಟಿ ಸಂಖ್ಯಾಕ ಅವಯುವಗಳುಳ್ಳ ಕೋಟೆಶ್ವರನ ಕುರಿತು ತಪಸ್ಸು ಆಚರಿಸಿದ್ದ. ತಪೋಜ್ವಾಲೆಯು ತ್ರಿಲೋಕವನ್ನು ವ್ಯಾಪಿಸಲು ಶಿವನು ಕೋಟಿಲಿಂಗ ಸ್ವರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾದ ಎಂಬುದನ್ನು ಶರಾನೀಕ ಮಹಾರಾಜನಿಗೆ ಶೌನಕರು ವಿವರಿಸಿರುವುದು ಪದ್ಮ ಪುರಾಣದ ಪುಷ್ಕರ ಕಾಂಡದಲ್ಲಿ ಉಲ್ಲೇಕಿತಗೊಂಡಿದೆ. ಇನ್ನೊಂದು ಮೂಲದ ಪ್ರಕಾರ ‘ಕೋಟಿ ಋಷಿಗಳು’ ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶಿವನನ್ನು ಒಲಿಸಿಕೊಂಡಿದ್ದರು. ಈ ಕಾರದಿಂದಾಗಿ ಇಲ್ಲಿ ಪರಶಿವನು ‘ಕೋಟಿಲಿಂಗೇಶ್ವರ’ ನಾಗಿ ನೆಲೆಯಾದನು ಎಂದೂ ಹೇಳಲಾಗುತ್ತದೆ. ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲಿದು ಶಿವನು ಈ ಭೂಮಿಯಲ್ಲಿ ನೆಲೆಸಿದನೆಂದೂ, ಬ್ರಹ್ಮದೇವನು…

Read More

ಕಡುಗಲ್ಲ ಗುಹೆ, ಒಳಗೆ ಶ್ರೀ ಕೇಶವನಾಥ! ಕುಂದಾಪ್ರ ಡಾಟ್ ಕಾಂ. ಪ್ರಕೃತಿಯ ಒಡಲೊಳಗೆ ನೂರೆಂಟು ವಿಸ್ಮಯಗಳಿವೆ. ಅದು ವಿಜ್ಞಾನಕ್ಕೂ ಸವಾಲೇ. ಅಂತಹ ನೈಸರ್ಗಿಕ ವಿಸ್ಮಯ ಕುಂದಾಪುರ ತಾಲೂಕು ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರಾ ಕುಗ್ರಾಮ ಮೂಡುಗಲ್ಲು ಎಂಬಲ್ಲಿದೆ. ಹೌದು. ಇದೊಂದು ಪ್ರಾಕೃತಿಕ ವಿಸ್ಮಯ. ಸುಮಾರು 50 ಅಡಿಗಳಷ್ಟು ದೂರ ಕಡುಗಲ್ಲ ಗುಹೆ. ಅದರ ನಡುವೆ ಕುಳಿತಿರುವಾತ ಲಯಕರ್ತ ಶ್ರೀ ಕೇಶವನಾಥೇಶ್ವರ. ದಟ್ಟ ಕಾಡಿನ ನಡುವಿನ ಅಂಗೈಯಗಲ ಪುಟ್ಟ ಗ್ರಾಮದ ನಟ್ಟ ನಡುವೆ ಇದೆ ಈ ಕೇಶವನಾಥ ಕ್ಷೇತ್ರ. [quote bgcolor=”#ffffff” arrow=”yes” align=”right”]ಡಿ.18 ಸೋಮವಾರ ನಡೆಯುವ ಎಳ್ಳಮಾವಾಸ್ಯೆ ಪ್ರಯುಕ್ತ ಮಹಾ ಅನ್ನಸಂತರ್ಪಣೆ , ಶ್ರೀಧರ್ ಶೆಟ್ಟಿ ಮೂಡಗಲ್ಲು ಮತ್ತು ದೀಕ್ಷಿತ್ ಶೆಟ್ಟಿ ಹೊಸೂರು ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಕನ್ನಡ ಚಿತ್ರರಂಗದ ಭರವಸೆಯ ನಟ ಸೂಚನ ಶೆಟ್ಟಿ ಯವರಿಂದ ಡ್ಯಾನ್ಸ್, ಯಾರೇ ನೀನು ಸಾಂಗ್ ಖ್ಯಾತಿಯ ರವೀಂದ್ರ ಶ್ರೇಯಾನ್ ರವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ  ಹಾಗೂ  ಶ್ರೀ ಶನೇಶ್ವರ ಯಕ್ಷಗಾನ…

Read More

ಪರಶುರಾಮನ ಸೃಷ್ಟಿಯ ಸಪ್ತ ಮೊಕ್ಷ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಾದ ಕುಂಭಾಶಿ, ಕೊಲ್ಲೂರು, ಕೊಟೇಶ್ವರ ಹಾಗೂ ಶಂಕರನಾರಾಯಣ ಕ್ಷೇತ್ರಗಳಿರುವುದು ಕುಂದಾಪುರ ತಾಲೂಕಿನಲ್ಲಿಯೇ ಎಂಬುದು ಕುಂದಾಪುರದ ಹಿರಿಮೆ. ಆ ಪೈಕಿ ಕ್ರೋಢಶಂಕರನಾರಾಯಣ ಕ್ಷೇತ್ರವು ಪೌರಾಣಿಕ, ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಕ್ಷೇತ್ರವಾಗಿದೆ. ಕುಂದಾಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಕ್ಷೇತ್ರವು ಉದ್ಬವ ಲಿಂಗವಾದ ಶಿವ ಹಾಗೂ ವಿಷ್ಣುವನ್ನು ಒಟ್ಟಿಗೆ ಆರಾದಿಸುವ ಪುಣ್ಯ ಸ್ಥಳ.                                                    ಇತಿಹಾಸ: ಶಂಕರನಾರಾಯಣ ಕ್ಷೇತ್ರವು ಮೊದಲು ಗೋಳಿಕಟ್ಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಶಂಕರನಾರಾಯಣ ದೇವರಿಂದಾಗಿ ಈ ಊರು ಅದೇ ಹೆಸರಿನಿಂದ ಪ್ರಸಿದ್ಧವಾಗಿದೆ. ಕ್ರೋಢ ಋಷಿ ಇಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ಎಂದು ಪುರಾಣಗಳ ತಿಳಿಸುತ್ತವೆ. ಇಲ್ಲಿನ ವಿಶೇಷವೆಂದರೆ ನೆಲಮಟ್ಟಕ್ಕಿಂತ ಕೆಳಗೆ ಶಿವ ಮತ್ತು ವಿಷ್ಣು ದೇವರುಗಳ ಉದ್ಭವ ಲಿಂಗವಿದೆ. ನೀರಿನಲ್ಲಿರುವ…

Read More

ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಬೈಂದೂರಿಗೆ ಐತಿಹಾಸಿಕ ಹಾಗೂ ಧಾರ್ಮಿಕ ಗಟ್ಟಿತನವನ್ನು ತಂದುಕೊಟ್ಟ ದೇವಾಲಯಗಳ ಪೈಕಿ ಪ್ರಮುಖವಾದುದು ಮಹಾತೋಭಾರ ಶ್ರೀ ಸೇನೇಶ್ವರ ದೇವಸ್ಥಾನ. ಬೈಂದೂರಿನ ಅಧಿದೇವತೆಯಾಗಿ ಪೂಜಿಸಲ್ಪಡುವ ಶ್ರೀ ಸೇನೇಶ್ವರ ಭಕ್ತರ ಇಷ್ಟಾರ್ಥ ಸಿದ್ಧಿಸಿ ಪೊರೆಯುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಶ್ರೀ ರಾಮನು ಕಪಿಸೇನೆಯೊಂದಿಗೆ ಸೀತಾನ್ವೇಷಣೆಗೆ ಹೊಗುವಾಗ ಮಾರ್ಗ ಮಧ್ಯೆ ತಪಸ್ವಿ ಬಿಂದುಋಷಿಗಳ ಕೋರಿಕೆಯಂತೆ ರಾತ್ರಿ ಬೆಳಗಾಗುವುದರೊಳಗೆ ಕಪಿ ಸೇನೆಯಿಂದ ನಿರ್ಮಿಸಿದ ದೇವಾಲಯವಾಗಿದ್ದರಿಂದ ಇದಕ್ಕೆ ಸೇನೇಶ್ವರ ಎಂಬ ಹೆಸರು ಬಂತು ಎಂಬ ಐತಿಹಾಸಿಕ ಕಥೆ ಚಾಲ್ತಿಯಲ್ಲಿದೆ. ಹನ್ನೊಂದನೇ ಶತಮಾನದ ವೇಳೆಗೆ ಚಾಲುಕ್ಯ ರಾಜರ ಸಾಮಂತರಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ಚಾಲುಕ್ಯ ಶಿಲ್ಪಕಲಾ ಶೈಲಿಯಲ್ಲಿ ಕಟ್ಟಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ದೇವಳದ ಕಲ್ಲಿನ ಕೆತ್ತನೆ ಚಾಲುಕ್ಯರ ಶೈಲಿಯನ್ನೇ ಹೊಲುತ್ತದೆ. ಇಲ್ಲಿನ ಅದ್ಬುತವಾದ ಶಿಲ್ಪಕಲೆ ಎಂತವರಲ್ಲಿಯೂ ಬೆರಗು ಹುಟ್ಟಿಸುತ್ತದೆ. ದೇವಾಲಯದ ಗರ್ಭಗುಡಿ, ಸುಖನಾಸಿ, ನಂದಿ ಮಂಟಪ, ನವರಂಗ ಶಿಖರಗಳನ್ನು ಶಿಲೆಯಿಂದಲೇ ನಿರ್ಮಿಸಲಾಗಿದ್ದು, ಇದರಲ್ಲಿನ ಕೆತ್ತನೆಗಳು ಮನಮೋಹಕವಾಗಿವೆ. ಸೇನಾಧಿಪತಿಯಂತೆ ವಿರಾಜಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ತಾಂತ್ರಿಕ ಸಮಸ್ಯೆಗಳು ಬಗೆಹರಿದ ಬಳಿಕ ಬಿಜೆಪಿ ಸೇರ್ಪಡೆ ಖಚಿತವಾಗಿ, ಅವರ ಮರಳಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೊರನಡೆಯಲಿ. ಮುಂದಿನ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿಯವರೇ ಆಗಲಿದ್ದಾರೆ ಎಂದು ಕುಂದಾಪುರದಲ್ಲಿ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳುವ ಮೂಲಕ ಹಾಲಾಡಿ ವಿರೋಧಿ ಬಣಕ್ಕೆ ಚಾಟಿ ಬೀಡಿದ್ದಾರೆ. ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ ಆರಂಭಗೊಳ್ಳುತಿದ್ದಂತೆಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ವಿರೋಧ ಬಣಗಳ ಮಾತಿನ ಜಟಾಪಟಿ ತಾರಕಕ್ಕೇರಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿ ಬಣದಿಂದ ಬಾವುಟ, ಬ್ಯಾನರ್ ಪ್ರದರ್ಶನ ಒಂದು ಕಡೆಯಾದರೆ ಅವರ ಪರವಾಗಿದ್ದ ಕಾರ್ಯಕರ್ತರು ಹಾಲಾಡಿ ಪರವಾಗಿ ನಿರಂತವಾಗಿ ಘೋಷಣೆ ಕೂಗಿದರು. ವೇದಿಕೆಯ ಮುಂಭಾಗದ ತನಕ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಪೊಲೀಸ ನಡುವೆ ಮಾತಿನ ಚಕಮಕಿ ನಡೆಯಿತು. ಇತ್ತ ರಾಜ್ಯಾಧ್ಯಕ್ಷ ಯಡಿಯೂರಪ್ಪ…

Read More

ಕುಂದಾಪ್ರ ಡಾಟ್ ಕಾಂ. ಮೂಲೋಕದೊಡತಿ ಕೊಲ್ಲೂರು ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ, ದೇವಿಯಿಂದ ವರ ಪಡೆದು ಕಾರಣಿಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆನಿಂತು ನಂಬಿಬಂದ ಭಕ್ತಕೋಟಿಯನ್ನು ಹರಸುತ್ತಿದ್ದಾನೆ. ದೇವಿಯಿಂದ ಮೂಕಾಸುರ ಹತನಾದ ಕ್ಷೇತ್ರವೇ ಮಾರಣಕಟ್ಟೆಯಾಗಿದ್ದು ಪ್ರಸಿದ್ದಿ ಪಡೆದಿದ್ದು, ಇಲ್ಲಿಯೇ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಾನವಿದೆ. ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಮೂಲಕ ತೆರಳಿದರೇ  ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ದರ್ಶನ ಪಡೆಯಬಹುದಾಗಿದೆ. ಪೌರಾಣಿಕ ಹಿನ್ನೆಲೆ: ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ…

Read More