Author: Kundapra.com

ಸಂಪರ್ಕ: ಹೋಟೆಲ್ ಜ್ಯೂವೆಲ್ ಪಾರ್ಕ್ ಎನ್.ಹೆಚ್.66 ಹೆಮ್ಮಾಡಿ, ಕುಂದಾಪುರ, ಉಡುಪಿ ಜೆಲ್ಲೆ ಕರ್ನಾಟಕ 576230 ಪೋನ್: 08254-278375 [divide icon=”square” icon_position=”left”] ಮಾರ್ಗ ಸೂಚಿ: ಮಂಗಳೂರು ವಿಮಾನ ನಿಲ್ದಾಣದಿಂದ 100 ಕಿ.ಮೀ. ಕೊಂಕಣ್ ರೈಲ್ವೇ ನಿಲ್ದಾಣದಿಂದ 14 ಕಿ.ಮೀ ಕುಂದಾಪುರ-ಭಟ್ಕಳ, ಕುಂದಾಪುರ-ಕೊಲ್ಲೂರು ಮಾರ್ಗಮಧ್ಯೆ ಸಂಚರಿಸುವ ಲೋಕಲ್ ಬಸ್ಸುಗಳ ನಿಲುಗಡೆ.

Read More

ಸಂಪರ್ಕ: ಶಾಸ್ತ್ರಿ ವೃತ್ತದ ಬಳಿ ಕುಂದಾಪುರ ಕರ್ನಾಟಕ -576201 ಪೋನ್: 08254-233436 ರೂಮ್ ಸೌಲಭ್ಯವಿದೆ [divide icon=”square” icon_position=”left”] ಮಾರ್ಗ ಸೂಚಿ: ಮಂಗಳೂರು ವಿಮಾನ ನಿಲ್ದಾಣದಿಂದ 100 ಕಿ.ಮೀ. ಕೊಂಕಣ್ ರೈಲ್ವೇ ನಿಲ್ದಾಣದಿಂದ 6 ಕಿ.ಮೀ ಶಾಸ್ತ್ರಿ ವೃತ್ತದ ಬಸ್ ನಿಲ್ದಾಣಕ್ಕೆ ಸಮೀಪ

Read More

ಸಂಪರ್ಕ: ಹೋಟೆಲ್ ಶರೋನ್ ಎನ್.ಹೆಚ್-66 ಪಿ.ಬಿ ನಂ-32 ಕುಂದಾಪುರ ಕರ್ನಾಟಕ -576201 ಪೋನ್: 08254-230623 ರೂಮ್ ಲಭ್ಯವಿದೆ ದಿನವೊಂದಕ್ಕೆ ಬಾಡಿಗೆ: ರೂ.700 – 1100 [divide icon=”square” icon_position=”left”] ಮಾರ್ಗ ಸೂಚಿ: ಮಂಗಳೂರು ವಿಮಾನ ನಿಲ್ದಾಣದಿಂದ 100 ಕಿ.ಮೀ. ಕೊಂಕಣ್ ರೈಲ್ವೇ ನಿಲ್ದಾಣದಿಂದ 6 ಕಿ.ಮೀ ಶಾಸ್ತ್ರಿ ವೃತ್ತದ ಬಸ್ ನಿಲ್ದಾಣಕ್ಕೆ ಸಮೀಪ.

Read More

ಗುಣಮಟ್ಟದ ಆಹಾರ ಪದಾರ್ಥಗಳಿಂದಲೇ ಹೋಟೆಲ್ ಉದ್ಯಮದಲ್ಲಿ ಮನೆಮಾತಾಗಿರುವ ಸಂಸ್ಥೆ ಪಾರಿಜಾತ ಕುಂದಾಪುರ ನಗರದ ಪ್ರಮುಖ ಹೋಟೆಲ್ ಗಳಲ್ಲಿ ಒಂದಾಗಿದೆ. ಪಿ. ಎನ್. ರಾಮಚಂದ್ರ ಭಟ್ 1969 ರಲ್ಲಿ ಆರಂಭಿಸಿದ ಹೋಟೆಲ್ ಪಾರಿಜಾತ ಇಂದು ವಿವಿಧ ಮಗ್ಗಲುಗಳಲ್ಲಿ ಬೆಳೆದು ನಿಂತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿನ ಬೇಕರಿ ಉತ್ಪನ್ನಗಳು, ಸಿಹಿ ತಿಂಡಿ-ತಿನಿಸುಗಳು, ಐಸ್ ಕ್ರಿಮ್, ಸಾಂಬಾರು ಪದಾರ್ಥ ಮುಂತಾದವುಗಳು ಬಹಳ ಪ್ರಸಿದ್ದಿ ಪಡೆದಿವೆ. ಹೊಟೆಲ್, ಬೇಕರಿ, ಫಲಹಾರ ಮಂದಿರ, ಕಲ್ಯಾಣ ಮಂಟಪ, ವಸತಿಗೃಹ ಹಾಗೂ ಸಾಂಬಾರು ಪದಾರ್ಥಗಳ, ಹೋಂ ಪ್ರೊಡಕ್ಟ್ಸಮುಂತಾದ ರೆಡಿ ಉತ್ಪನ್ನಗಳ ಉದ್ಯಮದಲ್ಲಿ ಪಾರಿಜಾತ ಹೆಸರು ಮಾಡಿದೆ. *ಇಲ್ಲಿನ ಸ್ನೇಹ ಫಲಾಹಾರ ಮಂದಿರ ಬೆ. 7:30 ರಿಂದ 1 ಹಾಗೂ ಸಂಜೆ 4 ರಿಂದ 8 ಗಂಟೆ ತನಕ ತೆರೆದಿರುತ್ತದೆ. * ಬೆಳಿಗ್ಗೆಯಿಂದ ರಾತ್ರಿಯ ತನಕ ಬೇಕರಿ ತೆರೆದಿರುತ್ತದೆ. * ಸುಮಾರು 450 ಮಂದಿ ಆಸನ ವ್ಯವಸ್ಥೆ, 225 ಮಂದಿ ಉಟದ ವ್ಯವಸ್ಥೆ ಇರುವ ಪದ್ಮಾವತಿ ಕಲ್ಯಾಣ ಮಂಟಪ/ ಪಾರ್ಟಿ ಹಾಲ್…

Read More

ಉಡುಪಿ ಸೊದೆ ಮಠದ ಶ್ರೀಗಳು ಪರ್ಯಾಯ ಪೀಠವನ್ನೇರಿ ಶ್ರೀ ಕೃಷ್ಣನ ಕೈಂಕರ್ಯದಲ್ಲಿ ತೊಡಗಿದ್ದರಿಂದ ಅವರ ಹುಟ್ಟೂರಾದ ಕುಂದಾಪುರ ತಾಲೂಕಿನ ಹೂವಿನಕೆರೆ ವಿಶೇಷ ಮಹತ್ವ ಪಡೆದುಕೊಂಡು ರಾಜ್ಯಾದ್ಯಂತ ಭಕ್ತಾಭಿಮಾನಿಗಳು ಇಲ್ಲಿಗೆ ಆಗಮಿಸುತ್ತಾರೆ. ವಾದಿರಾಜರ ಜನನ: ಆನೆಗುಡ್ಡೆಯ ಹಿಂಬಾಗದಿಂದ ವಕ್ವಾಡಿ ಮಾರ್ಗವಾಗಿ 4 ಕಿ.ಮೀ ದೂರದ ಅಸೋಡು ಗ್ರಾಮದ ಹೂವಿನಕೆರೆ ಎಂಬ ಹಳ್ಳಿಯಲ್ಲಿ ಶಾರ್ವರಿ ಸಂವತ್ಸರದ ಮಾಘ ಮಾಸ ಶುದ್ದ ದ್ವಾದಶಿಯಂದು ಬೆಳಗಿನ ಜಾವ ಕ್ರಿ.ಶ. 1481 ರಲ್ಲಿ ಶ್ರೀ ರಾಮಾಚಾರ್ಯ, ಗೌರಿ ದೇವಿಯ ಪುತ್ರರಾಗಿ ವಾದಿರಾಜರು ಜನಿಸಿದ್ದಾರೆ. ವಾದಿರಾಜರು ಜನ್ಮತಾಳಿದ ಸ್ಥಳ `ಗೌರಿ ಗದ್ದೆ’: ಹಲವಾರು ವರ್ಷಗಳಿಂದ ಪುತ್ರ ಸಂತಾನವಿಲ್ಲದ ರಾಮಾಚಾರ್ಯ ದಂಪತಿಗಳು ಅಂದಿನ ಅಷ್ಟ ಮಠದ ಮಹಾಜ್ಞಾನಿಗಳು ಪವಾಡ ಪುರುಷರೆಂದೇ ಖ್ಯಾತರಾಗಿರುವ ವಾಗೀಶ ತೀರ್ಥರಲ್ಲಿ ಪುತ್ರ ಸಂತಾನಕ್ಕಾಗಿ ಬಯಕೆ ಮಂದಿಟ್ಟು ಯತಿಗಳ ಸಂಸ್ಥಾನದ ಆರಾದ್ಯಮೂರ್ತಿ ಶ್ರೀ ಭೂವರಹ ಸ್ವಾಮಿಯ ಫಲ ಮಂತ್ರಾಕ್ಷತೆ ನೀಡಿ. `ನಿಮಗೆ ಹುಟ್ಟುವ ಮಗನು ನಮ್ಮ ಪೀಠದ ಸಂನ್ಯಾಸಿಯೇ ಆಗುವನು ಆದರೆ, ಮನೆಯೊಳಗೆ ಮಗು ಹುಟ್ಟದರೆ ನಿಮಗಿರಲಿ ಹೊರಗೆ…

Read More

ಕುಂದಾಪುರದಿಂದ ಶಿವಮೊಗ್ಗ ತೆರಳುವ ಮಾರ್ಗದ ಯಡಾಡಿ-ಮತ್ಯಾಡಿ ಗ್ರಾಮದಲ್ಲೊಂದು ತೀರಾ ಅಪರೂಪದ ದೇವಾಲಯ. ಕಾಡು-ಮೇಡು ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ಬೃಹತ್ ಬಂಡೆಯೇ ಇಲ್ಲಿಯ ಗುಡ್ಡಟ್ಟು ವಿನಾಯಕನ ಆವಾಸಸ್ಥಾನ. ಬಂಡೆಯ ಗುಹೆಯ ಮದ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾದ್ಯ ದೇವ. ಬಹಳಷ್ಟು ಆಕಾರ ಹೊಂದಿರುವ ಶ್ರೀ ದೇವರ ಮೂಲ ಬಿಂಬವು ವರ್ಷದ ಎಲ್ಲಾ ಸಂದರ್ಭದಲ್ಲಿಯೂ ಕಂಠದವರೆಗೂ ನೀರಿನಲ್ಲಿಯೇ ಮುಳುಗಿರುವುದು ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಬರುವ ಧಾರ್ಮಿಕ-ಪ್ರೇಕ್ಷಣಿಯ ಸ್ಥಳವಿದು. ಹಿನ್ನೆಲೆ-ಇತಿಹಾಸ: ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನವು ಒಂದು ಪುರಾಣ ಪ್ರಸಿದ್ದವಾದ ಕ್ಷೇತ್ರವಾಗಿದೆ. ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ದಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ, ಆದರೆ ಜಯಲಭಿಸದೇ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ…

Read More

ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳ ಪೈಕಿ ಪ್ರಮುಖವಾದುದು ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ. ಇತಿಹಾಸ ಹಬ್ಬ ಹಾಗೂ ಉತ್ಸವಗಳು  ಸಂಪರ್ಕ

Read More

ಸಿದ್ದಿ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ಕುಂಭಾಸಿ, ಕುಂದಾಪುರದಲ್ಲಿನ ಪ್ರಸಿದ್ಧ ದೇವಾಲಯಗಳಲ್ಲೊಂದು. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಕುಂದಾಪುರದಿಂದ ದಕ್ಷಿಣಕ್ಕೆ ರಾ.ಹೆ. 66ರಲ್ಲಿ ಸುಮಾರು 9 ಕಿ.ಮೀ. ದೂರದಲ್ಲಿ ಸಾಗಿದರೆ ಆನೆಗುಡ್ಡೆ (ಕುಂಭಾಸಿ) ಶ್ರೀ ವಿನಾಯಕ ದೇವರ ದರ್ಶನ ಪಡೆಬಹುದಾಗಿದೆ. ಇದು ಪುರಾತನವಾದ ಮತ್ತು ನಾಡಿನಾದ್ಯಂತ ಭಕ್ರಸಾಗರವನ್ನು ಹೊಂದಿರುವ ದೇವಾಲಯವಾಗಿದೆ. ಪೌರಾಣಿಕ ಹಿನ್ನಲೆ: ಕುಂಭಾಸಿಗೆ ಹರಿಹರಕ್ಷೇತ್ರ, ಮಧುಕಾನನ, ಗೌತಮಕ್ಷೇತ್ರ, ನಾಗಾಚಲ, ಆನೆಗುಡ್ಡೆ, ಕುಂಭಕಾಶಿ ಮುಂತಾದ ಹೆಸರುಗಳಿವೆ. ಪ್ರತಿ ಹೆಸರಿನ ಹಿಂದೆಯೂ ಪೌರಾಣಿಕ ಕಥೆಗಳಿವೆ. ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ರಾಕ್ಷಸನು ರಾಮಚಂದ್ರನಿಗೆ ಭಯಪಟ್ಟು ಮಹೇಂದ್ರಗಿರಿಯಲ್ಲಿ ಅವಿತುಕೊಂಡಿದ್ದನು. ಕಾಲಾಂತರದಲ್ಲಿ ಅಲ್ಲಿಂದ ಹೊರಟು ನಾರದನ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರಪಡೆದು ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು. ಈತನಿಗೆ ಭಯಪಟ್ಟು ಅಲ್ಲಿನ ಜನರು ಓಡಿಗೋಗಬೇಕಾಗಿ ಬಂತು.. ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನು ತಿಳಿದ…

Read More