Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜೂ.2: ಬುಧವಾರ ರಾತ್ರಿ ಕೋಟೇಶ್ವರ ಸಮೀಪದ ಕಟ್ಕರೆಯ ಪ್ರಸಿದ್ಧ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನಕ್ಕೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿರುವ ಘಟನೆ ನಡೆದಿದ್ದು, ಸೇಫ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿಯ ಸಮಯ ಪ್ರಜ್ನೆಯಿಂದ ತಪ್ಪಿದ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದ್ದ ಕಳ್ಳತನ ತಪ್ಪಿದೆ. ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಪರಶು ಹಾಗೂ ಸಿ.ಸಿ ಟಿವಿ ಡಿವಿಆರ್, ಹಾರ್ಡ್ ಡಿಸ್ಕ್ ಕೂಡ ಕದ್ದೊಯ್ದಿದ್ದಾರೆ. ಬಾಗಿಲಿಗೆ ಅಳವಡಿಸಿದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿದ್ದಾರೆ. ಕಳವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ ರೂ. 25,000 ಆಗಿದ್ದು ಕಳ್ಳತನದ ವೇಳೆ 1.5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಗೈದಿದ್ದಾರೆ. ಕಳೆದ ಆರು ವರ್ಷಗಳ ಹಿಂದೆಯೂ ಇದೇ ದೇವಸ್ಥಾನದಲ್ಲಿ 10ಲಕ್ಷಕ್ಕೂ ಅಧಿಕ ನಗ-ನಗದು ಕಳವಾಗಿತ್ತು. ಸೇಪ್ ಕುಂದಾಪುರ ಪ್ರಾಜೆಕ್ಟ್‌ನಿಂದ ತಪ್ಪಿದ…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಗುರುವಾರ ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಈ ಸಂದರ್ಭ ಜಿ.ಪಂ ಸದಸ್ಯ ತಗ್ಗರ್ಸೆ ಬಾಬು ಶೆಟ್ಟಿ, ಗ್ರಾ.ಪಂ ಸದಸ್ಯ ಬಾಲಕೃಷ್ಣ ಹೆಗ್ಡೆ, ಸುಭಾಶ್ಚಂದ್ರ ಶೆ್ಟ್ಟಿ, ಎಂಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ರಾಜು ಹುದಾರ್ ಮೊದಲಾದವರು ಇದ್ದರು. ಸಾಂಪ್ರದಾಯಿಕ ಕೃಷಿ ಕಾರ್ಯ: ಕಂಠದಮನೆಯ ಎದುರೇ ಸುಮಾರು 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆಯಿದೆ. ಅಲ್ಲಿ ವೀರಗಲ್ಲು, ಶಾಸನಗಳು ಇದ್ದು, ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಂದಿಗೂ ಕೂಡ ಇಲ್ಲಿ ಕೃಷಿಕಾಯಕವನ್ನು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ರೋಟರಿ ಶಿಕ್ಷಣವಾಹಿನಿ ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ೨೦೧೯-೨೦ ಗಂಗೊಳ್ಳಿಯ ಎರಡು ಶಾಲೆಗಳಿಗೆ ಕೊಡಮಾಡಿದ ವಾಶ್ ಬೇಸಿನ್‌ನ್ನು ಮಂಗಳವಾರ ಜರಗಿದ ಸರಳ ಸಮಾರಂಭದಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು. ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ರಥಬೀದಿ) ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಕೊಡ ಮಾಡಿದ ವಾಶ್ ಬೇಸಿನ್‌ನ್ನು ರೋಟರಿ ಜಿಲ್ಲೆ ೩೧೮೨ರ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ ಹಸ್ತಾಂತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ, ಗಂಗೊಳ್ಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಎಚ್.ಗಣೇಶ ಕಾಮತ್, ಎಸ್.ವಿ. ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕಾಶೀನಾಥ ಪೈ, ಗಂಗೊಳ್ಳಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ನಿಯೋಜಿತ ಕಾರ್ಯದರ್ಶಿ ಎಂ.ನಾಗೇಂದ್ರ ಪೈ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ರಥಬೀದಿ)ಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್, ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಶ್ಫಕ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸತೀಶ್ ಕೊತ್ವಾಲ್, ನಿಯೋಜಿತ ಅಧ್ಯಕ್ಷರಾಗಿ ಎ. ಶಶಿಧರ ಹೆಗ್ಡೆ, ಖಜಾಂಚಿಯಾಗಿ ಪ್ರದೀಪ ವಾಜ್, ಪದಾಧಿಕಾರಿಗಳಾಗಿ ಟಿ. ಬಾಲಚಂದ್ರ ಶೆಟ್ಟಿ (ಕ್ಲಬ್ ಸರ್ವೀಸ್), ಕೆ. ಸುಭಾಶ್ಚಂದ್ರ ಶೆಟ್ಟಿ (ವೆಕೇಶನಲ್ ಸರ್ವೀಸ್), ಗಣೇಶ್ ಐತಾಳ್ (ಕಮ್ಯೂನಿಟಿ ಸರ್ವೀಸ್), ಪ್ರಶಾಂತ ತೋಳಾರ್ (ಇಂಟರ್‌ನ್ಯಾಶನಲ್ ಸರ್ವೀಸ್), ರಾಘವೇಂದ್ರ ಚರಣ ನಾವಡ(ಯೂತ್ ಸರ್ವೀಸ್) ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕೋವಿಡ್-19 ವಿರುದ್ದದ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ರೀತಿಯಲ್ಲಿ, ಸಮಾಜದಲ್ಲಿ ಕೊರೋನಾ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ| ಅಲಕಾನಂದ ರಾವ್ ಹೇಳಿದ್ದಾರೆ. ಅವರು ಬುಧವಾರ, ಉಡುಪಿಯ ಆಯುಷ್ ಇಲಾಖೆಯಲ್ಲಿ , ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ನಡೆದ, ವೈದ್ಯರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪತ್ರಕರ್ತರಿಗೆ ಕೋವಿಡ್-19 ಗೆ ಸಂಬಂಧಿಸಿದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಮಾತ್ರೆ ಹಾಗೂ ಚ್ಯವನಪ್ರಾಶ ವಿತರಿಸಿ ಮಾತನಾಡಿದರು. ಕೋರೋನಾ ವಿರುದ್ದ ಹೋರಾಟದಲ್ಲಿ, ಆಯುರ್ವೇದ ವೈದ್ಯರು ಕೂಡ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕು ನಿಯಂತ್ರಣ ತರುವಲ್ಲಿ ಆಯುರ್ವೇದ ವೈದ್ಯರ ಪಾತ್ರ ಕೂಡ ಇದೆ , ಪತ್ರಕರ್ತರು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರ ನಡುವೆಯೇ ಹೆಚ್ಚು ಇರುವುದರಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.1ರ ಬುಧವಾರ 22 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 218 ನೆಗೆಟಿವ್: ಈ ತನಕ ಒಟ್ಟು 14,819 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 13,194 ನೆಗೆಟಿವ್, 1,228 ಪಾಸಿಟಿವ್ ಬಂದಿದ್ದು, 397 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 218 ನೆಗೆಟಿವ್, 22 ಪಾಸಿಟಿವ್ ಬಂದಿದೆ.  ಜಿಲ್ಲೆಯಲ್ಲಿ ಸದ್ಯ 961 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. 156 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,228 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1069 ಮಂದಿ ಬಿಡುಗಡೆಯಾಗಿದ್ದು, 156 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಬೈಂದೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಉಪ್ಪುಂದದ ವಿದ್ಯಾರ್ಥಿನಿಗೆ ಕೋರೋನಾ ಪಾಸಿಟಿವ್ – https://kundapraa.com/?p=39141 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ ಉಪ್ಪುಂದದ ವಿದ್ಯಾರ್ಥಿನಿಯೋರ್ವ ಕೋರೋನಾ ಪಾಸಿಟಿವ್ ದೃಢವಾಗಿದೆ. ಶನಿವಾರದ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಆಕೆ ಪರೀಕ್ಷೆಗೆ ಹಾಜರಾಗಿರಲಿಲ್ಲ. ಆಕೆಯ ಸ್ವ್ಯಾಬ್ ತೆಗೆದು ಸೋಮವಾರ ಕೋರೋನಾ ಟೆಸ್ಟ್’ಗೆ ಕಳುಹಿಸಲಾಗಿದ್ದು, ಮಂಗಳವಾರ ಬಂದ ವರದಿಯಲ್ಲಿ ಪಾಸಿಟಿವ್ ಇರುವುದು ದೃಢವಾಗಿತ್ತು. ವಿದ್ಯಾರ್ಥಿನಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಾ ಕೊಠಡಿ ಹಾಗೂ ಮನೆಯನ್ನು ಸೀಲ್‌ಡೌನ್ ಮಾಡಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ► ಶಿಕ್ಷಣದ ಪರಿಪೂರ್ಣತೆಗೆ ಪೂರಕವಾಗಬಲ್ಲ ಶಿಕ್ಷಣ ಇಲಾಖೆಯ ಕನಸಿನ ಕೂಸು ಮಕ್ಕಳವಾಣಿ – https://kundapraa.com/?p=39132 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಮಂಗಳವಾರ ಆಯುಷ್ ಕಿಟ್ ವಿತರಿಸಲಾಯಿತು. ಕಾಲ್ತೋಡು ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಅವರು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಅದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸಂಸ್ಥೆಯ ಮುಖ್ಯ ಕಾರ್ಯನಿವರ್ಹಣಾಧಿಕಾರಿ ವಿಷ್ಣು ಪೈ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಜಿಲ್ಲೆಯ ಅನುದಾನದಿಂದ ಕುಂದಾಪುರ  ಸೌತ್ ರೋಟರಿ ಕ್ಲಬ್  ಮುಖಾಂತರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಎರಡು ಶವ ಶೀತಲೀಕರಣ ಘಟಕಗಳನ್ನು (mortuary) ಮಂಗಳವಾರ ಹಸ್ತಾಂತರಿಸಲಾಯಿತು. ಈ ಸಂದರ್ಭ ಶೀತಲೀಕರಣ ಘಟಕ ಹಸ್ತಾಂತರಿಸಿದ ರೋಟರಿ ಜಿಲ್ಲೆಯ ಪೂರ್ವ ಗವರ್ನರ್ ಅಭಿನಂದನ್ ಎ. ಶೆಟ್ಟಿ ಮಾತನಾಡಿ, ರೋಟರಿ ಜಿಲ್ಲಾ ಅನುದಾನದ ಮೂಲಕ ಸಮಾಜಕ್ಕೆ ಅಗತ್ಯತೆಯನ್ನು ಮನಗಂಡು ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಹುಕಾಲದ ಅಗತ್ಯತೆಯಾಗಿದ್ದ ಮೊರ್ಚರಿಯ ಬಗ್ಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆಯ ಗಮನಕ್ಕೆ ತರಲಾಗಿತ್ತು. 2018-19ರ ಅನುದಾನದ ರೂ.5 ಲಕ್ಷದಲ್ಲಿ ಎರಡು ಬಾಡಿ ಮೊರ್ಚರಿ ಸ್ಟೋರೇಜ್ ಸಿಸ್ಟಮ್ ಈಗ ಲಭಿಸಿದೆ. ಮೃತರಾದ ವ್ಯಕ್ತಿಯ ಮನೆಯವರು ಬರುವುದು ವಿಳಂಬವಾದರೆ ಅಲ್ಲಿನ ತನಕ ಶವವನ್ನು ಸಂಗ್ರಹಿಸಿ ಇಡಲು ಅನುಕೂಲವಾಗುತ್ತದೆ ಎಂದರು. ಜಿಲ್ಲಾ ಫೌಂಡೇಶನ್ ಕಮಿಟಿ ಚೆರ್ ಮನ್ ಸದಾನಂದ ಚಾತ್ರ, ವಲಯ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಮುಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೂನ್ ಮಾಹೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ಕುಂದಾಪುರ ತಾಲೂಕಿನ ಹಕ್ಲಾಡಿ, ಕಟ್‌ಬೆಲ್ತೂರು, ಕಂದಾವರ ಹಾಗೂ ಬ್ರಹ್ಮವರ ತಾಲೂಕಿನ ಕೋಟ, ಬಿಲ್ಲಾಡಿ, ಕಾಡೂರು ಗ್ರಾಮ ಪಂಚಾಯತಿ ಪ್ರತಿನಿಧಿಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನಕರ ಬಾಬು ಅಭಿನಂದಿಸಿದರು. ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದ್ದು, 2020-21 ರ ಸಾಲಿನಲ್ಲಿ ಒಟ್ಟು 5.12 ಲಕ್ಷ ಮಾನವ ದಿನಗಳನ್ನು ಸೃಷ್ಠಿಸುವ ಗುರಿ ಹೊಂದಿದ್ದು, ಜೂನ್ ಅಂತ್ಯಕ್ಕೆ 1.64 ಲಕ್ಷ ಗುರಿ ಹೊಂದಲಾಗಿತ್ತು, ಈ ಸಾಲಿನಲ್ಲಿ ಈವರೆಗೆ 2.88 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು ಗುರಿಗೆ ಶೇ.56.25 ಪ್ರಗತಿ ಸಾದಿಸಿದ್ದು, ಜೂನ್ ಮಾಹೆಯ ಗುರಿಗೆ ಶೇ.175.60 ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಜೂನ್ ಮಾಹೆಯವರೆಗೆ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ, ಬಿಲ್ಲಾಡಿ ಗ್ರಾ.ಪಂ (11111 ಮಾನವ ದಿನಗಳು),…

Read More