Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರು 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. ಮೂಲತಃ ಬೈಂದೂರು ತಾಲೂಕು ಬಿಜೂರಿನವರಾದ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ.  2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು. ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಶಂಕರ ಪೂಜಾರಿ ಅವರು ಪ್ರಸ್ತುತ ಅವರು ಯಡ್ತಾಡಿ ಸೈಬ್ರಕಟ್ಟೆಯಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ ► ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾದ ಲೋಕಾಯುಕ್ತ ಇನ್ಸ್‌ಪೆಕ್ಟರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಸಿಕೆಯಿಂದ ಮಾತ್ರ ಕೊರೊನಾ ಮಣಿಸಲು ಸಾಧ್ಯವಾಗುವುದರಿಂದ ಎಲ್ಲರೂ ತಮ್ಮ ಸರತಿ ಬಂದಾಗ ತಪ್ಪದೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹೇಳಿದರು. ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಶೇ 25 ಮೀಸಲು ನಿಧಿಯ ಸೌಲಭ್ಯ ವಿತರಣೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಎರಡನೆ ಬಾರಿ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಸರ್ಕಾರ ವಿಧಿಸಿದ ನಿರ್ಬಂಧಗಳನ್ನು ತಪ್ಪದೆ ಪಾಲಿಸಬೇಕು. ಲಸಿಕೆ ಪಡೆದವರು ಸಂಪೂರ್ಣ ಸುರಕ್ಷತಾ ಭಾವ ತಾಳಬಾರದು. ಎಲ್ಲರಂತೆ ಅವರೂ ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು. ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ರೂ ೫ಲಕ್ಷಕ್ಕಿಂತ ಅಧಿಕ ಮೀಸಲು ನಿಧಿಯಿಂದ ಆಯ್ದ ಅರ್ಹ ಫಲಾನುಭವಿಗಳಿಗೆ ಲ್ಯಾಪ್‌ಟಾಪ್, ಶೈಕ್ಷಣಿಕ ಪ್ರೋತ್ಸಾಹಧನ, ವೈದ್ಯಕೀಯ ವೆಚ್ಚ, ಹೊಲಿಗೆ ಯಂತ್ರ. ಗಾಲಿಕುರ್ಚಿ, ಕ್ರೀಡಾ ಉಪಕರಣ, ಕುಲಕಸುಬು ಬೆಂಬಲ ಸಹಾಯಧನ, ಮೂಲಭೂತ ಸೌಲಭ್ಯ ವಿತರಿಸಲಾಯಿತು. ಉಪಾಧ್ಯಕ್ಷ ಲೋಕೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೆಳೆಯರ ಬಳಗ ಶ್ರೀ ಆನಗಳ್ಳಿ ಇದರ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಕೊರೊನ ವಾರಿಯರ್ಸ್ ಆದ ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯರಾದ ಡಾ. ನಾಗೇಶ್, ಆಶಾ ಕಾರ್ಯಕರ್ತರಾದ ನಾಗರತ್ನ, ಫಿಲೋಮಿನ ಡಿ’ಸೋಜಾ, ಪೊಲೀಸ್ ಇಲಾಖೆಯ ರೊನಾಲ್ಡ್ ಡಿ’ಸೋಜಾ, ರಕ್ತದಾನಿ ಸತೀಶ್ ಸಾಲಿಯಾನ್ ಇವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರವಿ ಬಿ ನಾಯ್ಕ್ ಆನಗಳ್ಳಿ, ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸುರೇಶ ಆರ್ ನಾಯ್ಕ್, ಸಂಸ್ಥೆಯ ಹಿರಿಯರಾದ ಮಂಜುನಾಥ್ ಹೆಬ್ಬಾರ್, ರಾಮಚಂದ್ರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸಹಕಾರಿ ಸಂಘಗಳ ಮೈಸೂರು ವಿಭಾಗದ ಜಂಟಿ ನಿಬಂಧಕರಾದ ಪ್ರಕಾಶ ರಾವ್ ಭೇಟಿ ನೀಡಿದರು. ಸಂಘದ ವ್ಯವಹಾರಗಳನ್ನು ಪರಿಶೀಲಿಸಿ ಸಂಘದ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್. ವಿ., ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ 2020-21ನೇ ಸಾಲಿನ ವರ್ಗ 1ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೇ.25ರ ಅನುದಾನದಲ್ಲಿ ವಿದ್ಯಾರ್ಥಿ ವೇತನ ವೈದ್ಯಕೀಯ ವೆಚ್ಚ ಮತ್ತು ಪುಸ್ತಕ ಇಡುವ ಕಪಾಟು ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಗೀತಾ ಉಪಾಧ್ಯಕ್ಷರಾದ ಶೇಖರ ಖಾರ್ವಿ, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಂತಹ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಆರೋಗ್ಯವಂತ ಜೀವನ ನಡೆಸಬಹುದು ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ ಹೇಳಿದರು. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚರೋಪಥಿ ಪುಣೆ ಹಾಗೂ ಮಿಜಾರಿನ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ & ಯೋಗಿಕ್ ಸೈನ್ಸ್‌ಸ್ ಹಾಗೂ ಆಸ್ಪತ್ರೆಯ ಸಹಯೋಗದಲ್ಲಿ ಆನಂದಮಯ ಆರೋಗ್ಯಧಾಮದಲ್ಲಿ ಬೃಹತ್ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜೀವನಶೈಲಿಯ ಹಿನ್ನಲೆಯಿಂದ ಜನರು ಆರೋಗ್ಯದ ಕಡೆ ಗಮನಹರಿಸದೆ ಅನಾರೋಗ್ಯಕ್ಕೆ ತುತ್ತಾಗುತಿದ್ದಾರೆ. ಇವುಗಳಿಂದ ದೂರವಿರಬೇಕಾದರೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಂತಹ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳನ್ನು ಕೇವಲ ಒಂದು ದಿನಕ್ಕೆ ಸೀಮಿತ ಗೊಳಿಸಿದರೆ ಯಾವುದೇ ಪ್ರಯೋಜನವಿಲ್ಲ, ನಿರಂತರವಾಗಿ ಈ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಈ ಪ್ರಕೃತಿ ಚಿಕಿತ್ಸೆಗಳು ಜನ ಸಾಮಾನ್ಯರಿಗೆ ತಲುಪುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಕಾಲೇಜಿನ ನ್ಯಾಚುರೋಪಥಿ ಮತ್ತು ಯೋಗಿಕ ಸೈನ್ಸ್ ಪ್ರಾಂಶುಪಾಲೆ ಡಾ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವರ್ಣರಂಜಿತ ವೇಷ, ಸಂಗೀತ, ನೃತ್ಯ, ಅಭಿನಯ, ಮಾತು ಮೇಳೈಸಿ ಪ್ರದರ್ಶನಗೊಳ್ಳುವ ಯಕ್ಷಗಾನ ಪರಿಪೂರ್ಣ ಕಲೆ. ಇದರಲ್ಲಿ ತೊಡಗುವವರಿಗೆ ದೈಹಿಕ, ಬೌದ್ಧಿಕ, ಆಂಗಿಕ ದೃಢತೆ ಮೈಗೂಡುತ್ತದೆ ಎಂದು ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಹೇಳಿದರು. ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ, ಸಂಘ ಸಾಧನಾ ಸಮಾಜ ಸೇವಾ ವೇದಿಕೆ ಸಹಭಾಗಿತ್ವದಲ್ಲಿ ನಡೆಸುವ ಯಕ್ಷಗಾನ ತರಬೇತಿ ಶಿಬಿರವನ್ನು ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಕ್ಷಗಾನ ಕಲಿಯುವುದರಿಂದ ಕಲೆ ಕರಗತ ಮಾಡಿಕೊಳ್ಳುವುದರೊಂದಿಗೆ ಧೈರ್ಯ, ಮಾತಿನ ಕಲೆ, ಏಕಾಗ್ರತೆ ಸಾಧಿಸುತ್ತಾರೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ರವಿ ಮಡಿವಾಳ ಸ್ವಾಗತಿಸಿದರು. ನಿರೂಪಿಸಿದ ಕರುಣಾಕರ ಆಚಾರ್ ವಂದಿಸಿದರು. ಕಲಾವಿದ ಉದಯ ಕಡಬಾಳ್, ಭಾಗವತ-ಗುರು ದೇವರಾಜ ದಾಸ್, ಉದಯ ಪೂಜಾರಿ, ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ಗ್ರಾಮದ ಹಳಗೇರಿಯ 30ಎಕ್ರೆ ವಿಸ್ತಾರದ ಸರ್ಕಾರಿ ಜಮೀನನ್ನು ಕೈಗಾರಿಕಾ ವಲಯವಾಗಿ ಪರಿವರ್ತಿಸುವುದನ್ನು ವಿರೋಧಿಸಿ ಅಲ್ಲಿನ ವನದುರ್ಗಾ ರೈತಶಕ್ತಿ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಸಾಮೂಹಿಕ ಮನವಿ ಸಲ್ಲಿಸಿದರು. ಹಳಗೇರಿಯ ಸರ್ವೆ ನಂಬರು 166ರ 69 ಎಕ್ರೆ ಸಾಮಾಜಿಕ ಅರಣ್ಯದಲ್ಲಿ 30 ಎಕ್ರೆಯನ್ನು ಕೈಗಾರಿಕಾ ವಲಯ ಪ್ರದೇಶವಾಗಿ ಗುರುತಿಸಲು ಖಂಬದಕೋಣೆ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಲು ನಿರ್ಣಯ ಕೈಗೊಂಡಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾತನಾಡಿದ ರೈತಶಕ್ತಿ ಸಂಘದ ಸಂಯೋಜಕ ಪ್ರಭಾಕರ ಶೆಟ್ಟಿ ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ವಿವಿಧ ಜಾತಿಯ ಮರ ಬೆಳೆಸಿದೆ. ಅನೇಕ ವನ್ಯ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಆಶ್ರಯ ನೀಡಿದೆ. ಇದನ್ನು ಕೈಗಾರಿಕಾ ವಲಯ ಮಾಡಿದರೆ ಹಲವು ಕೈಗಾರಿಕೆಗಳು ಸ್ಥಾಪನೆಯಾಗಿ ಅರಣ್ಯ ಮತ್ತು ಜೀವರಾಶಿಗಳು ನಾಶವಾಗುತ್ತವೆ. ಈ ಪ್ರದೇಶಕ್ಕೆ ಹೊಂದಿಕೊಂಡು ಸುಮಾರು 500 ಎಕ್ರೆಗೂ ಮಿಕ್ಕಿ ಕೃಷಿ ಭೂಮಿ ಇದೆ. 150 ಕುಟುಂಬಗಳು ಅದನ್ನು ಅವಲಂಬಿಸಿಕೊಂಡಿವೆ. ಉದ್ದೇಶಿತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಕೇಂದ್ರ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ವತಿಯಿಂದ ಮಣಿಪಾಲ್ ಆರ್.ಎಸ್.ಬಿ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ದ್ವಿಭಾಷಾ ಬರಹ ಗಾರ್ತಿ , ಕವಿಯತ್ರಿ ಹಾಗೂ ಲೇಖಕರಾದ ಶಿರೂರಿನ ಪುಷ್ಪಾ ರಘುರಾಮ್ ಮೇಸ್ತ ಇವರನ್ನು ಮೇಸ್ತ ಸಮಾಜದ ಶ್ರೇಷ್ಟ ಸಾಧಕಿ ಎಂಬ ಹೆಗ್ಗಳಿಕೆಯೊಂದಿಗೆ ಗೌರವಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಪೂರ್ಣಗೊಳಿಸಲು ಯಾವುದೇ ಹಣದ ಕೊರತೆಯಿಲ್ಲ. ಆದರೆ ಪುರಸಭೆಯಿಂದ ಝೋನ್-7 ಅನುಮತಿ ಹಾಗೂ ವೆಟ್ವೆಲ್ಗೆ ಜಾಗ, ಎಸ್ಟಿಪಿಗೆ ತೆರಳುವ ಜಾಗವನ್ನು ಒದಗಿಸಿಕೊಟ್ಟರೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಿರ್ದೇಶಕಿ ಸುಲೋಚನಾ ಭಟ್ ತಿಳಿಸಿದ್ದಾರೆ. ಅವರು ಸೋಮವಾರ ಒಳಚರಂಡಿ ಯೋಜನೆ ಕಾಮಗಾರಿ ಪ್ರಗತಿ ಬಗ್ಗೆ ಕುಂದಾಪುರ ಪುರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಪುರಸಭೆಯ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಮಗಾರಿ ನಡೆಯುವ ಸಂದರ್ಭ ಜನರಿಂದ ವಿರೋಧ ಭಾರದಂತೆ ಜಾಗ, ರಸ್ತೆಯ ಪೈಪ್ ಲೈನ್, ಸಿ.ಆರ್.ಝಡ್ ಅನುಮತಿ ಮೊದಲಾದವುಗಳನ್ನು ಪೂರ್ಣಗೊಳಿಸಿಕೊಟ್ಟರೆ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯಿಂದ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು. ಪುರಸಭಾ ಸದಸ್ಯರಾದ ಮೋಹನದಾಸ್ ಶೆಣೈ ಮಾತನಾಡಿ ಪುರಸಭೆಯ ಯುಜಿಡಿ ಕಾಮಗಾರಿಯಿಂದಾಗಿ ಜನರು ಜನಪ್ರತಿನಿಧಿಯನ್ನು ನೀಡಿ ಬೈಯುವಂತೆ ಆಗಿದೆ. ಪುರಸಭಾ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕೆಲವೆಡೆ ಉತ್ತಮವಾಗಿದ್ದು ಇನ್ನು ಕೆಲವೆಡೆ ಕಳಪೆ ಮಟ್ಟದ್ದಾಗಿ…

Read More