ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಮೈಕ್ರೋಬಯಲಾಜಿಸ್ಟ್ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು, ಅಕ್ಟೋಬರ್ 22 ರಂದು ಬೆಳಗ್ಗೆ 10.30 ಕ್ಕೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನಗರಸಭೆಯ ಡೇ – ನಲ್ಮ್ ಯೋಜನೆಯ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ಡ್ರಾಫ್ಟ್ಮೆನ್ ಮೆಕ್ಯಾನಿಕಲ್, ಫ್ಯಾಷನ್ ಡಿಸೈನರ್, ಹ್ಯಾಂಡ್ ಎಂಬ್ರೋಯ್ಡರಿ, ಸೆಲ್ಫ್ ಎಂಪ್ಲೋಯಿಡ್ ಟೇಲರ್, ಎಡಿಟರ್ ತರಬೇತಿಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದ ಆರನೇ ದಿನದ ಕಾರಂತ ಚಿಂತನ ಮಂತನ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ, ಕಲಾವಿದ ಸುಜಯೀಂದ್ರ ಹಂದೆ ಮಾತನಾಡಿ, ಕಾರಂತರರು ಕಲಾವಿದರಾಗಿ, ಸಾಹಿತಿಯಾಗಿ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಮಯಪ್ರಜ್ಞೆ ನಮಗೆಲ್ಲ ಮಾದರಿಯಾಗಿದ್ದು, ಅವರು ಯಕ್ಷಗಾನದಲ್ಲಿ ಹಲವಾರು ಪ್ರಯೋಗ ಮಾಡಿ ಯಕ್ಷಗಾನ ಶ್ರೀಮಂತಗೊಳಿಸಿದ ಕಾರಂತರು ಅವರ ಕಾದಂಬರಿಯಲ್ಲಿ ಹಾಗೂ ನಿಜ ಜೀವನದಲ್ಲಿ ಅಳವಡಿಸಿಕೊಂಡಿರುವ ಪರಿಸರದ ಮೇಲಿರುವ ವಿಶೇಷ ಕಾಳಜಿ ನಮಗೆಲ್ಲಾ ಅನುಕರಣೀಯ ಎಂದು ತಿಳಿಸಿದರು. ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ಸಾನಿಧ್ಯ ಮೆಲೋಡಿಸ್ ,ಹವರಾಲು ಇವರಿಂದ ಸಂಗೀತ ಸುಗಂಧ ಕಾರ್ಯಕ್ರಮ ನಡೆಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನ ಏರ್ಪಡಿಸಿದ್ದ ಕಾರಂತರ ಕುರಿತಾದ ಪ್ರಬಂಧ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಉಪನ್ಯಾಸಕ ಮತ್ತು ಬರಹಗಾರ ನರೇಂದ್ರ ಎಸ್. ಗಂಗೊಳ್ಳಿಗೆ ದ್ವಿತೀಯ ಬಹುಮಾನ ಮತ್ತು ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಸಂದರ್ಭದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮೀಷನ್ ನೇಮಕಾತಿ ಪ್ರಾಧಿಕಾರವು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಸ್ಫರ್ಧಾತ್ಮಕ ಪರೀಕ್ಷಾ ನೇಮಕಾತಿಗೆ ಡಿಪ್ಲೋಮಾ ಇಂಜಿನಿಯರ್/ ಇಂಜಿನಿಯರ್ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in , http://ssc.nic.in ಅಥವಾ ದೂರವಾಣಿ ಸಂಖ್ಯೆ:080-25502520, 9483862020 08202574869/ 9480259790 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದ ಕಾರಂತ ಚಿಂತನ ಮಂತನ ಕಾರ್ಯಕ್ರಮ ನಡೆಯಿತು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಅಧ್ಯಾಪಕ ಶಿವಪ್ರಸಾದ್ ಶೆಟ್ಟಿಗಾರ್ ಮಾತನಾಡಿ, ಡಾ. ಶಿವರಾಮ ಕಾರಂತರ ಕಾದಂಬರಿಯಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಎತ್ತಿ ಹಿಡಿಯುವ ಕೈಗನ್ನಡಿಯಾಗಿದ್ದು, ಕಾರಂತರ ಕಾದಂಬರಿಯಲ್ಲಿ ಮನುಷ್ಯ ಹಾಗೂ ಪರಿಸರದ ನಡುವೆ ಇರುವ ಸಂಬಂಧವನ್ನು ತುಂಬಾ ಸುಂದರವಾಗಿ ಹೆಣೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ನಿರೂಪಿಸಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಭತ್ತದ ಗದ್ದೆಗಳಲ್ಲೂ ನೀರು ಭರ್ತಿಯಾಗಿದ್ದು, ಬೀಳುವ ಮಳೆ ಒಣಗುವ ಹಂತ ತಲಪಿದ್ದ ಫಸಲಿಗೆ ಹಾನಿ ಮಾಡುತ್ತಿದೆ. ಸೋಮವಾರ ರಾತ್ರಿಯಿಂದಲೇ ಗಾಳಿ ಸಹಿತ ಭಾರೀ ಮಳೆಯಾಗಿದೆ. ಮಂಗಳವಾರ ಬೆಳಗ್ಗಿನಿಂದ ಮತ್ತೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೂ ಆ ಬಳಿಕವೂ ಭಾರೀ ಮಳೆಯಾಗಿದೆ. ಬುಧವಾರವೂ ರಾತ್ರಿ ಹಾಗೂ ಬೆಳಿಗ್ಗೆ ಮಳೆಯಾಗಿದ್ದು, ದಿನವಿಡಿ ಮೋಡ ಕವಿದ ವಾತಾವರಣವಿತ್ತು. ಉಭಯ ತಾಲೂಕುಗಳ ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಬಿದ್ಕಲ್ಕಟ್ಟೆ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಅಮಾಸೆಬೈಲು, ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ, ಅಂಪಾರು, ಕಂಡೂರು, ನೇರಳಕಟ್ಟೆ, ಆಜ್ರಿ, ಕೊಲ್ಲೂರು, ವಂಡ್ಸೆ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ತ್ರಾಸಿ, ಗಂಗೊಳ್ಳಿ, ಮರವಂತೆ, ಹಕ್ಲಾಡಿ, ನಾವುಂದ, ಉಪ್ಪುಂದ, ಬೈಂದೂರು, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ನಿರಂತರ ಮಳೆಯಾಗಿದೆ. ಕುಂದಾಪುರ ಬೈಂದೂರು ಭಾಗದಲ್ಲಿ ಹಿಂದಿಗಿಂತ ಹೆಚ್ಚು ಪ್ರದೇಶಗಳಲ್ಲಿ ಭತ್ತದ ಕೃಷಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಮೂರನೇ ದಿನದ ಕಾರಂತ ಚಿಂತನ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಪತ್ರಕರ್ತ ವಸಂತ್ ಗಿಳಿಯಾರು ಮಾತನಾಡಿ, ಕಾರಂತರ ಬದುಕೇ ಒಂದು ಸಂದೇಶವಾಗಿದ್ದು, ನುಡಿದಂತೆ ನಡೆದ ವ್ಯಕ್ತಿತ್ವ ಅವರಾಗಿದ್ದು ತಮ್ಮ ಬರವಣಿಗೆಯಲ್ಲಿ ಹೇಗೆ ಪ್ರತಿಭಟನೆ, ಚಳುವಳಿ, ಅನ್ಯಾಯದ ವಿರುದ್ಧ ಧ್ವನಿಗೂಡಿಸಿದ್ದಾರೊ ಅದರಂತೆ ವಾಸ್ತವ ಬದುಕಿನಲ್ಲಿ ಹಾಗೆ ಬದುಕಿ ತೋರಿಸಿದ ಕಾರಂತರ ಜೀವನ ಶೈಲಿ ಪ್ರಸ್ತುತ ಸಮಾಜಕ್ಕೆ ಆದರ್ಶ ಎಂದು ಹೇಳಿದರು. ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ಈಶ್ಯಲಾಸ್ಯ ಸಾಲಿಗ್ರಾಮ ಇವರಿಂದ ನೃತ್ಯ ಸಂಗಮ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾರಂತ ಥೀಮ್…
ಕುಂದಾಪ್ರ ಡಾಟ್ ಕಾಂ ಸುದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯಾಎಸಿ ’ಆಶ್ರಯದಲ್ಲಿ ವೃತ್ತಿಯಾಗಿ ಉದ್ಯಮಶೀಲತೆ’ ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಗಳೂರಿನ ಎಂ. ಎಸ್. ಎಮ್. ಇ ಸಂಸ್ಥೆಯ ಸುಂದರ ಶೇರಿಗಾರ್ ಮಾತನಾಡಿ ಉದ್ಯಮ ಶೀಲತೆಯನ್ನು ಅಭಿವೃದ್ಧಿ ಪಡಿಸುವ ವಿಧಾನಗಳು, ಪ್ರಸ್ತುತ ಪ್ರವೃತ್ತಿಗಳು ಅದಕ್ಕೆ ಪೂರಕವಾಗಿ ಇರುವಂತಹ ಸರಕಾರದ ಯೋಜನೆಗಳು ಮತ್ತು ಸವಲತ್ತುಗಳ ಕುರಿತು ತಿಳಿಸಿದರು. ಅಲ್ಲದೇ ಉದ್ಯಮ ಶೀಲತೆಯನ್ನು ಕೈಗೊಳ್ಳುವಲ್ಲಿ ಉತ್ತೇಜನಕಾರಿ ಯೋಜನೆಗಳು ಮತ್ತು ಆಲೋಚನೆಗಳು ಮತ್ತು ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆ ಮತ್ತು ಅವನು ಸವಾಲುಗಳನ್ನು ಸುಲಭಾಗಿ ಎದುರಿಸುವಲ್ಲಿ ಹಲವು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಾ. ಎನ್. ಪಿ ನಾರಾಯಣ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಪ್ರಶಾಂತ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಉಪನ್ಯಾಸಕ ಅಂಜನ್ ಕುಮಾರ್ ವಂದಿಸಿದರು. ವಿಭಾಗ ಮುಖ್ಯಸ್ಥೆ ಅರ್ಚನಾ ಅರವಿಂದ್ ಉಪಸ್ಥಿತರಿದ್ದರು. ಕಾಲೇಜಿನ ಐಟಿ ತಂಡದ ಸದಸ್ಯರಾದ ಅಮರ್ ಸಿಕ್ವೆರಾ, ಶಂಕರನಾರಾಯಣ, ವಿಕ್ರಮ್ ಮತ್ತು ಗುರುದಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಳದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಐಕ್ಯಾಎಸಿ ಆಶ್ರಯದಲ್ಲಿ ಪರಿಣಾಮಕಾರಿ ಸಂಶೋಧನಾ ಗ್ರಂಥಸೂಚಿ – ಸಾಂಸ್ಥಿಕವಾಗಿ ಮೌಲ್ಯಮಾಪನ ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆಯ ಗ್ರಂಥಸೂಚಿಕರಾದ ಶೀಬಾ ಪಕ್ಕನ್ ಮಾತನಾಡಿ, ಸಂಶೋಧನಾ ಕ್ಷೇತ್ರವೆನ್ನುವುದು ಅತ್ಯಂತ ಪ್ರಮುಖವಾದ ಕ್ಷೇತ್ರವಾಗಿದೆ. ಇಲ್ಲಿ ಗ್ರಂಥಸೂಚಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಪರಿಹರಿಸಿಕೊಳ್ಳುವ ವಿಧಾನಗಳ ಕುರಿತು ಸೂಕ್ಷ್ಮವಾಗಿ ಮಾಹಿತಿ ನೀಡಿದರು. ಅಲ್ಲದೇ ಸಂಶೋಧನಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಸಂಶೋಧನೆ ಮಾಡಿದ ನಂತರ ಸಂಶೋಧಕನ ಸಂಶೋಧನಾ ಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ಅಲ್ಲಿ ಬರುವಂತಹ ಬರವಣಿಗೆ ನಂತರದ ವಿವಿಧ ಜರ್ನಲ್ಗಳಲ್ಲಿ ಪ್ರಕಟಣೆಯ ವಿಧಾನ ಭಾಷಾ ಶೈಲಿ. ಮಾಹಿತಿ ಕಲೆ ಹಾಕುವಂತಹ ವಿಧಾನಗಳ ಕುರಿತು ಸವಿಸ್ತಾರವಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ .ಪಿ ನಾರಾಯಣ ಶೆಟ್ಟಿ ಮಾತನಾಡಿದರು. ಸುಮಾರು 81…
