ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾಲೆಗಳ ಅಭಿವೃದ್ಧಿ ದೇವಸ್ಥಾನದ ಅಭಿವೃದ್ಧಿಯಷ್ಟೇ ಪುಣ್ಯದ ಕೆಲಸ, ನಾವು ವಿದ್ಯಾರ್ಜನೆಗೈದ ಶಾಲೆಗಳಿಗೆ ನಮ್ಮಿಂದಾದ ನೆರವು ನೀಡಿದಾಗ ಶಾಲೆ ಅಭಿವೃದ್ಧಿ ಜೊತೆಗೆ ಮಕ್ಕಳಿಗೂ ಕಲಿಕೆಗೆ ಸಹಕಾರವಾಗುತ್ತದೆ. ಊರಿನ ಸಂಘಟನೆಗಳು ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ ಆಸಕ್ತಿ ವಹಿಸಬೇಕು, ಶಾಲೆಗಳ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಬಹು ಮುಖ್ಯವಾಗಿದೆ ಎಂದು ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಅವರು ಹೇಳಿದರು. ಅವರು ಯುವವಾಹಿನಿ (ರಿ) ಯಡ್ತಾಡಿ ಘಟಕದ ವತಿಯಿಂದ ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ವಿತರಣೆ ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶಾಂತ ಪೈ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತ ಪೈ ಅವರು ಹಳ್ಳಿ ಕಡೆ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಅವರಿಗೂ ಗುಣಮಟ್ಟದ ಶಿಕ್ಷಣ ನೀಡಿ ಪ್ರೋತ್ಸಾಹಿಸಿದಾಗ ಅವರು ಸಾಧನೆ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಯುವವಾಹಿನಿ (ರಿ)…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ 21-22ನೇ ಸಾಲಿನ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಹೋಟೆಲ್ ಶೆರೋನ್‌ನಲ್ಲಿ ನಡೆಯಿತು. ಕುಂದಾಪುರದ ಎಲುಬು ಕೀಲು ತಜ್ಞರಾದ ಡಾ. ಸಂದೀಪ ನಾವಡ ಅವರು ಸಂಸ್ಥೆಯ ಅಧ್ಯಕ್ಷರಾಗಿ, ಮನೋರೋಗ ತಜ್ಞ ಡಾ. ರವೀಂದ್ರ ಮನೋಳಿ ಕಾರ್ಯದರ್ಶಿಯಾಗಿ, ಮಕ್ಕಳ ತಜ್ಞ ಡಾ. ಗಣೇಶ್ ಪ್ರಸಾದ್ ಕಾಮತ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪದಗ್ರಹಣ ಅಧಿಕಾರಿ ಡಾ. ಭಾಸ್ಕರಾನಂದ ಕುಮಾರ, ಡಾ. ಕೆ.ಎಸ್ ಕಾರಂತ್, ಡಾ. ಬಿ.ವಿ ಉಡುಪ, ಡಾ. ಶ್ರೀದೇವಿ ಕಟ್ಟೆ ಡಾ. ಪ್ರಮೀಳಾ ನಾಯಕ್ ಡಾ. ರೆನಿ ವಿಲ್ಸನ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪಡೆದ ನಿವೃತ್ತ ಉಪನ್ಯಾಸಕ, ಪತ್ರಕರ್ತ ಎಸ್. ಜನಾರ್ದನ ಅವರನ್ನು ಸುರಭಿ ಬೈಂದೂರು ಸಂಸ್ಥೆಯಿಂದ ಭಾನುವಾರ ಸನ್ಮಾನಿಸಲಾಯಿತು. ಅವರ ಮರವಂತೆಯ ನಿವಾಸದಲ್ಲಿ ಸುರಭಿ ಅಧ್ಯಕ್ಷ ನಾಗರಾಜ್ ಪಿ. ಯಡ್ತರೆ ಹಾಗೂ ಕಾರ್ಯದರ್ಶಿ ಭಾಸ್ಕರ ಬಾಡ ಹಾಗೂ ಪದಾಧಿಕಾರಿಗಳೂಂದಿಗೆ ಸನ್ಮಾನಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕುಂದಾಪುರ ಹಾಗೂ ಬೈಂದೂರು ವಲಯದ ೭ ಮಂದಿ ಶಿಕ್ಷಕರನ್ನು ರೋಟರಿ ಜಿಲ್ಲೆ 3182, ವಲಯ 1ರ ವತಿಯಿಂದ ರೋಟರಿ ವಲಯದ 8 ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಆತಿಥ್ಯದಲ್ಲಿ ನಡೆದ ವಲಯ ಸಾಕ್ಷರತಾ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಜಿಲ್ಲಾ ಲೀಟರಸಿ ಚೇರ್‌ಮನ್ ಕೆ.ಎಸ್. ಸುಬ್ರಮಣ್ಯ ಬಾಸ್ರಿ ಹಾಗೂ ವೈಸ್ ಚೇರ್‌ಮನ್ ಟಿ. ಬಾಲಚಂದ್ರ ಶೆಟ್ಟಿ ಅವರು ಪ್ರಶಸ್ತಿ ವಿಜೇತ ಶಿಕ್ಷಕರಾದ ಸಂತೋಷ್ ಕುಮಾರ ಶೆಟ್ಟಿ, ಚಂದ್ರ ಎನ್. ಬಿಲ್ಲವ, ಶ್ರೀನಿವಾಸ, ಕೃಷ್ಣಮೂರ್ತಿ ಪಿ., ಸುರೇಶ್ ಶೆಟ್ಟಿ, ಶೇಖರ್ ಗಾಣಿಗ ಮತ್ತು ಗಣೇಶ ಹೇರಳೆ ಅವರನ್ನು ಸನ್ಮಾನಿಸಿ ಗೌರವಿಸಿದರು. ರೋಟರಿ ಗಂಗೊಳ್ಳಿ ಅಧ್ಯಕ್ಷ ರಾಜೇಶ್ ಎಂ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ತರಬೇತುದಾರ ಸತೀಶ್ ಶೇರುಗಾರ್, ಸಲಹೆಗಾರ ಕೆ. ಕೆ. ಕಾಂಚನ, ವಲಯ ಸೇನಾನಿಗಳಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ಬದುಕಿದ ರೀತಿ, ಅವರು ಜೀವಿತಾವಧಿ ನಂತರ ಬಿಟ್ಟು ಹೋದ ಹೆಜ್ಜೆಗುರುತುಗಳು ಮುಂದಿನ ಜನಾಂಗಕ್ಕೆ ದಾರಿ ದೀಪವಾಗಲಿ, ಅವರ ನೆನಪು ಶಾಶ್ವತವಾಗುವ ನಿಟ್ಟಿನಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿರುವುದು ಸಂಭ್ರಮದ ವಿಷಯ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹಿತ್ಯಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದಲ್ಲಿ ನುಡಿ ಚೇತನದಲ್ಲಿ ಮಾತನಾಡಿದರು. ಕಾರಂತ ಸಮಾಧಿ ನಿರ್ಮಾಣವಾಗಲಿ:ಕಾರಂತರು ನಮ್ಮೊಳಗಿನ ಮಹಾನ್ ಚೈತನ್ಯ ಅವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ನಿರ್ಮಾಣವಾಗಿ ಕಾರಂತ ಅಭಿಮಾನಿ-ಸಾಹಿತ್ಯ ಪ್ರೇಮಿಗಳಿಗೆ ನೋಡುವ ಭಾಗ್ಯ ಸಿಗಲಿ ಎಂದು ಹೇಳಿದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಸರಕಾರದ ಸ್ವಚ್ಚ ಭಾರತ್ ಮಿಷನ್ ಟ್ವಿಟರ್ ಖಾತೆಯಲ್ಲಿ ಗಾಂಧಿ ಜಯಂತಿಯ ದಿನದಂದು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂನ ಕಸ ವಿಲೇವಾರಿ ಪೋಟೋ ಪ್ರಕಟಗೊಂಡಿರುವುದು ಗಮನ ಸೆಳೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ೨೦೨೧ರಲ್ಲಿ ೪೩,೬೧೩ ಗ್ರಾಪಂಗಳು ಪ್ಲಾಸ್ಟಿಕ್ ಮಕ್ತಗ್ರಾಮವಾಗಿದೆ ಎಂದು ಉಲ್ಲೇಕಿಸಿ ಅದರಡಿ ವಂಡ್ಸೆ ಗ್ರಾಮದ ಪೋಟೋ ಅಳವಡಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಲೈಕ್ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಆರಂಬಿಸಿದ್ದ ಹೆಗ್ಗಳಿಕೆ ವಂಡ್ಸೆ ಗ್ರಾಮ ಪಂಚಾಯತಿಯದ್ದಾಗಿದೆ. ವೇಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಒಣ ಕಸ, ಹಸಿ ಕಸ ಪ್ರತ್ಯೇಕಿಸಿ, ಅದರಿಂದ ಬರುವ ಲಾಭದಲ್ಲಿ ನಡೆಯುತ್ತಿರುವ ಏಕೈಕ ಪೂರ್ಣ ಪ್ರಮಾಣದ ಘಟಕ ನಮ್ಮದು. ದೇಶದ ನಾನಾ ಕಡೆಯ ತಜ್ಞರು ಘಟಕಕ್ಕೆ ಭೇಟಿ ನೀಡಿದ್ದಾರೆ. ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ಟ್ವಿಟರ್ ಖಾತೆಯಲ್ಲಿ ವಂಡ್ಸೆ ಗ್ರಾಪಂನ ಪೋಟೋ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಳೆಅಳಿವೆಯಿಂದ ಕೋಟೇಶ್ವರ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ಕಿನಾರಾ ಬೀಚ್ ರೋಡಿನ ಪೋಸ್ಟ್ ಆಫೀಸ್ ಬಳಿ ನಡೆದಿದೆ. ಬೀಜಾಡಿ ಗ್ರಾಮದ ನಿವಾಸಿ ಬೈಕ್ ಸವಾರ ವಿಜಯೇಂದ್ರ ಪೂಜಾರಿ ಮೃತ ದುರ್ದೈವಿ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯೇಂದ್ರ ಅವರು ಮಧ್ಯಾಹ್ನ ಮನೆಗೆ ಬಂದಿದ್ದು ಸಂಜೆ ಮರಳಿ ಕಛೇರಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ವಿಜಯೇಂದ್ರ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಮಡದಿ ೭ ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತರು ತಂದೆ ತಾಯಿ, ಪತ್ನಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ತಾಯಿಯ ಉದರದಿಂದ ಹೊರಬಂದು ಪ್ರಪಂಚಕ್ಕೆ ಇದಿರುಗೊಳ್ಳುವ ಪ್ರತಿ ಮಗುವಿಗು ತಾಯಿಯ ಹಾಲೇ ಅಮೃತಪಾನ. ಮಗು ದೊಡ್ಡದಾಗುವ ತನಕವೂ ಎಲ್ಲಾ ಹೊತ್ತಿನಲ್ಲಿಯೂ ಅಗತ್ಯವಿರುವಷ್ಟು ಎದೆಹಾಲನ್ನು ತಾಯಿ ಹೊಂದಿರಬೇಕಾಗುತ್ತದೆ. ಕೆಲವರಿಗೆ ಎದೆಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಹಾಲಿನ ಪ್ರಮಾಣವು ಹೆಚ್ಚಾಗಬೇಕು. ಅದರಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿರಬೇಕು ಎನ್ನುವುದಾದರೆ ಮೊದಲು ಆಹಾರ ಕ್ರಮದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ. ಮಗು ಕೇವಲ ತಾಯಿಯ ಎದೆಹಾಲಿಗೆ ಅವಲಂಭಿತವಾಗಿರುವುದರಿಂದ, ತಾಯಿ ಸೇವಿಸುವ ಆಹಾರದ ಗುಣಗಳು ಹಾಲಿನ ಮುಖಾಂತರ ಮಗುವನ್ನು ತಲುಪುತ್ತದೆ. ಮಗುವಿಗೆ ಹಸಿವಾದ ಸಂದರ್ಭದಲ್ಲೆಲ್ಲಾ ತಾಯಿಯ ಎದೆ ಹಾಲು ಧಾರಾಳವಾಗಿ ಸಿಗುವಂತಾಗಬೇಕೆಂದರೆ ಕೆಲವು ವಿಶೇಷ ಆಹಾರವನ್ನು ಸೇವಿಸಬೇಕು. ಅವು ಯಾವುವು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಓಟ್ ಮೀಲ್:ಓಟ್ ಮೀಲ್ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತದೊತ್ತಡವನ್ನು ನಿರ್ವಹಿಸುವುದು. ಇದೊಂದು ಆರೋಗ್ಯ ಪೂರ್ಣ ಆಹಾರ. ಇದು ತಾಯಿಯ ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಹಾಲಿನ ಉತ್ಪಾದನೆಗೆ ಸಹಾಯಮಾಡುವ ಆಕ್ಸಿಟೋಸಿನ್ ಹಾರ್ಮೋನ್ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಬ್ಯಾರೀಸ್ ಶಿಕ್ಷ ಮತ್ತು ಸುರಕ್ಷಾ ಫೌಂಡೇಶನ್‌ನಿಂದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಬ್ಯಾರೀಸ್ ಸಂಸ್ಥೆಗಳ ಸಿಬ್ಬಂದಿಯ ಮಕ್ಕಳ ವಿದ್ಯಾಭಾಸಕ್ಕಾಗಿ ಪ್ರತಿ ವರ್ಷ ಕೊಡಮಾಡುವ ಸಹಾಯ ಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ದೋಮ ಚಂದ್ರಶೇಖರ್ ಅವರು “ಗಾಂಧಿ ಜಯಂತಿ ಆಚರಣೆಯ ಸಂಧರ್ಭದಲ್ಲಿ ನಡೆದ ಈ ಸಹಾಯ ಧನ ವಿತರಣೆ ಬಹಳ ಔಚಿತ್ಯಪೂರ್ಣವಾದುದು ಎಂದು ಹೇಳುತ್ತಾ ಗಾಂಧೀಜಿಯವರ ಶಿಕ್ಷಣದ ಕಲ್ಪನೆಯ ಕುರಿತು ಮಾತನಾಡಿದರು. ಧೀಮಂತ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರೀ ಯವರನ್ನು ನೆನಪಿಸಿಕೊಳ್ಳುತ್ತಾ, ಇಂತಹ ಅಪೂರ್ವ ಮಹಾನ್ ವ್ಯಕ್ತಿಗಳ ಚರಿತ್ರೆ ಓದುವ ಹವ್ಯಾಸವನ್ನು ಬೆಳೆಯಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಅಬ್ದುಲ್ ರೆಹಮಾನ್ ಸಹಾಯ ಧನವನ್ನು ವಿತರಿಸಿ ಗಾಂಧೀಜಿ ಮತ್ತು ಇತರ ನಾಯಕರ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಿತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ನಮ್ಮ ದೇಶವನ್ನು ಕಟ್ಟೋಣ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿ ಜನತಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಾದ ಶಂಕರ ಪಿ. ಹೆಚ್, ಶ್ರೀಧರ ರಾವ್ ಹಾಗೂ ದಾನಿಗಳಾದ ಬಾಲ್ತು ಲೋಬೊ ಅವರು ನೀಡಿದ ಸಮವಸ್ತ್ರ ವಿತರಣೆ ಹಾಗೂ ನೋಟ್ಸ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ವಿ. ವಿ. ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಮವಸ್ತ್ರ ಮತ್ತು ನೋಟ್ಸ್ ಪುಸ್ತಕ ನೀಡಿದ ದಾನಿಗಳಿಗೆ ಗೌರವಿಸಿದರು. ಈ ಸಂರ್ಭ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಖ್ಯೋಪಾಧ್ಯಾಯರಾದ ಮಂಜು ಕಾಳಾವರ ಪ್ರಸ್ತಾವಿಸಿ, ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಶ್ರೀಧರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕರಾದ ದಿನಕರ ಧನ್ಯವಾದ ಸರ್ಮಪಿಸಿದರು.
