ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುಭದ್ರ ರಾಷ್ಟ್ರ ಹಾಗೂ ಜಾತ್ಯಾತೀತ ಸಮಾಜ ನಿರ್ಮಾಣ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. 143 ವರ್ಷಗಳ ಹಿನ್ನೆಲೆ ಹೊಂದಿರುವ ಪಕ್ಷಕ್ಕೆ ತ್ಯಾಗ, ಹೋರಾಟ, ಬಲಿದಾನಗಳ ಇತಿಹಾಸವಿದೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಪಕ್ಷವು ಜನರ ಹಿತಕಾಯುತ್ತಲೇ ಬಂದಿದೆ. ಮುಂದೆಯೂ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು. ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಹಯೋಗದೊಂದಿಗೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಹೇರೂರು ಗ್ರಾಮೀಣ ಸಮಿತಿ ಜಂಟಿ ಆಶ್ರಯದಲ್ಲಿ ಸೋಮವಾರ ಮೆಕೋಡು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ‘ಗ್ರಾಮದಲ್ಲೊಂದು ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊರೊನಾ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಪಕ್ಷ ರಾಜ್ಯ ಸರಕಾರಕ್ಕೆ ಸಂಪೂರ್ಣ ಸಹಕಾರ, ಬೆಂಬಲ ನೀಡಿತ್ತು. ಆದರೆ ಮಾಸ್ಕ್, ಸೈನಿಟೈಸರ್, ವೆಂಟಿಲೇಟರ್ ಖರೀದಿಯಲ್ಲಿ ಸರಕಾರ ಭ್ರಷ್ಟಾಚಾರ ಮಾಡಿ ಇಂದು ಲೆಕ್ಕ ಕೊಡುವ ಬದಲಿಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕೋವಿಡ್ ಮೃತದೇಹ ವಿಲೇವಾರಿ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ. ಮೃತ ದೇಹ ಸಾಗಾಣೆಗೆ ಮೃತದೇಹ ವಿಲೇವಾರಿ ನೋಡೆಲ್ ಅಧಿಕಾರಿಯಾದ ಜಿಲ್ಲಾ ಸರ್ಜನ್ , ಆಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಬೇಕು. ಮೃತ ದೇಹವನ್ನು, ಮರಣ ಸಂಭವಿಸಿದ ಆಸ್ಪತ್ರೆ/ ದೇಹವನ್ನು ಶೇಖರಿಸಿಟ್ಟ ಸಂಸ್ಥೆಯ (ಸರ್ಕಾರಿ ಅಥವಾ ಖಾಸಗಿ) ಪದನಿಮಿತ್ತ ಅಧಿಕಾರಿಗಳು, ಜಿಲ್ಲಾ ಕೋವಿಡ್ ಮೃತ ದೇಹ ನೋಡೆಲ್ ಅಧಿಕಾರಿಯಾದ ಜಿಲ್ಲಾ ಸರ್ಜನ್ ಜೊತೆ ಸಂವಹನ ನಡೆಸಿ, ಸರಿಯಾದ ದೇಹವನ್ನು ಆಂಬುಲೆನ್ಸ್ ಅಥವಾ ವಾಹನಕ್ಕೆ ಹಸ್ತಾಂತರಿಸಲು ಕ್ರಮವಹಿಸಬೇಕು . ಮೃತ ದೇಹ ಹಸ್ತಾಂತರಿಸುವಲ್ಲಿ ಯೋಯ ಚೆಕ್ ಲಿಸ್ಟ್ ತಯಾರಿಸಿಬೇಕು, ವಾಹನಗಳ ಚಾಲಕರು ಪ್ರೋಟೋಕಲ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು, ಮೃತದೇಹದ ಅಂತ್ಯ ಸಂಸ್ಕಾರವು ಸಂಬಂಧಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದ್ದು, ಹತ್ತಿರದ ಸಂಬಂಧಿಕರೊಂದಿಗೆ ಸಂವಹನ ನೆಡಸಿ ಹಸ್ತಾಂತರಿಸಲು, ಚಕಿತ್ಸೆ ನೀಡಿದ ಆಸ್ಪತ್ರೆಯ ಪದನಿಮಿತ್ತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೃತದೇಹವನ್ನು ನಿಗದಿತ ವಿಲೇವಾರಿ ಸ್ಥಳದಲ್ಲಿ ಸ್ವೀಕರಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಬಿ ಮತ್ತು ಸಿ ವರ್ಗದ ಒಟ್ಟು 52 ದೇವಸ್ಥಾನಗಳ ಅವಧಿ ಮುಗಿದಿದ್ದು , ಆಡಳಿತಾಧಿಕಾರಿ ನೇಮಕಾತಿ ಆಗಿರುವ ಈ ದೇವಸ್ಥಾನಗಳಿಗೆ , ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಪ್ರಕಟಣೆ ನೀಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಧಾರ್ಮಿಕ ಪರಿಷತ್ ನ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗಾಗಲೇ ಅವಧಿ ಮುಗಿದಿರುವ ಬಿ ಮತ್ತು ಸಿ ಯ ದೇವಸ್ಥಾನಗಳಿಗೆ ನೇಮಕಾತಿ ಮಾಡಿರುವ ಆಡಳಿತಾಧಿಕಾರಿ ಆದೇಶಕ್ಕೆ ಅನುಮೋದನೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಧಾರ್ಮಿಕ ಪರಿಷತ್ ಸದಸ್ಯರಿಗೆ ಪರಿಷತ್ ನ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವೇದ ಪಾಠಶಾಲೆ ಆರಂಭಿಸುವ ಕುರಿತಂತೆ ಸೂಕ್ತ ಸ್ಥಳ ಗುರುತಿಸುವಂತೆ ಸಮಿತಿಯ ಸದಸ್ಯರಿಗೆ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಲ್ಲಾ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ಅಧಿಕಾರಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜೆ.ಇ.ಇ ಮೈನ್ಸ್ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 155 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶ ಗಳಿಸಿದ್ದಾರೆ ಮತ್ತು ಒಟ್ಟು 523ವಿದ್ಯಾರ್ಥಿಗಳು ಜೆ.ಇ.ಇಅಡ್ವಾನ್ಸ್ಗೆ ( ಐ.ಐ.ಟಿ ಪ್ರವೇಶಾತಿ ಪರೀಕ್ಷೆ) ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಾದ ಚಿನ್ಮಯ್ಅರ್ (99.35), ನವೀನ್ಕುಮಾರ್ ಮುತ್ತಾಲ್ (99.05), ಹರ್ಷ ವಿ (98.92), ಸುಧನ್ವ ನಾಡಿಗೇರ್ (98.91), ಅನುಷ್(98.91), ಅರ್ಣವ್ಅಯ್ಯಪ್ಪ ಪಿ ಪಿ (98.68), ಅಮೃತೇಶ್ ಪಿ (98.04), ಅಮೋಘ್ ಪ್ರಭು(98.35), ಪ್ರೀತಿಎನ್ ಜಿ (98.3), ಪಿ.ಎಸ್.ರವೀಂದ್ರ (98.29), ಉಮೇಶ್ ಸಣ್ಣಹನುಮಪ್ಪ ಬೈತಪ್ಪನವರ್(98.26), ಸುಹಾಸ್ ಸಿ (98.23), ವರುಣ್ತೇಜ್ (98.11), ಆಕಾಶ್ ಮೃತ್ಯುಂಜಯ್ ಹಾರುಗೇರಿ(98.11), ಸುವೀಕ್ಷ್ ವಿ ಹೆಗ್ಡೆ (98.05), ಡೆವಿನ್ ಪ್ರಜ್ವಲ್ರೈ(98.05), ಕೌಶಿಕ ಶಂಕರ(97.98), ರಾಹುಲ್ ಶ್ರೀಶೈಲ್ ದಲ್ವಾಯಿ(97.89), ರೋಹನ್ ಮೇಗೂರು(97.64), ಸಾಯಿಕೀರ್ತಿ ಎಸ್ ಆರ್(97.58), ಸುಧೇಶ್(97.58), ಚೆಲರಾಮ್ಚೌದರಿ(97.47), ಖುಷಿ ಶೀತಲ್ ಚೌಘಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.12ರ ಶನಿವಾರ 169 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 47, ಉಡುಪಿ ತಾಲೂಕಿನ 95 ಹಾಗೂ ಕಾರ್ಕಳ ತಾಲೂಕಿನ 22 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 76 ಸಿಂಥಮೇಟಿವ್ ಹಾಗೂ 93 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 58, ILI 46, ಸಾರಿ 1 ಪ್ರಕರಣವಿದ್ದು, 58 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 5 ಮಂದಿ ಹೊರ ಜಿಲ್ಲೆ ಹಾಗೂ ಓರ್ವ ವ್ಯಕ್ತಿ ಹೊರದೇಶದಿಂದ ಬಂದಿದ್ದಾರೆ. ಇಂದು 91 ಮಂದಿ ಆಸ್ಪತ್ರೆಯಿಂದ ಹಾಗೂ 147 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 89 ಹಾಗೂ 70 ವರ್ಷದ ವೃದ್ಧೆಯರು ಇಂದು ಮೃತಪಟ್ಟಿದ್ದಾರೆ. 915 ನೆಗೆಟಿವ್: ಈ ತನಕ ಒಟ್ಟು 84073 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 69710 ನೆಗೆಟಿವ್, 13912 ಪಾಸಿಟಿವ್ ಬಂದಿದ್ದು, 451 ಮಂದಿಯ ವರದಿ ಬರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಇಇ ಮೈನ್ಸ್ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನಲ್ಲಿ ಲಭ್ಯವಿರುವ ಜೆಇಇ ಕೋಚಿಂಗ್‌ನ ಸದುಪಯೋಗವನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಆಡಳಿತ ಮಂಡಳಿ, ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಚರಿಸುವ ರಾಷ್ಟ್ರಿಯ ಅರಣ್ಯ ಹುತಾತ್ಮರದಿನಾಚರಣೆಯನ್ನಶುಕ್ರವಾರ ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಆಚರಿಸಲಾಯಿತು. ಪಿ.ಶ್ರೀನಿವಾಸ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಗಡಿಭಾಗದಲ್ಲಿ ಸೈನಿಕರು ಹೇಗೆ ದೇಶ ಸೇವೆ ಮಾಡುತ್ತಾರೋ ಹಾಗೇ ನಾಡಿನ ಒಳಗೆ ತಮ್ಮ ಇಲಾಖೆಯ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಎಮ್.ವಿ, ವೀರಪ್ಪನ್ ಕರ್ಯಾಚರಣೆಯಲ್ಲಿ ಮಡಿದ ಅರಣ್ಯ ಹುತಾತ್ಮ ಸಿಬ್ಬಂದಿಗಳ ಅರಣ್ಯ ಸೇವೆಯನ್ನು ಶ್ಲಾಘಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.11ರ ಶುಕ್ರವಾರ 168 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 44, ಉಡುಪಿ ತಾಲೂಕಿನ 96 ಹಾಗೂ ಕಾರ್ಕಳ ತಾಲೂಕಿನ 26 ಮಂದಿಗೆ ಪಾಸಿಟಿವ್ ಬಂದಿದೆ. 2 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 96 ಸಿಂಥಮೇಟಿವ್ ಹಾಗೂ 72 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 107, ILI 49, ಸಾರಿ 1 ಪ್ರಕರಣವಿದ್ದು, 11 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 63 ಮಂದಿ ಆಸ್ಪತ್ರೆಯಿಂದ ಹಾಗೂ 169 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರದ 73 ವರ್ಷದ ವೃದ್ಧ, ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾವಣಗೆರೆ ಜಿಲ್ಲೆಯ 60 ವರ್ಷದ ವೃದ್ಧ ಇಂದು ಮೃತಪಟ್ಟಿದ್ದಾರೆ. 1320 ನೆಗೆಟಿವ್: ಈ ತನಕ ಒಟ್ಟು 82948 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 68795 ನೆಗೆಟಿವ್, 13743 ಪಾಸಿಟಿವ್ ಬಂದಿದ್ದು, 410 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರೋನಾದಿಂದ ಬಹಳ ಸಂಕಷ್ಟ ಎದುರಾಗಿದ್ದು, ದೇಶದ ಅಭಿವೃದ್ಧಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಕ್ಕೆ ಕೊರೊನಾದಿಂದ ಬಹಳ ದೊಡ್ಡ ಅನಾಹುತಗಳಾಗಿಲ್ಲ. ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ನೀಡುವಷ್ಟು ನಮ್ಮ ದೇಶ ಸಮರ್ಥವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಕಾರ್ಯಕ್ರಮದ ಮೂಲಕ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಎಲ್ಲರೂ ಸ್ವಾವಲಂಬಿಗಳಾಗಲು, ಆರ್ಥಿಕವಾಗಿ ಸಬಲರಾಗಲು ಆತ್ಮನಿರ್ಭರ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಂದಾಪುರ ತಾಲೂಕು ಸಂಘ ಚಾಲಕ ಗುರುರಾಜ್ ರಾವ್ ಕೋಟೇಶ್ವರ ಹೇಳಿದರು. ಗ್ರಾಮವಿಕಾಸ ಸಮಿತಿ ಗಂಗೊಳ್ಳಿ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಮೀನುಗಾರಿಕೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮನಿರ್ಭರ್ ಭಾರತ್ ಆಶಯದಂತೆ ಕೋವಿಡ್-೧೯ ನಿಂದಾಗಿ ಪರ ಊರುಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಸಂಘ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಹಾಗೂ ರೋಟರ‍್ಯಾಕ್ಟ್ ಕುಂದಾಪುರ ದಕ್ಷಿಣ ವಲಯ ಇವರ ಸಂಯೋಜನೆಯಲ್ಲಿ ಹಣ್ಣು ಮತ್ತು ಔಷಧೀಯ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಡಾ| ಉತ್ತಮ್ ಕುಮಾರ್ ಶೆಟ್ಟಿ, ಉತ್ತಮ್ ಹೋಮಿಯೋ ಕ್ಲಿನಿಕ್, ಕುಂದಾಪುರ ಮಾತನಾಡಿ, ಇಡೀ ಜೀವನ ಪದ್ಧತಿ ಹಾಗೂ ಪ್ರಕೃತಿಯೊಂದಿಗಿನ ಕೊಡು-ಕೊಳ್ಳುವಿಕೆಯಲ್ಲಾದ ಸಕರಾತ್ಮಕ ಮಾರ್ಪಾಡುಗಳಿಂದಲೇ ಮನುಕುಲದ ದೈಹಿಕ ಮಾನಸಿಕ ಸ್ಥಿಮಿತತೆ ಕಷ್ಟಸಾಧ್ಯವಾಗಿದ್ದು, ಜೀವ ಸಂಕುಲದ ಸ್ವಾಸ್ಥ್ಯತೆಗಾಗಿ ಪ್ರಕೃತಿ ರಕ್ಷಣೆ ಈ ದಿನಮಾನದ ತುರ್ತು ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಕಾರ್ಯದರ್ಶಿಯಾದ ಜೂಡಿತ್ ಮೆಂಡೊನ್ಸ್, ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಹಾಗೂ ರೋಟರಿ ಕ್ಲಬ್‌ನ ಸದಸ್ಯರಾದ ಆಲ್ಡ್ರಿನ್ ಡಿಸೋಜಾ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ…
