ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕುಂದಾಪುರ ತಾಲೂಕು ಮಟ್ಟದ 17ರ ವಯೋಮಾನದ ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಹುಡುಗರ ತಂಡವು ದ್ವೀತಿಯ ಸ್ಥಾನ ಪಡೆಯಿತು. ತಂಡದ ಐವರು ವಿದ್ಯಾರ್ಥಿಗಳಾದ ಆಯುಷ್ ಶೆಟ್ಟಿ, ಅನುಜ್ ಅಂಬ್ಲಿ, ಕನಿಷ್ಕ್, ಸನ್ವಿತ್ ಮತ್ತು ಅಭಿಷ್ ಜಿಲ್ಲಾ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಫಲಕ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರದೀಪ್. ಕೆ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ಹಾಗೂ ಸೂರ್ಯ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ನಿರಂತರ ಸಾಧನೆಯನ್ನು ಗಮನಿಸಿ ಆಸ್ಟಿನ್ನಲ್ಲಿ ನೆಲೆಸಿರುವ ಪ್ರೋಜೆಕ್ಟ್ ಮೆನೇಜರ್ (ಎಸ್.ಎಲ್.ಕೆ.) ರಾಜೇಶ್ ರತ್ನಾಕರ್ ಪೈ ಅವರು ಗೊಂಬೆಯಾಟ ಅಕಾಡೆಮಿಗೆ 55 ಇಂಚಿನ ಟಿ.ಸಿ.ಎಲ್. ಟಿ.ವಿ.ಯನ್ನು ಇತ್ತೀಚಿಗೆ ಕೊಡುಗೆಯಾಗಿ ನೀಡಿದ್ದಾರೆ. ರಾಜೇಶ್ ರತ್ನಾಕರ್ ಪೈ ಅವರ ತಂದೆ ಎಮ್. ರತ್ನಾಕರ್ ಪೈ ಮತ್ತು ತಾಯಿ ರಾಜಶ್ರೀ ಆರ್.ಪೈ ಅವರು ಇದನ್ನು ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಬಂಟ್ವಾಡಿ, ನಿವೃತ್ತ ಶಿಕ್ಷಕ ಉದಯ ಭಂಡಾರ್ಕಾರ್ ಹಟ್ಟಿಯಂಗಡಿ ಹಾಗೂ ನೇತಾಜಿ ಕಮಿಟಿ ಫ್ರೆಂಡ್ಸ್ ನ ರಾಜೇಂದ್ರ ಪೈ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2025-26ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 15 ಮಂದಿ ಶಿಕ್ಷಕರುಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗ:ಸರಸ್ವತಿ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮರೂರು ಕುಂದಾಪುರ), ವಸುಂಧರ (ಸಹ ಶಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಬೊಮ್ಮಾರಬೆಟ್ಟು), ಹರೀಶ್ ಪೂಜಾರಿ (ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಕಾರ್ಕಳ ತಾಲೂಕು), ಸುಮಂಗಲಾ ಗಾಣಿಗ (ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿಸ್ಮತಿ ಬೈಂದೂರು ವಲಯ) ವಿಜಯ ಎ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೆರೆ ಅಚ್ಲಾಡಿ ಬ್ರಹ್ಮಾವರ ವಲಯ) ಹಿರಿಯ ಪ್ರಾಥಮಿಕ ಶಾಲಾ ವಿಭಾಗ:ಶೇಖರ ಕುಮಾರ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ಕುಂದಾಪುರ), ವೀಣಾ (ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬೆಳ್ಳಾಲ, ನಾಡ ಹಾಗೂ 74 ಉಳ್ಳೂರು ಗ್ರಾಮದಲ್ಲಿ “PMJANMAN” ಯೋಜನೆಯಡಿ ಸುಮಾರು ರೂ. 1.80 ಕೋಟಿ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ “Multi Purpose Center (MPC)” ಕಾಮಗಾರಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಅವರು ಗುರುವಾರದಂದು ಶಂಕು ಸ್ಥಾಪನೆ ನೆರವೇರಿಸಿದರು. ಶಾಸಕರಾದ ಗುರುರಾಜ್ ಗಂಟಿಹೊಳೆ, ಮಂಡಲದ ಅಧ್ಯಕ್ಷರಾದ ಅನಿತಾ ಆರ್ ಕೆ., ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ:ಬೈಂದೂರು ವಿಧಾನಸಭಾ ವ್ಯಾಪ್ತಿಯ ವಂಡ್ಸೆ, ಹರ್ಕೂರು, 74 ಉಳ್ಳೂರು ಗ್ರಾಮಗಳಲ್ಲಿ “PMJANMAN” ಯೋಜನೆಯಡಿ ಸುಮಾರು ರೂ. 4.35 ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ರಸ್ತೆ ಕಾಮಗಾರಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಅವರು ಶಂಕು ಸ್ಥಾಪನೆ ನೆರವೇರಿಸಿ, ನೂಜಾಡಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದರು. ಈ ವೇಳೆ ಶಾಸಕರಾದ ಗುರುರಾಜ್ ಗಂಟಿಹೊಳೆ, ಮಂಡಲದ ಅಧ್ಯಕ್ಷರಾದ ಅನಿತಾ ಆರ್ ಕೆ., ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ /ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ (ಬಾಲಕರು ಮಾತ್ರ) ಅರ್ಜಿ ಆಹ್ವಾನಿಸಲಾಗಿದೆ. ಬ್ರಹ್ಮಾವರ ತಾಲೂಕು ಬಾರ್ಕೂರು ಹನೆಹಳ್ಳಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಅಭ್ಯರ್ಥಿಯು 2005 ರ ಸೆಪ್ಟಂಬರ್ 26 ರಿಂದ 2008ರ ಸೆಪ್ಟಂಬರ್ 26 ರ ಅವಧಿಯಲ್ಲಿ ಜನಿಸಿರುವ ಅರ್ಹರು ಸೆಪ್ಟಂಬರ್ 26 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳನ್ನು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ಅಕ್ಟೋಬರ್ 6 ರಂದು ನಡೆಯುವ ರ್ಯಾಲಿಯಲ್ಲಿ ಆಯ್ಕೆ ಮಾಡಲಾಗುವುದು. ಸದರಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛೆ ಇರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉಡುಪಿ, ರೋಟರಿ ಕ್ಲಬ್ ಕೋಟ ಸಿಟಿ, ಉಸಿರು ಕೋಟ ಇವರ ಸಾರಥ್ಯದಲ್ಲಿ ಕೊಡಮಾಡುವ ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸೂಚನೆಗೆ ಆಹ್ವಾನ ನೀಡಲಾಗಿದೆ. ಸೂಚನೆ ಮಾಡುವ ಪ್ರತಿನಿಧಿಗಳು ಸೂಚಿಸುವ ಶಿಕ್ಷಕರ ಹೆಸರು ಮತ್ತು 5 ಕಾರಣಗಳನ್ನು ವಾಟ್ಸಪ್ ಮೂಲಕ ಈ ನಂಬರಿಗೆ 9663750499 ಕಳಿಸಬೇಕಾಗಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ್ ಸಿ. ಕುಂದರ್, ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಉಪಾಧ್ಯಕ್ಷರಾದ ಸರಸ್ವತಿ, ಪಿಡಿಒ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತಿಚಿಗೆ ಬೆಂಗಳೂರಿನ ಸೈಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಹಾಲಿನಲ್ಲಿ ನಡೆದ ವರ್ಡ್ಕ್ಯಾಂಪ್ 2025 ವೇದಿಕೆಯ ಸೆಷನ್ನಲ್ಲಿ ಕುಂದಾಪುರದ ಮಿಲ್ಲೇನಿಯಲ್ ಡ್ಯುಯೋ ಜೋಡಿಗಳಾದ ಕೆ ಕೀರ್ತಿ ಪ್ರಭು ಮತ್ತು ವಿ ಗೌತಮ್ ನಾವಡ ಅವರು “ ಟೆಸ್ಟರ್ನಂತೆ ಯೋಚಿಸುವುದು: ಕ್ಲೈಂಟ್ಗಿಂತ ಮೊದಲು ಬಗ್ಗ್ಗಳನ್ನು ಪತ್ತೆಹಚ್ಚುವುದು” ವಿಷಯ ಮಂಡನೆ ಮಾಡಿದರು. ಸೆಷನ್ನಲ್ಲಿ, ಡೆವಲಪರ್ಗಳು ಮತ್ತು ಡಿಸೈನರ್ಗಳು ಟೆಸ್ಟಿಂಗ್ನ್ನು ಅಂತಿಮ ಹಂತವಾಗಿ ನೋಡದೆ, ಪ್ರತಿದಿನದ ಕೆಲಸದಲ್ಲಿ ಒಂದು ಮನೋಭಾವವಾಗಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ 250ಕ್ಕೂ ಹೆಚ್ಚು ವರ್ಡ್ಪ್ರೆಸ್ ಅಭಿಮಾನಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಉಪನ್ಯಾಸಗಳು, ನೆಟ್ವರ್ಕಿಂಗ್ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಇವರ ಸೆಷನ್ ಪ್ರಾಯೋಗಿಕ ಪರೀಕ್ಷೆಗಳು ನಡೆದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕುಸ್ತಿ ಪಂದ್ಯಾಟವು ಬಾಲಕರ ವಿಭಾಗದ ಫ್ರಿ ಸ್ಟೆಲ್ ಹಾಗೂ ಗ್ರಿಕೋ ರೋಮನ್ ಮತ್ತು ಬಾಲಕಿಯರ ವಿಭಾಗ ದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು 160ವಿದ್ಯಾರ್ಥಿಗಳು ಈ ಪಂದ್ಯಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಈ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ 14ವಿದ್ಯಾರ್ಥಿಗಳು ಚಿನ್ನದ ಪದಕ 2ವಿದ್ಯಾರ್ಥಿಗಳು ಬೆಳ್ಳಿಯ ಪದಕ 8ವಿದ್ಯಾರ್ಥಿಗಳು ಕಂಚಿನ ಪದಕ ಪಡೆದು ಸತತವಾಗಿ 4ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಕೊಂಡರು. ವಿದ್ಯಾರ್ಥಿಗಳಾದ ರತ್ವಿಕ್, ಸೌಲತ್, ಪನ್ನಗ್, ಶಶಾಂಕ್, ಮಂದಿರ್ ಶೆಟ್ಟಿ, ಸ್ವಸ್ತಿಕ್, ಕಿಶನ್, ಆದಿತ್ಯ, ಪ್ರಣಿತ್, ಗಾಯತ್ರಿ, ಆರ್ಯನ್, ವಿಜಯ್, ಮಂಥನ್, ಸೃಜನ್ ಅವರು ಚಿನ್ನದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ ಎಂದು ಸ್ವರೂಪ ಟಿ.ಕೆ ಹೇಳಿದರು. ಅವರು ಇತ್ತೀಚೆಗೆ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ತೆಲಂಗಾಣ ಹೈದರಾಬಾದ್ ಮೂಲದ ಕುಟುಂಬಕ್ಕೆ ಮಗುವನ್ನು ದತ್ತು ಆದೇಶ ನೀಡಿ ಮಾತನಾಡಿದರು. ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ರ ಸೆಕ್ಷನ್ 56 (1) 58 ಮತ್ತು 61 ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದರು. ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬಹುದು. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸದಾ ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ, ಶುಭ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುವ ಸಿಂಗಾಪುರ ಕನ್ನಡ ಸಂಘದ ಆಹ್ವಾನದ ಮೇರೆಗೆ ಆ.30ರಂದು ಅನುಭವಿ ಕಲಾವಿದರಿಂದ ಹಿಡಿದು ಉದಯೋನ್ಮುಕ ಕಲಾವಿದರನ್ನು ಒಳಗೊಂಡ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸಿಂಗಾಪುರದ ಆರ್ಇಎಲ್ಸಿಇಂಟರ್ನ್ಯಾಷನಲ್ ಹೋಟೆಲ್ನ ಸಭಾಂಗಣದಲ್ಲಿ ರತ್ನಾವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನೀಡಿತು. ಈ ಪ್ರದರ್ಶನವು 400ಕ್ಕೂ ಹೆಚ್ಚು ಕನ್ನಡಿಗರ ಉತ್ಸಾಹ ಭರಿತ ಪ್ರೇಕ್ಷಕರನ್ನು ಸೆಳೆಯಿತು. ಇದೇ ಸಂದರ್ಭದಲ್ಲಿ ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಯಕ್ಷದೇಗುಲವು ಸಿಂಗಾಪುರದಲ್ಲಿ ಹುಟ್ಟಿ, ಬೆಳೆದ 10 ಮಕ್ಕಳಿಗೆ ತಂಡದ ಉಸ್ತುವಾರಿ ಹೊತ್ತ ಗುರು ಪ್ರಿಯಾಂಕ ಕೆ. ಮೋಹನ್ರು ಯಕ್ಷಗಾನ ತರಬೇತಿ ನೀಡಿ ತಂಡದ ಕಾರ್ಯಕ್ರಮದಲ್ಲಿ ಸೇರಿಸಿಕೊಂಡರು. ಇದು ಅಲ್ಲಿನ ಮಕ್ಕಳಿಗೆ ವಿಶಿಷ್ಟ ಸಾಂಸ್ಕೃತಿಕ ಅನುಭವದೊಂದಿಗೆ ಹಿರಿಯ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಅವಕಾಶ ನೀಡಿತು. ಇದರಿಂದ ಸಮೂದಾಯದಿಂದ ಆತ್ಮೀಯ ಮೆಚ್ಚುಗೆಯನ್ನು ಪಡೆದದಲ್ಲದೆ, ಪ್ರೇಕ್ಷಕರು ಈ ಪ್ರದರ್ಶನವು ಅವರ ಸಾಂಸ್ಕೃತಿಕ ಸಂಪರ್ಕ ಮತ್ತು ಹೆಮ್ಮೆಯನ್ನು ಹೆಚ್ಚಿಸಿತು. ಕಲಾವಿದರಾಗಿ ಸುದರ್ಶನ…
