ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತಿಚಿಗೆ ಬೆಂಗಳೂರಿನ ಸೈಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಹಾಲಿನಲ್ಲಿ ನಡೆದ ವರ್ಡ್‌ಕ್ಯಾಂಪ್ 2025 ವೇದಿಕೆಯ ಸೆಷನ್‌ನಲ್ಲಿ ಕುಂದಾಪುರದ ಮಿಲ್ಲೇನಿಯಲ್ ಡ್ಯುಯೋ ಜೋಡಿಗಳಾದ ಕೆ ಕೀರ್ತಿ ಪ್ರಭು ಮತ್ತು ವಿ ಗೌತಮ್ ನಾವಡ ಅವರು “ ಟೆಸ್ಟರ್‌ನಂತೆ ಯೋಚಿಸುವುದು: ಕ್ಲೈಂಟ್‌ಗಿಂತ ಮೊದಲು ಬಗ್ಗ್‌ಗಳನ್ನು ಪತ್ತೆಹಚ್ಚುವುದು” ವಿಷಯ ಮಂಡನೆ ಮಾಡಿದರು.
ಸೆಷನ್‌ನಲ್ಲಿ, ಡೆವಲಪರ್‌ಗಳು ಮತ್ತು ಡಿಸೈನರ್‌ಗಳು ಟೆಸ್ಟಿಂಗ್‌ನ್ನು ಅಂತಿಮ ಹಂತವಾಗಿ ನೋಡದೆ, ಪ್ರತಿದಿನದ ಕೆಲಸದಲ್ಲಿ ಒಂದು ಮನೋಭಾವವಾಗಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ 250ಕ್ಕೂ ಹೆಚ್ಚು ವರ್ಡ್‌ಪ್ರೆಸ್ ಅಭಿಮಾನಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಉಪನ್ಯಾಸಗಳು, ನೆಟ್‌ವರ್ಕಿಂಗ್ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಇವರ ಸೆಷನ್ ಪ್ರಾಯೋಗಿಕ ಪರೀಕ್ಷೆಗಳು ನಡೆದವು.










