ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ನಿರಂತರ ಸಾಧನೆಯನ್ನು ಗಮನಿಸಿ ಆಸ್ಟಿನ್‌ನಲ್ಲಿ ನೆಲೆಸಿರುವ ಪ್ರೋಜೆಕ್ಟ್ ಮೆನೇಜರ್ (ಎಸ್.ಎಲ್.ಕೆ.) ರಾಜೇಶ್ ರತ್ನಾಕರ್ ಪೈ ಅವರು ಗೊಂಬೆಯಾಟ ಅಕಾಡೆಮಿಗೆ 55 ಇಂಚಿನ ಟಿ.ಸಿ.ಎಲ್. ಟಿ.ವಿ.ಯನ್ನು ಇತ್ತೀಚಿಗೆ ಕೊಡುಗೆಯಾಗಿ ನೀಡಿದ್ದಾರೆ.
ರಾಜೇಶ್ ರತ್ನಾಕರ್ ಪೈ ಅವರ ತಂದೆ ಎಮ್. ರತ್ನಾಕರ್ ಪೈ ಮತ್ತು ತಾಯಿ ರಾಜಶ್ರೀ ಆರ್.ಪೈ ಅವರು ಇದನ್ನು ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಬಂಟ್ವಾಡಿ, ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಹಾಗೂ ನೇತಾಜಿ ಕಮಿಟಿ ಫ್ರೆಂಡ್ಸ್ ನ ರಾಜೇಂದ್ರ ಪೈ ಉಪಸ್ಥಿತರಿದ್ದರು.










