Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ ಕುದುರೆಮುಖ ಟ್ರೋಫಿಯ ಚೆಸ್ ಪಂದ್ಯಾಟದಲ್ಲಿ ಕುಂದಾಪುರ ಸಿದ್ದಿವಿನಾಯಕ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಯಶಸ್ವಿ ಪ್ರಥಮ, ರಿತೇಶ್ ಪ್ರಥಮ, ವರ್ಣಿತ ದ್ವೀತಿಯ, ಸಾತ್ವಿಕ್ ತ್ರತಿಯ, ಪ್ರಗತಿ ತ್ರತಿ ಯ, ಅಮರ್ತ್ಯ ಚತುರ್ಥ, ಪ್ರಣೀತ ರಾಘವೇಂದ್ರ ಭಂಡಾರ್ಕರ್, ವಿಜೇತರಾಗಿದ್ದಾರೆ. ಅಕಾಡೆಮಿಯ ಕೋಚ್ ಬಾಬು ಜೆ. ಪೂಜಾರಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.  ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕುದುರೆಮುಖ ಟ್ರೋಫಿಯ 15ರ ವಯೋಮಿತಿಯ ವಿಭಾಗದಲ್ಲಿ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಯಶಸ್ವಿ ಬಾಬು ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಕುಂದಾಪುರದ ಸಿದ್ದಿವಿನಾಯಕ ಚೆಸ್ ಅಕಾಡೆಮಿಯಲ್ಲಿ ಚದುರಂಗ ತರಬೇತಿ ಪಡೆಯುತ್ತಿದ್ದಾಳೆ ಇವಳ ಸಾಧನೆಗೆ ಶುಭದಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ಜರಗುವ ಬ್ರಹ್ಮರಥೋತ್ಸವದ ವಿಜೃಂಭಣೆಯಿಂದ ಜರಗಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ರಥೋತ್ಸವದ ಧಾರ್ಮಿಕ ಅನುಷ್ಠಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪ್ರಾರ್ಥನೆ ಬಳಿಕ ಬಲಿಪೂಜೆ, ಮಾರ್ಗ ಬಲಿ ಜರಗಿತು. ಸಂಜೆ ರಥಾರೋಹಣ, ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ಮತ್ತು ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ನೇತೃತ್ವದಲ್ಲಿ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನುಷ್ಠಾನಗಳು ನಡೆಯಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಅರ್ಚಕರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಹಾಗೂ ಭಜಕರು ಉತ್ಸವದಲ್ಲಿ ಪಾಲ್ಗೊಂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ, ಇವರ ಆಶ್ರಯದಲ್ಲಿ, ಉಡುಪಿ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ, ಕುಂದಾಪುರದ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಲ್ಕಾ ಜೋಬಿ 52-56ಕೆಜಿ ವಿಭಾಗದಲ್ಲಿ ಪ್ರಥಮ ಹಾಗೂ ಪ್ರತೀಕ್ಷಾ 40-44ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಬೆಳಗಿನ ವಾಯು ವಿಹಾರ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಅಧಿಕಾರಿಗಳು ಮಾದರಿಯಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರೊಂದಿಗೆ ಸೋಮೇಶ್ವರದಿಂದ ಆಗುಂಬೆ ಕಡೆಗೆ ಬೆಳಗಿನ ವಾಯು ವಿಹಾರ ಹೊರಟ ಅಧಿಕಾರಿಗಳಾದ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್, ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಹೆಬ್ರಿ ತಹಸೀಲ್ದಾರ್ ಪುರಂದರ ಅವರು , ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು , ಗಾಜಿನ ಬಾಟಲಿಗಳು , ಪ್ಲಾಸ್ಟಿಕ್ ಕವರ್ ಸೇರಿದಂತೆ ಮತ್ತಿತರ ಕಸವನ್ನು ಕಂಡು ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿ, ಆಗುಂಬೆ ಘಾಟ್ ನ 14 ನೇ ತಿರುವಿನಲ್ಲಿ ಸುಮಾರು 200 ಮೀ ವರೆಗಿನ ರಸ್ತೆಯಲ್ಲಿ, ಪ್ರವಾಸಿಗರು ಮತ್ತು ಸಾರ್ವಜನಿಕರು ಎಸೆದಿದ್ದ 5ಚೀಲಕ್ಕೂ ಹೆಚ್ಚಿನ ಕಸವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬರಿ ಪದಕ್ಕೆ ಪದ ಸೇರಿಸಿ ಹಾಡು ಕಟ್ಟದೆ, ಒಂದೊಂದು ಅಕ್ಷರವನ್ನೂ ತುಂಬು ಅನುಭವಿಸಿ ಭಾವಗಳನ್ನೇ ಎದೆಗಿಳಿಸಿದ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳು ಬದುಕಿನ ಗೀತೆಗಳು ಎಂದು ಸಾಂಸ್ಕೃತಿಕ ಚಿಂತಕ ಮುಸ್ತಾಕ್ ಹೆನ್ನಾಬೈಲು ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ವೇದಿಕೆ ಆಯೋಜಿಸಿದ ಭಾವಭೃಂಗದ ಶೃಂಗ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕಿಯಾದ ದಿವ್ಯಾ ಶ್ರೀಧರ್ ರಾವ್ ಬೆಂಗಳೂರು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಬದುಕಿನ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಸಾಹಿತ್ಯ ವೇದಿಕೆಯ ಸಂಯೋಜಕ, ಕನ್ನಡ ಉಪನ್ಯಾಸಕರಾದ ಸುಕುಮಾರ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಸಂಸ್ಕೃತ ಉಪನ್ಯಾಸಕಿಯಾದ ಸುದಕ್ಷಿಣಾ ಎ.ಎಸ್. ಅತಿಥಿಗಳನ್ನು ಪರಿಚಯಿಸಿದರು. ಸಾಹಿತ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಿರಂತರ ಪರಿಶ್ರಮ, ದುಡಿಮೆಯಿಂದ ಜೀವನದಲ್ಲಿ ಯಶಸ್ಸು ಏಳಿಗೆ ಕಾಣಲು ಸಾಧ್ಯವಿದೆ. ಯಾವುದೇ ಕಾರ್ಯವನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯುವುದು ಸಲಭವಲ್ಲ. ಇದಕ್ಕೆ ಏಕಾಗ್ರತೆ, ಶ್ರದ್ಧೆ ಅವಶ್ಯಕ. ಕಳೆದ ಆರು ದಶಕಗಳಿಂದ ಅಪೂರ್ವ ವಸ್ತುಗಳ ಸಂಗ್ರಹದ ಹವ್ಯಾಸ ಬೆಳೆಸಿಕೊಂಡು ಬಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪೂರ್ವ ಪ್ರಾಚೀನ ವಸ್ತು ಸಂಗ್ರಹಕಾರ ಗಂಗೊಳ್ಳಿಯ ಭಾಸ್ಕರ ಕಲೈಕಾರ್ ಅವರು ತನ್ನ ಸಂಪಾದನೆಯ ಸಾವಿರಾರು ರೂಪಾಯಿ ಹಣವನ್ನು ಹಳೆಯ ಪ್ರಾಚೀಣ ಅಪೂರ್ವ ವಸ್ತುಗಳನ್ನು ಖರೀದಿಸಲು ಉಪಯೋಗಿಸಿ ಗಂಗೊಳ್ಳಿಯಲ್ಲಿ ಸುಸಜ್ಜಿತವಾದ ಮ್ಯೂಸಿಯಂ ನಿರ್ಮಿಸಿರುವುದು ಸ್ತುತ್ಯಾರ್ಹವಾದುದು ಎಂದು ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಗಂಗೊಳ್ಳಿಯ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು 25ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ’ನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ರಾಜ್ಯದ ವಿವಿಧೆಡೆ ಸುಮಾರು 75ಕ್ಕೂ ಮಿಕ್ಕಿ ಉಚಿತ ಪ್ರದರ್ಶನ ನೀಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ನಕ್ಷತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಟ್‌ಬೆಲ್ತೂರು ಗ್ರಾಮದ ಹರೆಗೋಡು ನಿವಾಸಿ ನಾಗರಾಜ ಮೊಗವೀರ (35) ಅಲಿಯಾಸ್ ಬುಲೆಟ್ ನಾಗ ಬಂಧಿತ ಆರೋಪಿ. ಅರಾಟೆ ಸೇತುವೆ ಕೆಳಗಡೆ ಹೊಳೆಯ ಬದಿಯಲ್ಲಿ ನಾಗರಾಜ ಮೊಗವೀರ ಎಂಬಾತ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಅಂದಾಜು ರೂ.16,000 ಮೌಲ್ಯದ 540 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ ಅವರು ಕುಂದಾಪುರ ತಹಶಿಲ್ದಾರ್ ಆನಂದಪ್ಪ ಅವರ ಸಮಕ್ಷಮ ಈ ದಾಳಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಕ್ರೈಮ್ ವಿಭಾಗದ ಸಿಬ್ಬಂದಿಗಳಾದ ಮೋಹನ್ ಪೂಜಾರಿ ಶಿರೂರು, ಚಂದ್ರಶೇಖರ್ ಅರೆಶಿರೂರು, ಶ್ರೀಧರ್ ಸೆಳ್ಳೆಕುಳ್ಳಿ, ಪ್ರಿನ್ಸ್ ಕೆ.ಜೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಕಛೇರಿಯಲ್ಲಿ ಜನಸಾಮಾನ್ಯರ ಕೆಲಸವಾಗದಿದ್ದರೆ ಅಧಿಕಾರಿಗಳು ಆ ಹುದ್ದೆಯಲ್ಲಿದ್ದೇನು ಪ್ರಯೋಜನ. ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ. ಹೀಗೆ ಜನರಿಗೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಿದ್ಧಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಬಡ ಕುಟುಂಬಗಳಿಗೆ 94ಸಿ ಹಕ್ಕುಪತ್ರ ನೀಡಿ ಆರ್‌ಟಿಸಿ ಮಾಡಿಕೊಳ್ಳುವ ಸಂದರ್ಭ ಆ ಜಾಗ ಡೀಮ್ಡ್ ಫಾರೆಸ್ಟ್‌ಗೆ ಸೇರಿದ್ದೆಂಬ ನೆಪ ಹೇಳುತ್ತಿರುವ ಬಗ್ಗೆ ಕುಂದಾಪುರ ತಹಶಿಲ್ದಾರರ ವಿರುದ್ಧ ಗರಂ ಆದರು. ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಇದೇ ಪರಿಸ್ಥಿತಿ ಇದೆ. ಜನಸಾಮಾನ್ಯನೊಬ್ಬ ಮನೆ ಕಟ್ಟಿಕೊಳ್ಳಲು ಪಡೆದ ನಿವೇಶನಕ್ಕೂ ಅಧಿಕಾರಿಗಳು ನಿಲ್ಲದ ನೆಪ ಹೇಳಿ ಮತ್ತೆ ಕಿತ್ತುಕೊಳ್ಳುವುದು ಸರಿಯಲ್ಲ. ಈ ವ್ಯವಸ್ಥೆ ಸರಿಪಡಿಸಿದ್ದರೆ ತಾನು ಖುದ್ದಾಗಿ ತಾಲೂಕು ಕಛೇರಿಯಲ್ಲಿ ಪ್ರತಿಭಟನೆ ಕೂರುತ್ತೇನೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿಯೇ ಸೃಜನಶೀಲ ಕಲೆಗಳ ಬಗ್ಗೆ ಆಸಕ್ತಿ ವಹಿಸುವುದು ಅವರ ಮುಂದಿನ ಬದುಕಿಗೆ ನೆರವಾಗಲಿದೆ. ಯಾವುದೇ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಳ್ಳುವುದಷ್ಟೇ ಮುಖ್ಯವಲ್ಲ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಕೂಡ ಗೆಲುವೇ ಆಗಿದೆ ಎಂದು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣದ ಸಂಪಾದಕ ಸುನಿಲ್ ಹೆಚ್. ಜಿ. ಹೇಳಿದರು. ಅವರು ಕುಂದಾಪುರ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕಿರುಚಿತ್ರ ಸ್ಪರ್ಧೆಯ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಾದರೆ ಅದನ್ನು ಇನ್ಯಾರಿಂದಲೋ ನಿರೀಕ್ಷಿಸುವ ಬದಲಿಗೆ ನಾವೇ ಬದಲಾವಣೆಗೆ ಸಾಕ್ಷಿಯಾಗಬೇಕಿದೆ ಎಂದರು. ಪ್ರಾಂಶುಪಾಲರಾದ ಡಾ. ಶಮೀರ್ ಅವರು ಮಾತನಾಡಿ ಕೇವಲ ವಿದ್ಯಾಭ್ಯಾಸ ಮಾತ್ರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ಅದರ ಜೊತೆಗೆ ಇತರ ಸಾಫ್ಟ್ ಸ್ಕಿಲ್‌ಗಳು ಕೂಡ ಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ…

Read More