ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲರೂ ಪ್ರೀತಿಯಿಂದ ಮೂಕಜ್ಜಿ ಎಂದು ಕರೆಯುವ ಉಳ್ಳೂರು ಮೂಕಾಂಬಿಕಾ ಐತಾಳ್ ಕುಂದಗನ್ನಡದಲ್ಲಿ ಆಶು ಸಾಹಿತ್ಯ ರಚಿಸಿದ ಮೊದಲಿಗರು. ಅವರ ಕವನ ಮತ್ತು ಕತೆಗಳಲ್ಲಿ ಕುಂದಗನ್ನಡದ ಪದಗಳು, ನುಡಿಗಟ್ಟುಗಳು ಸಮೃದ್ಧವಾಗಿವೆ ಎಂದು ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ನಾಗೂರಿನಲ್ಲಿ ಖ್ಯಾತ ಆಶು ಕವಯತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಅವರ ಕೃತಿ ‘ಮೂಕಜ್ಜಿ’ ಅನಾವರಣಗೊಳಿಸಿ ಮಾತನಾಡಿದರು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ವಿಲ್ಲದೆ, ಬಾಲ ವಿಧವೆಯಾಗಿ ಸಂಪ್ರದಾ ಯದ ಕಟ್ಟುಪಾಡುಗಳಿಗೆ ಒಳಗಾಗಿ ಬಾಹ್ಯ ಪ್ರಪಂಚದೊಂದಿಗೆ ಅಷ್ಟಾಗಿ ಬೆರೆಯದೆ ಬೆಳೆದ ಮೂಕಾಂಬಿಕಾ ಅಮ್ಮ ವಿವಿಧ ಛಂದಸ್ಸು ಗಳಲ್ಲಿ, ವೈವಿಧ್ಯಮಯ ವಿಚಾರಗಳ ಮೇಲೆ ಕವನ ರಚಿಸಿದುದು. ಕತೆಗಳನ್ನು ಕಟ್ಟಿರುವುದು ಅಚ್ಚರಿಯ ವಿಷಯ. ಅವರ ಹಲವು ಕೃತಿಗಳು ಬೆಳಕಿಗೆ ಬಂದಿಲ್ಲ. ಅವರ ಅಳಿದುಳಿದ ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸ’ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಿ. ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ‘ಸೇವಾ ಭೂಷಣ ಪ್ರಶಸ್ತಿ’ಗೆ ರಂಗಭೂಮಿ ಕಲಾವಿದೆ ರೇವತಿರಾಂ ಕುಂದನಾಡು ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಲ್.ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗುಡ್ಡೆಯಂಗಡಿ ಮೂಲದವರಾದ ಅವರು ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ಡಿಪ್ಲೋಮಾ ಪದವಿ ಪಡೆದಿರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕ ರಂಗಭೂಮಿಯಲ್ಲಿ ಶಿವಮೊಗ್ಗ ರಂಗಾಯಣ ಸೇರಿದಂತೆ, ರಾಜ್ಯದ ಹಲವು ರಂಗತಂಡದಲ್ಲಿ ನಟನೆ, ನಿರ್ದೇಶನದ ಜೊತೆಗೆ ರಂಗ ಹಿನ್ನಲೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಹಲವಾರು ಕಥೆ – ಕವಿತೆ – ನಾಟಕಗಳನ್ನು ಬರೆದಿರುತ್ತಾರೆ. ಮಕ್ಕಳ ನಾಟಕಗಳನ್ನು ಬರೆದು ಸ್ವತಃ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜ್ ನ್ಯಾಷನಲ್ ಸ್ಪೆಲ್ ಬೀ ನಡೆಸಿದ ನ್ಯಾಷನಲ್ ಮೆಗಾ ಫೈನಲ್ ಸ್ಪೇಲ್ ಬೀ ಸ್ಪರ್ಧೆಯಲ್ಲಿ ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿನಿ ಚೈತನ್ಯಶ್ರೀ ಉಡುಪ 27ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸ್ಕೂಲ್‌ನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಹುಪಾಲು ಮುಖ್ಯವಾಹಿನಿ ಮಾಧ್ಯಮಗಳು ಪಕ್ಷಪಾತದ ವರದಿಯ ಮೂಲಕ ಜನರ ದಾರಿತಪ್ಪಿಸುತ್ತಿರುವ ಈ ಸಂಧರ್ಭದಲ್ಲಿ ಪರ್ಯಾಯ ಪತ್ರಿಕೋದ್ಯಮದ ಅಗತ್ಯವಿದ್ದು, ಸಣ್ಣ ಪತ್ರಿಕೆಗಳು ಹಾಗೂ ವೆಬ್ ಪೋರ್ಟೆಲ್‌ಗಳು ಜನರಿಗೆ ಸತ್ಯ ಹೇಳುವ ಕಾರ್ಯವನ್ನು ನಿರ್ಭೀತವಾಗಿ ಮಾಡುತ್ತಿವೆ. ಅವುಗಳೇ ಭವಿಷ್ಯದ ಭರವಸೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು. ಅವರು ಇಲ್ಲಿನ ಕಲಾ ಮಂದಿರದಲ್ಲಿ ನಡೆದ ಕನ್ನಡ ಮೀಡಿಯಾ ಡಾಟ್ ಕಾಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ ದೆಹಲಿಯ ರೈತ ಚಳುವಳಿ ಜೀವಂತವಾಗಿರಲು ಈ ಪರ್ಯಾಯ ಪತ್ರಿಕೋದ್ಯಮವೇ ಪ್ರಮುಖ ಕಾರಣ. ಹಾಗಾಗಿಯೇ ರೈತ ಚಳುವಳಿ ಜನಸಾಮಾನ್ಯರನ್ನೂ ತಲುಪುವಂತಾಯಿತು ಎಂದರು. ಜನರೇ ಮಾಧ್ಯಮವಾಗಿರುವ ಸಂದರ್ಭದಲ್ಲಿ ಸತ್ಯ ಹೇಳುವ ಪರ್ಯಾಯ ಮಾಧ್ಯಮಗಳ ಬಗ್ಗೆ ಭರವಸೆ ಇಟ್ಟು ಬೆಂಬಲಿಸುವ ಕೆಲಸವನ್ನು ಮಾಡಬೇಕಿದೆ ಎಂದರು. ಖ್ಯಾತ ನ್ಯಾಯವಾದಿ, ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ, ಹೋರಾಟಗಾರ, ವಾಗ್ಮಿ ನಿಕೇತ್ ರಾಜ್ ಮೌರ್ಯ ಉಪಸ್ಥಿತರಿದ್ದರು. ಕನ್ನಡ ಮೀಡಿಯಾ ಡಾಟ್ ಕಾಮ್‌ನ ಪ್ರಧಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ರಾಮಕೃಷ್ಣ ಪರಮಹಂಸರ 186ನೇ ಜನ್ಮ ಜಯಂತಿ ಅಂಗವಾಗಿ ಸೋಮವಾರ ಏಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರಾತಃಪೂಜೆ, ಭಜನೆ, ಉಪನಿಷತ್ ಪಠಣ, ಚಂಡಿಕಾ ಪಾರಾಯಣ, ಪೂಜೆ ಹಾಗೂ ಪ್ರಸಾದ ವಿತರಣೆ, ಏಳಜಿತ ಶಾಲಾ ವಿದ್ಯಾರ್ಥಿಗಳಿಂದ ಶ್ರೀ ಭಗವದ್ಗೀತೆ ಹಾಗೂ ಶ್ರೀ ವಿಷ್ಣುಸಹಸ್ರನಾಮ ಪಠಣ, ಮಧ್ಯಾಹ್ನ ಸ್ಥಳೀಯ ಶಾಲೆಗಳಲ್ಲಿ ಶ್ರೀ ರಾಮಕೃಷ್ಣರ ಜನ್ಮ ಜಯಂತಿ ಆಚರಣೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸ್ಥಾಪಕ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಶಿಕ್ಷಕ ಪ್ರದೀಪ್ ಶೆಟ್ಟಿ ಕಾವ್ರಾಡಿ, ಚೇತನ್ ಶೆಟ್ಟಿ ಕೋವಾಡಿ, ಅಕ್ಷಯ್ ಶೆಟ್ಟಿ ಮುಂಬಾರು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಚೋರಮಕ್ಕಿ, ಸಂದೇಶ್ ಶೆಟ್ಟಿ ಮುಂಬಾರು, ಸಚಿನ್ ಶೆಟ್ಟಿ ವಕ್ವಾಡಿ, ಮಹೇಂದ್ರ ಶೆಟ್ಟಿ ಹಾಗೂ ಸಿ.ಎ ಸಾಧಕ ಸಂಪತ್ ಶೆಟ್ಟಿಯವರ ತಂದೆ ಶೇಖರ ಶೆಟ್ಟಿ, ತಾಯಿ ಪ್ರೇಮಲತಾ ಶೆಟ್ಟಿ, ಕುಟುಂಬಸ್ಥರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಾವುಂದ ಹಿಂದು ಅಭ್ಯುದಯ ಸಂಘ, ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು . ಉದ್ಘಾಟಿಸಿ ಮಾತನಾಡಿದ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಯು. ಶಂಕರ ಶೆಟ್ಟಿ, ಕಣ್ಣು ಅತ್ಯಂತ ಅನಿವಾರ್ಯ ಅಂಗಗಳಲ್ಲಿ ಒಂದು. ಅದು ತೀರ ಸೂಕ್ಷ್ಮವೂ ಆಗಿರುವುದರಿಂದ ಅದರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಜ್ ಭಟ್ ಕಣ್ಣಿನ ಆರೋಗ್ಯ ಮತ್ತು ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ ವಂದಿಸಿದರು. ಎ. ಶಿವರಾಮ ಮಧ್ಯಸ್ಥ ನಿರೂಪಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಲಯನ್ಸ್ ಕೋಶಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಸಮೀಪದ ಹಾದ೯ಳ್ಳಿ ಮಂಡಳ್ಳಿ ಗ್ರಾಮದ ಸೌಡ ಪ್ರದೇಶದ ವಾರಾಹಿ ನದಿ ತಟದ ವಿಜಯನಗರ ಕಾಲದ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ. ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರವಣಿಗೆ ಕಂಡು ಬಂದಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿಯನ್ನು ಕಾಣಬಹುದಾಗಿದೆ. ಕೆಲವೊಂದು ಅಕ್ಷರ ಅಸ್ಪಷ್ಠವಾಗಿ ಕಾಣಲ್ಪಟ್ಟಿದ್ದು, ಸಂಪೂಣ೯ ಅಧ್ಯಯನದ ಬಳಿಕ ಮಾಹಿತಿ ಲಭ್ಯವಾಗಲಿದೆ. ದೇವಾಲಯದ ಎದುರಿನ ಮಂಟಪದಲ್ಲಿ ವ್ಯಕ್ತಿಯ ಶಿಲ್ಪಕಲೆ ಕೆತ್ತಲಾಗಿದ್ದು ಇದರೊಂದಿಗೆ “ಮುದ್ರಾಡಿ ಅನಂತಯ್ಯ” ಎಂದು ಬರವಣಿಗೆ ಕಂಡುಬಂದಿದೆ. ಸೌಡದಲ್ಲಿ ಶ್ರೀ ವೀರಾಂಜನೇಯ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗವನ್ನು ತೋರಿಸುವುದರ ಮೂಲಕ ವೀರತ್ವವವನ್ನು ಇಲ್ಲಿ ಗಮನಿಸಬಹುದಾಗಿದೆ. ಹಾಗೆ ಬಾಲದಲ್ಲಿ ಘಂಟೆ, ಎಡಕೈಯ ಮಧ್ಯೆ ಭಾಗದಿಂದ ಗಧೆಯನ್ನು ತೋರಿಸಲಾಗಿದೆ. ಬಲ ಕೈ ಅಭಯ ಹಸ್ತ ನೀಡಿದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಶನಿವಾರ ರಾತ್ರಿ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ. ಭಟ್ಕಳದ ನಿವಾಸಿಗಳಾದ ಸೈಯದ್ ಮೊಸ್ಸಿನ್ ಲಂಕಾ (52) ಹಾಗೂ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು. ಶನಿವಾರ ರಾತ್ರಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಕರ್ತವ್ಯದ್ದಾಗ ದನದ ಮಾಂಸ ತುಂಬಿಸಿಕೊಂಡ ಕಾರು ಬೈಂದೂರು ಕಡೆಗೆ ಬರುತ್ತಿರುವ ಮಾಹಿತಿ ಪಡೆದಿದ್ದು, ಅದರಂತೆ ಸಿಬ್ಬಂದಿಗಳ ಸಹಾಯದಿಂದ ಶಿರೂರು ಚೆಕ್ಪೋಸ್ಟ್ ಬಳಿ ರಾತ್ರಿ 9.45ರ ಹೊತ್ತಿಗೆ ಭಟ್ಕಳ ಕಡೆಯಿಂದ ಬರುತ್ತಿದ್ದ ಸಂಶಯಾಸ್ಪದ ಇಟಿಯಾಸ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದು ಡಿಕ್ಕಿಯಲ್ಲಿ 3 ಪ್ಲಾಸ್ಟಿಕ್ ಚೀಲದಲ್ಲಿ ಜಾನುವಾರು ಮಾಂಸ ಇರುವುದು ಕಂಡು ಬಂದಿದೆ. ಕಾರಿನಲ್ಲಿ ಸುಮಾರು 40 ಸಾವಿರ ರೂಪಾಯಿ ಅಂದಾಜು ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ, 5 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಸೇನೆಯ ಬಗ್ಗೆ ಉತ್ತಮ ಅನುಭವ ಕಟ್ಟಿಕೊಡುವ ‘ಸೇನಾನುಭವ’ ಕೃತಿ ಭಾರತೀಯ ಸೇನೆಯ ಬಗೆಗಿನ ಹಲವು ತಪ್ಪು ಕಲ್ಪನೆಯನ್ನು ತೊಡೆದುಹಾಕುತ್ತದೆ. ಸೇನೆಯ ಬಗೆಗೆ ಉತ್ತಮ ಅಂಶಗಳನ್ನು ಒಳಗೊಂಡಿರುವ ಕೃತಿಯು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಬಲ್ಲ ಮೌಲ್ಯ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಹೇಳಿದರು. ಅವರು ಶನಿವಾರ ಉಡುಪಿ ಸುಹಾಸಂ ನೇತೃತ್ವದಲ್ಲಿ ಹೊಟೆಲ್ ಕಿದಿಯೂರಿನ ರೂಪ್ ಟಾಪ್ ಹಾಲಿನಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಬೈಂದೂರು ಚಂದ್ರಶೇಖರ ನಾವಡರ ಸೇನಾನುಭವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಈ ಕೃತಿಯು ಸೇನಾನುಭವ, ಸೇವಾನುಭವ ಮತ್ತು ಸೇವಾನುಭಾವದ ಮೂರು ಆಯಾಮವನ್ನು ಒಳಗೊಂಡಿದ್ದು, ಪರಿಪೂರ್ಣತೆಯೆಡೆಗೆ ಸಾಗಿದೆ. ಚಂದ್ರಶೇಖರ ನಾವುಡರಲ್ಲಿ ಪತ್ರಕರ್ತನಲ್ಲಿರಬೇಕಾದ ನಿರೂಪಣಾ ಶೈಲಿ, ಸಾಹಿತ್ಯಿಕ ಪಟುತ್ವ ಕರಗತವಾಗಿರುವುದರಿಂದ ತಮ್ಮ ಕೃತಿಯಲ್ಲಿ ಹಲವು ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದಾರೆ ಎಂದರು. ಲೇಖಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಿದರು. ಕುಂದಪ್ರಭ ಸಂಪಾದಕರಾದ ಯು. ಎಸ್. ಶೆಣೈ ಉಪಸ್ಥಿತರಿದ್ದರು. ಲೇಖಕ ಬೈಂದೂರು ಚಂದ್ರಶೇಖರ…
