ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಭಾರತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಪಡೆಯ ಸದಸ್ಯರಾಗಿ ಇಲ್ಲಿನ ಸಾತ್ವಿಕ್ ವೀಗನ್ ಸೊಸೈಟಿಯ ಸಂಸ್ಥಾಪಕ ಶಂಕರನಾರಾಯಣ ನೇಮಕಗೊಂಡಿದ್ದಾರೆ. ಮೂಲತ ಭಾರತೀಯ ವೀಗನ್ ಸೊಸೈಟಿಯ ಸಂಸ್ಥಾಪಕರಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಬೈಂದೂರು ಸಮೀಪದ ಹೊಸೂರು ಎಂಬಲ್ಲಿ ಸಾತ್ವಿಕ ವೀಗನ್ ಸೊಸೈಟಿಯ ಹೆಸರಿನಲ್ಲಿ ಸಾತ್ವಿಕ ಆಹಾರ ಸೇವನೆಯ ಅಭಿಯಾನ ನಡೆಸುತ್ತಿದ್ದಾರೆ. ಅವರ ಸಂಘಟನೆಗೆ ಭಾರತ ಮತ್ತು ವಿದೇಶಗಳಲ್ಲಿ ಅನುಯಾಯಿಗಳು ಇದ್ದಾರೆ. ಭಾರತವೂ ಸೇರಿದಂತೆ ಜಗತ್ತಿನಲ್ಲಿ ಲಭ್ಯವಿರುವ ವೀಗನ್ ಆಹಾರಗಳ (ಅಹಿಂಸಾಹಾರ) ವ್ಯಾಖ್ಯಾನವನ್ನು ಮರುಪರಿಶೀಲಿಸುವ, ಜಾಗತಿಕವಾಗಿ ಲಭ್ಯವಿರಬಹುದಾದ ಮಾದರಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ವೀಗನ್ ಆಹಾರಗಳ ಪರಿವೀಕ್ಷಣೆ ಮತ್ತು ದೃಢೀಕರಣಕ್ಕೆ ಮಾರ್ಗದರ್ಶನ ಅಥವಾ ಸಲಹೆಗಳನ್ನು ರೂಪಿಸುವ ಮತ್ತು ಆಹಾರ ಪ್ರಾಧಿಕಾರವು ಸೂಚಿಸುವ ಇನ್ನಿತರ ಕಾರ್ಯಗಳನ್ನು ನಿರ್ವಹಿಸುವ ಹೊಣೆಯನ್ನು ಕಾರ್ಯಪಡೆಗೆ ಒಪ್ಪಿಸಲಾಗಿದೆ. ಭೋಪಾಲದ ಐಸಿಎಆರ್ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಸುಮೇಧಾ ಎಸ್. ದೇಶಪಾಂಡೆ, ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಪೌಷ್ಠಿಕಾಹಾರ ಮತ್ತು ಆಹಾರ ವಿಜ್ಞಾನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರು ಕೋವಿಡ್-19 ಸಂಕಷ್ಟದಲ್ಲಿರುವಾಗ ಕೇಂದ್ರದ ಬಿಜೆಪಿ ಸರ್ಕಾರ 11 ಸುಗ್ರೀವಾಜ್ಞೆಗಳ ಮೂಲಕ ಜನವಿರೋಧಿ ಶಾಸನಗಳನ್ನು ತರಲು ಮುಂದಾಗಿದೆ. ರಾಜ್ಯದ ಜನರಿಂದ ಸಂಗ್ರಹಿಸಿದ ಜಿಎಸ್ಟಿ ಪಾಲು ನೀಡದೆ ಜನರ ಮೇಲೆ ಸಾಲದ ಹೊರೆ ಹೊರಿಸಿದೆ. ಇದು ಖಂಡನೀಯ ಎಂದು ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಸಿಪಿಎಂ ಬೈಂದೂರು ವಲಯ ಸಮಿತಿ ಕೇಂದ್ರದ ನಡೆ ವಿರುದ್ಧ ಇಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು. ಬೈಂದೂರು ಭಾಗವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ಸಂಸತ್ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು. ರೈತರು, ಕಾರ್ಮಿಕರು ಅನುಭವಿಸುತ್ತಿರುವ ಬವಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ಅವರ ಪರ ಮಾತನಾಡಬೇಕು ಎಂದು ಆಗ್ರಹಿಸಿದರು. ಸಿಪಿಎಂ ರಾಜ್ಯ ಮುಖಂಡ ಕೆ. ಶಂಕರ್ ಮಾತನಾಡಿ ಪ್ರಜಾಸತ್ತಾತ್ಮಕವಾಗಿ, ಶಾಂತಿಯುತವಾಗಿ ನಡೆಸಿದ ರಾಜಕೀಯ ಚಳವಳಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು. ಹೋರಾಟಗಾರರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇನ್ ಸೈಟ್ ಫೌಂಡೇಶನ್ ಯು.ಎಸ್.ಎ.ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ವಿಭಾಗದ ಆನ್ ಲೈನ್ ಭರತನಾಟ್ಯ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನ ನೆಂಪು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಂದಾಪುರದ ರಾಜ್ ಕುಮಾರ್ ನೆಂಪು ಮತ್ತು ಪ್ರತಿಮಾ ಇವರ ಪುತ್ರಿಯಾಗಿರುವ ಸಿಂಚನ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜರುಗಿದ ಹಂಸ ಭ್ರಮರಿ ಬೆಂಗಳೂರು, ಹೆಜ್ಜೆ ಗೆಜ್ಜೆ ಉಡುಪಿ, ಡ್ಯಾನ್ಸ್ ಜಾತ್ರೆ ಧಾರವಾಡ, ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್, ಹನಿವೆಲ್ ಕಂಪೆನಿ ಬೆಂಗಳೂರು, ದಿಕ್ಸೂಚಿ ನಾಟ್ಯಾಲಯ ಬೆಂಗಳೂರು, ಇವರು ನಡೆಸಿದ ನ್ರತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ. ಕಲಿಕೆಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಈಕೆ ವಿದುಷಿ ಪ್ರವೀತಾ ಅಶೋಕ್ ಇವರ ಮಾರ್ಗದರ್ಶನದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ಪ್ರಸ್ತುತ ವಿದ್ವತ್ ಪೂರ್ವದ ವಿದ್ಯಾರ್ಥಿನಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣ ಸಮುದ್ರ ತೀರದಲ್ಲಿ ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ಪಡೆದುಕೊಂಡರು. ಕರಾವಳಿ ಕಾವಲುಪಡೆಯ ಎಸ್ಪಿ ಆರ್. ಚೇತನ್ ಈ ಬಗ್ಗೆ ಮಾಹಿತಿ ನೀಡಿ ‘ಮೇಲ್ನೋಟಕ್ಕೆ ಹಡಗಿನ ದಿಕ್ಕು ಸೂಚಕ ವಸ್ತುವಿನಂತೆ ಕಾಣುತ್ತಿದೆ. ಸಾಮಾನ್ಯವಾಗಿ ಬಂದರಿನ ಸಮೀಪದಲ್ಲಿ ಇಂತಹ ಉಪಕರಣವನ್ನು ಅಳವಡಿಸಲಾಗುತ್ತದೆ. ಹಡಗುಗಳು ಬಂದರು ತಲುಪಲು ಈ ಉಪಕರಣಗಳು ಸಹಾಯ ಮಾಡುತ್ತವೆ ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಧ್ಯಾಪಕ ಬಾಲಕೃಷ್ಣ ಎಸ್. ಮದ್ದೋಡಿ ಅವರು ಮಂಡಿಸಿದ “ಭಾರತದ ದಕ್ಷಿಣ ಪಶ್ಚಿಮ ಕರಾವಳಿಯ ಉದ್ಯಾವರ ನದಿ ಜಲಾನಯನ ಪ್ರದೇಶದ ಭೂ – ಮಾಹಿತಿ ಮತ್ತು ಭೂ ಮೌಲ್ಯಮಾಪನ ಅಧ್ಯಯನಗಳು”ಸಂಶೋಧನಾ ಪ್ರಬಂಧಕ್ಕೆ ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಪಿಎಚ್ಡಿ ಪದವಿ ಪ್ರದಾನಿಸಿದೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ಪ್ರಾಧ್ಯಾಪಕ, ಭೂ ವಿಜ್ಞಾನ ಡಾ. ಎಚ್. ಎನ್. ಉದಯಶಂಕರ ಅವರ ಮಾರ್ಗದರ್ಶನದಡಿಯಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಬೈಂದೂರು ತಾಲೂಕಿನ ಮಯ್ಯಾಡಿಯವರಾದ ಬಾಲಕೃಷ್ಣ ಮದ್ದೋಡಿ ರೋಟರಿ ಜಿಲ್ಲೆ 3182 ಇದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಉತ್ತಮ ಸಂಘಟಕ, ವಾಗ್ಮಿ, ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶ್ರೀನಿವಾಸ ರಾಮಕೃಷ್ಣ ಮದ್ದೋಡಿ ಮತ್ತು ಲೀಲಾವತಿ ಮದ್ದೋಡಿ ಅವರ ಪುತ್ರರಾಗಿದ್ದು ಹಾಗು ಮಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಸೋಂಕು ನಿಯಂತ್ರಣ ಅಭಿಯಾನದಲ್ಲಿ, ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೆರವಾಗುವ ದೃಷ್ಠಿಯಿಂದ, ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಾರುತಿ ಓಮ್ನಿ ವಾಹನವನ್ನು ಮಾದರಿ ಸಂಗ್ರಹ ಸಂಚಾರಿ ಘಟಕಕ್ಕಾಗಿ ಹಸ್ತಾಂತರಿಸಲಾಗಿದೆ. ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಇದನ್ನು ಒಪ್ಪಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕವಾಗಿ ಈ ವಾಹನವನ್ನು ಪರಿವರ್ತಿಸಿದ್ದಾರೆ. ಸ್ವಯಂ ಚಾಲಿತ ಹೊಸ ಮಾದರಿಯ ಸೆನಿಟೈಸರ್ ಹಾಗೂ ಗಂಟಲು ದ್ರವ ಸಂಗ್ರಹ ವ್ಯವಸ್ಥೆಯಲ್ಲೂ ಹೊಸತನ ಈ ಸಂಚಾರಿ ಘಟಕದಲ್ಲಿದೆ. ಗಿಳಿಯಾರು ಕುಶಲಹೆಗ್ಡೆ ಚಾರಿಟೆಬಲ್ ಟ್ರಸ್ಟಿನ ಪರವಾಗಿ ಉಪ ಆಯುಕ್ತ ಕೆ. ರಾಜು ಅವರ ಮೂಲಕ, ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪರಿಗೆ ಹಸ್ತಾಂತರಿಸಲಾಯಿತು. ಉಪವಿಭಾಗಾಧಿಕಾರಿ ಕೆ. ರಾಜು ಅವರು ಮಾತನಾಡಿ “ಕೋವಿಡ್ -19 ಸಮಸ್ಯೆಯ ಕಾರಣದಿಂದ ಲಾಕ್ಡೌನ್ ಆದಂದಿನಿಂದ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ನವರು ವಲಸೆ ಕಾರ್ಮಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಮೀನುಗಾರರ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಎಂದು ಅಖಿಲ ಭಾರತ ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ ಒಕ್ಕೂಟಕ್ಕೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಶಂಕರ್ ಸರ್ಕಾರವನ್ನು ಒತ್ತಾಯಿಸಿದರು. ಉಪ್ಪುಂದ ಕಾಸನಾಡಿ ದೈವಸ್ಥಾನ ವಠಾರದಲ್ಲಿ ಸಂಘಟನೆಯ ಆಶ್ರಯದಲ್ಲಿ ನಡೆದ ಉಪ್ಪುಂದ ಪ್ರದೇಶದ ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿ, 60 ವರ್ಷ ಪ್ರಾಯ ಮೀರಿದ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕಾರ್ಮಿಕರಿಗೆ ತಿಂಗಳಿಗೆ ರೂ 600 ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ.1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜರಗುವ ಪ್ರತಿಭಟನೆ, ಮನವಿ ಸಲ್ಲಿಕೆ ಹೋರಾಟ ಕಾರ್ಯಕ್ರಮದಲ್ಲಿ ಅಧಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ / ಸುಣ್ಣ ಕಲ್ಲು ಮತ್ತು ಡಾಲೋಮೈಟ್ / ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು / ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಂದನೇ ತರಗತಿಯಿಂದ ಪದವಿ ಕೋರ್ಸ್ವರೆಗೆ, ವೃತ್ತಿಪರ ಹಾಗೂ ವೃತ್ತಿಪರ ರಹಿತ, ಐಟಿಐ ಕೋರ್ಸ್ಗಳಿಗೆ ನ್ಯಾಷನಲ್ ಸ್ಕಾಲರ್ ಷಿಪ್ ಪೋರ್ಟಲ್ ಮೂಲಕ https://scholarships.gov.in ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0120-6619540 ಅಥವಾ ಇ-ಮೇಲ್: wclwoblr-ka@nic.in ಸಂಪರ್ಕಿಸುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಲ್ಯಾಣ ಮತ್ತು ಉಪಕರ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿನ ವಿದ್ಯಾರ್ಥಿ ಯೋಗೀಂದ್ರ ಮರವಂತೆ ಅವರ ಅಂಕಣ ಬರಹಗಳ ಸಂಕಲನ ’ಲಂಡನ್ ಡೈರಿ’ಗೆ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಬಂದ ಸಂದರ್ಭವನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೆಳೆಯರು ವಿಶಿಷ್ಟವಾಗಿ ಸಂಭ್ರಮಿಸಿದರು. ಉದ್ಯೋಗ ನಿಮಿತ್ತ ಇಂಗ್ಲೆಂಡ್ನಲ್ಲಿರುವ ಯೋಗೀಂದ್ರ ಅವರನ್ನು ವೆಬೆಕ್ಸ್ ಜಾಲಸಂಪರ್ಕ ಮೂಲಕ ಕೂಡಿಕೊಂಡು ಅಭಿನಂದನ ಕಾರ್ಯಕ್ರಮ ನಡೆಸಿ, ಅವರೊಂದಿಗೆ ಸಂವಾದ ನಡೆಸಿದರು. ಊರ ಸಂಪ್ರದಾಯದಂತೆ ಆರಂಭದಲ್ಲಿ ಅನಿತಾ ಆರ್. ಕೆ. ಪ್ರಾರ್ಥನೆ ಹಾಡಿದರು. ಅಧ್ಯಕ್ಷ ರವಿ ಮಡಿವಾಳ ಸ್ವಾಗತಿಸಿದರು. ಕೋಶಾಧಿಕಾರಿ ಕರುಣಾಕರ ಆಚಾರ್ಯ ಕಾರ್ಯಕ್ರಮದ ಔಚಿತ್ಯ ವಿವರಿಸಿದರು. ಯೋಗೀಂದ್ರ ಆರಂಭಿಕ ಪ್ರತಿಕ್ರಿಯೆಯಲ್ಲಿ ವರ್ಷವೂ ಎರಡು ಬಾರಿ ಊರಿಗೆ ಭೇಟಿನೀಡುತ್ತಿದ್ದ ತಮಗೆ ಕೊರೊನಾ ಸೃಷ್ಟಿಸಿರುವ ಸಂಕಷ್ಟದ ಸ್ಥಿತಿಯಲ್ಲಿ ಅದು ಸಾಧ್ಯವಾಗಿಲ್ಲ. ತಮಗೆ ಪುಟ್ಟ ಪುರಸ್ಕಾರ ದೊರೆತುದನ್ನು ನೆಪವಾಗಿರಿಸಿಕೊಂಡು ಊರ ಗೆಳೆಯರು ನಡೆಸಿದ ಕಾರ್ಯಕ್ರಮ ಆ ಕೊರತೆಯನ್ನು ಕ್ಷಣ ಕಾಲ ಮರೆಯುಂತೆ ಮಾಡಿದೆ ಎಂದರು. ಸಂಘದ ಸದಸ್ಯರಾದ ದಯಾನಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.21ರ ಸೋಮವಾರ 233 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 55, ಉಡುಪಿ ತಾಲೂಕಿನ 111 ಹಾಗೂ ಕಾರ್ಕಳ ತಾಲೂಕಿನ 47 ಮಂದಿಗೆ ಪಾಸಿಟಿವ್ ಬಂದಿದೆ. 20 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 135 ಸಿಂಥಮೇಟಿವ್ ಹಾಗೂ 98 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 140, ILI 78, ಸಾರಿ 6 ಪ್ರಕರಣವಿದ್ದು, 5 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 3 ಮಂದಿ ಹೊರ ಜಿಲ್ಲೆಯಿಂದ, ಓರ್ವ ವ್ಯಕ್ತಿ ಹೊರದೇಶದಿಂದ ಬಂದಿದ್ದಾರೆ. ಇಂದು 66 ಮಂದಿ ಆಸ್ಪತ್ರೆಯಿಂದ ಹಾಗೂ 212 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕಾರ್ಕಳದ 72 ವರ್ಷದ ವೃದ್ಧೆ, ಉಡುಪಿ 70 ವರ್ಷದ ವೃದ್ಧೆ, 84 ವರ್ಷದ ವೃದ್ಧ, ಕುಂದಾಪುರ 66 ವರ್ಷದ ಪುರುಷ ಮೃತಪಟ್ಟಿದ್ದಾರೆ. 619 ನೆಗೆಟಿವ್: ಈ ತನಕ ಒಟ್ಟು 94320 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 78859 ನೆಗೆಟಿವ್,…
