ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಬೆಂಗಳೂರು ಇವರ ಮಾರ್ಚ್ 19 ರ ಸುತ್ತೋಲೆಯಂತೆ, ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ಸಂಬಂಧ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಜನದಟ್ಟಣೆಯನ್ನು ನಿರ್ಭಂಧಿಸಲು, ಉಡುಪಿ ಜಿಲ್ಲೆಯ ಸಾರಿಗೆ ಕಛೇರಿಯಲ್ಲಿ ಮಾರ್ಚ್ 20 ರಿಂದ ಮುಂದಿನ ಆದೇಶದವರೆಗೆ ಹೊಸದಾಗಿ ಕಲಿಕಾ ಲೈಸನ್ಸ್ ಮತ್ತು ಚಾಲನಾ ಲೈಸನ್ಸ್ಗಳಿಗಾಗಿ ಪರೀಕ್ಷೆಗೆ ಹಾಜರಾಗುವುದನ್ನು ಕಡ್ಡಾಯವಾಗಿ ನಿರ್ಭಂಧಿಸಲಾಗಿದೆ. ಏಪ್ರಿಲ್ 15 ರ ವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಹೊಸ ಚಾಲನಾ ಅನುಜ್ಞಾ ಪತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ. ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪತ್ರಿಕಾ ಜಾಹಿರಾತು ಸಂಸ್ಥೆ ಪ್ರಚಾರ ಪಬ್ಲಿಸಿಟಿ ಇದರ ಸ್ಥಳಾಂತರ ಕಛೇರಿಯನ್ನು ಕೊಲ್ಲಮ್ಮ ನಿಲಯ ಬಿಲ್ಡಿಂಗ್ನಲ್ಲಿ ಕುಂದಾಪುರ ತಶೀಲ್ದಾರ್ ತಿಪ್ಪೇೇಸ್ವಾಮಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಸನ್ನ ಆಂಜನೇಯ ದೇವಸ್ಥಾನದ ಸ್ಥಾಪಕರಾದ ಸುರೇಶ್ ಡಿ. ಪಡುಕೋಣೆ, ಪತ್ರಕರ್ತ ಸಂಘದ ಅಧ್ಯಕ್ಷರಾದ ಶಶಿಧರ ಹೆಮ್ಮಾಡಿ, ಸೌತ್ ಕೆನರ್ ಪೋಟೋಗ್ರಾಪರ್ಸ್ ಅಸೋಸಿಯೇಷನ್ ಕುಂದಾಪುರ ವಲಯ ಅಧ್ಯಕ್ಷರಾದ ರಾಜು ಮಠದಬೆಟ್ಟು, ಪುರಸಭೆಯ ಸದಸ್ಯ ಕೆ. ಜಿ. ನಿತ್ಯಾನಂದ, ಎಂ. ಜಿ. ದೇವಾಡಿಗ, ಸಂಸ್ಥೆಯ ಮಾಲೀಕರಾದ ನಾಗರಾಜ ರಾಯಪ್ಪನ ಮಠ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ, ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಡುಪಿ ಜಿಲ್ಲೆಯಿಂದ ಸಾಮಾನ್ಯ ವರ್ಗದ 6 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು 7 ಅಭ್ಯರ್ಥಿಗಳ ಗುರಿ ಇದ್ದು, ಸದರಿ ಗುಂಪಿನಲ್ಲಿ 5 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಮೀಸಲಿರುತ್ತದೆ. ಆಸಕ್ತರು ಏಪ್ರಿಲ್ 24 ರ ಒಳಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಶುಲ್ಕವು ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂ. ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ 15 ರೂ. ಇದ್ದು, ಸದರಿ ಮೊತ್ತವನ್ನು IPO/ ಡಿಡಿಯನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾ ಪಂಚಾಯತ್), ಉಡುಪಿ ಇವರ ಹೆಸರಿನಲ್ಲಿ ಪಡೆಯುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕರೋನಾ ವೈರಸ್ ಕುರಿತ ನಾಗರೀಕರಲ್ಲಿರುವ ಸಂದೇಹಗಳನ್ನು ಪರಿಹರಿಸಲು, ರೋಗದ ಬಗ್ಗೆ ಮಾಹಿತಿ ನೀಡಲು, ಸಂಶಯಾಸ್ಪದ ರೋಗಿಗಳ ಚಲನಗಳ ಮಾಹಿತಿ ಸಂಗ್ರಹಿಸಲು, ಐಸೋಲೇಟೆಡ್ ಬೆಡ್ಗಳ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆಯಲಾಗಿದ್ದು, ಸಹಾಯವಾಣಿಯ ಸಂ. 9663957222 ಅಥವಾ 9663950222 ಆಗಿದ್ದು, ಒಂದೇ ದಿನದಲ್ಲಿ 20 ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯದ ಸಾರ್ವಜನಿಕರೂ ಸಹ ಮಾಹಿತಿ ಕೋರಿ ಸಹಾಯವಾಣಿ ಸಂಪರ್ಕಿಸಿದ್ದಾರೆ. ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಡಿಹೆಚ್ ಓ ಡಾ. ಸುಧೀರ್ ಚಂದ್ರ ಸೂಡಾ ಈ ಬಗ್ಗೆ ಮಾಹಿತಿ ನೀಡಿದರು. ಈ ಸಹಾಯವಾಣಿ 24X7 ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಒಟ್ಟು 13 ಸಿಬ್ಬಂದಿ ನಿಯೋಜಿಸಲಾಗಿದ್ದು, ಕರೋನಾ ಕುರಿತು ಸಂದೇಹ ಬಗೆಹರಿಸಲು ಕೌನ್ಸಿಲರ್ ಸಹ ಇದ್ದು, ಮಾಹಿತಿ ಸಂಗ್ರಹಣೆ, ವಿದೇಶಗಳಿಂದ ಬಂದವರು ಅನುಸರಿಸಬೇಕಾದ ಕ್ರಮಗಳು, ಹೋಂ ಕ್ವಾರಂಟೈನ್ ಕುರಿತು ಮಾಹಿತಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಚಂಡಮಾರುತ ಹಾಗೂ ಕೊರೊನಾ ಭೀತಿಯಿಂದ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿದ್ದ ಹೂಡಿಕೆದಾರರು ಕಂಗಾಲಾಗಿದ್ದಾರೆ. ಈ ಸಾಲಿನಲ್ಲಿ ಸತತ ನಾಲ್ಕು ಚಂಡಮಾರುತಗಳು ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸುವ ಭೀತಿ ಎದುರಾಗಿತ್ತು. ಚಂಡಮಾರುತದ ಭೀತಿ ದೂರವಾಗಿ ಪ್ರವಾಸೋದ್ಯಮ ಚೇತರಿಸಿಕೊಳ್ಳುವಷ್ಟರಲ್ಲಿ ಇದೀಗ ಕೊರೊನಾ ಭೀತಿ ಎದುರಿಸುವಂತಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಹಳಷ್ಟು ನಷ್ಟ ಅನುಭವಿಸಿದೆ. ಕರಾವಳಿ ತೀರ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಗಣನೀಯವಾಗಿ ಇಳಿಮುಖವಾಗಿದ್ದು, ಪ್ರವಾಸಿಗರನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಅದೆಷ್ಟೋ ಉದ್ದಿಮೆ, ವ್ಯವಹಾರಗಳು ನಷ್ಟದಲ್ಲಿದೆ. ಸರಕಾರದ ಯಾವುದೇ ಸಹಾಯಧನ, ಸಬ್ಸಿಡಿ ಇಲ್ಲದೆ ಪ್ರವಾಸೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದ ಹೂಡಿಕೆದಾರರು ದಿಕ್ಕು ತೋಚದಂತಾಗಿದ್ದಾರೆ. ಪಕ್ಕದ ಕೇರಳ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಾಂಪ್ರದಾಯಿಕ ದೋಣಿ ಮನೆ ನಡೆಸುವವರಿಗೆ ಉಚಿತ ವಿದ್ಯುತ್, ನೀರು ಹಾಗೂ ಸಬ್ಸಿಡಿ ದರದಲ್ಲಿ ಡೀಸೆಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ನಮ್ಮಭೂಮಿ ಇಲ್ಲಿನ ವೃತ್ತಿ ತರಬೇತಿಯ ಮಕ್ಕಳು ಅವರ ಪಠ್ಯಕ್ರಮದ ಒಂದು ಭಾಗವಾಗಿ ಸಮೀಪದ ಹಟ್ಟಿಯಂಗಡಿಯ ಕರ್ನಾಟಕ ಬ್ಯಾಂಕ್ಗೆ ಕ್ಷೇತ್ರ ಭೇಟಿಯನ್ನು ಹಮ್ಮಿಕೊಂಡಿದ್ದರು. ಕರ್ನಾಟಕ ಬ್ಯಾಂಕ್ನ ಪ್ರಬಂಧಕರಾದ ವಿನಾಯಕ ಅವರೊಂದಿಗೆ ಸಂದರ್ಶನ ನಡೆಸಿದರು. ಬ್ಯಾಂಕ್ನಲ್ಲಿ ಖಾತೆ ತೆರೆಯುವುದು ಹೇಗೆ, ಖಾತೆಗಳ ವಿಧಗಳು, ವಿವಿಧ ಉಳಿತಾಯ ಯೋಜನೆಗಳು ಸಾಲ ನೀಡುವ ವ್ಯವಸ್ಥೆ, ಭದ್ರತಾ ಕೋಣೆ, ಬ್ಯಾಂಕ್ನಲ್ಲಿನ ಫೈರಿಂಗ್ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾ ಆಳವಡಿಕೆ ಮತ್ತು ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಅಲಾರ್ಮ್ ವ್ಯವಸ್ಥೆ ಮುಂತಾದವುಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಕ್ಕಳು ಪಡೆದುಕೊಂಡರು. ಈ ಕ್ಷೇತ್ರ ಭೇಟಿಯಲ್ಲಿ ವಿವಿಧ ವೃತ್ತಿ ತರಬೇತಿಯ 44 ಮಕ್ಕಳು ಮತ್ತು ನಮ್ಮಭೂಮಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಕೈಗೊಳ್ಳುವ ವಿವಿಧ ಕಾಮಗಾರಿಗಳನ್ನು, ಪ್ರವಾಸಿಗರನ್ನು ಆಕರ್ಷಿಸುವಂತೆ, ನೂತನ ರೀತಿಯಲ್ಲಿ, ವಿಭಿನ್ನ ವಿನ್ಯಾಸದಲ್ಲಿ ಯೋಜನೆ ಸಿದ್ದಪಡಿಸಲು ವಾಸ್ತುಶಿಲ್ಪಿಯೊಬ್ಬರನ್ನು ಜಿಲ್ಲಾ ಸಮಿತಿಯಲ್ಲಿ ನೇಮಿಸಿಕೊಂಡು ಅವರ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳು ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಬೀಚ್ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳು ಏಕ ರೂಪದಲ್ಲಿ ನಿರ್ಮಾಣಗೊಂಡರೆ ಪ್ರವಾಸಿಗರಿಗೆ ಅಕರ್ಷಕವಾಗಿರುವುದಿಲ್ಲ. ಆದ್ದರಿಂದ ಹೊಸ ಅಭಿವೃದ್ದಿ ಕಾಮಗಾರಿಗಳನ್ನು ಸಿದ್ದಪಡಿಸುವುವಾಗ ವಾಸ್ತು ಶಿಲ್ಪಿಗಳ ಸಲಹೆಯಂತೆ ವಿನೂತನ ರೀತಿಯಲ್ಲಿ ಆಕರ್ಷಕವಾಗಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಲ್ಲಿ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸುವಂತೆ ಹಾಗೂ ಜಿಲ್ಲೆಯಲ್ಲಿನ ಎಲ್ಲಾ ಬೀಚ್ಗಳಿಗೆ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ದೊರೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಮಾರ್ಚ್ 31 ರೊಳಗೆ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಶೇಂಗಾದ ಮಾರುಕಟ್ಟೆ ಧಾರಣೆಯು ಕುಸಿತವಾಗಿರುವುದರಿಂದ, ಜಿಲ್ಲೆಯ ರೈತರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಶೇಂಗಾ ಖರೀದಿಸುವ ಬಗ್ಗೆ ಸರಕಾರಕ್ಕೆ ಕೂಡಲೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ, ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಂಗಾ ದರವು ಕ್ವಿಂಟಾಲ್ಗೆ ರೂ.4500 ರಿಂದ 4800 ಇದ್ದು, ಕೇಂದ್ರ ಸರ್ಕಾರವು 2019-20 ನೇ ಮುಂಗಾರು ಹಂಗಾಮಿಗೆ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾಕ್ಕೆ ಕ್ವಿಂ.1ಕ್ಕೆ ರೂ. 5,090 ಎಂದು ನಿಗದಿಪಡಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಶೇಂಗಾ ಖರೀದಿ ತೆರೆಯುವುದರಿಂದ ಜಿಲ್ಲೆಯ ರೈತರಿಗೆ ಸಹಾಯಕವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಸಭೆಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರ ಶೇಖರ್ ನಾಯಕ್ ಮತ್ತು ಕೃಷಿ ಮಾರಾಟ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಮಾ.19: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ಚಿಕಿತ್ಸೆಗಾಗಿ ತೆರಳಿದ್ದ ಕರೋನಾ ಶಂಕಿತ ವ್ಯಕ್ತಿಯೋರ್ವ ಐಸೋಲೆಷನ್ ವಾರ್ಡ್ನಲ್ಲಿ ಚಿಕಿತ್ಸೆ ನಿರಾಕರಿಸಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಪೊಲೀಸರ ನೆರವಿನಿಂದ ಆತನನ್ನು ಮರಳಿ ಕರೆತಂದು ಚಿಕಿತ್ಸೆ ಒಳಪಡಿಸಿದ ಘಟನೆ ನಡೆದಿದೆ. ಕರೋನಾ ಶಂಕಿತ ವ್ಯಕ್ತಿ ವಿದೇಶದಿಂದ ಮರಳಿದ್ದು, ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್ಗೆ ತೆರಳಲು ವೈದ್ಯರು ಸೂಚಿಸಿದಾಗ ಅದನ್ನು ನಿರಾಕರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಾರಿಯಾಗಿದ್ದ ವ್ಯಕ್ತಿಯನ್ನು ಮರಳಿ ಆಸ್ಪತ್ರೆಗೆ ಕರೆತಂದು ಆತನಿಗೆ ಕಡ್ಡಾಯ ಹೋಂ ಕ್ವಾರಟೈನ್ ವಿಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ. ಇಬ್ಬರಿಗೆ ಮನೆಯಲ್ಲಿಯೇ ನಿಗಾ, ಓರ್ವನಿಗೆ ಚಿಕಿತ್ಸೆ: ಕರೋನಾ ಶಂಕಿತ ಬೈಂದೂರು ತಾಲೂಕಿನ ಶಿರೂರು ಹಾಗೂ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಇಬ್ಬರ ಮನೆಯಲ್ಲಿ ನಿಗಾದಲ್ಲಿದ್ದು, ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪೊಲೀಸ್ ಉಪವಿಭಾಗ ಕಚೇರಿಗೆ ಪಶ್ಚಿಮ ವಲಯ ನೂತನ ಐಜಿಪಿ ದೇವಜ್ಯೋತಿ ರಾಯ್ ಬುಧವಾರ ಭೇಟಿ ನೀಡಿದರು. ಈ ವೇಳೆ ಮಾತನಾಡಿ ಅಕ್ರಮ ಯಾವುದೇ ಇರಲಿ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ಸಾರ್ವಜನಿಕರು ಯಾವುದೇ ಅಕ್ರಮಗಳ ಕುರಿತು ನಿರ್ಭೀತಿಯಿಂದ ನೇರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು. ಉಡುಪಿ ಜಿಲ್ಲೆಯಾದ್ಯಂತ ಆನ್ಲೈನ್ ಮೂಲಕ ನಡೆಯುವ ಕ್ರಿಕೆಟ್ ಬೆಟ್ಟಿಂಗ್, ಗಾಂಜಾ ಅವ್ಯವಹಾರ, ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ವಿರುದ್ಧ ಪೊಲೀಸರು ಸೂಕ್ತ ಗಮನ ಹರಿಸಲಿದ್ದಾರೆ. ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವ ಕಿಂಗ್ಫಿನ್ ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರು. ಕುಂದಾಪ್ರ ಡಾಟ್ ಕಾಂ . ಪೊಲೀಸ್ ಠಾಣೆಗಳಲ್ಲಿ ಸಿಬ್ಬಂಧಿಗಳ ಕೊರತೆಯಿದ್ದು ಇದರಿಂದ ಕೊಂಚ ಸಮಸ್ಯೆಯಾಗುತ್ತಿದ್ದು ಇರುವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದ ಅವರು, ಅಧಿಕಾರ ವಹಿಸಿಕೊಂಡು ಮೂರು ದಿನಗಳಷ್ಟೇ…
