ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸಪ್ತಪದಿ ಸಾಮೂಹಿಕ ವಿವಾಹ ನಡೆಯಿತು. 10 ಜೋಡಿಗಳು ಹಸಮಣೆ ಏರಿದರು. ಮಧುಸೂದನ್ ಬಾಯರಿ, ರಾಜೇಂದ್ರ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ವಿಪ್ರ ಮಹಿಳೆಯರು ಸೋಭಾನಿ ಹಾಡುವುದರ ಮೂಲಕ ವಿವಾಹ ಮಹೋತ್ಸವದ ಉದ್ದಕ್ಕೂ ಗಮನ ಸೆಳೆದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ನವವಧುವರರಿಗೆ ಶುಭ ಹಾರೈಸಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ, ದೇವಳದ ಟ್ರಸ್ಟಿ ಸುಶೀಲಾ ಸೋಮಶೇಖರ್, ಜ್ಯೋತಿ.ಬಿ.ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾರದಾ ಆರತಿ ಬೆಳಗಿ ವಧುವರರನ್ನು ಶುಭಹಾರೈಸಿದರು. ಜುಲೈವರೆಗೆ ಸಪ್ತಪದಿ: ರಾಜ್ಯದಲ್ಲಿ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಸಪ್ತಪದಿಗೆ ಈಗ ಮತ್ತೆ ಚಾಲನೆ ನೀಡಲಾಗಿದೆ. ಹಲವು ಕಡೆ ನಡೆದ ಸಪ್ತಪದಿಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಪ್ರದೇಶದ ಸಂಪರ್ಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಮಕ್ಕಿ-ದೇವಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಟೆಮಕ್ಕಿ ಕ್ರಾಸ್ನಿಂದ ಮೊವಾಡಿ ಕ್ರಾಸ್ವರೆಗೆ ಎಸ್ಸಿಪಿ ಯೋಜನೆಯ ಅಡಿಯಲ್ಲಿ ₹ 38.21 ಲಕ್ಷ ಅಂದಾಜು ವೆಚ್ಚದಲ್ಲಿ 800 ಮೀಟರ್ ಕಾಂಕ್ರೀಟ್ ರಸ್ತೆಯಾಗುವುದರಿಂದ ಮಣ್ಣಿನ ರಸ್ತೆ ಮೇಲ್ದರ್ಜೆಗೇರಲಿದೆ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ ಪೂಜಾರಿ, ಸದಸ್ಯ ರೇನ್ಸಮ್ ಪಿರೇರಾ, ರಮೇಶ ಆಚಾರ್ಯ ಅರಾಟೆ, ಸೀತಾರಾಮ ಶೆಟ್ಟಿ ಕೋಟೆಮಕ್ಕಿ, ಬಿಜೆಪಿ ಮುಖಂಡ ಶಿವರಾಮ ಶೆಟ್ಟಿ ಕಮ್ಮಾರಕೊಡ್ಲು, ಮಂಜು ಶೆಟ್ಟಿ, ನಾಗರಾಜ ಅರಾಟೆ, ರಾಘವೇಂದ್ರ ಆಚಾರ್ಯ, ಮಂಜುನಾಥ್, ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿ ಯಡೇರಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಕಾಶವಾಣಿಯು ಸಮಾಜದಲ್ಲಿ ಬೆರೆತು, ಆಯಾ ಪ್ರದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಜನರಿಗೆ ಹತ್ತಿರವಾಗಿದೆ ಎಂದು ಆಕಾಶವಾಣಿ ಹಾಗೂ ದೂರದರ್ಶನದ ಇಂಜಿನಿಯರ್ಗಳ ನೌಕರರ ಸಂಘದ ವಕ್ತಾರ ಚಂದ್ರಶೇಖರ್ ಶೆಟ್ಟಿ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ವಿಶ್ವರೇಡಿಯೋ ದಿನದ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರೇಡಿಯೋ – ಏನ್ಎವರ್ಗ್ರೀನ್ ಆಡಿಯೋ ವಿಷಯದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ರೇಡಿಯೋ ಸಹ ಬದಲಾಗುತ್ತಿದೆ. ಈ ಇಂಟರ್ನೆಟ್ ಯುಗದಲ್ಲಿ ರೇಡಿಯೋ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೊರದೇಶದ ಸ್ಟೇಶನ್ಗಳನ್ನೂ ನಾವು ನಮ್ಮ ಮನೆಯಲ್ಲೆ ಕುಳಿತು ಕೇಳಬಹುದಾಗಿದೆ ಎಂದರು. ಟಿವಿ ಬಂದಾಗ ರೇಡಿಯೋತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಹಲವರು ಭಾವಿಸಿದ್ದರು. ಆದರೆ, ಪ್ರಸ್ತುತದಲ್ಲಿ ಟಿವಿ ಚಾನೆಲ್ಗಳು ತಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆಯೇ ವಿನಃ ಆಕಾಶವಾಣಿ ಅಲ್ಲ. ಖಾಸಗೀ ರೇಡಿಯೋ ಸ್ಟೇ?ನ್ಗಳು ತಮ್ಮ ಅಸ್ತಿತ್ವ ಉಳಿಸಲು ಪರದಾಡುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ…
ರಾತ್ರಿ ಲೇಟಾಗಿ ಮಲಗಿರುತ್ತೀರಿ. ಬೆಳಗ್ಗೆ ಏಳುವಾಗ ಫ್ರೆಶ್ ಮೂಡ್ನಲ್ಲಿಇದ್ದರೆ ಆ ದಿನವಿಡೀ ಸೊಗಸಾಗಿರುತ್ತದೆ..ಇಲ್ಲವಾದರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಈ ಕಿರಿಕಿರಿಯಿಂದ ಪಾರಾಗಿ ಇಡೀ ದಿನ ಫ್ರೆಶ್ ಆಗಿರೋಕೆ ಕೆಲವು ಟಿಪ್ಸ್ ಇಲ್ಲಿವೆ. ಅಲಾರಂ ಬದಲು ಮೆಲೊಡಿ ಹಾಡು ರಾಗವಿರಲಿ: ಜಪಾನಿನ ಒಂದು ಸಂಶೋಧನೆ ಪ್ರಕಾರ ಅಲಾರಂನ ಕೆಟ್ಟ ಸೌಂಡಿಗೂ ಹೃದಯಾಘಾತಗಳಿಗೆ ಸಂಬಂಧವಿದೆ. ಅಲಾರಂನ ಕರ್ಕಶ. ಧ್ವನಿಯೇ ನಮ್ಮ ಮೂಡನ್ನು ಹಾಳು ಮಾಡುತ್ತದೆ. ಅದರ ಬದಲು, ನಿಮಗೆ ಅತ್ಯಂತ ಇಷ್ಟವಾದ ಒಂದು ಹಾಡನ್ನೋ, ರಾಗವನ್ನೋ ಅಲಾರಂ ಧ್ವನಿಯ ಜಾಗದಲ್ಲಿ ಪ್ರೋಗ್ರಾಂ ಮಾಡಿಟ್ಟುಕೊಳ್ಳಿ. ಆಗ ಮನಸ್ಸು ಪ್ರಫುಲ್ಲವಾಗಿರುತ್ತದೆ. ಅದು ನಿಮ್ಮ.ಬೆಳಗಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮುಂಜಾನೆಯನ್ನು ಆಸ್ಪಾದಿಸಿ: ಎದ್ದ ಕೂಡಲೇ ಗಡಿಬಿಡಿಯಲ್ಲಿ ಮನೆಕೆಲಸ, ಅಡುಗೆ ಕೆಲಸ ಎಂದು ಓಡಾಡುವದು ಬೇಡ. ಸ್ವಲ್ಪ ನಿಧಾನಿಸಿ. ಮುಂಜಾನೆಯ ಮಧುರ ವಾತಾವರಣವನ್ನು, ಮೌನವನ್ನು ಆಸ್ವಾದಿಸಿ. ಹಕ್ಕಿಪಕ್ಷಿಗಳ ಧ್ವಳಿ. ನಿಮಗಾಗಿ ಒಂದರ್ಧ ಗಂಟೆ ತೆಗೆದಿಡಿ. ಅಲ್ಲಿ ನೀವಲ್ಲದೆ ಇನ್ಯಾರೂ ಇರದಿರಲಿ. ಅದನ್ನು ಯೋಗ, ವ್ಯಾಯಾಮ, ಧ್ಯಾನ- ಹೀಗೆ ಯಾವುದಕ್ಕಾದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿಯ ರೋಬೋಸಾಪ್ಟ್ ಟೆಕ್ನಾಲಜೀಸ್ ಸಂಸ್ಥೆಯಿಂದ ಕೋಟೇಶ್ವರದ ಸರಕಾರಿ ಪದವಿಪೂರ್ವ ಕಾಲೇಜಿಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ರೋಬೋಸಾಪ್ಟ್ ಟೆಕ್ನೋಲಜೀಸ್ನ ಶ್ರೀಕಾಂತ ಭಂಡಾರಿ ಮಾತನಾಡಿ, ಸಂಸ್ಥೆಯ ಪರಿಚಯ, ಕಾರ್ಯವೈಖರಿ ಹೇಳುತ್ತಾ 1996ರಲ್ಲಿ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ಸುಮಾರು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಸ್ಥಳೀಯವಾದ ಪ್ರತಿಭೆಗಳ ಕೊರತೆಯಿಂದ ಬೇರೆ ರಾಜ್ಯಗಳಿಂದ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅದರಂತೆಯೇ ಇಂದು ನೀಡಿದ ಕಂಪ್ಯೂಟರ್ನ ಮೂಲಕ ವಿಧ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿತು ಸ್ಥಳೀಯವಾಗಿ ಕೆಲಸ ಸಿಗುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡೆನ್ನಿಸ್ ಬಾಂಜಿ ವಹಿಸಿದ್ದರು. ಉಪ ಪ್ರಾಂಶುಪಾಲ ಪ್ರದೀಪ ಶೆಟ್ಟಿ, ಕಂಪ್ಯೂಟರ್ ವಿಭಾಗದ ನಿತಿನ್, ಕೋಟೇಶ್ವರ ತಾಲೂಕು ಪಂಚಾಯತ್ ಸದಸ್ಯರಾದ ರೂಪಾ ಪೈ, ರೋಬೋಸಾಪ್ಟ್ ಟೆಕ್ನಾಲಜೀಸ್ನ ಶರತ್ ಅಚಾರ್ಯ, ವಿಘ್ನೇಶ್ ಶೇಟ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಿಕೆ ಹಂತದಲ್ಲೇ ಉದ್ಯೋಗ ಸಂಬಂಧಿ ಪೂರ್ವ ಸಿದ್ಧತೆ ನಡೆಸಿದರೆ, ಮುಂದೆ ಯಶಸ್ಸು ಪಡೆಯಲು ಸಾಧ್ಯ ಎಂದು ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಹೇಳಿದರು. ನಮ್ಮ ನಾಡ ಒಕ್ಕೂಟದ ಬೈಂದೂರು ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ಕಾರಿ ಉದ್ಯೋಗ ಮಾಹಿತಿ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ, ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಜಾಗೃತಿ ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಒಕ್ಕೂಟದ ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್, ಬೈಂದೂರು ಘಟಕದ ಉಪಾಧ್ಯಕ್ಷ ಮಾಮ್ಡು ಇಬ್ರಾಹೀಂ ಮಾಸ್ಟರ್, ಸಲಹೆಗಾರ ಉಸ್ಮಾನ್ ಜಾಫರ್, ಬೈಂದೂರು ಜುಮಾ ಮಸೀದಿಯ ಖತೀಬ್ ಫೈಝುಲ್ ಬಾರಿ ಮೌಲಾನ, ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಸೊಸೈಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಭದ್ರತಾ ಕೋಶವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಮಂಜುನಾಥ್ ಎಸ್ ಕೆ. ಉದ್ಘಾಟಿಸಿ, ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ವಿಜಯ್ ಬಿ.ಎಸ್ ಇ ಬ್ಯಾಂಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯದಲ್ಲಿ ಮಾತನಾಡಿದ ಎಸ್. ರಾಜು ಪೂಜಾರಿ, ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಸಜ್ಜಿತವಾಗಿ ರೂಪುಗೊಂಡಿದ್ದು, ಬಡವರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂದರು. ಸೊಸೈಟಿಯ ಅಧ್ಯಕ್ಷರಾದ ವೀರೇಂದ್ರ ಎಸ್. ಪೂಜಾರಿ ಮಾತನಾಡಿ, ಉತ್ತಮ ಕೆಲಸಕ್ಕೆ ಕೈ ಹಾಕಿದ್ದು,ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ್ ಎಸ್ ಕೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಭಿನ್ನ ಆಲೋಚನೆ ಮೂಲಕ ಸಹಕಾರಿ ಕ್ರಾಂತಿ ಮಾಡುವ ಕೆಲಸ ಪ್ರಶಂಸನಾರ್ಹ. ಉತ್ತಮ ಸೇವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿಶ್ವಸಾಗರ ಕ್ರಿಕೆಟರ್ಸ್ಸ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಕಟ್ಟಡ ನಿರ್ಮಾಣ ಸಹಾಯಾರ್ಥ ಜರಗಿದ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡ ಪ್ರಥಮ ಸ್ಥಾನಿಯಾಗಿ ‘ಅಯೋಧ್ಯೆ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ. ಗಂಗೊಳ್ಳಿಯ ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡವು ಫ್ರೆಂಡ್ಸ್ ಬೆಣ್ಗೆರೆ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫ್ರೆಂಡ್ಸ್ ಬೆಣ್ಗೆರೆ ತಂಡದ ಪ್ರಜ್ವಲ್ ಮೇಸ್ತ ಬೆಸ್ಟ್ ಆಲ್ರೌಂಡರ್ ಮತ್ತು ಪಾಂಡುರಂಗ ಉತ್ತಮ ಗೂಟರಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡರೆ, ವಿಶ್ವಸಾಗರ ಮ್ಯಾಂಗನೀಸ್ ರೋಡ್ ತಂಡದ ಗುರು ಉತ್ತಮ ದಾಂಡಿಗ ಹಾಗೂ ವಿವೇಕ ಕಲೈಕಾರ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ದುಬೈ ಕದಂ ಗೌರವಾಧ್ಯಕ್ಷ ಶೀನ ದೇವಾಡಿಗ ಮತ್ತು ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಗಂಗೊಳ್ಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮಾನ್ಸ್ ಬೆಂಗಳೂರು ಸಹಯೋಗದೊಂದಿಗೆ ಅನುಷ್ಠಾನಗೊಂಡಿರುವ ಯುವಸ್ಪಂದನ ಕಾರ್ಯಕ್ರಮದಡಿಯಲ್ಲಿ ನಡೆದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲಾ ತಂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಲೇಖನ – ಯುವ ಸ್ಪಂದನ ಶ್ಯಾಮಲಾ ಕಿರಣ್ ಪ್ರಥಮ, ಅತ್ಯುತ್ತಮ ಲೇಖನ ಚಟುವಟಿಕೆ ಜ್ಯೋತಿ ಪ್ರಶಾಂತ್ ಪ್ರಥಮ ಹಾಗೂ ಗುಂಪು ಚಟುವಟಿಕೆಯಲ್ಲಿ ಯುವಸ್ಪಂದನ ವಿಡಿಯೋ ಪ್ರಥಮ, ಭಿತ್ತಿಪತ್ರ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ. ಸಿ ನಾರಾಯಣ ಗೌಡ ಪ್ರಶಸ್ತಿ ಪ್ರಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ ಶ್ರೀನಿವಾಸ್, ಬೆಂಗಳೂರು ನಿಮಾನ್ಸ್ ನಿರ್ದೇಶಕ ಡಾ. ಗುರುರಾಜ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ.ನಾರಾಯಣ ಶೆಟ್ಟಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಯೊಂದಿಗೆ ಸಾಕಷ್ಟು ಪ್ರಯತ್ನ ಮತ್ತು ತಯಾರಿ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ನಿಮ್ಮ ಪರಿಶ್ರಮ ಇರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಉಪಸ್ಥಿತರಿದ್ದರು.
