ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಸಹಬಾಗಿತ್ವದಲ್ಲಿ ವೈದ್ಯಕೀಯ ಶಿಬಿರ ಶ್ರೀ ಮೂಕಾಂಬಿಕಾ ದೇವಳದ ಸಭಾ ಭವನದಲ್ಲಿ ನೆರವೇರಿತು. ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಕಾರ್ಯಕ್ರಮದ ಉದ್ಘಾಟಿಸಿದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮ ಕೃಷ್ಣ ಅಡಿಗ ಶ್ರೀ ಮೂಕಾಂಬಿಕಾ ದೇವಳದ ನೌಕರರ ಸಂಘದ ಕಾರ್ಯದರ್ಶಿ ಮುರಳಿಧರ ಹೆಗಡೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಸೀತರಾಮ ಶೆಟ್ಟಿ, ಕೆ.ಎಂ.ಸಿ ಆಸ್ಪತ್ರೆಯ ಮಣಿಪಾಲದ ತಜ್ಞ ವೈದ್ಯರಾದ ಡಾ| ಸುದೀರ್ ನಾಯಕ್, ಡಾ| ಶೈಲಜಾ ಹಾಗೂ ಡಾ| ಶ್ರೀ ವಿದ್ಯಾ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಗಂಗೊಳ್ಳಿ: ನಮ್ಮ ಸಮಾಜದ ಹೀನ ಸ್ಥಿತಿಯನ್ನು ತೊಳೆಯಬೇಕು. ಸಮಾಜಕ್ಕಾಗಿ ನಮ್ಮ ಜೀವನವನ್ನು ಪಣ ಇಡಬೇಕು. ಸೇವೆಯ ಮೂಲಕ ತಮ್ಮ ಜೀವನವನ್ನು ಧನ್ಯವಾಗಿರಿಸಬೇಕು ಎಂದು ಉಡುಪಿ ಜಿಲ್ಲೆಯ ಜಿಲ್ಲಾ ಸೇವಾ ಪ್ರಮುಖ್ ಜಯಂತ್ ಮಲ್ಪೆ ಹೇಳಿದರು. ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಹಾಗೂ ಶ್ರೀ ಮಹಾಕಾಳಿ ಸೇವಾ ಸಮಿತಿ ಶ್ರೀ ಮಹಾಂಕಾಳಿ ಮಠ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉಡುಪಿಯ ಇನ್ಯೂರೆನ್ಸ್ ಸರ್ವೇಯರ್ ಜ್ಞಾನದಾಸ ಕಾನೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ದೇವರಾಯ ಕಾನೋಜಿ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಮತಿ, ಶಿಶು ಮಂದಿರದ ಸದಸ್ಯರಾದ ಜಿ.ಗಣಪತಿ ಶಿಪಾ, ಬಿ.ರಾಘವೇಂದ್ರ ಪೈ, ವಸಂತಿ ಎನ್.ಖಾರ್ವಿ, ಮಾತಾಜಿ ಸುಮನಾ, ಮಾತಾಜಿ ಶೈಲಾ ಉಪಸ್ಥಿತರಿದ್ದರು. ಶಿಶು ಮಂದಿರದ ಅಧ್ಯಕ್ಷ…
ಕುಂದಾಪುರ: ಭಾಷೆ ಮತ್ತು ಸಂಸ್ಕೃತಿ ನಡುವೆ ಅವಿನಾಭಾವ ಸಂದಭವಿದೆ. ಭಾಷೆ ಬೆಳೆದಂತೆಲ್ಲಾ ಮಕ್ಕಳು ಸಾಂಸ್ಕೃತಿಕವಾಗಿ ಗಟ್ಟಿಯಾಗುತ್ತಾರೆ. ಪಠ್ಯಪುಸ್ತಕವೊಂದೇ ಸರ್ವಾಂಗೀಣ ಅಭಿವೃದ್ಧಿಗೆ ಕಾಣರವಲ್ಲ. ಪಠ್ಯದ ಜೊತೆ ಸಂಸ್ಕೃತಿ ತಿರುಳೂ ಮಕ್ಕಳಿಗೆ ಕಲಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಸಮುಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅಭಿಪ್ರಾಯಪಟ್ಟಿದ್ದಾರೆ. ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ, ಅದರಲ್ಲಿ ೫೦ ಲಕ್ಷ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಂಶ್ಕೃತಿ ವೈವಿಧ್ಯದ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಲ್ಲಿ ಕಾರ್ಯಕ್ರಮ ಕೊಡುವ ಮೂಲಕ ಕನ್ನಡ ಮಾದ್ಯಮ ಗಟ್ಟಿಉ ಮಾಡುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಮಾಧ್ಯಮ ಕೀಳು, ಇಂಗ್ಲೀಷ್ ಮಾಧ್ಯಮ ಶ್ರೇಷ್ಠ ಎಂಬ ತಾರತಮ್ಯ ಮೇಡ ಕನ್ನಡ ಮಾಧ್ಯಮ…
ಬೈಂದೂರು: ಇತ್ತೀಚಿಗೆ ಅಕಾಲ ಮರಣಕ್ಕೆ ತುತ್ತಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಯು. ಕೇಶವ ಪ್ರಭು ಅವರಿಗೆ ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದಲ್ಲಿ ನುಡಿನಮನ ಸಲ್ಲಿಸಲಾಯಿತು. ಕರ್ನಾಟಕ ಬ್ಯಾಂಕಿನ ಉದ್ಯೋಗಿಯಾಗಿದ್ದ ಕೇಶವ ಪ್ರಭು ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನಿಯೂ ಆಗಿರುವ ಇವರಿಗೆ ಊರಿನ ಅಭಿಮಾನಿಗಳು ಸಂಘದ ಕಾರ್ಯಕರ್ತರು ಸಾಮೂಹಿಕವಾಗಿ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತೆಕ್ಕಟ್ಟೆ ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಕೇಶವರಾಯ ಪ್ರಭು, ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಗೌರವಾಧ್ಯಕ್ಷ ಯು. ರಾಜೀವ ಭಟ್, ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಐತಾಳ್, ಕೋಟೇಶ್ವರ ಪೂರ್ವ ಗುರುಕುಲದ ವಿಶ್ವಸ್ಥ ಕೃಷ್ಣರಾಯ ಶ್ಯಾನುಭಾಗ್, ಸಹೋದರ ಯು. ಸದಾನಂದ ಪ್ರಭು ಇವರು ಪ್ರಭುಗಳ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು. ಪ್ರಾರಂಭದಲ್ಲಿ ಒಂದು ನಿಮಿಷಗಳ ಮೌನ…
ಕುಂದಾಪುರ: ಇಲ್ಲಿನ ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ. 24ರಿಂದ 27ರವರೆಗೆ ನಡೆದ 5ನೇ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸಿ, ಯಶಸ್ವಿಯಾಗಿ ನಿರ್ವಹಿಸಿದ ಪ್ರಮುಖ ರೂವಾರಿ ಶ್ರೀಪಾದ ಉಪಾಧ್ಯ ಅವರನ್ನು ಕ್ರಿಕೆಟ್ ಅಭಿಮಾನಿಗಳು, ಚಕ್ರವರ್ತಿ ಕ್ರಿಕೆಟ್ ಕ್ಲಬ್ ಸದಸ್ಯರು, ಹಿತೈಷಿಗಳು ಸನ್ಮಾನಿಸಿದರು. ಮುಂಬೈ ಕ್ರಿಕೆಟ್ ಅಸೋಸಿಯೇಶನ್ನ ಜಂಟಿ ಕಾರ್ಯದರ್ಶಿ ಪಿ.ವಿ ಶೆಟ್ಟಿ, ಉದ್ಯಮಿ ವಿ. ಕೆ. ಮೋಹನ್, ಶ್ರೀನಾಥ ಉಡುಪ, ಸೋಮಶೇಖರ ಉಡುಪ, ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ್ ಆಚಾರ್ಯ, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ.ಆರ್. ನಾಯ್ಕ್, ಉದ್ಯಮಿಗಳಾದ ಸುರೇಂದ್ರ ಶೆಟ್ಟಿ, ಆರ್. ಫೆಲಿಕ್ಸ್ ಡಿಸೋಜಾ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಲ್ತೂರು ಮೋಹನದಾಸ ಶೆಟ್ಟಿ, ಜಗದೀಶ ಶೆಟ್ಟಿ ಅತಿಥಿಗಳಾಗಿದ್ದರು. ಗೌರವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಸಂಚಾಲಕ ಅಭಿನಂದನ ಶೆಟ್ಟಿ, ಉಪಾಧ್ಯಕ್ಷರಾದ ಸತೀಶ್ ಕೋಟ್ಯಾನ್, ಮರತ್ತೂರು ಸುರೇಶ್ ಶೆಟ್ಟಿ, ಕಾರ್ಯದರ್ಶಿ ಪ್ರದೀಪ್ ವಾಜ್, ಖಜಾಂಚಿ ರಂಜಿತ್…
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ಕೋಡಿಯ ಕೌನ್ಸಿಲರ್ ಪ್ರಭಾಕರ್ ಶೇರೆಗಾರ್ ರವರು ನೆರವೇರಿಸಿ, ’ಸ್ವರ್ಧೆಗಳಲ್ಲಿ ಸೋಲು ಗೆಲುವು ಸಹಜ ಗೆಲುವಿಗಾಗಿ ನಿರಂತರ ಶ್ರಮಿಸುವುದೇ ವಿದ್ಯಾರ್ಥಿಗಳ ಗುರಿಯಾಗಬೇಕೆಂದರು’. ಕ್ರೀಡಾಜ್ಯೋತಿಯನ್ನು ಉದ್ಘಾಟಿಸಿದ ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢ ಶಾಲೆಯ ಕಾರ್ಯದರ್ಶಿಯಾದಂತಹ ಅಬ್ದುಲ್ಲಾರವರು -’ಕ್ರೀಡೆ ಆಧುನಿಕ ಜಗತ್ತಿನಲ್ಲಿ ಬಹು ಪ್ರಾಮುಖ್ಯತೆಯನ್ನು ಹೊಂದುತ್ತಿದೆ. ಕ್ರೀಡೆಯು ನಮ್ಮ ಜೀವನೋಪಾಯಕ್ಕು ಅಗತ್ಯವಾದಂತೆ ಆರೋಗ್ಯದ ಸುಸ್ಥಿತಿಗೂ ಅತೀ ಮುಖ್ಯವಾಗಿದೆ ಎಂದರು’. ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತೌಸಿಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸರ್ವರಿಗೂ ಶುಭಕೋರಿದರು. ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಪ್ರೊ. ಚಂದ್ರಶೇಖರ್ ದೋಮ ಪ್ರಾಸ್ತಾವಿಕ ಮಾತನ್ನಾಡಿ ಸರ್ವರನ್ನು ಸ್ವಾಗತಿಸಿದರು. ಡಾ. ಕೃಷ್ಣರಾಜ ಕರಬ ಕಾರ್ಯಕ್ರಮ ನಿರ್ವಹಿಸಿ, ದೈಹಿಕ ಶಿಕ್ಷಕರಾದ ಶ್ರೀ ಇಲಿಯಾಸ್ ವಂದಿಸಿದರು.
ಕುಂದಾಪುರ: ಕುಂಭಾಶಿ ದೇವಸ್ಥಾನದ ಮುಖಮಂಟಪದ ಬಳಿ ರಾ.ಹೆ.66ರಲ್ಲಿ ಇಂದು ಸಂಜೆ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಬೀಜಾಡಿ ಗ್ರಾ.ಪಂ ಮಾಜಿ ಸದಸ್ಯ ವಾಸು (55) ಅವರ ಅಳಿಯ ಸಂದೇಶ್(25) ಗಾಯಾಳು ಕೊರವಡಿ ಕ್ರಾಸ್ ನಿಂದ ತೆಕ್ಕಟ್ಟೆ ಕಡೆಗೆ ತೆರಳುವವರಿದ್ದರು. ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಬೈಕ್ ಸವಾರರಿಗೆ ಗುದ್ದಿತ್ತು. ಅಪಘಾತದ ರಭಸಕ್ಕೆ ಬೈಕ್ ಸವಾರರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿ ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದ ಇಪ್ಪತ್ತು ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುಪಾಲು ಹೊರಬಿದ್ದಿದ್ದು ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಾಪಚಂದ್ರ ಶೆಟ್ಟಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಪರಾಭವಗೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 8 ಮಂದಿ ಸ್ವರ್ಧಿಸಿದ್ದರು. ಚಲಾವಣೆಯಾದ ಒಟ್ಟು 6354 ಮತಗಳ 231 ಮತಗಳು ಅಸಿಂಧುವಾಗಿದ್ದರೇ, 2 ನೋಟಾ ಬಿದ್ದಿದೆ. ಸಿಂಧುವಾದ 6301 ಮತಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿ 2977 ಮತಗಳನ್ನು ಪಡೆದ್ದು ಜಯಭೇರಿ ಗಳಿಸಿದ್ದರೇ, ಪ್ರತಾಪಚಂದ್ರ ಶೆಟ್ಟಿ 2237 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್ ಭಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗೆ 872 ಮತಗಳು, ಹರಿಕೃಷ್ಣ ಬಂಟ್ವಾಳ್ ಗೆ 127 ಮತಗಳು ದೊರೆತಿದ್ದರೇ, ಉಳಿದವರಿಗೆ ಒಟ್ಟು 88 ಮತಗಳು ದೊರೆತಿವೆ. (ಕುಂದಾಪ್ರ ಡಾಟ್ ಕಾಂ) ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಪ್ರೌಢಶಾಲೆಯ ಎದುರಿನ ಮೈದಾನದಲ್ಲಿ ಸಮೀಪ ಕಾರ್ಯಕ್ರಮವೊಂದರ ಸಲುವಾಗಿ ಬಂಟಿಂಗ್ಸ್ ಕಟ್ಟುತ್ತಿದ್ದ ವೇಳೆ ಹೈಟೆನ್ಷನ್ ತಂತಿ ತಗಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮನೋಜ್ ದೇವಾಡಿಗ (31) ಸುನಿಲ್ ಮೊಗವೀರ (24) ಮೃತರು ದುರ್ದೈವಿಗಳು. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮದ ಸಲುವಾಗಿ ಸಿದ್ಧತೆಗಳು ನಡೆಯುತ್ತಿದ್ದು, ಮಧ್ಯರಾತ್ರಿ ವೇಳೆಗೆ ಯುವಕರ ತಂಡ ಬ್ಯಾನರ್, ಬಂಟಿಂಗ್ಸ್ ಕಟ್ಟುವುದರಲ್ಲಿ ನಿರತವಾಗಿತ್ತು. ಒಬ್ಬ ಯುವಕರು ಮೇಲೇರಿ ಬಂಟಿಂಗ್ ಕಟ್ಟಲು ಅದನ್ನು ಮೇಲ್ಮುಖವಾಗಿ ಎಸೆದು ತಂತಿಯನ್ನು ಪಾಸ್ ಮಾಡುತ್ತಿದ್ದ ವೇಳೆ ಅದು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಕಿದೆ. ಅದರ ಇನ್ನೊಂದು ಬದಿಯನ್ನು ಯುವಕ ಕೈಯಲ್ಲಿ ಹಿಡಿದಾಗ ವಿದ್ಯುತ್ ಶಾಕ್ ತಗಲಿದೆ ಎನ್ನಲಾಗಿದೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬನಿಗೂ ಶಾಕ್ ತಗಲಿ ಇಬ್ಬರೂ ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹೇಶ ಎಂಬುವವನಿಗೆ ಗಂಭೀರ ಗಾಯಗಳಾಗಿದ್ದರೇ, ಉಳಿದವರು ದೂರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ) ಕೋಡಿಯ ತಂಪು ಪಾನೀಯ…
ತನ್ನ ಮಾತು ಹಾಗೂ ವಿಭಿನ್ನವಾದ ಹಾವ-ಭಾವಗಳಿಂದಲೇ ನಾಡಿನಾದ್ಯಂತ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಹುಚ್ಚ ವೆಂಕಟ್ ಕೆಲ ತಿಂಗಳುಗಳಿಂದಿಚೆಗೆ ಕರ್ನಾಟಕದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಎಲ್ಲೆಲ್ಲೂ ಆತನದ್ದೇ ಮಾತು. ಆತನ ಸ್ಟೈಲ್ ಅನುಕರಣೆ. ವೆಂಕಟರ ಪ್ರಭಾವ ಎಷ್ಟಿದೆಯೆಂದರೇ ಅದು ಕರಾವಳಿಯ ಯಕ್ಷಗಾನವನ್ನು ಬಿಟ್ಟಿಲ್ಲ ನೋಡಿ. ಪೆರ್ಡೂರು ಮೇಳದ ಕಲಾವಿದ ರವೀಂದ್ರ ದೇವಾಡಿಗ ಇತ್ತಿಚಿಗೆ ನಡೆದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಹುಚ್ಚಾ ವೆಂಕಟ್ ಅವರ ಡೈಲಾಗ್ ಹೇಳುವ ಮೂಲಕ ಯಕ್ಷ ಪ್ರಿಯರಲ್ಲೂ ಒಂದು ಬಗೆಯ ಕ್ರೇಜ್ ಹುಟ್ಟಿಸಿದ್ದಾರೆ. ಅಂದು ಹಾಗೆ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆ ಯಕ್ಷಗಾನವನ್ನು ಬೀದಿಗೆ ತರಬೇಡಿ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಈ ವೀಡಿಯೋ ಒಮ್ಮೆ ನೋಡಿ…
