Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವರು ಧರ್ಮದ ಕೇಂದ್ರ ಬಿಂದು. ರಾಮ, ಕೃಷ್ಣ ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀರಾಮ ಕೋಟೀಶ್ವರ ಕಲಾ ಸಂಘದ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಣಿತ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಭಜನೆ, ನಾಮ ಸಂಕೀರ್ತನೆಗಳಿಂದ ನಮ್ಮ ಮನಸ್ಸಿನ ದೃಢತೆ ಹಾಗೂ ಏಕಾಗ್ರತೆ ಸಾಧಿಸಬಹುದು. ಭಜನೆ ಎಂದೂ ಸಂಸಾರಗಳನ್ನು ವಿಭಜನೆ ಮಾಡುವುದಿಲ್ಲ. ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳು ನಡೆಯುತ್ತಿರುವ ಕಾಲಘಟ್ಟದಲ್ಲಿ ಭಜನೆ ಸಂಸ್ಕೃತಿ ಎಲ್ಲೆಡೆ ಮತ್ತೆ ಬೆಳೆಯುತ್ತಿರುವುದು ಸಂತೋಷದ ವಿಚಾರ ಎಂದು ಅವರು ಹೇಳಿದರು. ಶ್ರೀರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಬಿ. ಜಿ. ಸೀತಾರಾಮ ಧನ್ಯ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು, ವಿಶೇಷವಾಗಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿಯುವುದು ಮುಖ್ಯ. ದೌರ್ಜನ್ಯ, ವಂಚನೆಗಳ ಸಮಯದಲ್ಲಿ ಮಹಿಳೆಯರು ಕಾನೂನಾತ್ಮಕ ಸಲಹೆ ಪಡೆಯಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಹಾಗೂ ಸರಕಾರಿ ಪ್ರಾಸಿಕ್ಯೂಟರ್ ಜುಡಿತಾ ಒ. ಎಮ್ ಕ್ರಾಸ್ತ ಹೇಳಿದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ಮಿಜಾರಿನಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಹಿಳಾ ಕಾನೂನುಗಳು, ದೌರ್ಜನ್ಯ ತಡೆ ಕಾನೂನುಗಳ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕು. ಆದರೆ ಎಷ್ಟೋ ಸಂದರ್ಭಗಳಲ್ಲಿ ಮಾಹಿತಿಯ ಅಭಾವದಿಂದಾಗಿ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಪೋಕ್ಸೊ ಕಾಯ್ದೆ, ವರದಕ್ಷಿಣೆ ತಡೆ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ ೨೦೦೫, ಐಟಿ ಕಾಯ್ದೆಯಂತಹ ಎಷ್ಟೋ ಕಾನೂನುಗಳಿದ್ದು ದೌರ್ಜನ್ಯದ ಸಮಯದಲ್ಲಿ ಮಹಿಳೆಯರು ದೂರು ದಾಖಲಿಸಲು ಮುಂದೆ ಬರುವಂತಾಗಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ 26ನೇ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಆಹ್ವಾನಿತ ಬಾಲಕ ಬಾಲಕಿಯರ ಭಜನಾ ವೈವಿಧ್ಯತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು. ಗಂಗೊಳ್ಳಿಯ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ ಶುಭ ಹಾರೈಸಿದರು. ಈ ಸಂದರ್ಭ ಸಾಹಿತಿ ನರೇಂದ್ರ ಎಸ್.ಗಂಗೊಳ್ಳಿ, ಕಲಾವಿದ ಗಣೇಶ ಗಂಗೊಳ್ಳಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಭಜನಾ ಸಾಧಕರಾದ ಮಾಸ್ತಿ ಪೂಜಾರಿ ನಾಯಕವಾಡಿ, ಪದ್ಮಾವತಿ ಬಿ., ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಜಿ.ಈಶ್ವರ, ಸುಂದರ ಬಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದೇವ್, ದೇವಸ್ಥಾನದ ಉಪಾಧ್ಯಕ್ಷ ಸುರೇಶ ಜಿ., ಮೊಕ್ತೇಸರ ಸಂಜೀವ ಜಿ.ಟಿ., ನರಸಿಂಹ ಕೆ., ಅರುಣ್ ಕುಮಾರ್ ಜಿ., ಸಂದೀಪ ಜಿ.ಎನ್., ಶ್ರೀಕಾಂತ ಎನ್., ವಿಘ್ನೇಶ ಜಿ.ಟಿ., ರಾಘವೇಂದ್ರ ಜಿ.ಟಿ., ಅರ್ಚಕ ಶಿವ ಜಿ.ಟಿ.,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಗರಡಿಯ ವಿಶ್ವಸ್ಥರು ಮತ್ತು ಅನುವಂಶಿಕ ಬಲ್ಲಾಳರಾದ ಚಂದ್ರಶೇಖರ ಶೆಟ್ಟಿ ಹಾಗೂ ಪಾರ್ವತಿ ವಿಶ್ವನಾಥ ಶೆಟ್ಟಿ ಮತ್ತು ಮಕ್ಕಳು ನಿರ್ಮಿಸಿಕೊಟ್ಟಿರುವ ನೂತನ ಸ್ವಾಗತ ಗೋಪುರ ಇತ್ತೀಚಿಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು. ಸ್ವಾಗತ ಗೋಪುರವನ್ನು ಉದ್ಘಾಟಿಸುವ ಮೂಲಕ ಅನುವಂಶಿಕ ಬಲ್ಲಾಳರ ಕುಟುಂಬದವರು, ಗರಡಿಯ ಕುಟುಂಬದವರು, ನಂಬಿದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿದರು. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗರಡಿಯ ಟ್ರಸ್ಟಿ ಹಾಗೂ ಅನುವಂಶಿಕ ಬಲ್ಲಾಳರಾದ ಚಂದ್ರ ಶೇಖರ ಶೆಟ್ಟಿ, ಪಾರ್ವತಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ, ಆಡಳಿತ ಮೊಕ್ತೇಸರರಾದ ಶೇಖರ ಪೂಜಾರಿ, ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಮುತ್ತ ಬಿಲ್ಲವ, ಗರಡಿಯ ವಿಶ್ವಸ್ಥರಾದ ಸೀತಾರಾಮ ಬಿಲ್ಲವ, ಆರ್ ಕೆ ಬಿಲ್ಲವ, ಸತ್ಯಾವತಿ ಬಿಲ್ಲವ, ತಾಲೂಕು ಪಂಚಾಯತ್ ಸದಸ್ಯರಾದ ಹಕ್ಕಾಡಿ ಜಗದೀಶ ಪೂಜಾರಿ, ಹಿರಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅತ್ಯಂತ ಕಿರು ಅವಧಿಯಲ್ಲಿ ಕ್ರೀಡೆಯಲ್ಲಿ ಉತ್ಕೃಷ್ಟ ಸಾಧನೆ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಗಮನ ಸೆಳೆದ ಸಂಸ್ಥೆ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು. ವಿದ್ಯಾರ್ಥಿದೆಸೆಯಲ್ಲಿ ನನ್ನ ಕ್ರೀಡಾಪ್ರತಿಭೆಯನ್ನು ಗುರುತಿಸಿದ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ ಎಂದು ಖಾಸಗಿ ಕಂಪೆನಿ ಉದ್ಯೋಗಿ ಪೂರ್ವ ವಿದ್ಯಾರ್ಥಿ ಮನೀಷ್ ಪೂಜಾರಿ ಹೇಳಿದರು. ಅವರು ನಗರದ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದ್ವಿತೀಯ ಬಿ.ಕಾಂ. ‘ಸಿ’ವಿಭಾಗದ ಕಾರ್ತಿಕ್, ಪ್ರಥಮ ಬಿ.ಕಾಂ. ‘ಎ’ ವಿಭಾಗದ ಸೌಮ್ಯ ಖಾರ್ವಿ ವೈಯಕ್ತಿಕ ಕ್ರೀಡಾ ಚಾಂಪಿಯನ್ ಆದರು. ಅಂತಿಮ ಬಿ.ಕಾಂ. ‘ಡಿ’ ವಿಭಾಗ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಹಾಗೂ ಪ್ರಥಮ ಬಿ.ಕಾಂ. ‘ಎ’ ವಿಭಾಗ ರನ್ನರ್ ಆಫ್ ಸಮಗ್ರ ಪ್ರಶಸ್ತಿ ಪಡೆದರು. ಆಕರ್ಷಕ ಪಥಸಂಚಲನದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಆಳ್ವಾಸ್ ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರದ ನೂತನ ಲ್ಯಾಬ್ ಮತ್ತು ಕಾನ್ಫರೆನ್ಸ್ ಹಾಲ್‌ನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರದ ಮುಖ್ಯಸ್ಥೆ ಡಾ.ಜೆನಿಟಾ ಸಂಶೋಧನ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ‘ನ್ಯಾನೋ ಟೆಕ್ನಾಲಜಿ ಸಂಶೋಧನ ಕೇಂದ್ರವು 20219ರಲ್ಲಿ ಆರಂಭಗೊಂಡಿದ್ದು ಇದುವರೆಗೆ ಈ ಲ್ಯಾಬ್‌ನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. 52 ವಿದ್ಯಾರ್ಥಿಗಳು ನ್ಯಾನೋ ಟೆಕ್ನಾಲಜಿ ಕುರಿತು ರಿಸರ್ಚ್ ಪ್ರಾಜೆಕ್ಟ್‌ಗಳನ್ನು ಕೈಗೊಂಡಿದ್ದು, ಈ ಸಂಶೋಧನ ಕೇಂದ್ರದಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 92 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ನ್ಯಾನೋ ಸೈನ್ಸ್ ಹಾಗೂ ಟೆಕ್ನಾಲಜಿಗೆ ಸಂಬಂಧಿಸಿದ ಈ ಲ್ಯಾಬ್‌ನಲ್ಲಿ ಆಯುರ್ವೇದ, ಹೋಮಿಯೋಪತಿ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಲೈಫ್‌ಸೈನ್ಸ್ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಾಡಲು ಅವಕಾಶವಿದೆ’ ಎಂದರು. ಈ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಮಾಡಿದ ಸಂಶೋಧನ ವರದಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ. ಆಳ್ವಾಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು ( ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಪದವಿ ತೇರ್ಗಡೆ ಹೊಂದಿದ ಆಸಕ್ತ 21 ರಿಂದ 35 ವಯೋಮಿತಿಯೊಳಗಿನ ಯುವಕ / ಯುವತಿಯರು ತಮ್ಮ ಸ್ವ ವಿವರಗಳನ್ನು ಮಾರ್ಚ್ 20ರ ಒಳಗೆ ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ, ಉಡುಪಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಯುವ ಸ್ಪಂದನ ಕೇಂದ್ರದ ದೂರವಾಣಿ ಸಂಖ್ಯೆ: 0280-2533933 (9902158073, 8495826518) ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತರಾಗದೇ ಹೆಚ್ಚಿನ ಜ್ಞಾನವನ್ನು ಪಡೆಯಲು ಉತ್ಸುಕರಾಗಿರಬೇಕು. ಕಲಿಕೆಯಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಅದರ ಸೃಜನಶೀಲ ಪ್ರಸ್ತುತಿ ಮುಖ್ಯವಾದದ್ದು. ಬದಲಾಗುತ್ತಿರುವ ಜಗತ್ತಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸವ್ಯಸಾಚಿ-2021’ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪಿಯು ಹಂತವನ್ನು ಸರಿಯಾಗಿ ಗ್ರಹಿಸುವಲ್ಲಿ ಎಡವುತ್ತಾರೆ. ಮುಂದಿನ ಶಿಕ್ಷಣದ ಹಾದಿಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿಯಿರುವುದಿಲ್ಲ. ಇದು ಭವಿಷ್ಯದಲ್ಲಿ ಅವರಿಗೆ ಸವಾಲಾಗಬಹುದು. ಆದ್ದರಿಂದ ಪಿಯು ಹಂತದಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್  ಚಿಕ್ಕಂದಿನಿಂದಲು ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ, ಆದರೆ ಪ್ರತೀ ವಿದ್ಯಾರ್ಥಿಯು 18 ವಯಸ್ಸಿನ ನಂತರ ತಾವೇನಾಗಬೇಕೆಂಬ ನಿರ್ಧಾರವನ್ನು ತಾವೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬ್ರಾಹ್ಮಣರು ಪ್ರತಿನಿತ್ಯವು ನಿತ್ಯನೇಮಿತ್ತಿಕ ಕರ್ಮಗಳನ್ನು ಮಾಡುವುದರಿಂದ ಮಾತ್ರ ಬ್ರಾಹ್ಮಣ್ಯ ಉಳಿಸಲು ಸಾದ್ಯ, ಬ್ರಾಹ್ಮಣರು ಧಾರ್ಮಿಕ ಆಚರಣೆಯಲ್ಲಿ ಆಶೃಧ್ಯೆ ಮತ್ತು ಉದಾಸಿನತೆ ಮಾಡಿದರೆ ರಾಕ್ಷಸಿ ಪ್ರವೃತ್ತಿಯವರು ಹಾಗೂ ವಿದ್ವಂಸಕಾರರು ಪ್ರಬಲರಾಗುತ್ತ ಹೋಗುತ್ತಾರೆ, ಇದಕ್ಕಾಗಿಯೇ ಬ್ರಾಹ್ಮಣರು ಸುಸ್ಕೃಂತ ಹಾಗೂ ಸಾತ್ವಿಕ ಸಮಾಜ ರೂಪಿಸುವ ದೊಡ್ಡ ಜವಬ್ದಾರಿಯಿದ್ದು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು ಎಂದು ಕುಂದಾಪುರ ತಾಲೂಕು ಹಾಲಾಡಿ ಪಿ.ಯು ಕಾಲೇಜು ಉಪನ್ಯಾಸಕ ಗಣಪತಿ ಹೆಗ್ಡೆ ಹೇಳಿದರು. ಅವರು ಉಪ್ಪುಂದ ಅರೆಹಾಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ 26ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಧಾನ ಉಪನ್ಯಾಸ ನೀಡುತ್ತಾ ಪ್ರಸಕ್ತ ಸಮಾಜ ಆಧುನಿಕ ಜೀವನ ಶೈಲಿ ಮತ್ತು ಅತಿಯಾದ ಮೊಬೈಲ್ ಮತ್ತು ಟಿ.ವಿ ಬಳಕೆಯಿಂದ ಪಾರಂಪರಿಕ ಜೀವನ ಪದ್ಧತಿ ಮರೆಯಾಗುತ್ತಿದ್ದು ಯುವ ಜನಾಂಗಕ್ಕೆ ಸಂಸ್ಕ್ರತಿಕ ಮತ್ತು ಸಂಸ್ಕಾರಯುತ ಜೀವನ ಶೈಲಿಯನ್ನು ಪರಿಚಯಿಸುವ ಮಹತ್ವದ ಕಾರ್ಯ ಸಮಾಜದ ಹಿರಿಯರು ಹಾಗೂ ಸಂಘಟನೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖ್ಯಾತ ಆಶು ಕವಯಿತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ‘ಮೂಕಜ್ಜಿ’ ಹೊತ್ತಗೆ ಅನಾವರಣ 14ರ ಸಂಜೆ 3.30ಕ್ಕೆ ನಾಗೂರಿನ ರಾಮಕೃಷ್ಣ ಐತಾಳ್ ಕಾಂಪೌಂಡ್‌ನ ‘ಸುಧಾಮ’ದಲ್ಲಿ ನಡೆಯುವುದು. ಯು. ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿ, ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ ಪ್ರಕಟಿಸಿರುವ ಈ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ಹಾಗೂ ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಬಿಡುಗಡೆಗೊಳಿಸಿ, ’ಕುಂದಗನ್ನಡ ಸಾಹಿತ್ಯಕ್ಕೆ ಮೂಕಜ್ಜಿಯ ಕೊಡುಗೆ’ ಕುರಿತು ಉಪನ್ಯಾಸ ಮಾಡುವರು. ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಮೂಕಜ್ಜಿ ಸಮಗ್ರ ಸಾಹಿತ್ಯ ವಿಮರ್ಶೆ ನಡೆಸುವರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಪುಸ್ತಕವನ್ನು ಪರಿಚಯಿಸುವರು. ಅಶ್ವಿನಿ ಐತಾಳ್ ಮತ್ತು ರಾಕೇಶ್ ಹೊಸಬೆಟ್ಟು ಅವರಿಂದ ಮೂಕಜ್ಜಿ ಹಾಡುಗಳ ರಸಧಾರೆ ಕಾರ್ಯಕ್ರಮ ನಡೆಯುವುದು ಎಂದು ಪ್ರತಿಷ್ಠಾನ ಪ್ರಕಟಿಸಿದೆ.…

Read More