Author: ನ್ಯೂಸ್ ಬ್ಯೂರೋ

ಕುಂದಾಪುರ: ಮರವಂತೆ ಮಹಾರಾಜ ಸ್ವಾಮಿ ವರಾಹ(ಮಾರಸ್ವಾಮಿ) ದೇವಸ್ಥಾನದಲ್ಲಿ ನಡೆವ ವಿಶಿಷ್ಟ ಆಭಾರಿ ಸೇವೆ ಗುರುವಾರ ಸಂಪನ್ನವಾಯಿತು. ಕೃಷಿಕರು ಉತ್ತಮ ಮಳೆ, ಬೆಳೆಗೆ, ಮೀನುಗಾರರು ಸಮೃದ್ಧ ಮೀನುಗಾರಿಕೆ ನಡೆಯಬೇಕೆಂದು ಆಭಾರಿ ಹರಕೆ ಹೊತ್ತು ಸಾಮೂಹಿಕವಾಗಿ ಅದನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ. ಅದರಂತೆ ನಾಡ, ಹಡವು ಮತ್ತು ಸೇನಾಪುರ ಗ್ರಾಮಗಳ ಕೃಷಿಕರು ಗುರುವಾರ ಸೇವೆ ಸಲ್ಲಿಸಿದರು. ಮೀನುಗಾರರು ಎಲ್ಲ ಸೇರಿ ಇದನ್ನು ನಡೆಸಿದರೆ, ಕೃಷಿಕರು ದೇಣಿಗೆ ಸಂಗ್ರಹಿಸಿ ಈ ಸೇವೆ ಸಲ್ಲಿಸುತ್ತಾರೆ. ಆಭಾರಿ ಸೇವೆಯ ಅಂಗವಾಗಿ ವೇದಮೂರ್ತಿ ಹಡನ ಗುಂಡಿ ಗೋಪಾಲಕೃಷ್ಣ ಪುರಾಣಿಕರ ಅಧ್ವರ್ಯದಲ್ಲಿ ಗಂಗಾಧರ ದೇವಸ್ಥಾ ನದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನಡೆಸಲಾಯಿತು. ವರಾಹ ದೇವಸ್ಥಾನದಲ್ಲಿ ಚಂಡಿಕಾ ಹೋಮ, ವಿಷ್ಣು ಹೋಮ, ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆಗೆ ಸಿದ್ಧವಾದ ಅನ್ನದ ರಾಶಿಗೆ ಪೂಜೆ ಸಂದಿತು. ಬಳಿಕ ಹನ್ನೆರಡು ಹೆಡಿಗೆ ಅನ್ನವನ್ನು ವಾದ್ಯಘೋಷದ ನಡುವೆ ದೇವಸ್ಥಾನದ ಅಂಚಿನಲ್ಲಿರುವ ಸೌಪರ್ಣಿಕಾ ನದಿಗೆ ಒಯ್ದು ಬ್ರಾಹ್ಮಣರ ಮಂತ್ರೋಚ್ಛಾರಣೆ ಮತ್ತು ಭಕ್ತರ ಘೋಷದ ನಡುವೆ ನೀರಿಗೆ ಸುರಿಯಲಾಯಿತು. ಇಲ್ಲಿ ಅನಾದಿಕಾಲದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೀರ್ಣೋದ್ಧಾರಗೊಳ್ಳುತ್ತಿರುವ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿಯ ಎಲ್ಲಾ ಗರಡಿಗಳಿಗಿಂತ ವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಗರಡಿ ಶಿಲೆ ಹಾಗೂ ಕಾಷ್ಟಶಿಲ್ಪ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭ ಯಡ್ತರೆ ಗ್ರಾಪಂ ಉಪಾಧ್ಯಕ್ಷ ನಾಗರಾಜ ಗಾಣಿಗ, ಸದಸ್ಯ ಉಮೇಶ್, ಆನಂದ ಶೆಟ್ಟಿ, ವೆಂಕಟರಮಣ, ಸ್ಥಳೀಯರಾದ ಎಸ್. ಮದನಕುಮಾರ್ ಉಪ್ಪುಂದ, ಸುರೇಶ್ ಹೋಬಳಿದಾರ್, ಮಂಜುನಾಥ ಪೂಜಾರಿ ತಗ್ಗರ್ಸೆ,  ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಉಪ್ಪುಂದ ಬಿಲ್ಲವ ಸಂಘದ ಗಣೇಶ್ ಪೂಜಾರಿ, ಶೇಖರ ಪೂಜಾರಿ, ಶಿರೂರು ಬಿಲ್ಲವ ಸಂಘದ ಚಿಕ್ಕು ಪೂಜಾರಿ, ರಘುರಾಮ ಪೂಜಾರಿ, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಲಿಸುವ ಬಸ್‌ನಲ್ಲಿಯೇ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ದಂಪತಿ ಹಾಗೂ ಮಗುವಿನ ಪೈಕಿ ಪತಿ ರಾಜಕುಮಾರ್ (35) ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಗುರುವಾರ ರಾತ್ರಿ ಮೃತಪಟ್ಟಿದ್ದು, ಪತ್ನಿ ಸಂಗೀತಾ (28) ವೆನ್‌ಲಾಕ್ ಆಸ್ಪತ್ರೆ ತೀವ್ರ ನಿಗಾ ವಿಭಾಗದಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಗು ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚೇತಿರಿಸಿಕೊಳ್ಳುತಿದೆ ಎನ್ನಲಾಗಿದೆ. ಕೊಲ್ಲೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಅವರು ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಇದ್ದ ದಂಪತಿ ಪ್ರಾಣ ಉಳಿಸುವ ಯತ್ನ ನಡೆಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಇಬ್ಬರು ಕಟ್‌ಬೇಲ್ತೂರಿನಿಂದ ಕುಂದಾಪುರದವರೆಗೆ ಎಲ್ಲಿಯೂ ಬಸ್ ನಿಲುಗಡೆ ಮಾಡದೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೊದಲು ಉಡುಪಿ ಅಜ್ಜರಕಾಡುವಿನ ಸರಕಾರಿ ಆಸ್ಪತ್ರೆಗೆ, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷ ಸೇವನೆ ಮಾಡಿದ ದಂಪತಿ ತಮಿಳುನಾಡಿನ ಚಿನೈ ಮೂಲದವರಾಗಿದ್ದು ಕೂಲಿ ಕೆಲಸ ಮಾಡಲು ಉಡುಪಿ ಅಂಬಲಪಾಡಿಯಲ್ಲಿ ಕೆಲವು ದಿನಗಳಿಂದ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ಕುಂದಾಪುರ: ಸಾಮಾಜಿಕವಾಗಿ ತುಳಿತಕ್ಕೊಳಗಾಗಿದ್ದ ಬಿಲ್ಲವ ಸಮಾಜ ರಾಷ್ಟ್ರೀಯತೆಯ ವಿಚಾರ ಬಂದಾಗ ಎಲ್ಲವನ್ನೂ ಮೆಟ್ಟಿ ನಿಂತು ರಾಷ್ಟ್ರಪ್ರೇಮೆ ಮೆರೆದಿರುವುದು ನಮ್ಮ ಸಮಾಜದ ಹೆಮ್ಮೆ. ಒಂದೇ ಜಾತಿ, ಒಂದೇ ಮತ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಮ್ಮ ಗುರುಗಳಾದ ನಾರಾಯಣಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಿ ಬಂದಿದ್ದೇವೆ. ಸಮಾನತೆ, ಜಾತೀಯತೆ, ರಾಷ್ಟ್ರೀಯತೆಗೆ ಭಂಗವಾದಾಗ ಜೈಲಿಗೆ ಹೋಗಿ ಕೊಳೀತಾ ಇರುವವರು ಬಿಲ್ಲವರು. ಆದರೆ ಇದೇ ತತ್ವವನ್ನು ದುರುಪಯೋಗಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು, ಹಿಂದೂ ಧರ್ಮವನ್ನು ಒಡೆದು ಆಳುವ ತಂತ್ರಕ್ಕೆ ಬಿಲ್ಲವ ಸಮಾಜದ ವಿರೋಧವಿದೆ ಎಂದು ಅಚ್ಯುತ್ ಅಮೀನ್ ಕಲ್ಮಾಡಿ ಹೇಳಿದರು. ಅವರು ಕುಂದಾಪುರದ ಪಾರಿಜಾತ ಹೊಟೇಲ್ ಸಭಾಂಗಣದಲ್ಲಿ ಜನವರಿ ೯ರಂದು ಹಮ್ಮಿಕೊಳ್ಳಲಾದ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೆಶವನ್ನು ವಿರೋಧಿಸಿ ನಡೆಸಲಾದ ಸಮಾಲೋಚನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದೇಶದಲ್ಲಿ ಇರುವ ವಿಭಿನ್ನ ಸಂಸ್ಕೃತಿಯೊಂದಿಗೆ ಬಿಲ್ಲವ ಸಮಾಜಕ್ಕೆ ಪ್ರತ್ಯೇಕವಾಗಿ ಸ್ನೇಹ ಸಮ್ಮಿಲನ ನಡೆಸುವ ಅಗತ್ಯ ಇನ್ನೂ ಬಂದಿಲ್ಲ. ಅದು ಬರುವುದಕ್ಕೂ ಬಿಡುವುದಿಲ್ಲ. ಗೋವಿನ ಆರಾಧಕಾರಾದ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ಕುಂದಾಪುರ: ಚಲನಚಿತ್ರ ರಂಗಕ್ಕೆ ರಂಗಭೂಮಿಯ ಕೊಡುಗೆ ಅಪಾರ ರಂಗಭೂಮಿಯಲ್ಲಿ ನುರಿತವರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇಂದಿಗೂ ಈ ನಂಟು ಮುಂದುವರೆದಿದೆ. ಈ ಸಂಬಂಧ ಗಟ್ಟಿಗೊಳಿಸಿದ್ದ ಡಾ. ಬಿ.ವಿ. ಕಾರಂತರು ಹಾಗೂ ಡಾ. ಗಿರೀಶ್ ಕಾರ್ನಡ್‌ ಎಂದೂ ಟಿವಿ ಹಾಗೂ ಸಿನಿಮಾ ರಂಗಗಳನ್ನು ದ್ವೇಷಿಸಿರಲಿಲ್ಲ ಎಂದು ನಟ ಮಂಡ್ಯ ರಮೇಶ್ ಹೇಳಿದರು. ಎಸ್.ವಿ. ಫಿಲ್ಮ್ ಪ್ರೊಡಕ್ಷನ್‌ ಅವರು ಚೊಚ್ಚಲ ಕಾಣಿಕೆ ‘ಮಾಡರ್ನ್‌ ಮಹಾಭಾರತ’ ಕನ್ನಡ ಚಲನಚಿತ್ರದ ಟೀಸರ್ ಅನ್ನು ಉಡುಪಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಚಿತ್ರರಂಗದಲ್ಲಿ ಇಂದು ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬರುತ್ತಿದೆ. ಉತ್ತರ ಕರ್ನಾಟಕದಿಂದ ಹೆಚ್ಚಿನ ನಾಟಕ ಕಂಪನಿಗಳು ಆ ಭಾಗದ ಭಾಷೆ ಸೊಗಡನ್ನು ದಕ್ಷಿಣದವರಿಗೆ ಪರಿಚಯಿಸಿದ್ದವು. ಈ ಪರಂಪರೆ ಚಿತ್ರರಂಗದಲ್ಲಿ ಮುಂದುವರೆದಿದೆ. ಪ್ರಾದೇಶಿಕ ಭಾಷೆಯಾಗಿ ಅತ್ಯಂತ ಶಕ್ತಿಯುತವಾದ ಕುಂದಾಪ್ರ ಕನ್ನಡ ಸಿನಿಮಾಗಳಿಂದಾಗಿ ಚಿತ್ರಗಳಿಂದಾಗಿ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆಗಳಿಸಿದೆ ಎಂದರು. ಚಿತ್ರದ ನಿರ್ದೇಶಕ ಶ್ರೀಧರ ಉಡುಪ ಕೋಟೇಶ್ವರ ಸ್ವಾಗತಿಸಿ ಚಿತ್ರದ ಬಗ್ಗೆ ಮಾಹಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಚಲಿಸುವ ಬಸ್‌ನಲ್ಲಿಯೇ ವಿಷ ಕುಡಿದು ಗಂಭೀರ ಸ್ಥಿತಿಯಲ್ಲಿ ಇದ್ದ ದಂಪತಿ ಪ್ರಾಣ ಉಳಿಸುವ ಯತ್ನ ನಡೆಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸರ್ಕಾರಿ ಆಸ್ಪತ್ರೆಗೆ ಬಸ್‌ ತಂದಿರುವ ಘಟನೆ ಗುರುವಾರ ನಡೆಯಿತು. ಘಟನೆ ವಿವರ : ಕೊಲ್ಲೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ತಮಿಳುನಾಡು ಮೂಲದ ರಾಜ್‌ಕುಮಾರ್‌ ಹಾಗೂ ಸಂಗೀತಾ ದಂಪತಿ ತಮ್ಮ ಒಂದೂವರೆ ವರ್ಷದ ಗಂಡು ಮಗುವಿನ ಜತೆಗೆ ಪ್ರಯಾಣ ಮಾಡುತ್ತಿದ್ದರು. ಬಸ್‌ ಹೆಮ್ಮಾಡಿ ಸಮೀಪದ ಕಟ್‌ಬೇಲ್ತೂರು ಬಳಿ ಬರುತ್ತಿದ್ದಂತೆ ದಂಪತಿ ಬಸ್‌ನಲ್ಲಿ ಬಿದ್ದು ನರಳುತ್ತಿದ್ದರು. ದಂಪತಿ ಸ್ಥಿತಿ ಕಂಡ ಸಹ ಪ್ರಯಾಣಿಕರು ಬಸ್‌ನ ನಿರ್ವಾಹಕ ಸತೀಶ್‌ ಅವರ ಗಮನಕ್ಕೆ ತಂದು, ಅವರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಅವಲೋಕಿಸಿದ ನಿರ್ವಾಹಕ ಹಾಗೂ ಚಾಲಕ ಇಕ್ಬಾಲ್‌ ಬಸ್‌ನ್ನು ನೇರವಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ತಂದು ನಿಲ್ಲಿಸಿದರು. ಕಟ್‌ಬೇಲ್ತೂರಿನಿಂದ ಕುಂದಾಪುರದವರೆಗೆ ಎಲ್ಲಿಯೂ ನಿಲುಗಡೆ ಮಾಡದೇ ಪ್ರಯಾಣಿಕರನ್ನು ಬಸ್‌ನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪುಣೆಯಿಂದ ಕೇರಳಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಬೈಂದೂರು ತಾಲೂಕಿನ ಬಿಜೂರು ರೈಲು ನಿಲ್ದಾಣದ ಬಳಿ ಪಾಸಿಂಗ್ ಸಮಯದಲ್ಲಿ ನಿಂತುಕೊಂಡಿದ್ದು. ಈ ವೇಳೆಯಲ್ಲಿ ಧಿಡೀರನ್ ಇಂಧನ ಸೋರುತ್ತಿರುವುದನ್ನು ಕಂಡ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಗಂಟೆಗಳ ರೈಲನ್ನು ನಿಲ್ಲಿಸಿ ದೋಷವನ್ನು ಸರಿಪಡಿಸಿದರು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಒಂದು ಗಂಟೆ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಓರ್ವ ಕ್ರೀಡಾಪಟುವಿನ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಆತ ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ತನ್ನ ಗುರಿಯನ್ನು ತಲುಪುತ್ತಾನೆ. ಕ್ರೀಡಾಪಟು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕಬಲ್ಲ ಎಂದು ರಾಜ್ಯ ಮಟ್ಟದ ಮಾಜಿ ವಾಲಿಬಾಲ್‌ಪಟು ರಾಜೇಶ್ ಕಾವೇರಿ ಹೇಳಿದರು. ಅವರು ಭಾನುವಾರ ಸಂಜೆ ಹೆಮ್ಮಾಡಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫ್ರೆಂಡ್ಸ್ ಹೆಮ್ಮಾಡಿಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಹೆಮ್ಮಾಡಿ ಪ್ರೀಮಿಯರ್ ಲೀಗ್-2020ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾದ ವಿಚಾರಗಳ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಎಲ್ಲಾ ಯುವಕರನ್ನು ಕ್ರೀಡೆಯತ್ತ ಸೆಳೆಯಲು ಅವಕಾಶ ಮಾಡಿಕೊಟ್ಟ ಫ್ರೆಂಡ್ಸ್ ಹೆಮ್ಮಾಡಿಯ ವಿಭಿನ್ನ ಪ್ರಯತ್ನ ಶ್ಲಾಘನೀಯ ಎಂದರು. ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹರೀಶ್ ಭಂಡಾರಿ, ಉದಯ್ ಕುಮಾರ್ ಹಟ್ಟಿಯಂಗಡಿ, ಶಿವಾನಂದ ಗಂಗೊಳ್ಳಿ, ರಾಘವೇಂದ್ರ ದೇವಾಡಿಗ ಹೊಸ್ಕಳಿ, ಶ್ರೀಕಾಂತ ಹೆಮ್ಮಾಡಿ ಮುಖ್ಯ ಅತಿಥಿಗಳಾಗಿ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ಸರ್ಕಾರಗಳ ತಪ್ಪು ನೀತಿಗಳ ಫಲವಾಗಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಇನ್ನೊಂದೆಡೆ ಕಾರ್ಮಿಕ ಕಾನೂನುಗಳ ತಿದ್ದುಪಡಿಯ ಮೂಲಕ ದುಡಿವ ಜನರ ಸೌಲಭ್ಯ ಕಸಿಯಲಾಗುತ್ತಿದೆ. ವಿರೋಧಿಸಿ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಧುರೀಣ ವೆಂಕಟೇಶ ಕೋಣಿ ಹೇಳಿದರು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯಂತೆ ಬೈಂದೂರು ತಾಲ್ಲೂಕು ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ಮುಷ್ಕರದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಕೇಂದ್ರ ಸರ್ಕಾರದ ದುರಾಡಳಿತದ ಫಲವಾಗಿ ಜಿಡಿಪಿ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಜನರ ಆದಾಯ ಇಳಿಮುಖ ವಾಗುತ್ತಿರುವ ಕಾರಣ ಬಡತನ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅವರು ದೂರಿದರು. ಆರ್ಥಿಕ ಸಂಕಷ್ಟದಿಂದ ತೊಂದರೆ ಗೊಳಗಾಗಿರುವ ಕಾರ್ಮಿಕರ ಹಿತಕಾಯಬೇಕಾದ ಸರ್ಕಾರ ಬಂಡವಾಳದಾರರ ರಕ್ಷಣೆಗೆ ನಿಂತಿದೆ. ಅದು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ನೀತಿಯನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಎಲ್ಲ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ 18 ಬಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಲ್ಲವರ ವಿರುದ್ಧ ನೇರವಾಗಿ ಕೀಳು ಮಟ್ಟದ ಪದ ಪ್ರಯೋಗಿಸಿ ವ್ಯಂಗ್ಯವಾಡಿರುವ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದ ಒಳಗೆ ಬಹಿರಂಗವಾಗಿ ಕ್ಷೇಮ ಕೇಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವುದಲ್ಲದೇ ಪ್ರತಿಭಟನೆ ನಡೆಸುವುದಾಗಿ ಕರ್ಕಿಯ ಪ್ರಶಾಂತ ಪೂಜಾರಿ ತಿಳಿಸಿದ್ದಾರೆ. ಅವರು ಕುಂದಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇತ್ತಿಚಿಗೆ ಬ್ರಾಹ್ಮಣ ಮಹಾಸಭಾದ ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಉದ್ಯಮಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವ ಸಮಾಜವನ್ನು ಅವಹೇಳನ ಮಾಡಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ಕಿರಣ್ ಎನ್ನುವವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಬಿಲ್ಲವ ಸಮಾಜಕ್ಕಾದ ಅವಮಾನವನ್ನು ಕುಂದಾಪುರ ಬಿಲ್ಲವ ಸಂಘಟನೆ ಖಂಡಿಸದೇ, ಬೇರೆವುದೋ ಸಮಾವೇಶದ ಬಗ್ಗೆ ಖಂಡನೆ ವ್ಯಕ್ತಪಡಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದೊಳಗೆ…

Read More