Author: ನ್ಯೂಸ್ ಬ್ಯೂರೋ

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯದಲ್ಲಿಯೇ ಮೊದಲ ಭಾರಿಗೆ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕ ಕುಂದಾಪುರದಲ್ಲಿ ಸಿದ್ಧಗೊಂಡಿದ್ದು, ಗ್ರಾಮ ಮಟ್ಟದಲ್ಲಿ ಸುರಕ್ಷಿತವಾಗಿ ಕಾರ್ಯಾಚರಿಸಲು ಸನ್ನದ್ಧವಾಗಿದೆ. ಉಡುಪಿ ಜಿಲ್ಲಾಡಳಿತ ಈ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕವನ್ನು ಆರಂಭಿಸಿದ್ದು, ಕುಂದಾಪುರದಲ್ಲಿ ಮೊದಲ ಭಾರಿಗೆ ಸಂಚರಿಸಲಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆದ್ಯತೆಗೆ ಅನುಗುಣವಾಗಿ ಮಾದರಿ ಸಂಗ್ರಹ ಸಂಚಾರಿ ಘಟಕ ಕಾರ್ಯಾಚರಿಸಲಿದೆ. ಜಿಲ್ಲೆಯಲ್ಲಿ ಇನ್ನು ಕೆಲ ದಿನಗಳಲ್ಲಿ ಒಟ್ಟು ಮೂರು ಸಂಚಾರಿ ಘಟಕ ಆರಂಭಗೊಳ್ಳಲಿದ್ದು ಇನ್ನಿತರ ತಾಲೂಕುಗಳಲ್ಲಿಯೂ ಸಂಚರಿಸಲಿದೆ. ಹೇಗೆ ಕಾರ್ಯನಿರ್ವಹಣೆ: ಮಾರುತಿ ಆಮ್ನಿಯನ್ನು ಸಂಚಾರಿ ಘಟಕವಾಗಿ ಮಾರ್ಪಾಡು ಮಾಡಲಾಗಿದೆ. ಘಟಕದ ಒಳಭಾಗದಲ್ಲಿ ಸುರಕ್ಷಿತ ಚೇಂಬರ್ ನಿರ್ಮಿಸಲಾಗಿದ್ದು, ಓರ್ವ ಟೆಕ್ನಿಶಿಯನ್ ಕಾರ್ಯನಿರ್ವಹಿಸುತ್ತಾರೆ. ವಾಹನದ ಚಾಲಕನೇ ಸಹಾಯಕನಾಗಿಯೂ ತೊಡಗಿಸಿಕೊಳ್ಳಲಿದ್ದಾರೆ. ಸಂಚಾರಿ ಘಟಕದ ಹೊರಭಾಗದಲ್ಲಿ ಕೋವಿಡ್-19 ಶಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ ಬಳಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಸಂಬಂಧ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ/ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲು ಮತ್ತು ಜಿಲ್ಲೆಯಲ್ಲಿ ಅಂಗಡಿ/ಮಳಿಗೆಗಳು ತೆರೆಯುವ ಬಗ್ಗೆ, ಈಗಾಗಲೇ ಸ್ಪಷ್ಟ ರೂಪುರೇಷೆಗಳೊಂದಿಗೆ ಆದೇಶಿಸಲಾಗಿದ್ದರೂ, ಈ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ಜಿಲ್ಲಾಧಿಕಾರಿ/ ಜಿಲ್ಲಾಧಿಕಾರಿಯವರ ಕಛೇರಿಗೆ ಅನೇಕ ದೂರವಾಣಿ ಕರೆಗಳು ಬರುತ್ತಿರುವುದರಿಂದ ಈ ವಿಷಯದ ಕುರಿತು ಯಾವುದೇ ಮಾಹಿತಿ ಬೇಕಾದಲ್ಲಿ, ಈ ಕೆಳಗೆ ತಿಳಿಸಿರುವ ಆಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಬಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ – ಮೊ.ನಂಬ್ರ: 9448334324 ರಾನ್‌ಜಿ ನಾಯ್ಕ್, ಹಿರಿಯ ಭೂವಿಜ್ಞಾನಿ, ಗಣಿ & ಭೂ ವಿಜ್ಞಾನ ಇಲಾಖೆ – ಮೊ. ನಂ: 9480092738 ಕೈಗಾರಿಕೆ ಪ್ರದೇಶ/ವಸಹಾತುವಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಈ ಕೆಳಗೆ ತಿಳಿಸಿರುವ ಆಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗೋಕುಲ್‌ದಾಸ ನಾಯಕ್ , ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮೊ. ನಂಬ್ರ: 8277052707 ಸೀತಾರಾಮ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಮಹಾಸತಿ ಫಿಲ್ಮ್ಸ್ ಹಾಗೂ ಕೆಎ20 ಕುಂದಾಪುರ ಕನ್ನಡಿಗರು ಪ್ರಸ್ತುತ ಪಡಿಸಿದ ಕಡಲ ಸಾಹಸಿ ವೀಡಿಯೋ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಂದರ ಸಾಹಿತ್ಯಕ್ಕೆ, ಹದವಾದ ಸಂಗೀತ, ಅದಕ್ಕೆ ತಕ್ಕಂತ ನಿರ್ದೇಶನ, ಚಿತ್ರೀಕರಣ ಹಾಗೂ ಸಂಕಲನ ಮಾಡಿರುವ ಯುವ ಬಳಗ ಉತ್ತಮ ಉತ್ತಮ ಅಭಿರುಚಿಯ ಕೊಡುಗೆಯನ್ನೇ ನೀಡಿದೆ. ಹಾಡಿನ ಮೂಲಕ ಕಡಲ ಮಕ್ಕಳ ಒಡಲಾಳದ ಕಥೆಯನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಹಾಡನ್ನು ಸಚಿನ್ ಆಲೂರು ನಿರ್ದೇಶನ ಮಾಡಿದ್ದು, ಸಚಿನ್ ಬಿ. ಶೇರುಗಾರ್ ಸಾಹಿತ್ಯ ಬರೆದಿದ್ದಾರೆ. ರೋಹಿತ್ ಎಸ್.ಕೆ ಧ್ವನಿಯಾಗಿದ್ದರೇ, ಮಿಲ್ಟನ್ ನಜರತ್ ಸಂಗೀತ್ ನೀಡಿದ್ದಾರೆ. ಅಭಿಷೇಕ್ ರಾವ್ ಸಂಕಲನ ಹಾಗೂ ರಚಿನ್ ಶೆಟ್ಟಿ ಡಿಒಪಿ ಮಾಡಿದ್ದಾರೆ. ಒಮ್ಮೆ ವೀಕ್ಷಿಸಿ 

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಿಕ್ಷಾ ಚಾಲಕರಿಗೆ ಪೊಲೀಸರಷ್ಟೇ ಜವಾಬ್ದಾರಿ ಇದೆ. ಅವರೂ ನಮ್ಮಂತೆಯೇ ಖಾಕಿ ಧರಿಸುತ್ತಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅವರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟವ್ ವತಿಯಿಂದ ಶುಕ್ರವಾರ ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ಭಾಗದ ಪ್ಯಾಸೆಂಜರ್ ಆಟೋ ಚಾಲಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳುವ ಆಟೋ ಚಾಲಕರಿಗೆ ಕಠಿಣ ಸಂದರ್ಭದಲ್ಲಿ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಲಾಕ್‌ಡೌನ್‌ನಿಂದಾಗಿ ರಿಕ್ಷಾ ಚಾಲಕರು ಕಳೆದೊಂದು ತಿಂಗಳಿನಿಂದ ಮನೆಯಲ್ಲಿರುವಂತಾಗಿದೆ. ದಿನದ ದುಡಿಮೆಯನ್ನು ಅವಲಂಬಿಸಿ ಬದುಕುವ ಅವರಿಗೆ ನಮ್ಮ ಸಂಸ್ಥೆಯಿಂದ ಸ್ಪಲ್ವ ಮಟ್ಟಿಗೆ ನೆರವಾಗುತ್ತಿರುವ ತೃಪ್ತಿ ಇದೆ. ಈಗಾಗಲೇ ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೂ ಸಂಸ್ಥೆಯಿಂದ ನೆರವು ನೀಡಲಾಗಿದೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ-2020ರ ಮಾಹೆಗೆ ಬಿಡುಗಡೆಯಾಗಿರುವ ಆಹಾರಧಾನ್ಯವನ್ನು ಮೇ-2020ರ ಮಾಹೆಯ ಪಡಿತರ ಚೀಟಿದಾರರಿಗೆ ಈ ಕೆಳಗಿನಂತೆ ವಿತರಿಸಲಾಗುವುದು. 1) ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ 10ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುವುದು. 2)ಪಿಹೆಚ್.ಹೆಚ್ (ಬಿಪಿಎಲ್) ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಮತ್ತು ಏಪ್ರಿಲ್ -2020ರ ಮಾಹೆಗೆ ವಿತರಿಸಬೇಕಾಗಿದ್ದ ಗೋಧಿಯನ್ನು ಮೇ-2020ರ ಮಾಹೆಯಲ್ಲಿ ಪ್ರತಿ ಕಾರ್ಡಿಗೆ 4 ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುವುದು. 3) ಆಹಾರಧಾನ್ಯ ಪಡೆಯಲು ನೋಂದಾಯಿಸದೆ ಇರುವ ಎನ್.ಪಿ.ಹೆಚ್.ಹೆಚ್(ಎಪಿಎಲ್) ಏಕ ಸದಸ್ಯ ಪಡಿತರ ಚೀಟಿ ಕಾರ್ಡಿಗೆ 5 ಕೆಜಿ ಅಕ್ಕಿ ಮತ್ತು ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಕಾರ್ಡುಗಳಿಗೆ 10 ಕೆಜಿ ಅಕ್ಕಿ ಪ್ರತಿ ಕೆಜಿಗೆ. ರೂ 15-/- ರಂತೆ ವಿತರಿಸಲಾಗುವುದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎ.28ರಂದು ನಿಧನರಾದ ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ಕುಟುಂಬಿಕರು ಮಾತ್ರ ಪಾಲ್ಗೊಂಡಿದ್ದರು. ಎಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು.ಮೃತರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಊರಿನ ನಾಗರಿಕರು, ಅಭಿಮಾನಿಗಳು ಅವರ ಪಾರ್ಥಿವ ಶರೀರ ಬರುವ ಹಾದಿಯಲ್ಲಿ ಮನೆಯಂಗಳದಲ್ಲಿಯೇ ನಿಂತು ಗೌರವ ಸೂಚಿಸಿದರು. ಅಂತ್ಯಕ್ರಿಯೆ ಮೊದಲು ಮಾಜಿ ಸಚಿವ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ► ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ನಿಧನ- https://kundapraa.com/?p=37195 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ಮರಳು ಸಮಸ್ಯೆಗೆ ತುರ್ತಾಗಿ ಬಗೆಹರಿಸುವ ಅಗತ್ಯವಿದ್ದು, ಅಧಿಕಾರಿಗಳು ವಿಳಂಬ ಮಾಡದೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಎಲ್ಲಾ ಗ್ರಾಮಗಳಿಗೂ ತಕ್ಷಣ ಟ್ಯಾಂಕರ್ ನೀರು ಪೂರೈಕೆ ಹಾಗೂ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರಳುಗೊಳಿಸಲು ಅವಕಾಶ ಮಾಡಕೊಡಲು ಕ್ರಮವಹಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಅವರು ಬುಧವಾರ ಕೊಲ್ಲೂರು ಮೂಕಾಂಬಿಕಾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ಸ್ಥಿತಿಗತಿ ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಶಂಕುಸ್ಥಾಪನೆ ಮಾಡಿದ್ದರು. ಆ ಎಲ್ಲಾ ಕಾಮಗಾರಿಗಳು ವೇಗ ಕಂಡುಕೊಳ್ಳಬೇಕಿದೆ. ಕೋರೋನಾ ಕಾರಣದಿಂದ ಕೆಲವೊಂದು ಕಾಮಗಾರಿಗಳು ವಿಳಂಬ ಕಂಡಿದೆ. ಆದರೆ ಈಗ ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಕಾಮಗಾರಿಗಳು ಶೀಘ್ರ ಆರಂಭಿಸಿ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದಲ್ಲಿ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿದ್ದಾರೆ. ಕಠಿಣ ಸಂದರ್ಭವನ್ನೂ ಎದುರಿಸಿ ಎಲ್ಲರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಅವರಿಗೆ ಇಡಿ ಸಮುದಾಯ ಕೃತಜ್ಞವಾಗಿದೆ ಎಂದು ಮರವಂತೆ ಬಡಾಕೆರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಮಂಗಳವಾರ ಸಹಕಾರಿ ವ್ಯಾಪ್ತಿಯ ಸಂಘ ಸಂಸ್ಥೆಗಳಿಗೆ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ಸಂಘದ ನಿರ್ದೇಶಕರುಗಳಾದ ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ವಾಸು ಪೂಜಾರಿ, ರಾಮಕೃಷ್ಣ ಖಾರ್ವಿ, ನಾರಾಯಣ ಶೆಟ್ಟಿ, ಎಂ. ನಾಗಮ್ಮ, ಸರೋಜಾ ಗಾಣಿಗ, ಪ್ರಕಾಶ ದೇವಾಡಿಗ, ರಾಮ, ಭೋಜ ನಾಯ್ಕ್, ನಿಕಟಪೂರ್ವ ನಿರ್ದೇಶಕ ಎಂ. ವಿನಾಯಕ ರಾವ್, ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಖಂಬದಕೋಣೆಯಲ್ಲಿ ಹಲವು ವರ್ಷಗಳಿಂದ ವೈದ್ಯ ವೃತ್ತಿ ನಿರತರಾಗಿದ್ದ ಗುಜ್ಜಾಡಿ ಮೂಲದ ಡಾ. ಪ್ರಕಾಶ ಕೊಡಂಚ (75) ಕೆಲಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು. ವೈದ್ಯ ವೃತ್ತಿಯ ಜತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಅವರ ಪುತ್ರರಾದ ಪ್ರತಾಪ ಕೊಡಂಚ ಅಮೇರಿಕೆಯಲ್ಲಿ ಇಂಜಿನಿಯರ್ ಆಗಿ, ಡಾ. ಪ್ರಭಾತ ಕೊಡಂಚ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ದುಡಿಯುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ಅವರಿಗೆ ಬರಲಾಗದ್ದರಿಂದ ಬಂದು-ಮಿತ್ರರು ಮಂಗಳವಾರ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ (92) ಮಂಗಳವಾರ ಮಧ್ಯಾಹ್ನ ಚರ್ಚ್‌ ರಸ್ತೆಯ ಸ್ವಗೃಹದಲ್ಲಿ ನಿಧನರಾದರು. ವಿನ್ನಿಫ್ರೆಡ್ ಫರ್ನಾಂಡೀಸ್ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎರಡು ಬಾರಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ವಿಧಾನಪರಿಷತ್ ಸದಸ್ಯೆಯಾಗಿಯೂ ಆಗಿದ್ದರು. ಮೃತರು ಮೂವರು ಪುತ್ತಿಯರು ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More