Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂಡಿಯನ್ ಸೀನಿಯರ್ ಛೇಂಬರ್ ಉಪ್ಪುಂದ ಲೀಜನ್‌ನ ನೂತನ ಅಧ್ಯಕ್ಷರ ಪದಪ್ರದಾನ ಸಮಾರಂಭ ಬೈಂದೂರು ಒತ್ತಿನಣೆ ಕ್ಷಿತಿಜ ನೇಸರಧಾಮ ಪ್ರವಾಸಿ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅರವಿಂದ ರಾವ್ ಕೇದಿಗೆ ಮಾತನಾಡಿ, ‘ವಿ ಫಾರ್ ವಿಕ್ಟರಿ’ ಎಂಬ ಘೋಷವಾಕ್ಯದೊಂದಿಗೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳೋಣ ಎಂದರು. ನಿಕಟಪೂರ್ವ ಅಧ್ಯಕ್ಷರಾದ ಸೀನಿಯರ್ ಉದಯ್ ಡಿ. ಆರ್ ನೂತನ ಅಧ್ಯಕ್ಷ ಎನ್. ಕೆ ಬಿಲ್ಲವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್, ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ನವೀನ್ ಐಪಿಪಿ ಗಿರೀಶ್ ಶ್ಯಾನುಭಾಗ್, ನಿಕಟಪೂರ್ವ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ನೂತನ ಖಜಾಂಚಿ ಸೀನಿಯರ್ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸೀನಿಯರ್ ಶ್ರೀಕಾಂತ್ ಕಾಮತ್ ಧನ್ಯವಾದಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಲಶಕ್ತಿ ಯೋಜನೆಯ ಮೂಲಕ ಮಳೆ ನೀರನ್ನು ಸಂಗ್ರಹಿಸಿ ಜಿಲ್ಲೆಯಲ್ಲಿ ಅಂರ್ತಜಲ ಮಟ್ಟವನ್ನು ವೃಧ್ದಿಸಲು ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ನಡದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಗ್ರಾಮಗಳಲ್ಲಿರುವ ಕೆರೆಗಳ ಹೊಳೆತ್ತುವಿಕೆ , ಬಾವಿಗಳ ನಿರ್ಮಾಣ, ಕೊಳವೆ ಬಾವಿಗಳಿಗೆ ಜಲ ಮರುಪೂರಣ , ತೋಡುಗಳ ನಿರ್ಮಾಣ ಮಾಡುವ ಮೂಲಕ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂರ್ತಜಲವನ್ನು ವೃದ್ದಿಸುವನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡಿ ಈ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವಕಾಶವಿದ್ದು, ಇದರಿಂದ ಮಾನವ ದಿನಗಳ ಸೃಷ್ಠಿ ಸಹ ಸಾಧ್ಯವಾಗಲಿದೆ ಎಂದು ಎಲ್ಲಾ ಅಧಿಕಾರಿಗಳಿಗೆ ದಿನಕರ ಬಾಬು ಸೂಚನೆ ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೆ 65 ಕೆರೆಗಳ ಹೊಳು ತೆಗೆಯಲಾಗಿದೆ ಎಂದರು. ಕೋವಿಡ್ ಲಸಿಕೆ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಗುರುವಾರ 274 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ 127, ಕುಂದಾಪುರ 91, ಕಾರ್ಕಳ ತಾಲೂಕಿನ 53 ಹಾಗೂ ಹೊರ ಜಿಲ್ಲೆಯಿಂದ ಬಂದ 3 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 274 ಪ್ರಕರಣಗಳಲ್ಲಿ 123 ಸಿಂಟಮಿಕ್ ಹಾಗೂ 151 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 30 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 244 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 1165 ಸಕ್ರಿಯ ಪ್ರಕರಣಗಳಿವೆ. ಒಂದು 3270 ಮಂದಿಯನ್ನು ಪರೀಕ್ಷಿಸಲಾಗಿದ್ದು, 193 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ  ► ರಾಜ್ಯದಲ್ಲಿ ಹಾಫ್ ಲಾಕ್‌ಡೌನ್ ಘೋಷಣೆ. ಹೊಸ ಮಾರ್ಗಸೂಚಿಯಲ್ಲೇನಿದೆ ನೋಡಿ – https://kundapraa.com/?p=47569 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಿ.ಎಡ್ ಪರೀಕ್ಷೆಯಲ್ಲಿ ಶೇಕಡಾ100 ಫಲಿತಾಂಶ ಪಡೆಯುವದರೊಂದಿಗೆ, ವಿಶೇಷ ಸಾಧನೆ ಮಾಡಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 76 ವಿದ್ಯಾರ್ಥಿಗಳಲ್ಲಿ, 72 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬ್ಯಾರೀಸ್ ಸಮೂಹದ ಛೇರ್ಮನ್‌ರಾದ ಸಯ್ಯದ್ ಮಹಮದ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್, ವಿಶ್ವಸ್ತರು, ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇಂದು (ಎ.22) ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಯಾವೆಲ್ಲ ಅಂಗಡಿಗಳು ತೆರೆದಿರಬೇಕು ಎಂಬುದರ ಬಗ್ಗೆ ತಿಳಿಸಿದೆ. ಹೊಸ ಆದೇಶ ಮೇ 4ರವರೆಗೆ ಜಾರಿಯಲ್ಲಿರಲಿದೆ. ನಿರ್ಬಂಧಿಸಲಾದ ಚಟುವಟಿಕೆಗಳು: ಎಲ್ಲಾ ಸಿನೆಮಾ ಹಾಲ್ಗಳು, ಶಾಪಿಂಗ್ ಮಾಲ್ಗಳು, ಜಿಮ್ ಗಳು , ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್ ,ಚಿತ್ರಮಂದಿರಗಳು, ಬಾರ್ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು ಮತ್ತು ಅಂತಹುದೇ ಸ್ಥಳಗಳು ಮುಚ್ಚಲ್ಪಡುತ್ತವೆ. ಯಾರಿಗೆಲ್ಲ ಅನುಮತಿ?/ಕುಂದಾಪ್ರ ಡಾಟ್ ಕಾಂ/  ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು 1) ಪಡಿತರ ಅಂಗಡಿಗಳು (ಪಿಡಿಎಸ್)ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿಗಳು , ಹಣ್ಣುಗಳು ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೃಷ್ಣಾನಂದ ಚಾತ್ರಾ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಮಾಜಿ ಪುರಸಭಾ ಸದಸ್ಯರಾದ ಸತೀಶ ಶೆಟ್ಟಿ, ವೀಣಾ ಪ್ರಕಾಶ, ಸವಿತಾ ಜಗದೀಶ, ನಾಗರಾಜ ರಾಯಪ್ಪನಮಠ, ವಿಶ್ವನಾಥ ಪೂಜಾರಿ, ಸತೀಶ್ ಶೆಟ್ಟಿ, ಜಯಾನಂದ ಖಾರ್ವಿ, ಅವರನ್ನು ಸರಕಾರ ನೇಮಕ ಮಾಡಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ94ಸಿ ಕಾಯಿದೆಯಡಿ 125 ಕುಟುಂಬಗಳಿಗೆ ಹಕ್ಕುಪತ್ರ ಮಂಜೂರಾಗಿದೆ. 115 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 10 ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್ ನೆಪದಲ್ಲಿ ಇನ್ನೂ ಹಕ್ಕು ಪತ್ರ ನೀಡಿಲ್ಲ. ನಿವೇಶನ ಮಂಜೂರು ಮಾಡಿದ ಬಳಿಕ ಡೀಮ್ಡ್ ಫರೆಸ್ಟ್ ನುಸುಳಿದ್ದು ಹೇಗೆ? ತಾಲೂಕಿನಾದ್ಯಂತ ಇಂತಹ ಪರಿಸ್ಥಿತಿ ಇದೆ. ಬಡವರು ಹಕ್ಕುಪತ್ರ ವಂಚಿರಾಗುವಂತಾಗಿದೆ ಎಂದು ತಾಪಂ ಸದಸ್ಯ ಕರಣ್ ಪೂಜಾರಿ ಅಸಮಾಧಾನ ಹೊರಹಾಕಿದರು.ಕುಂದಾಪುರ ತಾಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಕುಂದಾಪುರ ತಾಪಂ ಸಾಮನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಸದಸ್ಯ ಸಿದ್ದಾಪುರ ವಾಸುದೇವ ಪೈ ಮಾತನಾಡಿ, ಅಂಪಾರು ಗ್ರಾಮದ ಸರ್ವೆ ನಂಬ್ರ15ರಲ್ಲಿ 40 ವರ್ಷಗಳಿಂದ ನೆಲೆಸಿರುವ ಕುಟುಂಬ ವೊಂದರ ಭೂಮಿ  ಡೀಮ್ಡ್ ಫಾರೆಸ್ಟ್‌ಗೆ ಸೇರಿದೆ. ಇಂತಹ ದೌರ್ಜನ್ಯ ಸರಿಯೇ ಎಂದು ಪ್ರಶ್ನಿಸಿದರು. ಸದಸ್ಯರಾದ ಜ್ಯೋತಿ ಪುತ್ರನ್, ದೇವದಾಸ ಶೆಟ್ಟಿ, ನಾರಾಯಣ ಗುಜ್ಜಾಡಿ ಡೀಮ್ಡ್ ಫಾರೇಸ್ಟ್ ಕಾನೂನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದರು. ಕಂದಾಯ, ಅರಣ್ಯ ಇಲಾಖೆಯ ಗೊಂದಲಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಲೋಪದೋಷಗಳ ಬಗ್ಗೆ ಚರ್ಚಿಸುವ ಪುರಸಭೆ ಆಡಳಿತ ವ್ಯವಸ್ಥೆ ತನ್ನದೆ ಕಟ್ಟಡಕ್ಕೆ ಪಾರ್ಕಿಂಗ್ ಹೊಂದಿಲ್ಲ ಎಂದು ಮಾಜಿ ಸದಸ್ಯ ಕೇಶವ ಭಟ್ ಆರೋಪಿಸಿದ್ದಾರೆ. ಹೊಸ ಬಸ್ ನಿಲ್ದಾಣದ ಬಳಿಯಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಪಾರ್ಕಿಂಗ್ ಇಲ್ಲ. ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್ ನಿಯಮಾವಳಿ ಅನುಸರಿಸಿಲ್ಲ ರಸ್ತೆಗೆ ತಾಗಿಕೊಂಡಿರುವ ಕಟ್ಟಡ ಇದಾಗಿದ್ದು ವಾಹನಗಳು ಪಾರ್ಕಿಂಗ್‌ಗೆ ರಸ್ತೆಯಲ್ಲಿ ನಿಲ್ಲಬೇಕು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿ ಪಾರ್ಕಿಂಗ್ ಲೋಪದೋಷಗಳ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್ಮೆಂಟ್ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನಲೆ, ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2) & (5) ರನ್ವಯ ಏಪ್ರಿಲ್ 22 ರಿಂದ ಜೂನ್ 5 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ವಾಹನಗಳ ಪರ್ಯಾಯ ಮಾರ್ಗ: ಕುಂದಾಪುರದಿಂದ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಕಡೆಗೆ ಹೋಗುವ ಲಘು ವಾಹನಗಳು ಕುಂದಾಪುರ-ಹೆಮ್ಮಾಡಿ-ವಂಡ್ಸೆ-ಕೊಲ್ಲೂರು-ನಿಟ್ಟೂರು ಘಾಟ್ ಮಾರ್ಗವಾಗಿ ಅಥವಾ ಕುಂದಾಪುರ-ಕೋಟೇಶ್ವರ-ಹಾಲಾಡಿ-ಆಗುಂಬೆ ಮಾರ್ಗವಾಗಿ ಅಥವಾ ಕುಂದಾಪುರ-ಬಸ್ರೂರು-ಹುಣ್ಸೆಮಕ್ಕಿ-ಹಾಲಾಡಿ-ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ತಲುಪಬಹುದು. ಕುಂದಾಪುರದಿಂದ ತೀರ್ಥಹಳ್ಳಿಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ-ರಿಪ್ಪನ್ಪೇಟೆ ಮೂಲಕ ತೀರ್ಥಹಳ್ಳಿ ತಲುಪಬಹುದು. ಕುಂದಾಪುರದಿಂದ ಶಿವಮೊಗ್ಗ ಕಡೆಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ ಮಾರ್ಗವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಂದುಶ್ರೀ ಬಾಲಕ ಬಾಲಕಿಯರ ಭಜನಾ ತಂಡ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶಯದಂತೆ ರಾಮನವಮಿ ಉತ್ಸವದ ಅಂಗವಾಗಿ ಗಂಗೊಳ್ಳಿಯ ಇಂದುಧರ ಸಭಾ ಭವನದಲ್ಲಿ ರಾಮಭಜನೆ, ಕುಣಿತ ಭಜನೆ ನಡೆಯಿತು. ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಿ.ವಿಶ್ವನಾಥ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಾಪಕ ನಾಗರಾಜ ಆಚಾರ್ಯ ಅವರು ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಚರಿತ್ರೆಯನ್ನು ವಿವರಿಸಿದರು. ರಾಮಾಯಣ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕ ದೇವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಜಿ., ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಜಿ., ಉಪಾಧ್ಯಕ್ಷ ಗುರುರಾಜ್ ಬಿ., ಕಾರ್ಯದರ್ಶಿ ಶ್ರೀಕಾಂತ ಎನ್., ಅರ್ಚಕ ಶಿವ ಜಿ.ಟಿ., ವಸಂತಿ, ನೇತ್ರಾವತಿ ಶಿರೂರು, ಜಯಂತಿ…

Read More