ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ ಡೌನ್‌ನ ಸಂಕಷ್ಟದ ಸಂದರ್ಭದಲ್ಲಿ ಊಟಕ್ಕೆ ಕಷ್ಟಪಡುತ್ತಿದ್ದ ವಲಸೆ ಕಾರ್ಮಿಕರಿಗೆ ನಿತ್ಯವೂ ಎರಡು ಹೊತ್ತಿನ ಊಟ ಒದಗಿಸುತ್ತಿದ್ದ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಕುಂದಾಪುರ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಹರೀಶ್ ನಾಯ್ಕ್ ಹೇಳಿದರು. ಅವರು ಲಾಕ್ ಡೌನ್ ಸಡಿಲಿಕೆಯ ಮುನ್ನಾ ದಿನ ಸಂಜೆ ಮೇ 3 ರಂದು ಈ ಸಂಘಟನೆಗಳು ಏರ್ಪಡಿಸಿದ್ದ ಸಾಂಕೇತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಲಾಕ್ ಡೌನ್ ವೇಳೆ ಕುಂದಾಪುರದಲ್ಲಿ ಅತಂತ್ರರಾಗಿ ಸಿಲುಕಿ ಹಾಕಿಕೊಂಡಿರುವ 40 ರಷ್ಟು ವಲಸೆ ಕಾರ್ಮಿಕರಿಗೆ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳು 35 ದಿನಗಳ ಕಾಲ ನಿತ್ಯವೂ ಎರಡು ಹೊತ್ತಿನ ಊಟ ನೀಡಿದ್ದವು. ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಈಗ ಈ ಊಟ ನೀಡುವ ಕಾರ್ಯಕ್ಕೆ ವಿರಾಮ ನೀಡಿ ಸಾಂಕೇತಿಕ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಊಟ ತಯಾರಿಸಲು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು, ಮೇ.3: ಇಂದು ನಿಧನರಾದ ನಿತ್ಯೋತ್ಸವದ ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ಕರಾವಳಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ವಿವಿಧ ಕಾರ್ಯಕ್ರಮಗಳಿಲ್ಲಿಯೂ ಭಾಗವಹಿಸಿದ್ದರು. 2017ರಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರಲ್ಲಿ ಬೈಂದೂರು ತಾಲೂಕಿನ ಮೊಗೇರಿ ಹಾಗೂ 2014ರಲ್ಲಿ ಬೈಂದೂರಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2017ರ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕನ್ನಡ ಪರ ಹೋರಾಟಗಳ ಅಗತ್ಯ, ಇಂಗ್ಲಿಷ್ ಕಲಿಕೆಯ ಅಗತ್ಯತೆ, ರಾಜಕೀಯ ಪ್ರಕ್ಷುಬ್ಧತೆ, ಕನ್ನಡ ನಾಡಿನ ಪ್ರಾಕೃತಿಕ ವೈಭವ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಮನಮುಟ್ಟುವ ಮನಮುಟ್ಟುವಂತೆ ಮಾತನಾಡಿದ್ದರು. 2012ರ ನವಂಬರ್ 20ರ ವೇಳೆಗೆ ಅಡಿಗರು ಹುಟ್ಟಿದ ನೆಲ ಮತ್ತು ಮನೆ ನೋಡಬೇಕು ಎಂದು ಆಶಿಸಿದರು. ನಿಸಾರ್ ಅವರನ್ನು ಬೈಂದೂರಿನ ಸಾಂಸ್ಕೃತಿಕ ಸಂಘಟಕ ಸುಧಾಕರ ಪಿ. ಬೈಂದೂರು ಮತ್ತು ಲೇಖಕ ಓಂ ಗಣೇಶ್ ಅವರು ಮೊಗೇರಿ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿಬಂದಾಜ್ಞೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿಬಂಧಿಸಲಾಗಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಆಥವಾ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವುದಕ್ಕೆ ನಿಬಂಧಗಳಿವೆ. ಅಲ್ಲದೇ ಈ ಬಗ್ಗೆ ಸಾರ್ವತ್ರಿಕವಾದ ಅನುಮತಿ ಇರುವುದಿಲ್ಲ, ಕೇವಲ ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಹೋಗ ಬೇಕಾದಲ್ಲಿ ಅಥವಾ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ ಮುಂತಾದ ಅಗತ್ಯ ಕರ್ತವ್ಯಕ್ಕೆ ಹಾಜರಾಗಲು ಅಂತರ್ ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಅರ್ಜಿಯನ್ನು ವೈದ್ಯಕೀಯ ಪ್ರಮಾಣ ಪತ್ರ, ಅಗತ್ಯ ಸೇವೆಗಳಾದಲ್ಲಿ ಐಡಿ ಕಾರ್ಡ್, ಸಂಸ್ಥೆಯು ಕಳುಹಿಸಿರುವ ಪತ್ರ ಮುಂತಾದ ದಾಖಲೆಗಳೊಂದಿಗೆ ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿದೆ. ಹೀಗೆ ಸಲ್ಲಿಸಲಾದ ಕೋರಿಕೆಗಳನ್ನು ಅನ್‌ಲೈನ್ ಮುಖಾಂತರ ತಹಶೀಲ್ದಾರು ಪರಿಶೀಲಿಸಿ ಅನುಮೋದನೆಗಾಗಿ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ. ಅವರು ಅನ್‌ಲೈನ್ ಕೋರಿಕೆಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಆದರೂ ಸಹ ಸಾರ್ವಜನಿಕರು ಅನುಮತಿಗಾಗಿ ಜಿಲ್ಲಾಧಿಕಾರಿಯವರ ಕಛೇರಿಗೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡುವ ಷರತ್ತಿನೊಂದಿಗೆ, ಉಡುಪಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಗೆ ಅಂತರ್ ಜಿಲ್ಲೆ/ ರಾಜ್ಯದಿಂದ ಜನರನ್ನು ಕರೆತರುವ ಮತ್ತು ಜಿಲ್ಲೆಯಿಂದ ಕಳುಹಿಸಿ ಕೊಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಾಗರೀಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದು, ಹೊರರಾಜ್ಯದಿಂದ ಬರುವವರು ಮತ್ತು ಹೊರ ಜಿಲ್ಲೆಯಿಂದ ಬರುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ, ಜಿಲ್ಲಾಧಿಕಾರಿಗಳು ಒಪ್ಪಗೆ ಸೂಚಿಸುವವರೆಗೂ ಜಿಲ್ಲೆಯ ಗಡಿಯಲ್ಲಿ, ಹೊರ ರಾಜ್ಯದಿಂದ ಆಗಮಿಸುವ ಯಾವುದೇ ವಾಹನಗಳಿಗೆ ಪ್ರವೇಶ ನೀಡದಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊರರಾಜ್ಯದಿಂದ ಆಗಮಿಸುವವರನ್ನು ಉಡುಪಿಯ ಎಂಜಿಎಂ ಮೈದಾನದಲ್ಲಿ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂದಪಟ್ಟ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುವುದು ಅಲ್ಲಿ ಅವರನ್ನು ಸರ್ಕಾರಿ ಕ್ವಾರಂಟೈನ್‌ಗಾಗಿ ವಿವಿಧ ಹಾಸ್ಟಲ್ ಗಳನ್ನು ನಿಗಧಿಗೊಳಿಸಿದ್ದು, ಹೋಟಲ್‌ಗಳನ್ನು ಸಹ ನಿಗಧಿಗೊಳಿಸಲಾಗಿದೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ವೈರಸ್ ಭೀತಿಯಿಂದ ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕುಂದಾಪುರದ ವೇದ ಗಣಿತ ಅಧ್ಯಯನ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿ(ಪಿ.ಎಂ. ಕೇರ‍್ಸ್)ಗೆ 5 ಲಕ್ಷ ರೂ. ದೇಣಿಗೆಯನ್ನು ವೇದ ಗಣಿತ ಅಧ್ಯಯನ ವೇದಿಕೆ ನಿರ್ದೇಶಕ ಡಾ. ಎಸ್. ಎನ್. ಪಡಿಯಾರ್ ಅವರು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ದಿನಕರ ಶೆಣೈ, ಪತ್ರಕರ್ತ ಸಂತೋಷ ಕೋಣಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಯು.ಎ.ಇನಲ್ಲಿರುವ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ ಮರಳಲು ಬಯಸಿದರೆ, ತಮ್ಮ ಹೆಸರನ್ನು ಕೆಎನ್‌ಆರ್‌ಐ ಫೋರಮ್-ಯುಎಇ (http://www.knriuae.com) ವೆಬ್ಸೈಟ್ ಹಾಗೂ ಯುಎಇ ಭಾರತೀಯ ರಾಯಭಾರಿ ಕಛೇರಿ (http://www.cgidubai.gov.in)ವೆಬ್ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ದುಬೈಯಲ್ಲಿ ಜಂಟಿಯಾಗಿ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುಎಇನ ವಿವಿಧ ರಾಜ್ಯಗಳಲ್ಲಿರುವ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು, ಸಂದರ್ಶನ ವಿಸಾದಲ್ಲಿ ಬಂದು ಹಿಂತಿರುಗಲು ಸಾಧ್ಯವಾಗದೆ ಇದ್ದವರು ಹಾಗೂ ವಯಸ್ಸಾದವರಿಗೆ ಕರ್ನಾಟಕಕ್ಕೆ ಹಿಂತಿರುಗಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಕೆಎನ್‌ಆರ್‌ಐ ವೆಬ್ಸೈಟ್‌ನಲ್ಲಿ ಹೆಸರು ನೊಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತ ರಾಯಬಾರಿ ಕಛೇರಿ ವೆಬ್ಸೈಟ್‌ನಲ್ಲಿಯೂ ತಮ್ಮ ಹೆಸರನ್ನು ನೊಂದಾಯಿಸಬೇಕು. ಕೆಎನ್‌ಆರ್‌ಐ ಫೋರಂ ಕರ್ನಾಟಕಕ್ಕೆ ಹಿಂದಿರುಗುವವರ ಮಾಹಿತಿ ಪಡೆದರೇ, ರಾಯಬಾರಿ ಕಚೇರಿ ಇಡೀ ಅನಿವಾಸಿ ಭಾರತೀಯರದ್ದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಹಿಂತಿರುಗಿ ಹೋಗಲು ವಿಮಾನ ಅಥವಾ ಹಡಗು ಅದರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೂಲಿ ಕಾರ್ಮಿಕರು, ಪ್ರವಾಸಿಗರು ಹಾಗೂ ಆರೋಗ್ಯ ಸಂಬಂಧಿ ಕಾರಣವನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಅಂತರ್ಜಿಲ್ಲಾ ಹಾಗೂ ಅಂತರಾಜ್ಯ ಪ್ರಯಾಣಕ್ಕೆ ಎ.17ರ ತನಕವೂ ಅವಕಾಶ ನೀಡಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ತೆರಳಬೇಕಿರುವ ಕೂಲಿ ಕಾರ್ಮಿಕರು, ಆರೋಗ್ಯ ಮತ್ತು ಇನ್ನಿತರ ತುರ್ತು ಕಾರಣಕ್ಕಾಗಿ ತೆರಳಬೇಕಾದವರಿಗೆ ಮಾತ್ರ ಸದ್ಯ ಅನುಮತಿ ನೀಡಲಾಗುತ್ತದೆ. ಬೇರೆ ರಾಜ್ಯಕ್ಕೆ ತೆರಳಬೇಕಾದವರು ಹಾಗೂ ಬೇರೆ ರಾಜ್ಯದಿಂದ ಬರಬೇಕಾದವರು ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆ ಬಳಿಕ ಅರ್ಜಿ ಪರಿಶೀಲಿಸಿ ಅವರಿಗೆ ಅನುಮತಿ ನೀಡಲಾಗುತ್ತದೆ. ಬದಲಾಗಿ ಜಿಲ್ಲಾಧಿಕಾರಿಗಳ ಕಛೇರಿ, ತಹಶೀಲ್ದಾರರ ಕಛೇರಿ ಎದುರು ಪಾಸ್‌ಗಾಗಿ ಕಾಯುವಂತಿಲ್ಲ ಎಂದವರು ತಿಳಿಸಿದ್ದಾರೆ. ಸೇವಾ ಸಿಂಧುವಿನಲ್ಲಿ ನೊಂದಣಿ ಹೇಗೆ? (ಹೊರ ರಾಜ್ಯ ಸಂಚಾರ ಮಾಡುವವರಿಗೆ) ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಲಾಕ್‌ಡೌನ್ ಕಾರಣದಿಂದಾಗಿ ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯಕ್ತಿಯೋರ್ವನಿಗೆ ಕೋರೋನಾ ಸೋಂಕು ಇರುವ ಬಗ್ಗೆ ಬೈಂದೂರಿನಾದ್ಯಂತ ಗಾಸಿಪ್ ಹರಿದಾಡುತ್ತಿದ್ದು, ಕೊರೋನಾ ಪಾಸಿಟಿವ್ ಇರುವುದು ಈವರೆಗೆ ದೃಢಪಟ್ಟಿಲ್ಲ ಎನ್ನಲಾಗಿದೆ. ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿರಿಸಿ ಆತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿಯ ನಿರೀಕ್ಷೆಯಲ್ಲಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಬೆಳಗಾವಿಯ ಕಾನಾಪುರದಿಂದ ಮೇ.1ರ ರಾತ್ರಿ ಬಂದಿದ್ದ ವ್ಯಕ್ತಿ ಬೈಂದೂರು ತಾಲೂಕಿನ ಕಳವಾಡಿಯ ಮನೆಗೆ ತೆರಳಿದ್ದ ಎನ್ನಲಾಗಿದೆ. ಬೆಳಗಾವಿಯಲ್ಲಿ ಆರೋಗ್ಯ ಇಲಾಖೆ ವ್ಯಕ್ತಿಯ ಆತನ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ ನೆಗೆಟಿವ್ ಬಂದಿದೆ. ಆದರೆ ಮೊಬೈಲ್‌ಗೆ ಬಂದಿರುವ ಸಂದೇಶದಿಂದ ಗೊಂದಲಕ್ಕೊಳಗಾದ ವ್ಯಕ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಬಂದಿದ್ದ. ಆತನನ್ನು ಕೂಡಲೇ ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಜೆಯೊಳಗೆ ವರದಿ ಕೈಸೇರುವ ಸಾಧ್ಯತೆ ಇದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/ ಇದನ್ನೂ ಓದಿ: ► ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯ ಕೋರೋನಾ ಟೆಸ್ಟ್ 2ನೇ ವರದಿಯೂ ನೆಗೆಟಿವ್ – https://kundapraa.com/?p=37410 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ವತಿಯಿಂದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ನರ್ಸ್‌ಗಳು ಹಾಗೂ ವಿವಿಧ ದರ್ಜೆ ನೌಕರರಿಗೆ ಸಂಸ್ಥೆಯ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಶುಕ್ರವಾರ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು. ಈ ಸಂದರ್ಭ ಅವರು ಮಾತನಾಡಿ ಕೋರೋನಾದಂತಹ ಮಾರಕ ಖಾಯಿಲೆಯನ್ನು ತಡೆಗಟ್ಟುವಲ್ಲಿ ಆರೋಗ್ಯ ಸಿಬ್ಬಂದಿಗಳ ಶ್ರಮ ದೊಡ್ಡದಿದೆ. ಸರಕಾರದೊಂದಿಗೆ ಅವಿರತವಾಗಿ ಸೇವೆಯಲ್ಲಿ ತೊಡಗಿಕೊಂಡು ಜನರನ್ನು ಸುರಕ್ಷಿತವಾಗಿಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು. ಈ ಸಂದರ್ಭ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕ ರಾಮಕೃಷ್ಣ ಖಾರ್ವಿ, ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಮಡಿವಾಳ, ಶಾಖಾ ಪ್ರಬಂಧಕ ನಾಗರಾಜ ಪಿ. ಯಡ್ತರೆ, ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಹಾಗೂ ಆಸ್ಪತ್ರೆಯ ವಿವಿಧ ವಿಭಾಗದ ವೈದ್ಯರು ಉಪಸ್ಥಿತರಿದ್ದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯದಲ್ಲಿಯೇ ಮೊದಲ ಭಾರಿಗೆ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕ ಕುಂದಾಪುರದಲ್ಲಿ ಸಿದ್ಧಗೊಂಡಿದ್ದು, ಗ್ರಾಮ ಮಟ್ಟದಲ್ಲಿ ಸುರಕ್ಷಿತವಾಗಿ ಕಾರ್ಯಾಚರಿಸಲು ಸನ್ನದ್ಧವಾಗಿದೆ. ಉಡುಪಿ ಜಿಲ್ಲಾಡಳಿತ ಈ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕವನ್ನು ಆರಂಭಿಸಿದ್ದು, ಕುಂದಾಪುರದಲ್ಲಿ ಮೊದಲ ಭಾರಿಗೆ ಸಂಚರಿಸಲಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆದ್ಯತೆಗೆ ಅನುಗುಣವಾಗಿ ಮಾದರಿ ಸಂಗ್ರಹ ಸಂಚಾರಿ ಘಟಕ ಕಾರ್ಯಾಚರಿಸಲಿದೆ. ಜಿಲ್ಲೆಯಲ್ಲಿ ಇನ್ನು ಕೆಲ ದಿನಗಳಲ್ಲಿ ಒಟ್ಟು ಮೂರು ಸಂಚಾರಿ ಘಟಕ ಆರಂಭಗೊಳ್ಳಲಿದ್ದು ಇನ್ನಿತರ ತಾಲೂಕುಗಳಲ್ಲಿಯೂ ಸಂಚರಿಸಲಿದೆ. ಹೇಗೆ ಕಾರ್ಯನಿರ್ವಹಣೆ: ಮಾರುತಿ ಆಮ್ನಿಯನ್ನು ಸಂಚಾರಿ ಘಟಕವಾಗಿ ಮಾರ್ಪಾಡು ಮಾಡಲಾಗಿದೆ. ಘಟಕದ ಒಳಭಾಗದಲ್ಲಿ ಸುರಕ್ಷಿತ ಚೇಂಬರ್ ನಿರ್ಮಿಸಲಾಗಿದ್ದು, ಓರ್ವ ಟೆಕ್ನಿಶಿಯನ್ ಕಾರ್ಯನಿರ್ವಹಿಸುತ್ತಾರೆ. ವಾಹನದ ಚಾಲಕನೇ ಸಹಾಯಕನಾಗಿಯೂ ತೊಡಗಿಸಿಕೊಳ್ಳಲಿದ್ದಾರೆ. ಸಂಚಾರಿ ಘಟಕದ ಹೊರಭಾಗದಲ್ಲಿ ಕೋವಿಡ್-19 ಶಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ ಬಳಿಕ…
