ಇ-ಪಾಸ್ ಮೂಲಕ ಮಾತ್ರ ಪಾಸ್‌ಗಳ ವಿತರಣೆ: ಜಿಲ್ಲಾಧಿಕಾರಿ ಜಿ. ಜಗದೀಶ್

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿಬಂದಾಜ್ಞೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿಬಂಧಿಸಲಾಗಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಆಥವಾ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವುದಕ್ಕೆ ನಿಬಂಧಗಳಿವೆ. ಅಲ್ಲದೇ ಈ ಬಗ್ಗೆ ಸಾರ್ವತ್ರಿಕವಾದ ಅನುಮತಿ ಇರುವುದಿಲ್ಲ, ಕೇವಲ ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಹೋಗ ಬೇಕಾದಲ್ಲಿ ಅಥವಾ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ ಮುಂತಾದ ಅಗತ್ಯ ಕರ್ತವ್ಯಕ್ಕೆ ಹಾಜರಾಗಲು ಅಂತರ್ ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಅರ್ಜಿಯನ್ನು ವೈದ್ಯಕೀಯ ಪ್ರಮಾಣ ಪತ್ರ, ಅಗತ್ಯ ಸೇವೆಗಳಾದಲ್ಲಿ ಐಡಿ ಕಾರ್ಡ್, ಸಂಸ್ಥೆಯು ಕಳುಹಿಸಿರುವ ಪತ್ರ ಮುಂತಾದ ದಾಖಲೆಗಳೊಂದಿಗೆ ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿದೆ.

Call us

Click Here

Click here

Click Here

Call us

Visit Now

Click here

ಹೀಗೆ ಸಲ್ಲಿಸಲಾದ ಕೋರಿಕೆಗಳನ್ನು ಅನ್‌ಲೈನ್ ಮುಖಾಂತರ ತಹಶೀಲ್ದಾರು ಪರಿಶೀಲಿಸಿ ಅನುಮೋದನೆಗಾಗಿ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ. ಅವರು ಅನ್‌ಲೈನ್ ಕೋರಿಕೆಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ.

ಆದರೂ ಸಹ ಸಾರ್ವಜನಿಕರು ಅನುಮತಿಗಾಗಿ ಜಿಲ್ಲಾಧಿಕಾರಿಯವರ ಕಛೇರಿಗೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ರೀತಿ ಅನುಮತಿಗಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ಗುಂಪು ಗುಂಪು ಆಗಿ ಬರುವುದು ನಿಬಂಧ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ದರಿಂದ ಮೇಲಿನ ಎರಡು ಉದ್ದೇಶಕ್ಕೆ ಪ್ರಯಾಣಿಸಬೇಕಾದ ಸಾರ್ವಜನಿಕರು ಇನ್ನು ಮುಂದೆ ಜಿಲ್ಲಾಧಿಕಾರಿಯವರ ಕಛೇರಿಗೆ ಅಲೆದಾಡದೆ ನೇರವಾಗಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಮೂಲಕ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು E-PASS ಮೂಲಕ ಪಡೆಯಲು ತಿಳಿಸಲಾಗಿದೆ.

ಮೇ 2ರಲ್ಲಿನ ಸರ್ಕಾರದ ಅದೇಶದಂತೆ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಲಾಕ್‌ಡೌನ್ ನಿಂದಾಗಿ ನಿಬಂದಿಸಲ್ಪಟ್ಟು ಹೊರ ಜಿಲ್ಲೆಗೆ ಹೋಗಬೇಕಾದ ವ್ಯಕ್ತಿಗಳು (stranded persons) “one-time one-day one-way pass”ನ್ನು ಜಿಲ್ಲಾಧಿಕಾರಿಗಳಿಂದ ಪಡೆಯಲು ಸಂಬಂಧಪಟ್ಟ ತಹಶೀಲ್ದಾರರ ಮುಖಾಂತರ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:
► ಹೊರ ರಾಜ್ಯದಿಂದ ಬಂದಲ್ಲಿ ಸರ್ಕಾರಿ ಕ್ವಾರಂಟೈನ್ ಕಡ್ಡಾಯ. ಅಗತ್ಯ ವಸ್ತು ಖರೀದಿ ಸಮಯ ವಿಸ್ತರಣೆ – https://kundapraa.com/?p=37292 .
► ಹೊರ ಜಿಲ್ಲೆ ಸಂಚಾರಕ್ಕಿಲ್ಲ ಅನುಮತಿ.ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .

Call us

4 thoughts on “ಇ-ಪಾಸ್ ಮೂಲಕ ಮಾತ್ರ ಪಾಸ್‌ಗಳ ವಿತರಣೆ: ಜಿಲ್ಲಾಧಿಕಾರಿ ಜಿ. ಜಗದೀಶ್

  1. Our business organization started to working in Hassan i want to join my work. How can i go udupi to hassan

  2. Work purpose I need pass am working in printing press so i have to go thats y i need pass from kundapura to Bangalore. Plz do the needful. Thank you

Leave a Reply

Your email address will not be published. Required fields are marked *

seven + 16 =