Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಜಾತ್ಯತೀತ ಜನತಾ ಪಕ್ಷದ ಧುರೀಣ ಮರವಂತೆಯ ಮನ್ಸೂರ್ ಇಬ್ರಾಹಿಂ ಮತ್ತು ಅವರ ಸಹೋದರರು ಲಾಕ್‌ಡೌನ್‌ನಿಂದ ಬಾಧಿತರಾದ ಸುಮಾರು 250 ಕುಟುಂಬಗಳಿಗೆ ಕೆಲವು ದಿನಗಳಿಗಾಗುವ ದವಸ, ಧಾನ್ಯ ಮತ್ತು ಅಡುಗೆ ಸಾಮಗ್ರಿಗಳಿರುವ ಕಿಟ್‌ಗಳನ್ನು ವಿತರಿಸಿದರು. ಅದರ ಭಾಗವಾಗಿ ಅಲ್ಲಿನ ೨೪ ರಿಕ್ಷಾ ಚಾಲಕರಿಗೆ ಶನಿವಾರ ಕಿಟ್ ಹಸ್ತಾಂತರಿಸುವ ಮೂಲಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ವಿತರಣೆಗೆ ಚಾಲನೆ ನೀಡಿ ಮನ್ಸೂರ್ ಕುಟುಂಬದ ಮಾನವೀಯ ಔದಾರ್ಯವನ್ನು ಶ್ಲಾಘಿಸಿದರು. ಊರಿನ ಆಶಾ ಕಾರ್ಯಕರ್ತರಿಗೆ ಹಾಗೂ ಆಯ್ದ ಬಡ ಕುಟುಂಬಗಳ ಮನೆಗೆ ತೆರಳಿ ಮನ್ಸೂರ್ ಸಹೋದರರು ಕಿಟ್‌ಗಳನ್ನು ನೀಡಿದರು.

Read More

ಕುಂದಾಪುರ ಉಪವಿಭಾಗದ 65ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎ.13ರಿಂದಲೇ ಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್ ಹೊರತಾಗಿಯು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ-ಮಾರುಕಟ್ಟೆಗೆ ಜನರು ತೆರಳುತ್ತಿರುವುದನ್ನು ತಡೆಯುವ ಸಲುವಾಗಿ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೇ ದಿನಬಳಕೆಯ ಸಾಮಾಗ್ರಿಗಳನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಎಪ್ರಿಲ್ 13ರ ಸೋಮವಾರದಿಂದಲೇ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋಟ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇಓ, ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಪ್ರತಿ ವಾರ್ಡಿನ ಒಬ್ಬರು ಸದಸ್ಯರನ್ನೊಳಗೊಂಡ ಕೋವಿಡ್ -19 ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು (ತರಕಾರಿ & ದಿನಸಿ) ತಲುಪಿಸಲಾಗುತ್ತದೆ. ಹೋಮ್ ಡೆಲಿವರಿ ಹೇಗೆ? ಎಲ್ಲಾ 65 ಗ್ರಾಮ ಪಂಚಾಯತ್‌ನ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪರಿಸರದ ಸೋಶಿಯಲ್ ಮೀಡಿಯಾ ಪೇಜ್ ‘ಟ್ರೋಲ್ ಕುಂದಾಪ್ರದ್ ಕುಡಿ’ ಕುಂದಾಪುರದ ಪ್ರತಿಭೆಗಳನ್ನು ಬೆಳಕಿಗೆ ತರುವ ಹಾಗೂ ಕುಂದಗನ್ನಡ ಪಸರಿಸುವ ನಿಟ್ಟಿನಲ್ಲಿ ಕುಂದಗನ್ನಡ ವಿಡಿಯೋ ಚಾಲೆಂಜ್ ಎಂಬ ಸೋಶಿಯಲ್ ಮೀಡಿಯಾ ಅಭಿಯಾನವನ್ನು ಆರಂಭಿಸಿದೆ. ‘ಟ್ರೋಲ್ ಕುಂದಾಪ್ರದ್ ಕುಡಿ’ಯ ಈ ವಿಭಿನ್ನ ಪ್ರಯತ್ನ ಕುಂದಗನ್ನಡ ವೀಡಿಯೋ ಚಾಲೆಂಜ್‌ಗೆ ಈಗಾಗಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕುಂದಗನ್ನಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮಾಡಿರುವ ಕುಂದಾಪುರ ಭಾಗದ ಕಲಾವಿದರೂ ಕೂಡ ಕುಂದಾಪ್ರ ಕನ್ನಡ ಚಾಲೆಂಜ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಕುಂದಾಪ್ರ ಕನ್ನಡ ಚಾಲೆಂಜ್‌ನಲ್ಲಿ ಭಾಗವಹಿಸುವವರು ಸ್ವದೇಶಿ ಆಪ್ ಹಾಗೂ ಮೊಬೈಲ್ ಕ್ಯಾಮರಾ ಬಳಸಿ ವಿಡಿಯೋ ಮಾಡಿ ಎಂದು ಪೇಜ್ ಅಡ್ಮಿನ್‌ಗಳು ಮನವಿ ಮಾಡಿಕೊಂಡಿದ್ದಾರೆ. ಜನರು ಬಿಡುವಿನ ಸಮಯದಲ್ಲಿ ಮನೋರಂಜನೆಗಾಗಿ ವಿಡಿಯೋ ಮಾಡಲು ಬೇರೆ ಬೇರೆ ಭಾಷೆಗಳಲ್ಲಿನ ಡೈಲಾಗ್ ಅಥವಾ ಹಾಡುಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದೇ ಪ್ರಯತ್ನವನ್ನು ನಮ್ಮ ಕುಂದಗನ್ನಡದಲ್ಲಿ ಮಾಡಿದಾಗ ಇತರರಿಗೂ…

Read More

ಕುಂದಾಪ್ರ ಡಾಟ್ ಕಾಂ ವರದಿ. ಉಡುಪಿ: ಬ್ರಹ್ಮಾವರದಲ್ಲಿನ ಮನೆಯಲ್ಲಿ ಇಬ್ಬರೇ ಇರುವ ವೃದ್ಧ ದಂಪತಿ, ಲಾಕ್ ಡೌನ್ ಕಾರಣ ಅಂಗಡಿಗಳು ಕ್ಲೋಸ್, ಮನೆಯಿಂದ ಹೊರ ಹೋಗುವ ಹಾಗಿಲ್ಲ, ಗಂಡನಿಗೆ ಸಕ್ಕರೆ ಕಾಯಿಲೆ ಜೊತೆಗೆ ಹೃದಯ ಸಂಬಂದಿ ಸಮಸ್ಯೆ, ದಂಪತಿಗೆ ಬ್ರೆಡ್ ಮತ್ತು ರಸ್ಕ್ ಅವಶ್ಯಕತೆಯಿದೆ, ಈ ಬಗ್ಗೆ ಸಮಸ್ಯೆ ಕೋರಿದ ದಂಪತಿಗೆ 20 ನಿಮಿಷದಲ್ಲಿ ಬ್ರೆಡ್ ಮತ್ತು ರಸ್ಕ್ ನೊಂದಿಗೆ ಅವರು ಕೋರಿದ ಇತರೆ ಅಗತ್ಯ ವಸ್ತುಗಳು ಯುವತಿಯೊಬ್ಬರಿಂದ ಪೂರೈಕೆಯಾಗುತ್ತದೆ.. ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿನ ರೋಗಿಗೆ ಅಗತ್ಯ ಔಷಧಿಗಳು ತುರ್ತಾಗಿ ಬೇಕಿದೆ, ಆ ಔಷದಗಳು ಉಡುಪಿಯಲ್ಲಿ ಮಾತ್ರ ದೊರೆಯುವುದು, ಮನೆಯಲ್ಲಿ ಉಡುಪಿಗೆ ಹೋಗಿ ಔಷಧ ತರುವ ವ್ಯಕ್ತಿಗಳು ಯಾರೂ ಇಲ್ಲ, ರೋಗಿಯ ಸಮಸ್ಯೆ ಅರಿತ ಯುವಕನಿಂದ ಅವರಿಗೆ ಸಕಾಲದಲ್ಲಿ ಅಗತ್ಯ ಔಷಧಗಳು ಪೂರೈಕೆಯಾಗುತ್ತವೆ.. ದಿನಸಿ ವಸ್ತುಗಳು ಮತ್ತು ಪಡಿತರ ವಿತರಣೆ ನಡೆಯುತ್ತಿದೆ, ಸರದಿಯಲ್ಲಿ ನಿಂತಿರುವ ಸಾರ್ವಜನಿಕರಿಲ್ಲಿ ಸಾಮಾಜಿಕ ಅಂತರ ಎಂಬುದೇ ಇಲ್ಲ, ಆದರೆ ಅಲ್ಲಿಗೆ ಆಗಮಿಸುವ ಒಬ್ಬ ವ್ಯಕ್ತಿ ಸರದಿಯಲ್ಲಿದ್ದ ಎಲ್ಲರಿಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೊರೋನಾ ವೈರಸ್ ತಡೆಗಟ್ಟುವಲ್ಲಿ ಉಡುಪಿ ಜಿಲ್ಲೆಯಲ್ಲಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಜಿಲ್ಲೆಯಲ್ಲಿ ವೈರಸ್ ಸರಪಣಿ ಕಡಿತಗೊಂಡು ಸಕಾರಾತ್ಮಕದ ಸ್ಪಂದನೆ ದೊರಕಿದ್ದು, ಜಿಲ್ಲೆಗೆ ದೊಡ್ಡ ರಿಲೀಫ್ ದೊರಕಿದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿದ್ದ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಮೂವ ವ್ಯಕ್ತಿಗಳೂ ಗುಣಮುಖರಾಗಿದ್ದು ಸದ್ಯದಲ್ಲೇ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆದರೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದ್ದು, ಜಿಲ್ಲೆಗೆ ಬರುವುದು ಮತ್ತು ಜಿಲ್ಲೆಯಿಂದ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಲಾಕ್‌ಡೌನ್ ಘೋಷಣೆಯಾದ ದಿನದಿಂದ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಮುತುವರ್ಜಿಯಿಂದಲೇ ಕಾರ್ಯನಿರ್ವಹಿಸಿದ್ದು, ಲಾಕ್‌ಡೌನ್ ಆದೇಶ ಪಾಲನೆಗೆ ಒತ್ತು ನೀಡುವುದರ ಜೊತೆಗೆ, ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆ ನಿವಾರಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಎಲ್ಲಾ ಕಟ್ಟುನಿಟ್ಟಿನ ಕ್ರಮದಿಂದಾಗಿ ಉಡುಪಿ ಜಿಲ್ಲೆ ದೊಡ್ಡ ಗಂಡಾಂತರದಿಂದ ಪಾರಾಗಿದ್ದು, ಲಾಕ್‌ಡೌನ್ ಬಳಿಕವೂ ಹಂತ ಹಂತವಾಗಿ ನಿರ್ಬಂಧ ತೆರವುಗೊಳಿಸಿದರೆ ಕೊರೋನಾ ಆತಂಕದಿಂದ ಸಂಪೂರ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ, ಪಡುಕೋಣೆಯ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಬೈಂದೂರು ತಾಲೂಕಿನ ನಾಡ ಗ್ರಾಮದ ಪಡುಕೋಣೆ ಸಂತ ಅಂತೋನಿ ಚರ್ಚ್‌ನಲ್ಲಿ ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಬಗ್ಗೆ ಸಾರ್ವಜನಿಕ ದೂರವಾಣಿ ಕರೆಯ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಾರ್ಥನೆ ಸಲ್ಲಿಸುತ್ತಿದ್ದ ಚರ್ಚ್‌ನ ಫಾದರ್ ಫ್ರೆಡ್ ಮಸ್ಕರಿಯನ್ ಹಾಗೂ ಇತರ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ವೈರಸ್ ತಡೆಗಟ್ಟುವಿಕೆ ನಿಟ್ಟಿನಲ್ಲಿ ಜಾತ್ರೆ, ಸಭೆ ಸಮಾರಂಭಗಳು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ, ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರಿಂದ ಬೈಂದೂರು ತಹಶಿಲ್ದಾರ್ ಬಸಪ್ಪ ಪಿ. ಪೂಜಾರಿ ಅವರು ನೀಡಿದ ದೂರಿನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ ಹಾಪ್‌ಕಾಮ್ಸ್, ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುವಾಗುವಂತೆ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಹಾಪ್‌ಕಾಮ್ಸ್ ಮಳಿಗೆ ತೆರೆದಿರಲು ಜಿಲ್ಲಾಧಿಕಾರಿ ಜಿ. ಜಗದೀಶ್ ಅನುಮತಿ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿನ ಉಡುಪಿ ನಗರ, ಉಪ್ಪುಂದ ಹಾಗೂ ಕಾರ್ಕಳ ಆಸ್ಪತ್ರೆ ಆವರಣದಲ್ಲಿರುವ ಹಾಪ್ ಕಾಮ್ಸ್ ಮಳಿಗೆಗಳನ್ನು ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ತೆರೆಯುವುದು ಹಾಗೂ ಮಳಿಗೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯವರಿಗೆ ಕೋವಿಡ್-19 ಸೊಂಕು ತಗಲಿರುವುದಿಲ್ಲ ಹಾಗೂ ಸದರಿ ರೋಗ ಲಕ್ಷಣಗಳಿರುವುದಿಲ್ಲ ಎಂಬ ಬಗ್ಗೆ ದೃಢೀಕರಿಸಿಕೊಂಡು ಅವರಿಂದ ಸೇವೆ ಪಡೆದುಕೊಳ್ಳಬೇಕು. ಕೋವಿಡ್-19 ಸೊಂಕು ಹರಡದಂತೆ ಅಗತ್ಯ ಮುಂಜಾಗೃತಾ ಕ್ರಮಗಳಾದ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು , ಮಳಿಗೆಗಳಲ್ಲಿ ಮಾರಾಟ ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿರತಕ್ಕದ್ದು ಹಾಗೂ ನೈಜ ದರಗಳಲ್ಲಿ ಮಾರಾಟ ಮಾರಾಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹುಟ್ಟೂರು ಕೆರಾಡಿಯಲ್ಲಿ ವಾಸವಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಮಗ ರಣ್ವಿತ್ ಶೆಟ್ಟಿಯ ಹುಟ್ಟುಹಬ್ಬವನ್ನು ಸರಳ ಹಾಗೂ ಪಕ್ಕಾ ಗ್ರಾಮೀಣ ಸೊಗಡಿನೊಂದಿಗೆ ಆಚರಿಸಿ ಗಮನ ಸೆಳೆದಿದ್ದಾರೆ. ಮಗ ರಣ್ವಿತ್ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು ತಮ್ಮ ಮನೆಯ ಸುತ್ತಲಿನ ತೋಟದ ತೆಂಗು, ಅಡಿಕೆಯ ಹಿಂಗಾರ, ಬಾಳೆಗೋನೆ, ಹಲಸು, ಹೂ, ಹಣ್ಣುಗಳನ್ನೇ ಬಳಸಿಕೊಂಡು ಚಂದದ ವೇದಿಕೆ ನಿರ್ಮಿಸಿ, ಹಳೆಯ ವಸ್ತುಗಳಿಂದ ಅಲಂಕರಿಸಿ, ಮನೆಯಲ್ಲಿಯೇ ತಯಾರಿಸಿದ ಕೇಕ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇನ್ನು ಹುಟ್ಟುಹಬ್ಬದಲ್ಲಿ ಅವರ ಕುಟುಂಬದವರು ಮಾತ್ರವೇ ಪಾಲ್ಗೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಎ.7ರಂದು ಮಗನ ಹುಟ್ಟುಹಬ್ಬದ ಸಂಭ್ರಮವನ್ನು ರಿಷಬ್ ಶೆಟ್ಟಿ ಹಾಗೂ ಅವರ ಮಡದಿ ಪ್ರಗತಿ ರಿಷಬ್ ಶೆಟ್ಟಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದು, ಒಂದು ವೀಡಿಯೋವನ್ನು ಕೂಡ ರಿಲೀಸ್ ಮಾಡಿದ್ದರು. ಈ ಬಗ್ಗೆ ತಮ್ಮ ಫೇಸ್ಬುಕ್ ಖುಷಿ ಹಂಚಿಕೊಂಡಿರುವ ರಿಷಬ್, “ವರುಷದ ಹಿಂದೆ ಈ ದಿನ, ನನ್ನೊಳಗೊಬ್ಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಬಿಜೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬಿಜೂರು ರೈಲ್ವೆ ಗೇಟ್ 74ರ ಸಮೀಪ ರೈಲು ಡಿಕ್ಕಿಯಾಗಿ 9 ಜಾನುವಾರು ಸಾವನ್ನಪ್ಪಿದ ಘಟನೆ ನಡೆದಿದೆ. ಬಿಜೂರು ಮೂರ್ಗೊಳಿಹಕ್ಲು ದೈವಸ್ಥಾನದ ಎದುರಿನ ರೈಲ್ವೆ ಹಳಿಯ ಮೇಲೆ ಜಾನುವಾರುಗಳು ಒಂದರ ಹಿಂದೆ ಒಂದರಂತೆ ನಡೆದುಕೊಂಡು ಹೋಗುತ್ತಿರುವಾಗ ಗೋವಾದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಜಾನುವಾರುಗಳು ಸಾವನ್ನಪ್ಪಿದೆ. ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ ಮಾರ್ಗದರ್ಶನದಲ್ಲಿ ಸ್ಥಳೀಯರು ಜೆಸಿಬಿ ಮೂಲಕ ಹೊಂಡ ತೆಗೆದು ಹೂತುಹಾಕಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಲಾಕ್‌ಡೌನ್ ಹಿನ್ನಲೆಯಲ್ಲಿ ನೂರಾರು ಅಸಹಾಯಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಾ ನೆರವಿನ ಹಸ್ತ ಚಾಚುತ್ತಿರುವ ಗಂಗೊಳ್ಳಿಯ ’ಸೇವಾ ಸಂಕಲ್ಪ’ ತಂಡದ ಕಾರ್ಯವನ್ನು ಮೆಚ್ಚಿ ೨೫ ಕುಟುಂಬಗಳಿಗೆ ದೈನಂದಿನ ವಸ್ತುಗಳ ಕಿಟ್‌ಗಳನ್ನು ನೀಡಲು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨೫ ಸಾವಿರ ರೂ.ಗಳನ್ನು ನೀಡಿದೆ. ಸಹಕಾರಿ ಗುಜ್ಜಾಡಿ ಶಾಖೆಯಲ್ಲಿ ಚೆಕ್‌ನ್ನು ಹಸ್ತಾಂತರಿಸಿ ಮಾತನಾಡಿದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಸೇವಾ ಮನೋಭಾವದಿಂದ ಹುಟ್ಟಿಕೊಂಡ ಈ ಸಂಘಟನೆಯು ಸಹೃದಯಿ, ನಿಸ್ವಾರ್ಥ ದಾನಿಗಳ ನೆರವಿನೊಂದಿಗೆ ಬಡ ಕುಟುಂಬಗಳಿಗೆ ಅಗತ್ಯವಿರುವ ದೈನಂದಿನ ವಸ್ತುಗಳ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸೇವಾ ಸಂಕಲ್ಪ ತಂಡದ ಚರಣ್ ಖಾರ್ವಿ, ಕಾರ್ತಿಕ್ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗೋಪಾಲ ಪೂಜಾರಿ, ಗಿರೀಶ ಖಾರ್ವಿ, ದಿನಕರ ಪೂಜಾರಿ, ಸಹಕಾರಿಯ ಗುಜ್ಜಾಡಿ ಶಾಖಾ ಪ್ರಬಂಧಕ ವಿಷ್ಣು ಪೂಜಾರಿ, ಸಹಕಾರಿಯ ಸಿಬ್ಬಂದಿಗಳಾದ ರಜತ್ ಸಿ.ಎಸ್.ಪೂಜಾರಿ, ಭಾರತಿ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.

Read More