Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ವೈದ್ಯರು / ತಜ್ಞರು: 10 ಹುದ್ದೆಗಳು (ವೇತನ 60,000) ವಿದ್ಯಾರ್ಹತೆ: ಎಂಬಿಬಿಎಸ್/ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿವಿ ಯಿಂದ ಪದವಿ ಆಗಿರಬೇಕು), ಶುಶ್ರೂಶಕರು: 20 ಹುದ್ದೆಗಳು (ವೇತನ 20,000), ವಿದ್ಯಾರ್ಹತೆ : ಕರ್ನಾಟಕ ಸರ್ಕಾರದ ನೊಂದಾಯಿತ ಸಂಸ್ಥೆಗಳಿಂದ ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ, ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅರ್ಜಿಯೊಂದಿಗೆ ವಿದ್ಯಾರ್ಹತೆಗೆ ಸಂಬಂದಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ಜನ್ ಅವರ ಮೊಬೈಲ್ ಸಂ. 9449843181 ಅಥವಾ ಜಿಲ್ಲಾ ಸರ್ಜನರ ಕಚೇರಿಯನ್ನು ಸಂಪರ್ಕಿಸಬಹುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ವತಿಯಿಂದ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು ಹಾಗೂ ನರ್ಸ್‌ಗಳಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ರೂ. 20,000ವನ್ನು ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ನಳೀನ ಕುಮಾರ್, ಶಂಕರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಬಶೀರ್, ನಿರಂಜನ್ ಶೆಟ್ಟಿ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ತಾಲೂಕಿನ ಶಿರಿಯಾರ ಹಾಗೂ ಕುಂದಾಪುರ ತಾಲೂಕಿನ ಯಡ್ಯಾಡಿ- ಮತ್ಯಾಡಿ ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಿಗೆ, ಭಂಡಾರ್‌ಕಾರ‍್ಸ್ ಕಾಲೇಜು 93-94ರ ಸಾಲಿನ ಪಿಯುಸಿ ಸ್ನೇಹಿತರು ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಕೊಲ್ಲುಕೋರೆ ಕೆಲಸ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಕುಟುಂಬಗಳು ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದು, ಲಾಕ್‌ಡೌನ್ ಬಳಿಕ ಅವರ ಸ್ಥಿತಿ ದುಸ್ಥರವಾಗಿರುವುದನ್ನು ಅರಿತು ೨೫ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಣೆ ಮಾಡಲಾಗುತ್ತಿದೆ. ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರ ಮಾರ್ಗದರ್ಶನದಲ್ಲಿ ಪಡಿತರ ವಿತರಿಸುವ ಎಲ್ಲಾ ಶಾಖೆಗಳಲ್ಲಿಯೂ ಪ್ರತಿದಿನ ವಾರ್ಡುವಾರು ಜನರಿಗೆ ಬರಲು ತಿಳಿಸಲಾಗಿದ್ದು ಅದರಂತೆಯೇ ವಿತರಲಿಸಲಾಗುತ್ತಿದೆ. ಯಾವುದೇ ಗೊಂದಲವಿಲ್ಲದೇ ಜನರು ಪಡಿತರ ಪಡೆಯುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಾದ್ಯಂತ ಲಾಕ್‌ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಹಾಲನ್ನು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅರ್ಹರಿಗೆ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಬೈಂದೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ದ. ಕ. ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹಾಲಿನ ಪ್ಯಾಕೇಟ್ ವಿತರಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಳೆದೆರಡು ದಿನಗಳಿಂದ ಹಾಲಿನ ಮಾರುಕಟ್ಟೆ ಕುಸಿಯುತ್ತಿರುವ ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಒಕ್ಕೂಟ ಖರೀದಿಸಿದ ಸುಮಾರು 4,08,000 ಲೀ ಹಾಲಿನಿಂದ ಅಂದಾಜು 3.5 ಲಕ್ಷ ಲೀ. ಹಾಲು ಮೊಸರು, ಮಜ್ಜಿಗೆ ರೂಪದಲ್ಲಿ ಮಾರಾಟವಾಗಿದ್ದು, ಸುಮಾರು ಒಂದು ಲಕ್ಷ ಲೀ. ಹಾಲು ಮಾರುಕಟ್ಟೆಯ ಸಮಸ್ಯೆ ಎದುರಿಸುತ್ತಿದೆ. ಕಳೆದ ಒಂದು ವಾರದ ಹಿಂದೆ ಸುಮಾರು 6 ಲಕ್ಷ ಲೀ ಹಾಲು ಸಂಗ್ರಹವಾಗಿದ್ದು, ಪೌಡರ್ ಮಾಡಿ ಪರಿವರ್ತಿಸಲೂ ಸಾಧ್ಯವಾಗದೇ ಒಂದುವರೆ ದಿನ ಹಾಲನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಒಂದು ದಿನ 4.10ಲಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಜಮುತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಗಂಗೊಳ್ಳಿ ಪರಿಸರದ ಸುಮಾರು 600 ಕುಟುಂಬಗಳಿಗೆ  ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು. ಗಂಗೊಳ್ಳಿ ಜಮುತುಲ್ ಮುಸ್ಲಿಮೀನ್ ಕಮಿಟಿ ಅಧ್ಯಕ್ಷರಾದ ಪಿ. ಎಂ. ಹಸೈನರ್ ನೇತೃತ್ವದ ತಂಡವು ಅಗತ್ಯವುಳ್ಳ ಸರ್ವಧರ್ಮಿಯರಿಗೂ ಈ ಕಿಟ್ ವಿತರಿಸಿರುವುದಾಗಿ ತಿಳಿಸಿದೆ.

Read More

ಲಾಕ್‌ಡೌನ್ ಸಂದರ್ಭದಲ್ಲಿ ದೇಶದಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳು ನಿರಂತರವಾಗಿ ಸಾಗಲು ನಿರಂತರವಾಗಿ ಸಾಗಲು ಭಾರತ ಸರಕಾರದ ಮಾರ್ಗಸೂಚಿಗಳು ನೀಡಿದ್ದು, ಆದೇಶವನ್ನು ಜಾರಿಗೆ ತರುವಂತೆ ರಾಜ್ಯ ಸರಕಾರದ ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಈ ಕೆಳಗಿನ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳು ಹೊರತಾಗಿವೆ: i. ಪಶು ಚಿಕಿತ್ಸಾ ಆಸ್ಪತ್ರೆಗಳು. ii. ಕನಿಷ್ಟ ಬೆಂಬಲ ಬೆಲೆ ನೀಡುವ ಸಂಸ್ಥೆಗಳು ಸಹಿತವಾಗಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಂಸ್ಥೆಗಳು. iii. ರಾಜ್ಯ ಸರ್ಕಾರದ ಪರವಾನಗಿ ಪಡೆದಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆಯುವ ಮಂಡಿಗಳು. iv. ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಂದ ನಡೆಯುವ ಕೃಷಿ ಚಟುವಟಿಕೆಗಳು. v. ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರಗಳು. vi. ರಸಗೊಬ್ಬರಗಳು, ಕ್ರಿಮಿನಾಶಕಗಳು ಹಾಗೂ ಬೀಜಗಳ ಉತ್ಪಾದನಾ ಮತ್ತು ಪ್ಯಾಕ್ ಮಾಡುವ ಕೇಂದ್ರಗಳು. vii. ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಂದ ಕೊಯ್ಲಿಗೆ ಹಾಗೂ ಬಿತ್ತನೆಗಾಗಿ ಬಳಸುವ ಕೊಯ್ಲು ಯಂತ್ರಗಳುಮತ್ತುಕೃಷಿ ಹಾಗೂ ತೋಟಗಾರಿಕೆಗೆ ಬಳಸುವ ಉಪಕರಣಗಳ ಸಾಗಾಣಿಕೆ ಚಲನವಲನಗಳು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ, ಪ್ರಯುಕ್ತ ತೋಟಗಾರಿಕೆ ಬೆಳೆಗಾರರು ತಾವು ಬೆಳೆದ, ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ, ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯ ಅನೇಕ ರೈತರುಗಳು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ಸು ಮುಂತಾದ Perishable ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದು, ಸದರಿ ಬೆಳೆಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾದ್ಯವಾಗದೆ ಸಂಕ? ಅನುಭವಿಸುತ್ತಿದ್ದು, ಉಡುಪಿ ಜಿಲ್ಲೆಯ ರೈತರು ಬೆಳೆದ ಉತ್ಪನ್ನಗಳನ್ನು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರವನ್ನು ಒದಗಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 1732 ಮೆ.ಟನ್ ಅನಾನಸ್ಸು, ಉತ್ಪಾದನೆಯಾಗುವ ಹಾಗೂ ಮಾರುಕಟ್ಟೆಯಾಗದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಆಡಳಿತ ಕಛೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ನಲ್ಲಿರುವವರ ವಿವರ, ವಿದೇಶ, ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರ ವಿವರವನ್ನು ಕಲೆಹಾಕುತ್ತಿರುವ ರೀತಿ, ಚಿಕಿತ್ಸಾ ಹಂತಗಳು, ಕೊವೀಡ್ ರೋಗಿಗಳ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂಧಿಗಳಿಗೆ ಅಗತ್ಯವಿರುವ ಕಿಟ್, ಕ್ಷೇತ್ರ ವ್ಯಾಪ್ತಿಯಲ್ಲಿ ಪಡಿತರ ವಿತರಿಸಲಾಗುತ್ತಿರುವ ಕ್ರಮ, ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪಡಿತರ, ಪೊಲೀಸ್ ಇಲಾಖೆಯ ಭದ್ರತಾ ಕಾರ್ಯ, ಕೃಷಿ ಸಂಬಂಧಿತ ತೊಡಕುಗಳು, ಬೆಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮೊದಲಾದವುಗಳ ಬಗೆಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡು, ಪರಿಣಾಮಕಾರಿಯಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ದೇಶದಾದ್ಯಂತ ವ್ಯಾಪಕವಾಗಿ ಕೋವಿಡ್-19 ಹರಡುತ್ತಿರುವ ಹಿನ್ನೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಘೋ?ಣೆಯಾಗಿರುವುದರಿಂದ, ರೈತರಿಗೆ ಕೃಷಿ ಪರಿಕರಗಳ ಲಭ್ಯತೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಪೀಡೆನಾಶಕಗಳು, ಕೃಷಿ ಕೊಯ್ಲು ಯಂತ್ರೋಪಕರಣಗಳ ಸಾಗಣೆಯಲ್ಲಿ ಕೆಳಗಿನಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಗೊಬ್ಬರ, ಪೀಡೆನಾಶಕ, ಹಾಗೂ ಕೃಷಿ ಯಂತ್ರೋಪಕರಣಗಳು ಸೇರುವುದರಿಂದ, ಸದರಿ ಪರಿಕರಗಳ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ತಪ್ಪದೆ ಪಾಲಿಸಲು ಸಂಬಂಧಿಸಿದ ವಿತರಕರಿಗೆ ಕಡ್ಡಾಯಗೊಳಿಸುವುದು. ವಿತರಣಾ ಸಮಯದಲ್ಲಿ ಗೊಂದಲಗಳಿಗೆ ಎಡೆಮಾಡದೆ, ಕೃಷಿ ಪರಿಕರಗಳ ವಿತರಣೆಗಾಗಿ ಅನುಮತಿ ಚೀಟಿಯನ್ನು ಅಧಿಕೃತ ಮಾರಾಟ/ವಿತರಕರಿಗೆ ನೀಡಲು ಕ್ರಮ ಕೈಗೊಳ್ಳುವುದು. ಪರಿಕರಗಳನ್ನು ಖರೀದಿಸುವ ವೇಳೆಯಲ್ಲಿ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರಾಟ…

Read More