ಕೋವಿಡ್-19 ಸಂಧಿಗ್ಧ ಸಂದರ್ಭದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳು

Call us

Call us

Call us

ಲಾಕ್‌ಡೌನ್ ಸಂದರ್ಭದಲ್ಲಿ ದೇಶದಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳು ನಿರಂತರವಾಗಿ ಸಾಗಲು ನಿರಂತರವಾಗಿ ಸಾಗಲು ಭಾರತ ಸರಕಾರದ ಮಾರ್ಗಸೂಚಿಗಳು ನೀಡಿದ್ದು, ಆದೇಶವನ್ನು ಜಾರಿಗೆ ತರುವಂತೆ ರಾಜ್ಯ ಸರಕಾರದ ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ.

Call us

Click Here

ಲಾಕ್‌ಡೌನ್‌ನಿಂದಾಗಿ ಈ ಕೆಳಗಿನ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳು ಹೊರತಾಗಿವೆ:
i. ಪಶು ಚಿಕಿತ್ಸಾ ಆಸ್ಪತ್ರೆಗಳು.
ii. ಕನಿಷ್ಟ ಬೆಂಬಲ ಬೆಲೆ ನೀಡುವ ಸಂಸ್ಥೆಗಳು ಸಹಿತವಾಗಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಂಸ್ಥೆಗಳು.
iii. ರಾಜ್ಯ ಸರ್ಕಾರದ ಪರವಾನಗಿ ಪಡೆದಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಡೆಯುವ ಮಂಡಿಗಳು.
iv. ಕೃಷಿಕರು ಹಾಗೂ ಕೃಷಿ ಕಾರ್ಮಿಕರಿಂದ ನಡೆಯುವ ಕೃಷಿ ಚಟುವಟಿಕೆಗಳು.
v. ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರಗಳು.
vi. ರಸಗೊಬ್ಬರಗಳು, ಕ್ರಿಮಿನಾಶಕಗಳು ಹಾಗೂ ಬೀಜಗಳ ಉತ್ಪಾದನಾ ಮತ್ತು ಪ್ಯಾಕ್ ಮಾಡುವ ಕೇಂದ್ರಗಳು.
vii. ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಂದ ಕೊಯ್ಲಿಗೆ ಹಾಗೂ ಬಿತ್ತನೆಗಾಗಿ ಬಳಸುವ ಕೊಯ್ಲು ಯಂತ್ರಗಳುಮತ್ತುಕೃಷಿ ಹಾಗೂ ತೋಟಗಾರಿಕೆಗೆ ಬಳಸುವ ಉಪಕರಣಗಳ ಸಾಗಾಣಿಕೆ ಚಲನವಲನಗಳು.

ಪ್ರಸ್ತುತ ದೇಶದೆಲ್ಲೆಡೆ ಲಾಕ್‌ಡೌನ್ ಇರುವಾಗ, ಈ ರಿಯಾಯಿತಿಗಳು ಕೃಷಿ ಹಾಗೂ ಪೂರಕ ಚಟುವಟಿಕೆಗಳು ಅನಿರ್ಬಂಧಿತವಾಗಿ ಸಾಗಲು ಸಹಾಯ ಮಾಡುತ್ತವೆ ಹಾಗೂ ಅಗತ್ಯ ಸಾಮಾಗ್ರಿಗಳು ಕೃಷಿಕರಿಗೆ ದೊರೆತು, ಅವರು ಅನಗತ್ಯ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುತ್ತವೆ. ಅಗತ್ಯ ಆದೇಶಗಳನ್ನು ಸಂಬಂಧಿತ ಮಂತ್ರಾಲಯಗಳಿಗೆ, ರಾಜ್ಯ ಸರ್ಕಾರ ಇಲಾಖೆಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳಿಗೆ ಮೇಲಿನ ರಿಯಾಯಿತಿಗಳನ್ನು ಜಾರಿಗೆ ತರಲು ಈಗಾಗಲೇ ನೀಡಲಾಗಿದೆ.

ಭಾರತ ಸರ್ಕಾರದ ನಿಯಮ ನಿರ್ದೇಶನಗಳಿಗನುಸಾರವಾಗಿ, ರಾಜ್ಯ ಸರ್ಕಾರಗಳ ವಿವಿಧ ಮಂತ್ರಾಲಯಗಳು/ಇಲಾಖೆಗಳು ಅಗತ್ಯ ಮಾರ್ಗಸೂಚಿಗಳನ್ನು ಜಾರಿಗೆ ತರಲು ಆದೇಶಗಳನ್ನು ನೀಡಿದ್ದು, ಕೃಷಿ ಹಾಗೂ ಪೂರಕ ಚಟುವಟಿಕೆಗಳು ನಿರಂತರವಾಗಿ ಸಾಗಲು ಸಹಾಯ ಮಾಡಲಿವೆ.

ಕೃಷಿಕರಿಗೆ ಸಲಹೆಗಳು:

Click here

Click here

Click here

Click Here

Call us

Call us

ಬೆಳೆಗಳ ಕೊಯ್ಲು ಹಾಗೂ ಒಕ್ಕಣೆ:
ಕೋವಿಡ್-19 ವಿಷಮ ಪರಿಸ್ಥಿತಿಯ ನಡುವೆ ಹಿಂಗಾರಿನ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದಿರುತ್ತವೆ. ಈ ಸನ್ನಿವೇಶದಲ್ಲಿಯೇ ಕೃಷಿ ಬೆಳೆಗಳನ್ನು ಕೊಯ್ಲು ಮಾಡಿ ಸಂಗ್ರಹಿಸಿ ಮಾರುಕಟ್ಟೆಗೆ ಸಾಗಿಸುವುದು ಅನಿವಾರ್ಯ ಅಗತ್ಯಗಳಲ್ಲೊಂದು. ಏಕೆಂದರೆ ಈ ಎಲ್ಲಾ ಚಟುವಟಿಕೆಗಳು ಸಂದರ್ಭಾನುಸಾರ ಕಾಲಕ್ಕೆ ತಕ್ಕಂತೆ ಮಾಡಬೇಕಾದವು. ಆದರೆ, ಕೃಷಿಕರು ಕೆಲವು ಅತ್ಯಂತ ಅಗತ್ಯ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಈ ಭೀಕರ ರೋಗದ ಪ್ರಸಾರ ತಡೆಗಟ್ಟಲೇಬೇಕು. ಸರಳ ಮಾರ್ಗಗಳಾದ, ಸಾಮಾಜಿಕ ದೂರವಿರುವಿಕೆ, ವೈಯಕ್ತಿಕ ಶುಚಿತ್ವವನ್ನು ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಕಾಪಾಡಿಕೊಳ್ಳುವುದು, ಮುಖ ಗವುಸು ಧರಿಸುವುದು, ಸುರಕ್ಷಿತ ಬಟ್ಟೆಗಳನ್ನು ಧರಿಸುವುದು (ಪೂರ್ಣದೇಹ ಮುಚ್ಚುವಂಥಹ), ಹಾಗೂ ಯಂತ್ರೋಪಕರಣಗಳನ್ನು ತೊಳೆದು ಶುದ್ಧವಾಗಿಟ್ಟುಕೊಳ್ಳುವುದು ಇವುಗಳನ್ನು ತಪ್ಪದೇ ಪಾಲಿಸಬೇಕು. ಕೆಲಸಗಾರರು ಸುರಕ್ಷತಾ ಕ್ರಮಗಳನ್ನು ಹಾಗೂ ಸಾಮಾಜಿಕ ದೂರವಿರುವಿಕೆಯನ್ನು ಕ್ಷೇತ್ರ ಮಟ್ಟದ ಪ್ರತಿ ಹಂತದ ಚಟುವಟಿಕೆಗಳ ಕ್ರಿಯೆಯಲ್ಲಿತಪ್ಪದೇ ಪಾಲಿಸತಕ್ಕದ್ದು. ಕುಂದಾಪ್ರ ಡಾಟ್ ಕಾಂ ಲೇಖನ.

ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಗೋಧಿ ಬೆಳೆಯ ಕೊಯ್ಲು ಹತ್ತಿರ ಬಂದಿದೆ ಮತು ಅದಕ್ಕಾಗಿ ಅಗತ್ಯವಿರುವ ಸಂಯುಕ್ತಕೊಯ್ಲು ಯಂತ್ರಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದೆ (ಒಳ ಹಾಗೂ ಹೊರ ರಾಜ್ಯಗಳಿಂದ ಕೂಡ). ಈ ಸಂದರ್ಭದಲ್ಲಿ ಯಂತ್ರಗಳ ರಿಪೇರಿ, ನಿರ್ವಹಣೆ ಹಾಗೂ ಕೊಯ್ಲು ಕಾರ್ಯ ಮಾಡುವ ಕಾರ್ಮಿಕರ ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮಗಳನ್ನು ತಪ್ಪದೇ ಗಮನಿಸಬೇಕು.

ಸಾಸಿವೆ, ಹಿಂಗಾರು/ಚಳಿಗಾಲದ ಮತೊಂದು ಪ್ರಮುಖ ಬೆಳೆ ಮತ್ತು ಅದರ ಕೊಯ್ಲು ಕೆಲಸಗಾರಿಂದ ಆರಂಭಗೊಂಡಿದ್ದು, ಕೆಲವೆಡೆಕೊಯ್ಲು ಮುಗಿದು ಒಕ್ಕಣೆ ಮಾತ್ರ ಬಾಕಿ ಉಳಿದಿದೆ.

ಕಬ್ಬು ಬೆಳೆಯ ಕೊಯ್ಲು ಚುರುಕುಗೊಂಡಿದ್ದು, ಸದ್ಯದಲ್ಲಿಯೇಉತ್ತರ ಭಾರತದಲ್ಲಿ ಕಾರ್ಮಿಕರಿಂದ ಬಿತ್ತನೆಕಾರ್ಯವೂ ಆರಂಭಗೊಳ್ಳಲಿದೆ.

ಹೊಲದ ಬೆಳೆಗಳು, ಹಣ್ಣುಗಳು, ತರಕಾರಿಗಳು, ಮೊಟ್ಟೆಗಳು ಹಾಗೂ ಮೀನುಗಳ ಕೊಯ್ಲಿನಲ್ಲಿತೊಡಗಿರುವ ಕೆಲಸಗಾರರು ವೈಯಕ್ತಿಕ ಶುಚಿತ್ವ ಮತ್ತು ಸಾಮಾಜಿಕದೂರವಿರುವಿಕೆಯನ್ನುಕೊಯ್ಲಿನ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ಪಾಲಿಸತಕ್ಕದ್ದು.

ಕಾರ್ಮಿಕರೇ ಕೊಯ್ಲು ಮಾಡುವ ಬೆಳೆಗಳಿಗೆ, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4-5 ಅಡಿ ಅಂತರ ಕಾಯ್ದುಕೊಳ್ಳುವಂತೆ ಕೆಲಸಗಾರರಿಗೆ ಸೂಚಿಸಬೇಕು, ಇದರಿಂದ ಅಗತ್ಯವಿರುವ ಅಂತರವನ್ನು ಇಬ್ಬರು ಕಾರ್ಮಿಕರ ನಡುವೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಈ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವವರೆಲ್ಲ ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಹಾಗೂ ಮುಖ ಗವಸವನ್ನು ತಪ್ಪದೇ ಧರಿಸಿರಬೇಕು.

ವ್ಯಕ್ತಿಯಿಂದ ವ್ಯಕ್ತಿಗೆ ೩-೪ ಅಡಿಗಳ ಅಂತರವನ್ನು ವಿಶ್ರಾಂತಿ ಸಮಯದಲ್ಲಿ, ಆಹಾರ ಸೇವನೆಯ ಸಂದರ್ಭದಲ್ಲಿ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವಾಗ, ಇಳಿಸುವಾಗ/ಹೊತ್ತೊಯ್ದು ಅಡಕಿಸುವಾಗ ಹೀಗೆ ಪ್ರತಿ ಹಂತದಲ್ಲೂ ಸುರಕ್ಷಿತಾ ದೃಷ್ಟಿಯಿಮದ ಕಾಯ್ದುಕೊಳ್ಳಬೇಕು.

ಸಾಧ್ಯವಾದ ಮಟ್ಟಿಗೆ ಕ್ಷೇತ್ರ ಚಟುವಟಿಕೆಗಳನ್ನು ವಿಂಗಡಿಸುತ್ತಾ ನಿರ್ವಹಿಸಲು ಯೋಜಿಸಿ ಮತ್ತುಒಂದೇ ದಿನ ಹೆಚ್ಚು ಕೆಲಸಗಾರರನ್ನು ನಿಯೋಜಿಸುವುದನ್ನು ತಪ್ಪಿಸಿ.

ಸಾಧ್ಯವಾದ ಮಟ್ಟಿಗೆ ಪರಿಚರಸ್ಥ ಕೆಲಸಗಾರರನ್ನಷ್ಟೆ ಕ್ಷೇತ್ರ ಕಾರ್ಯಗಳಿಗೆ ಪೂರ್ಣ ವಿಚಾರಿಸಿ ತೆಗೆದುಕೊಳ್ಳಿ. ಏಕೆಂದರೆ, ಅಪರಿಚಿತ ವ್ಯಕ್ತಿಗಳು ರೋಗಾಣು ವಾಹಕರಾಗಿರಬಹುದಾದ ಸಾಧ್ಯತೆಗಳಿರುತ್ತವೆ. ಆರೋಗ್ಯವಂತ ವ್ಯಕ್ತಿಗಳನ್ನಷ್ಟೆ ನಿಯೋಜಿಸಿ.

ಎಲ್ಲೆಲ್ಲಿ ಸಾಧ್ಯವೋ, ಅಂತಹ ಕೆಲಸಗಳಿಗೆ ಕಾರ್ಮಿಕರ ಬದಲು ಯಂತ್ರೋಪಕರಣಗಳ ಸಹಾಯವನ್ನು ಪಡೆದು ಕಾರ್ಯಗಳನ್ನು ನಿರ್ವಹಿಸಿ. ಈ ಯಂತ್ರಗಳ ನಿರ್ವಹಣೆಗೆ ಅಗತ್ಯವಿರುವ ವ್ಯಕ್ತಿಗಳಷ್ಟೆ ಇದ್ದರೆ ಸಾಕು.

ಎಲ್ಲಾ ಯಂತ್ರೋಪಕರಣಗಳು ಕಾರ್ಯಾರಂಭಕ್ಕೆ ಮುನ್ನು ಮತ್ತು ಆಗಾಗ್ಗೆ ಶುದ್ಧಗೊಳ್ಳಬೇಕು. ಸಾಗಾಣ ವಾಹನಗಳು, ಗೋಣಿ ಚೀಲಗಳು ಅಥವಾ ಇನ್ನಾವುದೇ ಸಾಮಾಗ್ರಿಗಳನ್ನು ಅಡಕಗೊಳಿಸುವ ವಸ್ತುಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಳ್ಳಬೇಕು.

ಉತ್ಪನ್ನಗಳ ಸಂಗ್ರಹಣೆಯನ್ನು ಚಿಕ್ಕಚಿಕ್ಕ ಗುಡ್ಡೆಗಳನ್ನು ೩-೪ ಅಡಿಗಳಿಗೊಂದರಂತೆ ಮಾಡಬೇಕು ಹಾಗು ಒಂದುಗುಡ್ಡೆಗೆ (೧-೨ ಕೆಲಸಗಾರರನ್ನು ಮಾತ್ರ) ನೇಮಿಸಬೇಕು (ದೊಡ್ಡ ಗುಂಪಿನ ಬದಲು).

ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆಗಳ ಒಕ್ಕಣೆಗೆ ಬಳಸುವ ಯಂತ್ರಗಳ ಶುದ್ಧೀಕರಣ ಹಾಗೂ ಸೋಂಕು ನಿವಾರಕಗಳಿಂದ ಶುದ್ಧತೆಯನ್ನು ತಪ್ಪದೇ ಮಾಡಬೇಕು. ಅದರಲ್ಲೂ ಹಂಚಿಕೊಂಡು ಅಥವಾ ರೈತ ಸಮೂಹದಲ್ಲಿ ಬಳಸುವ ಯಂತ್ರಗಳಾಗಿದ್ದಲ್ಲಿ, ಶುದ್ಧೀಕರಣಕ್ರಿಯೆ ಮತ್ತಷ್ಟು ಅಚ್ಚುಕಟ್ಟಾಗಿ ಮಾಡಬೇಕು. ಪದೇ ಪದೇ ಮುಟ್ಟಬೇಕಾದ ಯಂತ್ರದ ಭಾಗಗಳನ್ನು ಹೆಚ್ಚು ಸೋಪು ಮತ್ತು ನೀರಿನಿಮದ ಶುದ್ಧಗೊಳಿಸಬೇಕು.

ಕೃಷಿ ಉತ್ಪನ್ನಗಳ ಕೊಯ್ಲೋತ್ತರ, ಸಂಗ್ರಹ ಹಾಗೂ ಮಾರಾಟ:
ಕ್ಷೇತ್ರ ಮಟ್ಟದಲ್ಲಿ ಉತ್ಪನ್ನಗಳನ್ನು ಒಣಗಿಸುವಾಗ, ಒಕ್ಕಣಿಸುವಾಗ, ತೂರುವಾಗ, ಸ್ವಚ್ಚಗೊಳಿಸುವಾಗ, ಬೇರ್ಪಡಿಸುವಾಗ, ಚೀಲಗಳಲ್ಲಿ ಕಟ್ಟಿಡುವಾಗ, ಮುಖಗವಸನ್ನು ತಪ್ಪದೇ ಧರಿಸುವುದರಿಂದ ಸಣ್ಣ ಧೂಳಿನ ಕಣಗಳು ಹಾಗೂ ಅತಿ ಸೂಕ್ಷ್ಮತೇವಾಂಶಭರಿತ ಕಣಗಳು ಉಸಿರಾಟದ ತೊಂದರೆ ಮಾಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಕ್ಷೇತ್ರ/ಮನೆಗಳಲ್ಲಿ ಸಮರ್ಪಕವಾಗಿಒಣಗಿಸುವಿಕೆಯ ನಂತರವೇ ಧವಸಧಾನ್ಯ, ಬೇಳೆಕಾಳುಗಳನ್ನು ಸಂಗ್ರಹ ಮಾಡಿಕಟ್ಟಿಡಬೇಕು. ಕ್ರಿಮಿ ಹಾವಳಿ ತಡೆಯಲು (ಹಳೆಯ ಗೋಣಿ ಚೀಲಗಳನ್ನು) ಪ್ರತಿಶತ ೫ರ ಬೇವಿನ ದ್ರಾವಣದಲ್ಲಿ ಅದ್ದಿ, ಒಣಗಿಸಿ ಬಳಸಬೇಕು.

ಅಗತ್ಯವಿರುವ ಮುಂಜಾಗ್ರತಾ ಕ್ರಮಗಳೊಂದಿಗೆ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ಸಂಗ್ರಹಿಸಬಹುದು. ಅಥವಾ ಸಮೀಪದ ಶೈತ್ಯಾಗಾರ/ಗೋದಾಮುಗಳಲ್ಲಿಯಾದರೂ ಸಂಗ್ರಹಿಸಿ ಶೇಖರಿಸಬಹುದು (ಒಳ್ಳೆಯ ಬೆಲೆ ಬರುವತನಕ).

ಅಗತ್ಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಉತ್ಪನ್ನಗಳ ಅಡಕ, ಸಾಗಣೆ, ಹಾಗೂ ಮಾರುಕಟ್ಟೆ/ಹರಾಜು ಕಟ್ಟೆಗಳಲ್ಲಿ ಮಾರಾಟ ಪ್ರಕ್ರಿಯೆಯಲ್ಲಿತೊಡಗಿರುವಾಗತಪ್ಪದೇಪಾಲಿಸಬೇಕು.

ಬೀಜೋತ್ಪಾದನೆ ಮಾಡುವಕೃಷಿಕರು ಉತ್ಪಾದಿಸಿದ ಬೀಜಗಳನ್ನು (ಸೂಕ್ತ ದಾಖಲೆಗಳೊಂದಿಗೆ) ಸಾಗಾಣೆ ಹಾಗೂ ಕಂಪನಿಗಳಿಗೆ ಮಾರಾಟ ಮಾಡಲುಅನುಮತಿಇದೆ. ಮಾರಿದ ಬೀಜಗಳಿಗೆ ಹಣವನ್ನು ಪಡೆಯುವಾಗ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು.

ಬೀಜ ಸಂರಕ್ಷಣೆ/ಪ್ಯಾಕಿಂಗ್ ಕಾರ್ಖಾನೆಗಳು ಕಾರ್ಯನಿರ್ವಹಿಸುವುದು ಹಾಗೂ ಬೀಜಗಳನ್ನು ಬೀಜೋತ್ಪಾದನೆ ಮಾಡಿದ ರಾಜ್ಯಗಳಿಂದ ಅವುಗಳನ್ನು ಬೆಳೆಗಳಾಗಿ ಬೆಳೆಯುವ ರಾಜ್ಯಗಳಿಗೆ (ಉದಾಹರಣೆಗೆ ದಕ್ಷಿಣದಿಂದ ಉತ್ತರಕ್ಕೆ) ಬರುವ ಮುಂಗಾರಿಗೆದೊರಕುವಂತೆ ಸಾಗಾಣೆ ಮಾಡಬೇಕಾಗಿರುವುದುಅತ್ಯಂತಅಗತ್ಯವಾಗಿದೆ. ಉದಾ:ಎಸ್‌ಎಸ್‌ಜಿ ಹಸಿರು ಮೇವಿನ ಬೀಜದಕ್ಷಿಣದಿಂದಉತ್ತರದ ರಾಜ್ಯಗಳಿಗೆ ಏಪ್ರಿಲ್‌ನಲ್ಲಿ ಬಿತ್ತನೆಗೆದೊರಕಬೇಕು.

ಟೊಮ್ಯಾಟೊ, ಕೋಸು, ಹಸಿರೆಲೆ ತರಕಾರಿಗಳು, ಸೌತೇಕಾಯಿ ಮತ್ತಿತರ ಬಳ್ಳಿ ತರಕಾರಿಗಳನ್ನು ನೇರ ಮಾರಾಟಕ್ಕೆ ಕಳುಹಿಸುವಾಗ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಕುಂದಾಪ್ರ ಡಾಟ್ ಕಾಂ ಲೇಖನ

ಕ್ಷೇತ್ರದಲ್ಲಿ ಬೆಳೆಯುತ್ತಿರುವ ಬೆಳೆಗಳು:
ಗೋಧಿ ಬೆಳೆದಿರುವ ಪ್ರಚಲಿತ ಪ್ರದೇಶಗಳಲ್ಲೀಗ ಉಷ್ಣತೆಯುದೂರಗಾಮಿ ಸರಾಸರಿಗಿಂತಕಡಿಮೆಇರುವುದರಿಂದ, ಗೋಧಿಯಕೊಯ್ಲನ್ನು ಕನಿಷ್ಟ 10-15 ದಿನಗಳಾದರೂ ತಡವಾಗಲಿದ್ದು, ಏಪ್ರಿಲ್ 10 ಅನ್ನುದಾಟಬಹುದು. ಆದುದರಿಂದ, ಕೃಷಿಕರುಗೋಧಿ ಬೆಳೆಯ ಕೊಯ್ಲನ್ನುಏಪ್ರಿಲ್ 20ರ ನಂತರಯಾವುದೇ ನಷ್ಟ ಅನುಭವಿಸದೆ ಮಾಡಬಹುದು. ಇದರಿಂದ ಸಾಕಷ್ಟು ಸಮಯಾವಕಾಶವೂದೊರೆಯಲಿದ್ದು, ಉಳಿದ ತಯಾರಿಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು ಮತ್ತು ಸೂಕ್ತ ಸಮಯವನ್ನುಕೊಯ್ಲಿಗೆ ನಿರ್ಧರಿಸಿಕೊಳ್ಳಬಹುದು.

ಅನೇಕ ದಕ್ಷಿಣ ರಾಜ್ಯಗಳಲ್ಲಿ ಚಳಿಗಾಲದ ಭತ್ತವು ಕಾಳು ತುಂಬುವ ಹಂತದಲ್ಲಿದ್ದು, ಕತ್ತು ಕೊಳೆ ರೋಗಕ್ಕೆ ಸಿಲುಕಿದೆ. ಇದಕ್ಕೆಅಗತ್ಯವಿರುವ ಶಿಲೀಂಧ್ರನಾಶಕದ ಸಿಂಪಡನೆ ಮಾಡುವಾಗ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.

ಅಕಾಲ ಮಳೆಯೇನಾದರೂ ಬಂದರೆ, ಪ್ರತಿಶತ 5ರ ಉಪ್ಪಿನ ದ್ರಾವಣವನ್ನು ಭತ್ತಕ್ಕೆ ಸಿಂಪಡಿಸುವುದರಿಂದ, ಭತ್ತದ ಕಾಳು ಮೊಳಕೆ ಒಡೆಯುವುದನ್ನು ತಪ್ಪಿಸಬಹುದು.

ಬೇಸಿಗೆಯ ಕಾಲದಲ್ಲಿ ಭತ್ತದ ಗದ್ದೆಗಳಲ್ಲಿ ಬೆಳೆಯುವ ಬೇಳೆ ಕಾಳುಗಳಲ್ಲಿ ಬಿಳಿನೊಣದ ನಿರ್ವಹಣೆಯನ್ನು ಸೂಕ್ತ ಮುಂಜಾಗ್ರತೆಯೊಂದಿಗೆ ಮಾಡುವುದರಿಂದ ಹಳದಿ ಮೊಸಾಯಿಕ್ ವೈರಾಣು ರೋಗವನ್ನು ತಡೆಗಟ್ಟಬಹುದು.

/ಕುಂದಾಪ್ರ ಡಾಟ್ ಕಾಂ ಲೇಖನ/

Leave a Reply