ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಉಲ್ಲಾಸ್ ಬಿಲ್ಡಿಂಗ್ ಪ್ರಥಮ ಮಹಡಿಯಲ್ಲಿ ನೂತನ ಭಾರತ್ ವಿಕಾಸ ಸೌಹಾರ್ದ ಸಹಕಾರಿ ನಿಯಮಿತ ಕುಂದಾಪುರ ಇದರ ಉದ್ಘಾಟನೆ ನಡೆಯಿತು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಅಪ್ಪಣ್ಣ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೂಕ್ತೇಸರಾದ ಎಸ್. ಸಚಿದಾನಂದ ಚಾತ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ನಿರ್ದೇಶಕರಾದ ರಾಜು ಪೂಜಾರಿ ಭದ್ರತಾ ಕೋಶವನ್ನು ಉದ್ಘಾಟಿಸಿದರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಮೂಕ್ತೇಸರಾದ ಕೃಷ್ಣಪ್ರಸಾದ್ ಅಡ್ಯಂತಾಯ ಗಣಕಯಂತ್ರವನ್ನು ಉದ್ಘಾಟಿಸಿದರು. ಕುಂದಾಪುರ ಉದ್ಯಮಿಯಾದ ದಿನೇಶ್ ಅಮೀನ್ ಮೋಹಿನಿ ನಶ್ಯ ನಗದು ಕಛೇರಿಯನ್ನು ಉದ್ಘಾಟಿಸಿದರು. ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕರಾದ ಮಂಜುನಾಥ ಎಸ್.ಕೆ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಬೆಂಗಳೂರು ಕರ್ನಾಟಕ ರಾಜ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ವಿದಾಯ ಭಾಷಣ ಮಾಡಿದ ಸಭಾಪತಿ ಅವರು ಸಂಖ್ಯಾಬಲದ ಮೇಲೆ ಸಭಾಪತಿ ಆಯ್ಕೆ ನಡೆಯುತ್ತದೆ. ಮುಂದಿನ ಬಜೆಟ್ ಅಧಿವೇಶನದ ವರೆಗೂ ಈ ಸ್ಥಾನದಲ್ಲಿ ಇರುವ ಅವಕಾಶ ನನಗಿತ್ತು. ಆದರೆ ಎಲ್ಲರ ಬಯಕೆ ಬೇರೆಯದೇ ಆಗಿರುವ ಹಿನ್ನೆಲೆ ಈ ಸ್ಥಾನದಲ್ಲಿ ಇನ್ನೂ ಹೆಚ್ಚು ಸಮಯ ಮುಂದುವರಿಯದಿರಲು ತೀರ್ಮಾನಿಸಿದ್ದೇನೆ. ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವುದರಿಂದ ಪೀಠಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಈಗ ನನ್ನ ಮನಸ್ಸು ನಿರಾಳವಾಗಿದೆ, ಜವಾಬ್ದಾರಿ ಮುಗಿದಿದೆ, ಸದನದ ನಿಯಮದಂತೆ ಉಪ ಸಭಾಪತಿಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಪೀಠತ್ಯಾಗ ಮಾಡುತ್ತಿದ್ದೇನೆ ಎಂದಿದ್ದಾರೆ. ಸದನದ ಘನತೆ, ಚ್ಯುತಿ ಬಾರದಂತೆ ನಡೆದುಕೊಳ್ಳುವ ಅನಿವಾರ್ಯತೆ ವಿಧಾನ ಪರಿಷತ್ ಎಲ್ಲಾ ಸದಸ್ಯರಿಗೆ ಇದೆ. ಕೆಲವೊಮ್ಮೆ ಸದನದ ಸದಸ್ಯರ ಬದಲಾದಂತೆ ನಿಲುವುಗಳು ಬದಲಾಗುತ್ತವೆ. ಅಂತಹ ನಿಲುವುಗಳಿಗೆ ಹಿಡಿತದಲ್ಲಿದ್ದರೂ ಗೌರವ ಸಲ್ಲಿಸಬೇಕಾಗುತ್ತದೆ. ಇದಕ್ಕೆ ನಾನು ಕೂಡ ಹೊರತಾಗಿಲ್ಲ. ನನ್ನ…
ಇಂದು ಒತ್ತಡ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪ ಒತ್ತಡವು ದೈನಂದಿನ ಜೀವನದ ಒಂದು ಭಾಗವಾಗಿದ್ದರೂ, ದೀರ್ಘಕಾಲದ ಒತ್ತಡವು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಹೃದ್ರೋಗಗಳು, ಮಧುಮೇಹ ಮತ್ತು ಖಿನ್ನತೆಯಂತಹ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು. ನಿಮ್ಮ ಮನಸ್ಸನ್ನು ಹಗುರವನ್ನಾಗಿಸಿ ಒತ್ತಡ ನಿವಾರಣೆ ಮಾಡಲು ಸಹಾಯ ಮಾಡಬಲ್ಲ ಹಲವು ಆಯುರ್ವೇದ ವಿಧಾನಗಳಿವೆ. ಶತಮಾನದಷ್ಟು ಹಳೆಯದಾದ ಈ ಅಭ್ಯಾಸವು ಒತ್ತಡ ನಿವಾರಣೆ ಮಾಡಲು ಸಹಾಯಕವಾಗಿದೆ. ಅವುಗಳಲ್ಲಿ ಕೆಲವು ಆಯುರ್ವೇದ ಪದ್ಧತಿ ಇಲ್ಲಿದೆ ನೋಡಿ. ಯೋಗ: ನಾವು ಆಯುರ್ವೇದದ ಬಗ್ಗೆ ಮಾತನಾಡುವಾಗ, ಯೋಗ ನೆನಪಾಗುವ ಮೊದಲ ವಿಷಯಗಳಲ್ಲಿ ಒಂದಾಗಿದೆ. ಈ ಸಮಗ್ರ ಅಭ್ಯಾಸವು ನಿಮಗೆ ಆರಾಮವಾಗಿರಲು ಮತ್ತು ಮಾನಸಿಕ ಸ್ಪಷ್ಟತೆಯನ್ನು ನೀಡುವ ಮೂಲಕ ತಲೆಯಿಂದ ಕಾಲಿವರೆಗೂ ಉತ್ತಮವಾಗಲು ಸಹಾಯ ಮಾಡುತ್ತದೆ. ಯೋಗ ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ಇದು ಒತ್ತಡ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿವಾರಿಸಲು ನೀವು ಉತ್ತನಾಸನ (ಮುಂದೆ ನಿಂತಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ದೋಹಾ, ಕತಾರ್: ಪ್ರತಿಷ್ಠಿತ ಐಸಿಸಿ ಕತಾರ್ನ (ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ) 2021 – 22ರ ಸಾಲಿನ ನೂತನ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ನೇಮಕಮಾಡಲಾಗಿದೆ. ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದವರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಅವಿರತ ಸೇವೆ ಸಲ್ಲಿರುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದಲ್ಲದೆ, ಕರ್ನಾಟಕ ಸಂಘ ಕತಾರ್ನ ಉಪಾಧ್ಯಕ್ಷರಾಗಿ, ಐಸಿಬಿಫ್ನ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ -19 ಸಂಕಷ್ಟದ ವೇಳೆಯಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತನ್ನ ಜೀವದ ಹಂಗು ತೊರೆದು ಅನೇಕ ಭಾರತೀಯರಿಗೆ ಸಕಾಲ ನೆರವನ್ನು ನೀಡಿರುವುದರ ಮೂಲಕ ಜನರ ಪ್ರಶಂಶೆಯನ್ನು ಗಳಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ, ಕತಾರಿನ ಭಾರತೀಯ ರಾಯಭಾರ ಕಛೇರಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ‘ಡಿಜಿಪೋಲ್’ ಮೂಲಕ ಭಾರತೀಯ ವಲಸಿಗ ಸಮುದಾಯದ ಸರ್ವೋಚ್ಚ ಅಂಗಸಂಸ್ಥೆಯ ಚುನಾವಣೆ ನಡೆಸಲಾಯಿತು. ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯಲ್ಲಿ ಹಸ್ತಚಾಲಿತ ಮತದಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನಲ್ಲಿ 18ರಿಂದ 40 ವರ್ಷಗಳ ವಯೋಮಿತಿಯೊಳಗಿನ ಯುವಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಾದ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಸಾಹಿತ್ಯದ ಪ್ರಕಾರಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ http://www.kannadapustakapradhikara.com ಅಥವಾ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ದೂರವಾಣಿ ಸಂಖ್ಯೆ: 080-22484516 / 22107704 ಅನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಎಮ್.ಐ.ಟಿ ಕುಂದಾಪುರ ಇದರ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಆಯೋಜಿಸಿದ ಪಂಚಾಯತ್ಗೆ ಎಂಬಿಎ ವಿದ್ಯಾಥಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಾಗಾರ ನಡೆಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಕುಗ್ಗದೇ ಆತ್ಮವಿಶ್ವಾಸ ಮೈಗೂಡಿಸಿಕೊಂಡಾಗ ಬದುಕಿನ ಯಶಸ್ಸಿನ ಜೀವನದ ಮೈಲಿಗಲ್ಲು ಏರಲು ಸಾಧ್ಯ ಎಂದು ತಿಳಿಸಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡು, ಸಮಾಜಕ್ಕೆ ತಮ್ಮಿಂದಾದ ಸೇವೆಯನ್ನು ಸಲ್ಲಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಪಂಚಾಯತ್ ಮಟ್ಟದಲ್ಲಿ ತಮ್ಮಿಂದ ಅನಾಗರಿಕರಿಗೆ, ಅನಕ್ಷರಸ್ಥರಿಗೆ ನಾವು ಹೇಗೆ ನೆರವಾಗಬಹುದೆಂಬ ಮಾಹಿತಿ ನಮ್ಮಲ್ಲಿ ಇದ್ದು ಸದೃಢ ಸಮಾಜದ ನಿರ್ಮಾಣದ ಪರಿಕಲ್ಪನೆ ನಮ್ಮಲ್ಲಿರಬೇಕು ಎಂದರು. ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ, ಕಾಲೇಜಿನ ಡೀನ್ ಮತ್ತು ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ಮಡಿಕಲ್ ಕಡಲ ತೀರದಲ್ಲಿರುವ ಕಾರಣಿಕ ಕೇಂದ್ರ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಪುನರ್ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಫೆ.12ರಿಂದ 20ರ ವರೆಗೆ ಜರುಗಲಿದೆ. ಒಂಭತ್ತು ದಿನಗಳ ಪರ್ಯಂತ ಪ್ರತಿದಿನ ಧಾರ್ಮಿಕ ಉತ್ಸವಗಳ ಜತೆಗೆ ಕರಾವಳಿ ಉತ್ಸವದ ಶೈಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರೋತ್ಸವ, ನಾಟಕೋತ್ಸವ, ನೃತ್ಯೋತ್ಸವ, ಯಕ್ಷೋತ್ಸವ ಹಾಗೂ ಪ್ರದರ್ಶನೋತ್ಸವಗಳು ಸಮುದ್ರ ಕಿನಾರೆಯಲ್ಲಿ ನಿರ್ಮಸಿದ ಶ್ರೀ ಈಶ್ವರ ವೇದಿಕೆಯಲ್ಲಿ ನಡೆಯಲಿದೆ. ದೇವಳದಲ್ಲಿ ಫೆ.12ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಫೆ.17ಕ್ಕೆ ಶ್ರಿ ದೇವರ ಪ್ರತಿಷ್ಠೆ, ಫೆ.20ಕ್ಕೆ ಬ್ರಹ್ಮಕಲಶಾಭಿಷೇಕ ಹಾಗೂ ಪ್ರತಿದಿನವೂ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉಡುಪಿ ಭಾರ್ಗವಿ ತಂಡದಿಂದ ನಾಟ್ಯ ವೈಭವ, ಯೇಂಕಾರ್ ಭಟ್ಕಳ ಇವರಿಂದ ನೃತ್ಯ-ಗಾನ-ರೂಪಕ, ಅರೆಹೊಳೆ ಪ್ರತಿಷ್ಠಾನದಿಂದ ನಾಟ್ಯ ವೈಭವ, ಡಾನ್ಸಿಂಗ್ ಇನ್ ದಿ ಡಾರ್ಕ್ ಇವರಿಂದ ಡಾನ್ಸ್ ಧಮಾಕಾ, ಕುಂದಾಪುರ ನೃತ್ಯ ವಸಂತ ತಂಡದಿಂದ ನೃತ್ಯ-ನಾಟ್ಯ-ವೈಭವ, ಬೈಂದೂರು ನಟರಾಜ್ ಡ್ಯಾನ್ಸ್ ಫಿಟ್ನೆಸ್ ಗ್ರೂಪ್ ಇವರಿಂದ ನೃತ್ಯ ಸಿಂಚನ, ಕುಂದಾಪುರ ಕಲಾಸ್ಪೂರ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬಡಾಕೆರೆ ರೈಲ್ವೆ ಸೇತುವೆ ಮೇಲೆ ಮಂಗಳವಾರ ನಸುಕಿನ ಸಮಯ ಅಪರೂಪದ ಕರಿ ಚಿರತೆಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಸುನೀಗಿದೆ. 3 ರಿಂದ 4 ವರ್ಷದ ಗಂಡು ಕರಿ ಚಿರತೆ ಮೃತಪಟ್ಟಿದ್ದು, ಆಹಾರ ಅರಸಿ ನಾಡಿಗೆ ಬಂದಿದ್ದು ರೈಲು ಸೇತುವೆ ಮೇಲೆ ಸಿಕ್ಕಿಕೊಂಡಿದ್ದರಿಂದ ತಪ್ಪಿಸಿಕೊಳ್ಳಲಾಗಿದೆ ಮೃತಪಟ್ಟಿದೆ. ಸ್ಥಳೀಯರು ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಮೃತದೇಹ ವಶಕ್ಕೆ ಪಡೆದು ವಂಡ್ಸೆ ವಲಯ ಅರಣ್ಯ ಇಲಾಖೆಗೆ ಸಾಗಿಸಿದ್ದಾರೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. ಕರಿ ಚಿರತೆ ನಮ್ಮಲ್ಲಿ ಶೇ.10ರಷ್ಟಿದ್ದು, ಜನರ ಕಣ್ಣಿಗೆ ಕಾಣಸಿಗುವುದು ತುಂಬಾ ಅಪರೂಪ. ಬಡಾಕೆರೆ ಹೊಳೆ ದಾಟಲು ಚಿರತೆ ಲೈಲ್ವೆ ಸೇತುವೆ ಮಾರ್ಗ ಬಳಸಿಕೊಳ್ಳುತ್ತಿದ್ದು, ರೈಲು ಬರುವ ಸಮಯ ಸೇತುವೆ ಮೇಲಿದ್ದರಿಂದ ತಪ್ಪಿಸಿಕೊಳ್ಳಲಾಗದೆ ರೈಲು ಡಿಕ್ಕಿಯಾಗಿ ಅಸುನೀಗದೆ. ವನ್ಯಜೀವ ನಿಯಮದ ಪ್ರಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ಎಂಬ ಜಿಲ್ಲಾಮಟ್ಟದ ಕವಿಗೋಷ್ಠಿ ಮಂಗಳೂರು ನಗರದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ, ಶ್ರೀರಾಮಚಂದ್ರ ಎಂಬ ಮಾದರಿ ವ್ಯಕ್ತಿತ್ವವು ನಮ್ಮ ಆದರ್ಶಗಳ ಒಂದು ಪ್ರತಿರೂಪ. ಜಾತಿ ಮತ ಪಂಥ ಪಂಗಡ ದೇಶ ಮೊದಲಾದ ಗಡಿರೇಖೆಗಳನ್ನು ಮೀರಿದ ಮಾನವತ್ವದ ಉತ್ತುಂಗತೆಯ ಸಂಕೇತವೇ ಶ್ರೀರಾಮಚಂದ್ರ. ಆತ ಮೌಲ್ಯಗಳ ಮೊತ್ತ. ಆತನ ಉದಾರ ವ್ಯಕ್ತಿತ್ವ ನಮ್ಮದಾಗಬೇಕೆಂಬ ಆದರ್ಶದಿಂದಾಗಿಯೇ ಶ್ರೀರಾಮಚಂದ್ರನು ಯಾವ ಕಾಲಕ್ಕೂ ಸಲ್ಲುವ ಓರ್ವ ನಾಯಕನಾಗಿ ಉಳಿದಿದ್ದಾನೆ. ಎಂದು ಹೇಳಿದರು. ವಿವಾದಗಳಿಗೆ ಹೊರತಾಗಿ ನಿಲ್ಲುವ ವ್ಯಕ್ತಿತ್ವ ಪ್ರಭು ಶ್ರೀರಾಮಚಂದ್ರನದು. ಆತನ ಬಗ್ಗೆ ಹೆಚ್ಚು ಹೆಚ್ಚು ಸಾಹಿತ್ಯ ನಿರ್ಮಾಣವಾದಂತೆ ಜನಸಾಮಾನ್ಯರ ಹೃದಯ ಮಂದಿರದಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚುತ್ತ ಹೋಗುತ್ತದೆ. ಎಲ್ಲ ಕವಿಗಳೂ ವಿಭಿನ್ನವಾಗಿ ಶ್ರೀರಾಮಚಂದ್ರನ ಕುರಿತು ಬರೆದಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎಂದು ಹೇಳಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ತುಮಕೂರು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪದ್ಮನಾಭ ಕೆ.ವಿ ಅಭಿವೃದ್ಧಿಯಲ್ಲಿ ಸಂವಹನದ ಪಾತ್ರದ ಕುರಿತು ಮಾತನಾಡಿದರು. ಅಭಿವೃದ್ದಿಯೆಂದರೆ ಕೇವಲ ತಾವು ಶ್ರೀಮಂತರಾಗವುದಲ್ಲ. ಬದಲಿಗೆ ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು. ಕೊನೆಯಲ್ಲಿದಾರೆಂದು ಯಾರನ್ನು ಬಿಟ್ಟು ಹೋಗಬಾರದು ಎಂದರು. ಪರಿಹಾರಯಿಲ್ಲದ ಸಮಸ್ಯೆಯಿಲ್ಲ, ಅಭಿವೃದ್ದಿಯಿಲ್ಲದೆ ದೇಶದಲ್ಲಿ ಏಳಿಗೆಯಿಲ್ಲ ಎಂದರು. ಪ್ರಾದೇಶಿಕ ಕಲೆಯಾದ ಯಕ್ಷಗಾನದ ಮೂಲಕ ಸಂವಹನ ನಡೆದು ಬಂದ ರೀತಿಯನ್ನು ವಿವರಿಸಿ ಯಕ್ಷಗಾನದಲ್ಲಿ ಪೌರಾಣಿಕ ಕಥೆಗಳಲ್ಲದೆ “ಕಾಲಕ್ಕನುಗುಣವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಯಕ್ಷಗಾನ ಮಾಡುತ್ತಾ ಬಂದಿದೆ ಎಂದರು”. ಸಸ್ಯ ಸಂದಾನ, ಇಳಯಣ್ಣನ ಕಥೆ, ಅಕ್ಷರ ವಿಮೋಚನೆ, ವಿದ್ಯಾ ವಿಜಯ, ಮಿತ ಸಂತಾನದ ಮಹಿಮೆ, ನಿಸರ್ಗ ಸಂದಾನ ಮೊಹಿನಿ ಚರಿತ್ರೆ, ತಂಬಾಕು ಮಹಾತ್ಮೆ ಮುಂತಾದ ಹಳೆಯ ಪ್ರಸಂಗಗಳ…
