Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಮುದ್ಯತ ಸಂಸ್ಥೆ ನೇತೃತ್ವದಲ್ಲಿ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಿದ ಡಾ. ಸಿ. ಆಶ್ವಥ್ ಸ್ವರ ಸಂಯೋಜನೆಯ ಮಧುರ ಪ್ರಸ್ತುತಿ ಸತ್ಯಾವತಾರ ಕಾರ್ಯಕ್ರಮಕ್ಕೆ ಪ್ರೇರಕ್ಷರಿಂದ ಅದ್ಭುತ ಪ್ರಶಂಸನೆ ವ್ಯಕ್ತವಾಯಿತು. ಡಾ. ಸಿ. ಅಶ್ವಥ್ ಅವರ ಸ್ವರ ಸಂಯೋಜಿಸಿದ ಗೀತೆಗಳ ಮಧುರ ಪ್ರಸ್ತುತಿಯ ಮೂಲಕ ಖ್ಯಾತ ಗಾಯಕ ಬೆರಗುಗೊರಳಿನ ಕಲಾವಿದ ರಾಮಚಂದ್ರ ಹಡಪದ ಅವರ ಸತ್ಯಾವತಾರ ಕಾರ್ಯಕ್ರಮವು ಸುಂದರವಾದ ಬೆಳಕಿನ ಚಿತ್ತಾರದ ವೇದಿಕೆಯಲ್ಲಿ ಅನಾವರಣಗೊಂಡಿತ್ತು. ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಹಾಗೂ ಕುಂದಾಪುರದ ಮೇಘನಾ ಇವರ ಗಾಯನದ ಝಲಕ್ ನೋಡುಗ ಪ್ರೇಕ್ಷಕರ ಮನಸೆಳೆಯಿತು.  ಕೊರೆಯುವ ಚಳಿಯಲ್ಲಿಯೂ ಅಪ್ಪಿ ಹಿಡಿದ ಸತ್ಯಾವತಾರ:ರಾಮಚಂದ್ರ ಹಡಪದ, ಎಂ.ಡಿ.ಪಲ್ಲವಿ ಹಾಗೂ ಮೇಘನಾ ಇವರ ಕಂಠಸಿರಿಯಲ್ಲಿ ಮೊಳಗಿದ ಅಶ್ವಥ್ ಅವರ ಗೀತೆಗಳು ನೋಡುಗ ಪ್ರೇಕ್ಷಕರನ್ನು ಕೊರೆಯುವ ಚಳಿಯಲ್ಲಿಯೂ ಕಾರ್ಯಕ್ರಮದ ಆರಂಭದಿಂದ ಅಂತ್ಯದ ತನಕವು ಸತ್ಯಾವತಾರದ ಒಂದೊಂದು ಗಾಯನವು ಅಪ್ಪಿ ಹಿಡಿದಿಟ್ಟುಕೊಂಡು ಕೇಳುಗರನ್ನು ಸಂಗೀತ ಲೋಕದ ಸ್ವರ್ಗಕ್ಕೆ ಕರೆದೊದು ಕಂಚಿನ ಕಂಠದ ಮಾಧುರ್ಯದಿಂದ ಹೃದಯಗಳನ್ನು ಮುಟ್ಟುವಂತಾಯಿತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಹೆಚ್.ಡಿ ಅಧ್ಯಯನ ಪ್ರಾರಂಭಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಾಂಗ ವೇತನ / ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ /ಅಧೀನಕ್ಕೆ ಒಳಫಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್ ಮೂಲಕ 2026ರ ಜನವರಿ 9ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in ಅಥವಾ ದೂ.ಸಂಖ್ಯೆ: 8050770004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್‌ನ ಕೆದೂರಿನಿಂದ ಕೋಟ, ಸಾಲಿಗ್ರಾಮದ ಚಿತ್ರಪಾಡಿಯ ಸೂಲ್ಲಡ್ಪು ಹೊಳೆಯವರೆಗೆ ಹೂಳೆತ್ತುವ ಕಾರ್ಯ ಮರಿಚಿಕೆಯಾದ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಟದ ರೈತಧ್ವನಿ ಸಂಘಟನೆ ದಿಢೀರ್ ಸಭೆ ಸೇರಿತು. ಕಳೆದ ಹಲವಾರು ವರ್ಷಗಳಿಂದ ಪ್ರತಿಭಟನೆಯ ಮೂಲಕ ಗಮನ ಸೆಳೆದ ಇಲ್ಲಿನ ರೈತ ಸಂಘಟನೆಗಳು ಹೊಳೆ ಹೂಳೆತ್ತುವ ಕುರಿತು ಕಳೆದ ವರ್ಷ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಳನ್ನು ಭೇಟಿ ಮಾಡಿ ಸುಮಾರು 4.50 ಕೋಟಿ ರೂಗಳ ಅನುದಾನದ ಭರವಸೆ ಪಡೆದು ಹಿಂತಿರುಗಿತು. ಆದರೆ ನಂತರ ದಿನಗಳಲ್ಲಿ ಈ ಬಗ್ಗೆ ಸಂಬಂಧಿಸಿದಂತೆ ಸಣ್ಣನೀರಾವರಿ ಇಲಾಖೆ ನಿಲನಕ್ಷೆ ಸಿದ್ಧಪಡಿಸಿ ಸರ್ವೆಕಾರ್ಯ ಪೂರ್ಣಗೊಳಿಸಿತು ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಹೊಳೆ ಹೂಳೆತ್ತುವ ಆಶಾಭಾವನೆ ರೈತಸಂಘಟನೆಯಲ್ಲಿ ಮೊಳಗಿತ್ತಾದರೂ ಸಂಬಂಧಿಸಿದ ಇಲಾಖೆ ಅದನ್ನು ತೆರೆಯ ಮರೆಗೆ ಸರಿಸಿ ಕೈಕಟ್ಟಿ ಕೂರಿತು. ಆದರೆ ಇದೀಗ ಮತ್ತೆ ರೈತ ಸಂಘಟನೆಗಳು ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದು ಈ ಬಗ್ಗೆ ಗುರುವಾರ ಕೋಟದಲ್ಲಿ ಪುನಃ ಸಭೆ ನಡೆಸಿ ಕೆಲ ನಿರ್ಧಾರಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಕಾನೂನು ಕಾಲೇಜು ಹಾಗೂ ಆಳ್ವಾಸ್ ಮಾನವಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕ್ಯಾಂಪಸ್ ಪಾರ್ಲಿಮೆಂಟ್- 2025 (ಸಂಸತ್‌ಶೈಲಿಯಲ್ಲಿ ಚರ್ಚಿಸುವ ಪ್ರಜಾತಾಂತ್ರಿಕ ವ್ಯವಸ್ಥೆಯ ಚಟುವಟಿಕೆ) ಕಾರ್ಯಕ್ರಮ ಆಳ್ವಾಸ್ ಆವರಣದ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಅನುಭವಿಸಲು ಅವಕಾಶ ದೊರಕುವಾಗ, ಸಮಾಜದ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಹಕ್ಕುಗಳನ್ನು ಮಾತ್ರ ಒತ್ತಾಯಿಸಿ, ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದಲೇ ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಗೆ ಸಾಗಬೇಕು. ಹಕ್ಕಿನಿಂದಾಗಿ ನಾವು ಏನು ಪಡೆಯುತ್ತೇವೋ, ಕರ್ತವ್ಯಗಳಿಂದಾಗಿ ದೇಶ ಏನು ಪಡೆಯುತ್ತದೆ ಎಂಬ ಅರಿವು ಮೂಡಿದಾಗ ನಾವು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತೇವೆ ಎಂದರು. ನಮ್ಮ ದೇಶ ಅಭಿವೃದ್ಧಿಯ ಪಥದಲ್ಲೇ ಸಾಗುತ್ತಿದೆ. ಈ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಿಂದ ನೀಡಲಾಗುವ ಕ್ರೀಡಾ ಪ್ರೋತ್ಸಾಹಧನಕ್ಕೆ 2025ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದ ವೈಯಕ್ತಿಕ / ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಿದ/ ಪದಕ ಪಡೆದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026ರ ಜನವರಿ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ನೇಹಕೂಟ ಬೆಳೆದ ರೀತಿ ಅದರ ಸಾಮಾಜಿಕ ಕಾರ್ಯದಶ ದಿಕ್ಕಿನಲ್ಲೂ ಪಸರಿಸಿದೆ ಎಂದು ಮಣೂರು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು. ಅವರು ಗುರುವಾರ ಇಲ್ಲಿನ ಕೋಟದ ಮಣೂರು ಶ್ರೀ ರಾಮಪ್ರಸಾದ ಶಾಲಾ ವಠಾರದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದೊಂದಿಗೆ ದಶಮ ಡಿಂಡಿಮದ ಸವಿ ಅವ್ಯಕ್ತ ಪ್ರತಿಭೆಗಳ ಸಂಗಮ ಎಂಬ ಶೀರ್ಷಿಕೆಯಡಿ ಊರ್ಮನಿ ಹಬ್ಬ ಮಣೂರು ಮಹಿಳಾ ಗ್ರಾಮೀಣ ಜಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಶಕ್ತರಿಗೆ, ವಿದ್ಯಾರ್ಥಿಗಳ ಉನ್ನತಿ, ಗ್ರಾಮೀಣ ಹಳ್ಳಿ ಭಾಗದ ಮಹಿಳೆಯನ್ನು ಮಂಚೂಣಿಗೆ ತಂದು ನಮ್ಮ ಸಂಸ್ಕೃತಿಯನ್ನು ಪ್ರತಿ ಮನೆಯಲ್ಲಿ ಜಾಗೃತಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಇಂತಹ ಸಂಘಟನೆಗಳು ಇನ್ನಷ್ಟು ಸಮಾಜಮುಖಿಕಾರ್ಯ ಮಾಡಲಿ ಎಂದು ಆಶಿಸಿ ಶುಭಹಾರೈಸಿದರು. ಕಾರ್ಯಕ್ರಮವನ್ನು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಉದ್ಘಾಟಿಸಿದರು. ಸ್ನೇಹಕೂಟದ ಪ್ರಧಾನ ಸಂಚಾಲಕಿ ಭಾರತಿ ವಿ. ಮಯ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ದೇಶ ಕಾಯುವ ಯೋಧರನ್ನು ಗೌರವಿಸುವ ಮನೋಭಾವನೆ ಸರ್ವಶ್ರೇಷ್ಠ ಅದೇ ರೀತಿ ಗಡಿಯಲ್ಲಿ ದೇಶಕ್ಕಾಗಿ ಬಲಿದಾನಗೈಯುವ ಯೋಧರ ಸ್ಥಿತಿಗತಿ ಅಷ್ಟೆ ಕ್ಲಿಷ್ಟಕರವಾಗಿರುತ್ತದೆ. ಇದಕ್ಕೆ ಅನೂಪ್ ಪೂಜಾರಿ ಸಹಿತ ಹಲವು ಯೋಧರ ಕಥೆ ವ್ಯಥೆಯೇ ಸಾಕ್ಷಿ ಎಂದು ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ಹೇಳಿದರು. ಅವರು ಬುಧವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಕಳೆದವರ್ಷ ಅಮರರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಬಗ್ಗೆ ಸದಾ ತುಡಿತ ಹೊಂದಿದ ಪಂಚವರ್ಣ ಸಂಘಟನೆ ಯೋಧರ ಪುಣ್ಯ ಸ್ಮರಣೆಯನ್ನು ಮನದಲ್ಲಿ ಸದಾ ಕಾಯ್ದು ಅವರ ಕುರಿತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ನಿವೃತ್ತ ಯೋಧರಾದ ಕೋಟ ರಾಮಚಂದ್ರ ಗಾಣಿಗ ಕೋಟೇಶ್ವರ ಅವರು ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೇಶದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ನಿರ್ಮಾಣದ ಶಿಲಾನ್ಯಾಸ ಪೂಜನಾ ಕಾರ್ಯಕ್ರಮ ಗುರುವಾರ ಜರುಗಿತು. ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಶ್ ಭಟ್ ಧಾರ್ಮಿಕ ವಿಧಿವಿಧಾನ ನೇರವೇರಿಸಿದರು. ಸಂಕಲ್ಪವನ್ನು ರಾಮಪ್ಪ ಖಾರ್ವಿ ಮತ್ತು ರೇವತಿ ರಾಮಪ್ಪ ಖಾರ್ವಿ ನೇರವೇರಿಸಿದರು. ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಗ್ರಾಪಂ. ಸದಸ್ಯ ಜಯೇಂದ್ರ ಆರ್ಕಾಟಿ, ನಾಗಪ್ಪಯ್ಯ ಪಟೇಲ್, ಶೃತಿ ಖಾರ್ವಿ, ಚೇತನ್ ಸಿಪಾ, ಕಾರ್ತಿಕ್, ಅನಿಲ್, ಹಿತೇಶ್, ರಿತೇಶ್, ಜಗದೀಶ್ ಪೂಜಾರಿ, ಅಕ್ಷಯ್, ನವೀನ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶದಿಂದ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಗಂಗೊಳ್ಳಿ ಮೂಲದ ಕುಂದಾಪುರದ ವಕೀಲರಾದ ಬದರೀನಾಥ ಹೆಚ್. ಹುಂಡೇಕಾರ್ ಅವರು ವಿದ್ಯಾರ್ಥಿಗಳೊಂದಿಗೆ ಪೋಕ್ಸೋ ಕಾಯಿದೆಯ ಬಗ್ಗೆ ಚರ್ಚಿಸುತ್ತಾ, ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ಸದಾ ಅಧ್ಯಯನದಲ್ಲಿ ನಿರತರಾದರಷ್ಟೇ ಸಾಲದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳನ್ನು ಅರಿಯಬೇಕು. ದೇಶದ ಪ್ರತಿಯೊಬ್ಬ ಪ್ರಜೆಗೂ ಬಹಳಷ್ಟು ಕರ್ತವ್ಯಗಳು ಮತ್ತು ಹಕ್ಕುಗಳು ನೀಡಲ್ಪಟ್ಟಿರುತ್ತವೆ. ಅವುಗಳ ಪಾಲನೆ ಮತ್ತು ರಕ್ಷಣೆಗೆ ಪೋಲೀಸ್ ಇಲಾಖೆ ಸಹಕರಿಸಿದಂತೆ ನ್ಯಾಯಬದ್ಧ ತೀರ್ಮಾನಕ್ಕಾಗಿ ನ್ಯಾಯಾಲಯಗಳು ಪ್ರಜೆಗಳಿಗೆ ಸಹಕರಿಸುತ್ತವೆ. ಮಕ್ಕಳು ಅನ್ಯಾಯ ಹೊಂದಿದಲ್ಲಿ ಅವರ ಸಹಕಾರಕ್ಕೆ ವಕೀಲರಾದ ನಾವು ಸದಾ ಕಟಿಬದ್ಧರಾಗಿರುತ್ತೇವೆ. ಈ ಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ಈ ಶಾಲೆಯ ನಿಯಮಗಳನ್ನು ನಾನೂ ಅರಿತಿದ್ದೇನೆ. ಇಲ್ಲಿ ಭಾವಾಂತರಂಗ, ತಾಲೂಕು ಮಟ್ಟದ ಸ್ಪರ್ಧೆಗಳು, ಇನ್ನಿತರ ಸ್ಪರ್ಧೆಗಳು ವಿದ್ಯಾರ್ಥಿಗಳ ಹಿತಕ್ಕಾಗಿಯೇ ನಡೆಸಲ್ಪಡುತ್ತವೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಳ್ಳೂರು-74ರಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ 14 ಕೊರಗ ಕುಟುಂಬಗಳಿಗೆ ನಿರ್ಮಿಸಲಾದ ಹೊಸ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗೃಹ ಪೂಜೆ ಮತ್ತು ಆಶೀರ್ವಚನ ಮಾಡಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ಇನ್ನೂ ರಾಮರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ಪ್ರಜೆಗಳು ಎಂದು ಕರೆಸಿಕೊಳ್ಳುವ ತೀರ ಹಿಂದುಳಿದ ಕೊರಗ ಜನಾಂಗಕ್ಕೆ ಮನೆ ನಿರ್ಮಸಿ ಕೊಡುವ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಈ ಮೂಲಕ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳುತ್ತಿದೆ. ಕೊರಗರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಸೇವೆಯನ್ನು ಅಯೋಧ್ಯೆಗೆ ತೆರಳಿ, ರಾಮನ ಪದತಲಕ್ಕೆ ಅರ್ಪಿಸುತ್ತೇನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ನುಡಿದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜಿ ಅವರು ಸಮಾರಂಭದ ಉದ್ಘಾಟನೆ…

Read More