ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಸಮಾನತೆಗಾಗಿ ಮಹಿಳೆಯರು ಹೋರಾಟ ನಡೆಸಿದರೆ ಅದು ಮುರ್ಖತನವಾಗುತ್ತದೆ ಏಕೆಂದರೆ ಮಹಿಳೆಯರು ಎಲ್ಲರಿಂಗಿಂತ ಶ್ರೇಷ್ಠರು, ಅವರ ಸಾಮರ್ಥ್ಯದ ಅರಿವು ಅವರಿಗಿದ್ದರೆ ಯಾವುದೇ ಹೋರಾಟದ ಅಗತ್ಯ ಅವರಿಗಿಲ್ಲ ಎಂದು ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಳ್ವಾಸ್ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಮತ್ತು ಸೊಸೈಟಿ ಫಾರ್ ವುಮೆನ್ ರಿರ್ಸೋಸ್ ಡೆವಲಪ್‌ಮೆಂಟ್ ಜತೆಗೂಡಿ ಮಿಜಾರು ಅಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಶಕ್ತಿ ಹಾಗೂ ಕರ್ತವ್ಯಗಳ ಕುರಿತು ಚಿಂತಿಸಬೇಕಿದೆ. ತಮಗಿರುವ ಅನೇಕ ಸೌಲಭ್ಯಗಳು ಹಾಗೂ ಸವಲತ್ತುಗಳನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಮಹಿಳೆಯರು ತಮ್ಮ ಜವಾಬ್ದಾರಿ ಮೆರೆಯಬೇಕಿದೆ ಎಂದರು. ಕಳೆದ ಹಲವಾರು ದಶಕಗಳಿಂದ ಮಹಿಳೆಯರ ಉನ್ನತಿ ಸಾಧ್ಯವಾಗಿದ್ದರೂ, ಶೇಕಡಾ ಏಳುರಷ್ಟು ಮಹಿಳೆಯರು ಮಾತ್ರ ಉನ್ನತ ಸ್ಥಾನದಲ್ಲಿದಲ್ಲಿರುವುದು ವಿಷಾದಕರ ಎಂದರು. ಇಂದಿಗೂ ನಮ್ಮ ಸಮಾಜದಲ್ಲಿ ಕೆಲ ವರ್ಗದ ಗಂಡಸರು ಮಹಿಳೆಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದು ಅವರನ್ನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಸ್ತ್ರೀ ಎಂಬ ಪದಕ್ಕೆ ಬೆಲೆ ಕಟ್ಟಲಾಗದ ಅನಂತವಾದ ಭಾವನೆ ಶಕ್ತಿ ಇದೆ. ಮಹಿಳೆ ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸಿ ಸಾಧನೆ ಮಾಡುತ್ತಿದ್ದಾಳೆ. ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುತ್ತಿದ್ದ ಮಹಿಳೆ ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾಳೆ. ಮಹಿಳೆಯರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶಗಳು ದೊರೆಯುತ್ತಿದೆ. ಮಹಿಳೆಯರಿಗೆ ಜೀವನದ ಪ್ರತಿರಂಗದಲ್ಲಿ ಪುರುಷರಿಗೆ ಸಮಾನವಾದ ಸ್ಥಾನ ಪಡೆಯವ ಹಕ್ಕು ಸಿಗುತ್ತಿದೆ. ಮಹಿಳೆ ಎಲ್ಲಾ ರಂಗದಲ್ಲಿ ಇನ್ನು ಹೆಚ್ಚು ಸಕ್ರೀಯವಾಗಿ ಅಭಿವೃದ್ಧಿ ಪಥದತ್ತ ಮುನ್ನಡೆದರೆ ಮಾತ್ರ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಯುಜಿಸಿ-ಎನ್‌ಇಟಿ ರಾಷ್ಟ್ರೀಯ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತೆ ಯು.ಸಂಗೀತಾ ಶೆಣೈ ಹೇಳಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಇವರ ಆಶ್ರಯದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಆದಿತ್ಯವಾದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗುತ್ತಿದ್ದು, ಪರೀಕ್ಷೆಗೆ ಹೇಗೆ ಪೂರ್ವ ತಯಾರಾಗಬೇಕು, ದಿನಂಪ್ರತಿ ಹೇಗೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ತರಬೇತಿ ಸಂಸ್ಥೆ ಮಾಹಿತಿ ನೀಡುತ್ತವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವ ರೀತಿಯಲ್ಲಿ ವಿ-ಶೈನ್ ತರಬೇತಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಹಾಯಕ ಪೋಲಿಸ್ ಅಧೀಕ್ಷಕ ಹರಿರಾಮ್‌ಶಂಕರ್ ತಿಳಿಸಿದರು. ಅವರು ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್,ಕೋಟದಲ್ಲಿ ವಿ-ಶೈನ್ ತರಬೇತಿ ಸಂಸ್ಥೆ ಆಸರೆಯಲ್ಲಿ ನಡೆಯುತ್ತಿರುವ ಕರ್ನಾಟಕ ಲೋಕಸೇವಾ ಆಯೋಗವು ಕರೆದಿರುವ 2000 ಕ್ಕೂ ಮಿಕ್ಕಿ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವೀತಿಯ ದರ್ಜೆ ಸಹಾಯಕ ಹುದ್ದೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿ ಜೀವನ, ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ್ನು ಯಾವ ರೀತಿ ತೊಡಗಿಸಿಕೊಂಡರು, ಪರೀಕ್ಷೆಗಳಿಗೆ ಹೇಗೆ ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಿದರು. ಕಾರಂತ ಥೀಮ್ ಪಾರ್ಕ್ ಹಾಗೂ ವಿ-ಶೈನ್ ಪರವಾಗಿ ಅವರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿರುವ ಉದ್ಯೋಗ ಅವಕಾಶಗಳ ಮತ್ತು ಡಿಜಿಟಲ್ ಮಾರ್ಕೆಟ್‌ನ ಪ್ರಯೋಜನಗಳನ್ನು ಹುಬ್ಬಳ್ಳಿ ಜ್ಞಾನ ಸಂಸ್ಥೆಯ ಸ್ಥಾಪಕ ಮಯೂರ ಹತ್ವಾರ್ ತಿಳಿಸಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಆಯೋಜನೆಯಲ್ಲಿ ಅಂತಿಮ ಬಿ.ಕಾಂ. ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ನಡೆಸಿದ ಡಿಜಿಟಲ್ ಮಾರ್ಕೆಟ್‌ನ ಅವಕಾಶಗಳ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಫ್ರಿಲೆನ್ಸ್ ಸಲಹೆಗಾರ ಮತ್ತು ತರಬೇತುದಾರ ವರದರಾಜ್ ಕೆ. ಭಟ್, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ವಕ್ವಾಡಿ ವಂದಿಸಿ, ವಾಣಿಜ್ಯ ಉಪನ್ಯಾಸಕ ಸಂತೋಷ್ ಎ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಗ್ರಾಮದ ಗಡಿಯಿಂದ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಗಡಿಯವರೆಗೆ ಖಾಸಗೀ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ 66(17) ಅಗಲೀಕರಣದ ಬಗ್ಗೆ ಭೂ ಸ್ವಾಧೀನಗೊಳಿಸಿದ ಜಮೀನುಗಳ ಮಾಲಕರಿಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ಪರಿಹಾರವನ್ನು ಪಡೆದುಕೊಳ್ಳಲು ನೋಟೀಸ್ ಮೂಲಕ ತಿಳುವಳಿಕೆ ನೀಡಿದ್ದರೂ, ಈವರೆಗೆ ಹಲವಾರು ಭೂ ಮಾಲಕರು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದುಕೊಂಡಿರುವುದಿಲ್ಲ. ಆದ್ದರಿಂದ ಪ್ರಕಟಣೆಯ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗೆ ಸಕ್ಷಮ ಪ್ರಾಧಿಕಾರಿಯವರು ರಾಷ್ಟ್ರೀಯ ಹೆದ್ದಾರಿ 66(17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಇವರಿಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನಿಗದಿಪಡಿಸಿದ ಪರಿಹಾರ ಪಡೆಯುವಂತೆ ಸಕ್ಷಮ ಪ್ರಾಧಿಕಾರಿಗಳು ರಾ.ಹೆ. 66(17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಫೆಬ್ರುವರಿ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಗಲಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ| ಅರವಿಂದ ಹೆಬ್ಬಾರ್ ಅವರು ಸಸ್ಯಲೋಕದ ವಿಸ್ಮಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಸ್ಯಲೋಕವೆಂಬುದು ವಿಸ್ಮಯ ಮತ್ತು ಅದ್ಭುತಗಳ ಆಗರ. ನಾವು ನೋಡದ ಕೇಳದ ಎಷ್ಟೋ ವಿಚಾರಗಳು ಸಂಗತಿಗಳು ಪ್ರಕೃತಿಯ ಮಡಿಲಲ್ಲಿ ಹುದುಗಿದೆ. ಅದನ್ನು ತಿಳಿಯುವುದೇ ವಿಜ್ಞಾನದ ಅದ್ಭುತವಾಗಿದೆ ಎಂದು ಕೆಲವು ಮಾಹಿತಿಗಳನ್ನು ತಿಳಿಸಿದರು. ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರದ ಜ್ಞಾನಭಾರತಿ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಅವರು ಮಾತನಾಡಿ ನಿi ವಿಷಯಗಳ ಕಲಿಯುವಿಕೆಯೊಂದಿಗೆ ನಿi ಕೌಶಲ ಹೆಚ್ಚಿಸುವ ಯಾವುದೇ ವಿಷಯದ ಕುರಿತು ವಿಶೇಷ ತರಬೇತಿ ಪಡೆದಿರಬೇಕು. ಅದು ಮುಂದೆ ನಿಮ್ಮ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಲಲಿತಾದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೌಮ್ಯ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ ಅವರ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಗುಡ್ಡೆಅಂಗಡಿ ನಾಡ ಶ್ರೀ ರಾಮ ಮಂದಿರದಲ್ಲಿ ಮೊಕ್ಕಾಂ ಮಾಡಿ ಆಶೀರ್ವಚನ ನೀಡಿದರು. ಗಂಗೊಳ್ಳಿ ಮೊಕ್ಕಾಂನಿಂದ ಮಂಗಳವಾರ ಆಗಮಿಸಿದ ಶ್ರೀಗಳವರನ್ನು ವೈಭವದ ಪುರಮೆರರವಣಿಗೆ ಮೂಲಕ ಗುಡ್ಡೆಅಂಗಡಿ ನಾಡ ಶ್ರೀ ರಾಮ ಮಂದಿರ ಕರೆ ತರಲಾಯಿತು. ಶ್ರೀಗಳ ಮೊಕ್ಕಾಂ ಸಂದರ್ಭ ಮಧ್ಯಾಹ್ನ ಶ್ರೀ ಸಂಸ್ಥಾನ ದೇವರಿಗೆ ಮಹಾಪೂಜೆ, ಗುರುಭಿಕ್ಷೆ, ಉಭಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ಜರುಗಿತು. ಗಂಗೊಳ್ಳಿ ಶ್ರೀ ವೀರವಿಠಲ ಭಜನಾ ಮಂಡಳಿ ಗಂಗೊಳ್ಳಿ ಇವರಿಂದ ಭಜನ ಗಂಗಾ ಕಾರ್ಯಕ್ರಮ ನಡೆಯಿತು. ಪುರೋಹಿತರಾದ ಜಿ.ವೇದವ್ಯಾಸ ಕೆ.ಆಚಾರ್ಯ ನೇತೃತ್ವದಲ್ಲಿ ಉಭಯ ಶ್ರೀಗಳವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಮಿತಿಯ ಅಧ್ಯಕ್ಷ ಸತೀಶ ಎಂ.ನಾಯಕ್, ಕಾರ್ಯದರ್ಶಿ ಪ್ರಶಾಂತ ಪೈ, ಸಮಿತಿಯ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಯುಥ್ ರೆಡ್‌ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‌ಕ್ರಾಸ್, ಕುಂದಾಪುರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ರೆಡ್‌ಕ್ರಾಸ್, ಕುಂದಾಪುರ ಇದರ ಸಬಾಪತಿಗಳಾದ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಸುಮಾರು 371 ಯುನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು. ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯುಥ್ ರೆಡ್‌ಕ್ರಾಸ್ ವಿಂಗ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮತ್ತು ವಿದ್ಯಾರಾಣಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಅರುಣ ಎ.ಎಸ್. ಮತ್ತು ರಾಮಚಂದ್ರ ಆಚಾರಿ, ಎನ್.ಸಿ.ಸಿ ಅಧಿಕಾರಿಗಳಾದ ಶರಣ್ ಎಸ್.ಜೆ, ಮತ್ತು ಅಂಜನ್ ಕುಮಾರ್, ಮಣಿಪಾಲದ ರಕ್ತಬ್ಯಾಂಕ್ ಇದರ ವೈಧ್ಯಾಧಿಕಾರಿ ಡಾ| ಶೀತಲ್ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮೇಲ್‌ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಪೂರ್ವ ಪ್ರಾಥಮಿಕ ಶಾಲೆಯ ವತಿಯಿಂದ ತಾಯಂದಿರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯ ಮುಖ್ಯಶಿಕ್ಷಕಿ ಚಂದ್ರಕಲಾ ಮಾತನಾಡಿ ಭಾರತೀಯ ಪರಂಪರೆಯಲ್ಲಿ ತಾಯಿ-ಮಗುವಿನ ಸಂಬಂಧ ಶ್ರೇಷ್ಠವಾದುದು. ಇದು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ಕೆ., ಗೌರವ ಶಿಕ್ಷಕಿ ಸುನೀತಾ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಜಿ., ಕಿರಣ್ ಎಂ.ಜಿ., ನಟರಾಜ್ ಎಂ.ಜಿ., ಜಗದೀಶ ಮೇಲ್‌ಗಂಗೊಳ್ಳಿ, ಸಂದೀಪ ಮೇಲ್‌ಗಂಗೊಳ್ಳಿ, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ರಮೇಶ ಮಹಾಲೆ ಸ್ವಾಗತಿಸಿದರು. ಸಹಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ದಿನೇಶ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರ ಶೆಟ್ಟಿ ಮಾತನಾಡಿ ಮಾನವಿಕ ಶಾಸ್ತ್ರ ಎನ್ನುವುದು ಒಂದು ಅಧ್ಯಯನವಾಗಿರದೇ ಅದು ಕಲಿಯುವಿಕೆಯ ಆಸಕ್ತಿಯನ್ನು ಮೂಡಿಸಬೇಕು. ಇದರಲ್ಲಿ ಸಾಹಿತ್ಯದ ಮೇಳೈಸುವಿಕೆ ಇದ್ದಾಗ ಒಬ್ಬ ವಿದ್ಯಾರ್ಥಿಗೆ ಓದಿನ ರುಚಿಯನ್ನು ಅರ್ಥೈಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಾನವಿಕ ಶಾಸ್ತ್ರದ ಕಲಿಯುವಿಕೆ ಜಟಿಲವಾಗದಂತೆ ಮತ್ತು ತಿಳಿದುಕೊಳ್ಳಲು ಸಾಹಿತ್ಯವೆನ್ನುವುದು ಬೇಕೆಬೇಕು. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಸಾಹಿತ್ಯಕ್ಕೆ ಯಾವುದೇ ದೇಶ ಭಾಷೆ, ಸಂಸ್ಕೃತಿ, ಶಾಸ್ತ್ರಗಳ ಮೇರೆ ಇಲ್ಲ. ಎಲ್ಲೆಂದರಲ್ಲಿ ಸಾಹಿತ್ಯ ಸ್ಪುರಿಸುತ್ತದೆ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅಲ್ಲದೇ ಒಳ್ಳೆಯ ಸಾಹಿತ್ಯದ ಓದುಗರಾಗಬೇಕು. ಯಾಕೆಂದರೆ ನಮ್ಮ ಆಲೋಚನಾಲಹರಿ ಅದು ಚುರುಕನ್ನು ಮುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಬಿ.ಬಿ.ಹೆಗ್ಡೆ…
