ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೀಮ್ ಊರ್ಮನಿ ಮಕ್ಕಳ್ ತಂಡದ ಸತತ 6ನೇ ವರ್ಷದ ಸಹಾಯ ಹಸ್ತ-2025 ಕಾರ್ಯದ ಅಂಗವಾಗಿ ಈ ಬಾರಿ brain haemorrhage ಉಂಟಾಗಿ AVM rapture ನಿಂದ ಬಳಲುತ್ತಿದ್ದ ತಾಲೂಕಿನ ಸಿದ್ದಾಪುರದ ಶಿಕ್ಷಕಿ ಶಶಿಕಲಾ ಶೆಟ್ಟಿ ಅವರ ಶಸ್ತ್ರಚಿಕಿತ್ಸೆಗೆ 55,100 ರೂಪಾಯಿಯನ್ನು ಸಹಾಯಧನದ ರೂಪದಲ್ಲಿ ಅವರ ಮನೆಗೆ ನೀಡಲಾಯಿತು.

ಈ ಸಮಯದಲ್ಲಿ ಟೀಮ್ ಊರ್ಮನಿ ಮಕ್ಕಳ್ ತಂಡದ ಕೃಷ್ಣ ಕೊರ್ಗಿ, ನಾಗೇಶ್ ಗಾವಳಿ, ಸಂತೋಷ ಕೊರ್ಗಿ, ಚಂದ್ರ ಕೊರ್ಗಿ, ಉಷಾ ಅಮವಾಸೆಬೈಲ್, ಕಾರ್ತಿಕ ಜನ್ನಾಡಿ, ದೀಪಾ ಜನ್ನಾಡಿ, ಚಂದ್ರ ಉಳ್ಳೂರು-74, ಜೋಗು ಕಾಸನಕಟ್ಟೆ ಶಶಿಕಲಾ ಶೆಟ್ಟಿ ಅವರ ಪತಿ ಪ್ರದೀಪ್ ಶೆಟ್ಟಿ ಅವರು ಭಾಗಿಯಾಗಿದ್ದರು.










