Author: ನ್ಯೂಸ್ ಬ್ಯೂರೋ

ಕುಂದಾಪ್ರಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 182 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 45 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಸನ್ನಾ ಪೈ 600ಕ್ಕೆ 600 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಿಫ್ಜಾ (597) ಮತ್ತು ಸನತ್ (594) ಅಂಕ ಪಡೆದಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದ ನಮಿತಾ ವಿ. ಶೇಟ್ 595 ಅಂಕಗಳನ್ನು ಗಳಿಸಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಬುದ್ಧ ಸಮಾಜ ನಿರ್ಮಾಣ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಉನ್ನತ ಆಶಯವನ್ನಿರಿಸಿಕೊಂಡು ರಾಜ್ಯಾದ್ಯಂತ ಕಳೆದ 8 ತಿಂಗಳಿಂದ ಸುಮಾರು 8000 ಕಿ.ಮೀ. ಕ್ರಮಿಸಿರುವ ಬೆಂಗಳೂರಿನ ಸಾಹಿತಿ ಸಮಾಜಸೇವಕ ಹೆಚ್. ಕೆ. ವಿವೇಕಾನಂದ ಅವರ ಪಾದಯಾತ್ರೆಯು ಕುಂದಾಪುರ ತಾಲೂಕಿನ ಸಿದ್ದಾಪುರಕ್ಕೆ ಬಂದು ತಲುಪಿತು. ಪಾದಯಾತ್ರೆ ಹೆಬ್ರಿಯಿಂದ ಶಂಕರನಾರಾಯಣ ತಲುಪುತ್ತಿದ್ದಂತೆ ಸಿದ್ಧಾಪುರ ಹಸಂಗಡಿ ರೋಟರಿ ಕ್ಲಬ್, ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ, ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸಾರ್ವಜನಿಕರು ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು. ಈ ಸಂಧರ್ಭ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಲಕ್ಷ್ಮಿನಾರಾಯಣ ಉಡುಪ, ಲೇಖಕ ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ ಹೊಸಂಗಡಿ ರೋಟರಿ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ, ಯಕ್ಷ ನುಡಿಸಿರಿ ಬಳಗದ ಕಾರ್ಯದರ್ಶಿ ಭೋಜರಾಜ ಶೆಟ್ಟಿ, ಸುಭಾಷ್ ಯಡಿಯಾಳ, ನಮಿತಾ ಯಡಿಯಾಳ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಜನತಾ ಕಾಲನಿ ನಿವಾಸಿ ಶಂಕರ ಖಾರ್ವಿ-ಪಾರ್ವತಿ ದಂಪತಿಯ ಪುತ್ರ ಸುಭಾಸ್ ಖಾರ್ವಿ(28) ಗುಲಾಯ್ನ್ ಬೇರ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತಿದ್ದು, ಅವರ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ (ಆಸ್ಪತ್ರೆ ಸಂಖ್ಯೆ: 03444242). ಚಿಕಿತ್ಸೆಗೆ ರೂ 4 ಲಕ್ಷ ವೆಚ್ಚವಾಗುವುದೆಂದು ಆಸ್ಪತ್ರೆಯ ನ್ಯೂರೊಲಜಿ ವಿಭಾಗದ ಮುಖ್ಯಸ್ಥೆ ಡಾ. ಅಪರ್ಣಾ ಪೈ ದೃಢೀಕರಿಸಿದ್ದಾರೆ. ಸುಭಾಸ್ ಅವರ ತಂದೆ ಹೃದ್ರೋಗಕ್ಕೆ ಮತ್ತು ತಾಯಿ ಪಾರ್ವತಿ ಥೈರಾಯ್ಡ್ ಸಂಬಂಧಿ ಕಾಯಿಲೆಗೆ ನಿರಂತರ ಔಷಧಿ ಸೇವಿಸುತ್ತಿದ್ದಾರೆ. ಕೇವಲ ದಿನದ ದುಡಿಮೆಯಿಂದ ಬದುಕಬೇಕಾದ ಕುಟುಂಬ ಸುಭಾಸ್ ಚಿಕಿತ್ಸೆಗೆ ಹಣ ಹೊಂದಿಸಲು ಸಾದ್ಯವಾಗದೇ ಅವರು ದಾನಿಗಳ, ಸಂಘಟನೆಗಳ ನೆರವು ಯಾಚಿಸಿದ್ದಾರೆ. ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ (ಐಎಫ್‌ಎಸ್‌ಸಿ ಕೋಡ್: ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ(ಐಎಫ್‌ಎಸ್‌ಸಿ ಕೋಡ್: 0ಸಿಎನ್‌ಆರ್‌ಬಿ0010282) 02822250002001 ಸಂಖ್ಯೆಯ ಉಳಿತಾಯ ಖಾತೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಸಹಕಾರಿ ಸಂಘದ ಅವ್ಯವಹಾರ ತನಿಖೆ ಮಾಡಿ ತಪ್ಪಿತಸ್ತರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಮುಂದೆ ಧರಣಿ ನಡೆಸುವುದಾಗಿ ಸಂಘದ ಸದಸ್ಯ ಬಿ. ಟಿ. ಮಂಜುನಾಥ ಪೂಜಾರಿ ಎಚ್ಚರಿಸಿದ್ದಾರೆ. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಉಡುಪಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವರು ಮಾಮೂಲಿ ಅರ್ಜಿ ಎಂದು ಪರಿಗಣಿಸಿ ತಮ್ಮ ಕೈಕೆಳಗಿನ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತಿದ್ದರೂ ತಮಗೆ ಏನು ಸಂಬಂಧ ಇಲ್ಲ ಎಂಬಂತೆ ವರ್ತಿಸಿ ಮಾಹಿತಿ ನೀಡಲು ಅವಕಾಶ ಇಲ್ಲ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದಾರೆ. ಆ ನಂತರ ಕುಂದಾಪುರ ಸಹಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ರಾಜೇಶ ಎಂ.ಜಿ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾರಾಯಣ ಇ. ನಾಯ್ಕ್, ನಿಕಟಪೂರ್ವ ಅಧ್ಯಕ್ಷರಾಗಿ ಬಿ.ಲಕ್ಷ್ಮೀಕಾಂತ ಮಡಿವಾಳ, ನಿಯೋಜಿತ ಅಧ್ಯಕ್ಷೆಯಾಗಿ ಸುಗುಣ ಆರ್.ಕೆ., ಉಪಾಧ್ಯಕ್ಷರಾಗಿ ಪ್ರವೀಣ ಒಲಿವೇರಾ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಪೂಜಾರಿ, ಖಜಾಂಚಿ ನಾಗರಾಜ ಶೆಟ್ಟಿ, ನಿರ್ದೇಶಕರಾಗಿ ಉಮೇಶ ಮೇಸ್ತ, ಪ್ರದೀಪ ಡಿ.ಕೆ., ವಾಸುದೇವ ಶೇರುಗಾರ್, ಚಂದ್ರಕಲಾ ಟಿ., ಜನಾರ್ದನ ಪೂಜಾರಿ ಪೆರಾಜೆ ಶಿವಾನಂದ ಪೂಜಾರಿ, ಪ್ರೇಮಾ ಸಿ.ಎಸ್., ಎಚ್. ಗಣೇಶ ಕಾಮತ್, ಅಶೋಕ ದೇವಾಡಿಗ, ರಾಮನಾಥ ನಾಯಕ್ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ 2021ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ನೊಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ವರ್ಚುವಲ್ ವೇದಿಕೆಯ ಮೂಲಕ ಚಾಲನೆ ನೀಡಿದ್ದು, ಆರೋಗ್ಯ ಸೇವೆಗಳಿಗೆ ಈ ಕಾರ್ಡ್ ಉತ್ತಮ ಪ್ರಯೋಜನ ಹೊಂದಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಉಪ ವ್ಯವಸ್ಥಾಪಕರಾದ ಕೃಷ್ಣಪ್ರಸಾದ್ ಹೇಳಿದರು. ಅವರು ಶುಕ್ರವಾರ ಕುಂದಾಪುರದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಅವರಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ ಹಸ್ತಾಂತರಿಸಿದಬಳಿಕ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವಿಭಾಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ನಿ. ಮುಳ್ಳಿಕಟ್ಟೆ ಹೊಸಾಡು ಇದರ 5ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ಮುಳ್ಳಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಮುಖ್ಯ ಕಾರ್ಯನಿರ್ವಹಣಾಕಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯು ರೂ. 12,98,25,081 ಠೇವಣಿ ಸಂಗ್ರಹ, ರೂ10,23,76,291 ಸಾಲ ವಿತರಿಸಲಾಗಿದೆ. ರೂ.4,61,00,862 ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಹೊಂದಿದ್ದು, ರೂ 6,48,447 ಮೌಲ್ಯದ ಚರಾಸಿಯನ್ನ್ಥು ಹೊಂದಿರುತ್ತದೆ. ಸಂಘದಲ್ಲಿ ಕಾಯ್ದಿರಿಸಿದ ನಿಧಿಗಳು 1,22,35,917 ಇರುತ್ತದೆ ಸದ್ರಿ ಆರ್ಥಿಕ ವರ್ಷದಲ್ಲಿ ರೂ. 56 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ್ದು ರೂ7,92,000 ಲಾಭ ಗಳಿಸಿರುತ್ತದೆ ಎಂದು ವರದಿ ಮಂಡಿಸಿದರು. ಸಂಘದ ಅಧ್ಯಕ್ಷರು ಸಂಘವು ಆರ್ಥಿಕ ವ್ಯವಹಾರ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡಿರುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಸದಸ್ಯರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡಿ 6 ಜನ ಸದಸ್ಯರ ಮದುವೆ 3 ಮನೆ ಪ್ರವೇಶಕ್ಕೆ ಸಹಕರಿಸಿದ್ದೇವೆ ಮತ್ತು ಮಹಾಸಭೆಯಲ್ಲಿ ಸಂಘದ ಸದಸ್ಯರ 1…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡಲ್ಪಡುವ ಈ ಸಾಲಿನ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’ ಘೋಷಣೆಯಾಗಿದ್ದು, ಈ ಬಾರಿ ಈ ಪ್ರಶಸ್ತಿಗೆ ‘ವಿಜಯ ಕರ್ನಾಟಕ’ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ವಿವೇಕ ಮಹಾಲೆ, ‘ದಿಗ್ವಿಜಯ ನ್ಯೂಸ್’ನ ಉತ್ತರಕನ್ನಡ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ಹಾಗೂ ‘ಪ್ರಜಾವಾಣಿ’ ಉತ್ತರಕನ್ನಡ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚಿಗೆ ಸಂಘದ ಅಧ್ಯಕ್ಷ ಟಿ .ಬಿ. ಹರಿಕಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಮೂವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ 2016ರಿಂದ ಟ್ಯಾಗೋರ್ ಪತ್ರಿಕಾ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಕಾರವಾರದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಹೊರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಈರ್ವರನ್ನು ಪ್ರತಿವರ್ಷ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ತಾಲೂಕಿನ ಸಿದ್ದರ ಗ್ರಾಮದಲ್ಲಿ ಜುಲೈ 25ರಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿರಿಯ ಪತ್ರಕರ್ತ, ಉದಯವಾಣಿಯಲ್ಲಿ 44 ವರ್ಷ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎನ್. ಗುರುರಾಜ್ ಅವರಿಗೆ ಪತ್ರಕರ್ತರ ವೇದಿಕೆ ಬೆಂಗಳೂರು ನೀಡುವ ಪತ್ರಿಕಾದಿನದ ಗೌರವ (2021)ವನ್ನು ಅವರ ನಿವಾಸದಲ್ಲಿ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿರುವರು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಒಂದೇ ಪತ್ರಿಕೆಯಲ್ಲಿ 44 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರ ಮಾಧ್ಯಮ ಸೇವೆಯನ್ನು ಗುರುತಿಸಿ ಅವರನ್ನು ಜುಲೈ23 ರಂದು ಗೌರವಿಸಲಾಗುತ್ತಿದೆ. ದಾವಣಗೆರೆ ಜಗಳೂರಿನ ಅಸಗೋಡಿನಲ್ಲಿ 1944ರಲ್ಲಿ ಜನಿಸಿದ ಎನ್.ಗುರುರಾಜ್ ಇಂಜಿನಿಯರ್ ಪದವಿಧರರು. ಉತ್ತಮ ಕಥೆಗಾರರಾಗಿರುವ ಅವರು ಪದವಿಯ ತಕ್ಷಣ ಆಗ ತಾನೆ ಪ್ರಕಟಣೆ ಆರಂಭಿಸಲಿದ್ದ ಉದಯವಾಣಿಗೆ ಅನುವಾದಕರಾಗಿ ಸೇರಿದರು. ಮುಂದೆ ಅವರ ತಮ್ಮ ಕಾರ್ಯದಕ್ಷತೆಯಿಂದ ಸಹಾಯಕ ಸುದ್ದಿ ಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ, ಸಂಪಾದಕರಾಗಿ 2014ರಲ್ಲಿ ಸೇವಾ ನಿವೃತ್ತಿ ಪಡೆದಿದ್ದಾರೆ. ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರಿಗೆ 2006 ರ ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಸಂದಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚವೀಶ್ ಜೈನ್ 600 ರಲ್ಲಿ 590 ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

Read More