Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಎದುರಾಗಬಹುದಾದ ಸವಾಲು ಸ್ವೀಕರಿಸಿ ಮುನ್ನಡೆಯಲಷ್ಟೆ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣದೊಂದಿಗೆ ಯಾವ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂಬುದನ್ನು ಗುರುತಿಸಿ, ಅದರಲ್ಲಿ ಹೆಚ್ಚಿನ ಕೌಶಲ್ಯ ಹೊಂದಲು ವಿದ್ಯಾರ್ಥಿ ದೆಸೆಯಿಂದಲೇ ತಯಾರಿ ನಡೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕು ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಶೆಟ್ಟಿ ಹೇಳಿದರು. ಅವರು ಗುರುವಾರ ಇಲ್ಲಿನ ಯು. ಬಿ. ಶೆಟ್ಡಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ‘ಚೈತನ್ಯ’ ಉದ್ಘಾಟಿಸಿ ಮಾತನಾಡಿ, ಭಾರತವು ಯುವಜನರ ದೇಶವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದರೂ ಅದೇ ನಾವು ದೇಶಕ್ಕೆ ಸಲ್ಲಿಸಬಹುದಾದ ಕೊಡುಗೆಯಾಗಿದೆ. ಆಧುನಿಕ ಯುಗದಲ್ಲಿ ನೂರಾರು ಕೆಲಸದ ಅವಕಾಶ ತೆರೆದುಕೊಂಡಿದ್ದು, ಅದಕ್ಕೆ ತಕ್ಕಂತೆ ಸಿದ್ಧರಾಗುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು. ಅಧಿಕಾರ ಮತ್ತು ಹುದ್ದೆಯನ್ನು ಕೇವಲ ತೋರಿಕೆಗೆ ಹೊಂದದೇ ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಸೇರುವುದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದ್ದು, ಕರಾವಳಿಯ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇವರ ಚೈತನ್ಯಶಕ್ತಿ ವೃದ್ಧಿಗೆ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವ ಕ್ರಮವಿದ್ದು, ದೊಡ್ಡ ಭಕ್ತಗಣವನ್ನೇ ಹೊಂದಿರುವ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿಯೂ ಈ ಕಾರ್ಯ ಶೀಘ್ರ ನಡೆಯುವಂತಾಗಲಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಬುಧವಾರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ 11 ದಿನಗಳ ಕಾರ್ಯಕ್ರಮಕ್ಕೆ 1 ಕೋಟಿ ರೂ. ಖರ್ಚಾಗಬಹು. ಉತ್ತಮವಾದ ಸಮಿತಿ ನೇಮಿಸಿಕೊಂಡು ಭಕ್ತರ ದೇಣಿಗೆ ಎಲ್ಲಿಯೂ ವ್ಯರ್ಥವಾಗದಂತೆ ಕಾರ್ಯಕ್ರಮ ಆಯೋಜಿಸುವುದು ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಹೊಣೆಯಾಗಿದೆ ಎಂದರು. ತಂತ್ರಿಗಳಾದ ಕೆ. ಮಂಜುನಾಥ ಅಡಿಗ ಮಾತನಾಡಿ, 25 ವರ್ಷದಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿಲ್ಲ. ಗ್ರಾಮಸ್ಥರು, ಭಕ್ತರ ಸಹಕಾರ ಪಡೆದು ಅಷ್ಟಬಂಧ ಕಾರ್ಯಕ್ರಮ ಮಾಡಬೇಕಾಗಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು. ಪ್ರಧಾನ ಅರ್ಚಕ ಪ್ರಕಾಶ್ ಉಡುಪ, ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಸಿಇಓ ಬಿಮಪ್ಪ ಬಿಲ್ಲಾರ, ಬೈಂದೂರು ಪೊಲೀಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಧ್ಯಾತ್ಮ ರಹಸ್ಯ ಮಾಸಪತ್ರಿಕೆ, ಬೀಜಾಡಿ ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಕಲಾ ಸಂಘ, ಕೋಟೇಶ್ವರ ಓಂಶಾಂತಿ ಪ್ರೊಡೆಕ್ಷನ್, ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಿಕಾ ಕೃಷಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಹಾಗೂ 10 ಸಾವಿರ ನಗದು ಪುರಸ್ಕಾರಕ್ಕೆ ವಿಜಯವಾಣಿ ಹಿರಿಯ ವರದಿಗಾರ ಆರ್. ಶ್ರೀಪತಿ ಹೆಗಡೆ ಹಕ್ಲಾಡಿ ಆಯ್ಕೆ ಆಗಿದ್ದಾರೆ. ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಅವರ ಹತ್ತಾರು ವರದಿಗಳು ಮಹತ್ತರ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವುದಲ್ಲದೇ, ಆಡಳಿತಯಂತ್ರವನ್ನು ನಿರಂತರವಾಗಿ ಎಚ್ಚರಿಸುತ್ತಲೇ ಬಂದಿದೆ. ಹಕ್ಲಾಡಿ ಅವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ `ಕಡಲ ತೀರದ ಭಾರ್ಗವ ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’, ಮಾನವ ಹಕ್ಕು ಮಂಡಳಿ- ಬೆಂಗಳೂರು ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ‘ಟಿಪ್ಪು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶುದ್ಧವಾದ ನೀರು ಮತ್ತು ಹಿತ-ಮಿತವಾದ ಆಹಾರ ಸೇವನೆ, ಕಾಲಕ್ಕನುಗುಣವಾಗಿ ನಿದ್ರೆ ಮತ್ತು ದೇಹ ಪ್ರಕೃತಿಗೆ ಹೊಂದಿಕೊಳ್ಳುವ ವ್ಯಾಯಮದಿಂದ ರೋಗಮುಕ್ತರಾಗಬಹುದು. ಆಯುರ್ವೇದದ ದಿನಚರ್ಯೆ, ಋತುಚರ್ಯೆ ಹಾಗೂ ಯೋಗಚರ್ಯೆಗಳನ್ನು ಪಾಲಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದು ಎಂದು ಕುತ್ಪಾಡಿ ಎಸ್‌ಡಿಎಂ ಆಯರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಪೂಜಾರಿ ಹೇಳಿದರು. ಗೋಳಿಹೊಳೆ ಮೂರ್ಕೈ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ಸೋಮವಾರ ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಗೊಳಿಹೊಳೆ ಶಾಖೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉಡುಪಿ ಸಹಯೋಗದೊಂದಿಗೆ ನಡೆದ ಉಚಿತ ಆಯುರ್ವೇದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಆರೋಗ್ಯ ಮಾಹಿತಿ ನೀಡಿದರು. ನಿದ್ರೆ ಮನುಷ್ಯನ ಆಯಸ್ಸನ್ನು ನಿರ್ಧರಿಸುತ್ತದೆ. ಆಧ್ಯಾತ್ಮಿಕ ವ್ಯಾದಿ, ಆದಿಭೌತಿಕ ವ್ಯಾಧಿ ಹಾಗೂ ಆದಿದೈವಿಕ ವ್ಯಾದಿಗಳೇ ತಾಪತ್ರಯಗಳು. ನಮಗೆ ನಮ್ಮ ಜೀವನದ ಕಲ್ಪನೆಯೊಂದಿಗೆ ದೈವಬಲವೂ ಬೇಕು. ಪ್ರಕೃತಿಯನ್ನು ಗೌರವಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿ ಸಮುದಾಯಕ್ಕೆ ನೆಲಪರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಸ.ಹಿ.ಪ್ರಾ. ಶಾಲೆ, ಬವಳಾಡಿಯಲ್ಲಿ ನಡೆದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ವಿವೇಕಾನಂದ ಯುವಕ ಮಂಡಲ, ಗಂಟಿಹೊಳೆ, ಬವಳಾಡಿ, ಶ್ರೀ ಜಟ್ಟಿಗೇಶ್ವರ ಕಲಾ ಮತ್ತು ಕ್ರೀಡಾ ಸಂಘ, ಬವಳಾಡಿ ಇವರ ಸಹಯೋಗದೊಂದಿಗೆ ’ಕೆಸರಲ್ಲೊಂದಿನ’ ಮತ್ತು ’ಕಂಬಳ ಅಣಕು ಪ್ರದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬಿಜೂರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಿವೃತ್ತ ಮುಖ್ಯೋಪಧ್ಯಾಯರಾದ ನಾರಾಯಣ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಗೂ ಉದ್ಯಮಿಗಳಾದ ಬಿ.ಎಸ್. ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಜ್ವಲ್ ಶೆಟ್ಟಿ, ಉದ್ಯಮಿಗಳು, ಬವಳಾಡಿ, ಶೇಖರ ಆಚಾರಿ ಬವಳಾಡಿ, ಬಾಬು ಶೆಟ್ಟಿ ಗಂಟಿಹೊಳೆ, ಶ್ರೀಕಾಂತ ಶೆಟ್ಟಿ ಗಂಟಿಹೊಳೆ, ಸ.ಹಿ.ಪಾ. ಶಾಲೆ, ಬವಳಾಡಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮನ್ನು ತೆಗಳುವವರು, ತಿರಸ್ಕರಿಸುವವರನ್ನು ಮತ್ತು ತಪ್ಪು ಹುಡುಕುವವರನ್ನು ದೂರ ಇಡದೆ ಜೊತೆಯಲ್ಲೇ ಇರಿಸಿಕೊಂಡರೆ ನಮ್ಮ ಹೋರಾಟಕ್ಕೆ ಅವರೇ ಸ್ಪೂರ್ತಿಯಾಗುತ್ತಾರೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು. ಅವರು ಕಲಾಕ್ಷೇತ್ರ – ಕುಂದಾಪುರ ಟ್ರಸ್ಟ್ ಇದರ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಕೆಲಸ ಅಥವಾ ಗುರಿ ತಲುಪಿದ ನಂತರ ಸಿಗುವ ಖುಷಿಗಿಂತ ಆ ಗುರಿ ಸಾಧನೆ ಮಾಡುವ ನೆಪದಲ್ಲಿ ಪಡುವ ಪರಿಶ್ರಮ ಇದೆಯಲ್ಲ ಆ ಅನುಭವವೇ ಮನಸ್ಸಿಗೆ ಖುಷಿ ಕೊಡುತ್ತದೆ ಮತ್ತು ಅದು ಜೀವನಕ್ಕೂ ಪಾಠವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ದಾಮೋದರ ಪೈ, ಕೆ.ಆರ್. ನಾಯಕ್, ಡಾ. ರಾಜರಾಮ್ ಶೆಟ್ಟಿ, ಸನತ್ ಕುಮಾರ್ ರೈ, ಕುಮಾರ್ ಕಾಂಚನ್, ರಾಜೇಶ್ ಕಾವೇರಿ, ಕಲಾವಿದ ಭಾಸ್ಕರ ಆಚಾರ್ಯ, ಗೋಪಾಲ ವಿ, ಶ್ರೀಧರ ಸುವರ್ಣ, ಡಾ. ಹರಿಪ್ರಸಾದ್ ಶೆಟ್ಟಿ, ಪ್ರಕಾಶ್ಚಂದ್ರ ಹೆಗ್ಡೆ, ಬಿ.ಎನ್. ರಾಮಚಂದ್ರ, ಮೋಹನ್ ಸಾರಂಗ್, ಸಾಯಿನಾಥ ಶೇಟ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ಬೈಂದೂರು ತಾಲೂಕು ಘಟಕ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂಜಿ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಾಂಘಿಕ ಚಟುವಟಿಕೆಯಿಂದ ಸಮಸ್ಯೆಗಳ ಪರಿಹಾರ ಸುಲಭ ಸಾಧ್ಯ ಸಂಘಟನೆಯು ಉತ್ತಮ ಪತದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ದಿನಕರ ಶೆಟ್ಟಿ, ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರನ್ನು ಗೌರವಿಸುವುದರ ಮೂಲಕ ಅವರ ಕಾರ್ಯಕ್ಕೆ ಉತ್ತೇಜಿಸಿದಂತಾಗುತ್ತದೆ ಸಂಘವು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿರಲಿ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೇರುಗಾರ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ತಾಲೂಕು ಇದರ ಸರ್ವ ಸದಸ್ಯರ ಮಹಾಸಭೆ ರತ್ತೂಭಾಯಿ ಜನತಾ ಪ್ರೌಢಶಾಲೆಯಲ್ಲಿ ಜರುಗಿತು. ಈ ವೇಳೆ ಪ್ರಸಕ್ತ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಭಾಗಿರತಿ ಮೊಗೆರಾ, ಎಲಿಜಬೆತ್ ಸಿ ಕೆ, ರಾಮ ಶೆಟ್ಟಿ, ಗಣಪತಿ, ಕೆ. ಮಾಧವ, ಎಸ್ ವಿ ಭಟ್, ನಾರಾಯಣ ದೇವಾಡಿಗ, ವೆಂಕಟರಮಣ ಹೋಬಳಿದಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷರಾದ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ ಎಂಜಿ, ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂಜೀವ ದೇವಾಡಿಗ ನಿಕಟ ಪೂರ್ವ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೇರುಗಾರ್, ಬ್ರಹ್ಮಾವರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗೇಶ ನಾಯಕ್, ರತ್ತೂಬಾಯಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆನಂದ ಮುದ್ದೋಡಿ, ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಖಜಾಂಚಿ ಅಚ್ಚುತ ಬಿಲ್ಲವ ಉಪಸ್ಥಿತರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ಕಾಲಿನ ಕ್ಯಾನ್ಸರ್ ನಿಂದ ಬಳಲುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸುಮಿತ್ ವೆಂಕಟರಮಣ ಮೊಗೇರ ತೆಂಗಿನಗುಂಡಿ ಅವರಿಗೆ 60 ಸಾವಿರ ರುಪಾಯಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್, ಸದಸ್ಯರಾದ ವಾಸುದೇವ ದೇವಾಡಿಗ, ರತನ್ ನಾವುಂದ, ಅರುಣ್ ಕುಮಾರ್ ಶಿರೂರು ಹಾಗೂ ವಿದ್ಯಾರ್ಥಿಯ ಪೋಷಕರು ಹಾಜರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದದ 19 ನೇ ವರ್ಷದ ಪದಗ್ರಹಣ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಾರ್ಯದರ್ಶಿಯಾಗಿ ಪುರಂದರ್ ಉಪ್ಪುಂದ, ಲೇಡಿ ಅಧ್ಯಕ್ಷರಾಗಿ ರೇಖಾ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ನಿಷಾ ಶೆಟ್ಟಿ ಮತ್ತು ಅವರ ತಂಡಗಳು ಪದಗ್ರಹಣ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರಾದ ಶ್ರೀಧರ್ ಪಿ ಎಸ್., ಜನ ಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ್, ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಉಪಸ್ಥಿತರಿದ್ದರು. ಈ ವೇಳೆ ಇಬ್ಬರು ಫಲಾನುಭವಿಗಳಿಗೆ ಶ್ರವಣ ಸಾಧನ ಹಾಗೂ ವ್ಹೀಲ್ ಚೇರ್ ಹಸ್ತಾಂತರಿಸಲಾಯಿತು. ಸಭೆಯ ಪೂರ್ವಾರ್ಧದ ಅಧ್ಯಕ್ಷತೆ ವಹಿಸಿದ್ದ ನಾಗರಾಜ್ ಪೂಜಾರಿ ವರದಿ ವಾಚಿಸಿ, ದಿನದರ್ಶಿಕೆ ಬಿಡುಗಡೆಗೊಳಿಸಿ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿದರು. ನೂತನ ಅಧ್ಯಕ್ಷರು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಅತ್ಯಾಧುನಿಕ ಶ್ರವಣ ಸಾಧನ ಮತ್ತು ವೀಲ್ ಚೇರನ್ನು ವಿಶೇಷ ಚೇತನರಿಗೆ ವಿತರಿಸಿದರು.…

Read More