ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟ ಮೆಸ್ಕಾಂ ಉಪ ವಿಭಾಗದ ಜನಸಂಪರ್ಕ ಸಭೆ ಬುಧವಾರ ಕೋಟ ಮೆಸ್ಕಾಂ ಉಪವಿಭಾಗದ ಸಭಾಂಗಣದಲ್ಲಿ ಜರಗಿತು.

ಕೋಟ ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಹಲವು ಸಮಸ್ಯೆಗಳಿಗೆ ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಬಿ. ರಾಕೇಶ್ ಅಧಿಕಾರಾವಧಿಯಲ್ಲಿ ಪರಿಹಾರ ಕಂಡುಕೊಂಡ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮೆಸ್ಕಾಂ ಅಧೀಕ್ಷಕ ಬಿ. ರಾಕೇಶ್ ಗ್ರಾಮೀಣ ಭಾಗದಿಂದ ಪಟ್ಟಣ ವ್ಯಾಪ್ತಿಯನ್ನು ಹೊಂದಿರುವ ಈ ಕೋಟ ಮೆಸ್ಕಾಂನ ವ್ಯಾಪ್ತಿಯ ಯಾವುದೇ ಸಮಸ್ಯೆಗಳಿಗೆ ನಮ್ಮ ಮೆಸ್ಕಾಂ ಪರಿಹಾರ ಕಂಡಕೊಳ್ಳಲಿದೆ ಜನಸಂಪರ್ಕ ಸಭೆಗಳು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಸಭೆಗಳಾಗಿ ರೂಪುಗೊಂಡಿದೆ ಇದರಿಂದ ಇಲ್ಲಿ ಪ್ರತಿಹಂತದಲ್ಲೂ ಸಮಸ್ಯೆಗಳಿಂದ ಮುಕ್ತಿಗಾಣುವ ಸಭೆಗಳಾಗಿ ರೂಪುಗೊಂಡಿದೆ ಎಂದರಲ್ಲದೆ ರಾಜ್ಯ ಸರಕಾರದ ಯೋಜನೆಯಾದ ಗೃಹಜ್ಯೋತಿ ಪುನರ್ ನವೀಕರಣ ಶೇಕಡಾ 90ರಷ್ಟು ಪೂರ್ಣಗೊಂಡಿದ್ದು ಬಾಕಿ ಇರಿಸಿಕೊಂಡವರು ಕೂಡಲೇ ತಮ್ಮ ಮೆಸ್ಕಾಂ ಮೂಲಕ ಗೃಹಜ್ಯೋತಿಯ ಫಲಾಭನುಭವಿಗಳಾಗಿ ಎಂದು ಕರೆ ನೀಡಿದರು.
ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ಐರೋಡಿ ವಿಠ್ಠಲ ಪೂಜಾರಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಘವೇಂದ್ರ ಐರೋಡಿ, ವಿದ್ಯುತ್ ಗುತ್ತಿಗೆದಾರ ಶ್ರೀಕಾಂತ್ ಶೆಣೈ, ಗಿರೀಶ್ ಕುಂದರ್, ಐರೋಡಿ ನಟರಾಜ್ ಗಾಣಿಗ, ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ, ಕುಂದಾಪುರ ಉಪ ವಿಭಾಗದ ಲೆಕ್ಕಾಧಿಕಾರಿ ಶಿವ ಕುಮಾರ್, ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ ಸಹಾಯಕ ಇಂಜಿನಿಯರ್ (ತಾಂತ್ರಿಕ) ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ ಲೆಕ್ಕಾಧಿಕಾರಿ ಕೆ. ಮಹೇಶ್ ಇದ್ದರು.
















