ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸೇನೆಶ್ವರ ಕಲಾ ಮತ್ತು ಕ್ರೀಡಾ ಸಂಘದ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಜೆ.ಡಿ., ಕಾರ್ಯದರ್ಶಿಯಾಗಿ ಸುಕುಮಾರ ಶೆಟ್ಟಿ ಸೂರ್ಕುಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೌರೀಶ್ ಹುದಾರ್, ಗಿರಿಶ್ ಯೋಜನನಗರ, ಸಂದೀಪ, ಜೊತೆ ಕಾರ್ಯದರ್ಶಿಯಾಗಿ ವೆಂಕಟೇಶ ಪೂಜಾರಿ, ಸುಧೀರ ರೋಡ್ರಿಗಾಸ್ ಜಗದೀಶ ದೇವಾಡಿಗ, ಸುರೇಶ್ ಯರುಕೋಣೆ, ಸುರೇಶ್ ಡಿ. ಉಪ್ಪಿನಕೋಟೆ, ಬಾಬು ರಾವ್, ಗೌರಾಧ್ಯಕ್ಷರಾಗಿ ಸುಧಾಕರ ಶೆಟ್ಟಿ ನೆಲ್ಯಾಡಿ, ಗೌರವ ಸಲಹೆಗಾರರಾಗಿ ರಾಮಕೃಷ್ಣ ದೇವಾಡಿಗ, ವಿಜಯ್ ಶಂಕರ್ ಭಟ್ ಪ್ರಶಾಂತ ಪೂಜಾರಿ, ಮಂಜುನಾಥ ರಾವ್, ಸುರೇಂದ್ರ ಡಿ. ಬಾಡಾ, ಖಜಾಂಜಿಯಾಗಿ ಗೌರಿಶ್ ಹುದಾರ್, ಅಮರ ದೇವಾಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ದುರ್ಮಿ, ಪ್ರೀತಂ ಅಶೋಕ ಯಡ್ತರೆ, ಅಯಬ್, ಜಗದೀಶ ದೇವಾಡಿಗ, ವೆಂಕಟೇಶ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತ್ಯನಂದ ಮೊಗವೀರ, ಸೀತರಾಮ ಶ್ರೀಯಾನ್, ನಾಗೇಶ್ ಕಳವಾಡಿ, ನಟೇಶ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ದೇವಾಡಿಗ, ಚಂದ್ರ ಪೂಜಾರಿ, ಭಾಸ್ಕರ ಶಿರೂರು. ಸದಸ್ಯರಾದ ಶಶಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಯಡ್ತರೆ ಫ್ರೆಂಡ್ಸ್ ಎರಡು ದಿನಗಳ ಕಾಲ ಯಡ್ತರೆ ಕ್ರೀಡಾಂಗಣದಲ್ಲಿ ಆಯೋಜಿಸಿದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಉಪ್ಪುಂದ ವಿವೇಕಾನಂದ ತಂಡ ಯಡ್ತರೆ ಟ್ರೋಫಿ – 2021ನ್ನು ಮುಡಿಗೇರಿಸಿಕೊಂಡಿದ್ದು, ಸೋಮಲಿಂಗೇಶ್ವರ ಫ್ರೆಂಡ್ಸ್ ಚಂದನ ತಂಡವು ರನ್ನರ್ಅಪ್ ಆಗಿದೆ. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಮಾತನಾಡಿ, ಕ್ರೀಡೆಯಿಂದ ಸಮರಸ್ಯ ಸಾಧ್ಯವಿದ್ದು, ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರೂ ಪಾಲ್ಗೊಳ್ಳುತ್ತಾರೆ. ಆಟದಲ್ಲಿ ಸೋಲು ಗೆಲುವು ಸಹಜವಾದರೂ ಕ್ರೀಡಾಳುಗಳ ಸಂಘಟನಾತ್ಮಕ ಪ್ರಯತ್ನ ಇನ್ನೊಂದು ಯಶಸ್ಸಿಗೆ ದಾರಿಮಾಡಿಕೊಡುತ್ತದೆ ಎಂದ ಅವರು ಯಡ್ತರೆ ಕ್ರೀಡಾಂಗಣದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ನೂರಾರು ಕ್ರೀಡಾ ಪಟುಗಳು ಇಲ್ಲಿ ತಯಾರಾಗಿದ್ದಾರೆ. ಆದರೆ ಅವರು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮುಂದುವರಿಯದಿರುವುದು ವಿಷಾದದ ಸಂಗತಿಯಾಗಿದ್ದು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಅರಣ್ಯ ಪಾಲಕ ತಿಮ್ಮಪ್ಪ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಕ್ಕಿ ಡ್ರಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪುಣ್ಯಸ್ಮೃತಿ ಕಾರ್ಯಕ್ರಮ ನಡೆಯಿತು. ಪುಷ್ಪನಮನ ಸಲ್ಲಿಸಿ ಮಾತನಾಡಿದ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಂಗೊಳ್ಳಿ ಎ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಜಿ. ದೀನ ದಲಿತರ, ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಅವರ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಮಾಡಿರುವ ಸತ್ಕಾರ್ಯಗಳು ಅವರನ್ನು ಇಂದು ಅಜರಾಮರನ್ನಾಗಿಸಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷೆ ಸುಶೀಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಸರೋಜ ಜಿ.ಟಿ., ಗಂಗಾ ಬಿ., ಗೌರಿ ಬಿ., ರುದ್ರಮ್ಮ, ಮಮತಾ, ಭವಾನಿ, ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ಸುಶೀಲಾ ಸ್ವಾಗತಿಸಿದರು. ಕಾರ್ಯದರ್ಶಿ ನಾಗಿಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಎನ್ಸಿಸಿ 18 ಕರ್ನಾಟಕ ಬೆಟಾಲಿಯನ್ ಮಂಗಳೂರು ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ5 ದಿನಗಳ ಎನ್ಸಿಸಿ ಶಿಬಿರವು ಸಂಪನ್ನಗೊಂಡಿತು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಹಾವೀರ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಧಾಕೃಷ್ಣರವರು ತಮ್ಮ 26 ವರ್ಷಗಳ ಎನ್ಸಿಸಿ ಅನುಭವ ಹಾಗೂ ಕಲಿತ ಶಿಸ್ತಿನ ಬಗ್ಗೆ ಕೆಡೆಟ್ಗಳ ಜತೆಗೆ ಹಂಚಿಕೊಂಡರು. ಸ್ವಾಮಿ ವಿವೇಕಾನಂದರ ಮಾತಿನಂತೆ ನಾವು ಗೆದ್ದರೆ ಮುನ್ನಡೆಸಬಹುದು, ಸೋತರೆ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕೆಂದು ಎನ್ಸಿಸಿ ಕೆಡೆಟ್ಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಸೋಸಿಯೇಟ್ ಎನ್ಸಿಸಿ ಆಫೀಸರ್ ಕ್ಯಾಪ್ಟನ್ ಡಾ. ರಾಜೇಶ್ ಬಿ ಮಾತನಾಡಿ, ಕೆಡೆಟ್ಗಳು ಸಮವಸ್ತ್ರದಲ್ಲಿರದಿದ್ದರೂ ತಮ್ಮ ಶಿಸ್ತು ಸಂಯಮಗಳನ್ನು ಮೀರಿ ನಡೆಯಬಾರದು. ಇದರಿಂದ ಭಾರತದ ಯುವಶಕ್ತಿಯಲ್ಲಿ ಅದ್ಭುತಗಳನ್ನು ನೋಡಲು ಸಾಧ್ಯ ಎಂದರು. ಐದು ದಿನಗಳ ಶಿಬಿರದಲ್ಲಿ ಡ್ರಿಲ್, ನಕ್ಷೆ ಓದುವಿಕೆ, ದೂರ ನಿರ್ಣಯ, ರೈಫಲ್ನ ನಿರ್ವಹಣೆ, ಫೀಲ್ಡ್ಕ್ರಾಫ್ಟ್, ಬ್ಯಾಟಲ್ಕ್ರಾಫ್ಟ್, ಫೀಲ್ಡ್ ಸಿಗ್ನಲ್ಸ್, ವಿಪತ್ತು ನಿರ್ವಹಣೆ ಮುಂತಾದ ಪ್ರಾಯೋಗಿಕ ವಿಷಯಗಳಂದಿಗೆ ಮಿಲಿಟರಿ ಮತ್ತು ಶಸಸ್ತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಅಂಗವಾಗಿ ಯಡ್ತರೆ ನೇತಾಜಿ ಯುವಕ ಮಂಡಲದಿಂದ ಶನಿವಾರ ನೇತಾಜಿ ಮಾರ್ಗದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ಥಳೀಯರಾದ ಅಣ್ಣಪ್ಪ ಪೂಜಾರಿ ಮಣ್ಣಿಮನೆ ನೇತಾಜಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪೋಟೊಗೆ ಪುಷ್ಪ ನಮನ ಸಲ್ಲಿಸಿದರು. ಯುವಕ ಮಂಡಲದ ಅಧ್ಯಕ್ಷ ರಾಘವೆಂದ್ರ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ದೇವಾಡಿಗ ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಘನತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹ ಹಾಗೂ ಸೌರಶಕ್ತಿ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ನೀರು ಬೆಲೆ ಕಟ್ಟಲಾಗದ ಸಂಪನ್ಮೂಲವಾಗಿದ್ದು ಜನರು ಇದನ್ನು ಗಮನಿಸದಿರುವುದು ವಿಷಾದಕರ ಎಂದು ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಗ್ರಾಮೀಣ ಮಹಿಳೆಯರಿಗೆ ನವೀಕರಿಸ ಬಹುದಾದ ಇಂಧನ, ಘನ ತ್ಯಾಜ್ಯ ನಿರ್ವಹಣೆ ಮತ್ತು ಮಳೆ ನೀರು ಸಂಗ್ರಹ’ ವಿಷಯದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೋಸೆಫ್ ಫರ್ನಾಂಡಿಸ್ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫರ್ನಾಂಡಿಸ್, ಭಾರತೀಯ ವಿಕಾಸ ಟ್ರಸ್ಟ್ನ ಮುಖ್ಯ ವ್ಯವಸ್ಥಾಪಕ ಅರುಣ್ ಪಟವರ್ಧನ್, ಸಂಯೋಜಕ ರಾಘವೇಂದ್ರ,ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರಟರೀಸ್ ಸಂಸ್ಥೆಯು ನವೆಂಬರ್ 2020ರಲ್ಲಿ ನಡೆಸಿದ ಸಿ. ಎಸ್. ಫೌಂಡೇಶನ್ ಪರೀಕ್ಷೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಕಾಂ. ಪ್ರೊಫೆಶನಲ್ ಕೋರ್ಸಿನ ವಿದ್ಯಾರ್ಥಿಗಳಾದ ದೀಪ್ತಿ (146),ಅರ್ಥೇಶ್ (145), ಯಶ್ ಶೆಟ್ಟಿ (142), ಸುಷ್ಮಾ (127), ಅಮಿತ್ (127), ವಿಘ್ನರಾಜ್ (124), ವಿವೇಕ್ (119), ದೀಕ್ಷಿತಾ (116), ಶ್ರೀನಿಧಿ (110), ಆಶಿತಾ (106) ಉತ್ತೀರ್ಣರಾಗಿದ್ದು, 2021ರ ಜನವರಿ ತಿಂಗಳ ಪರೀಕ್ಷೆಯಲ್ಲಿ ಸುಶ್ಮಿತಾ (137), ಮೋಹನ್ ದೇವಾಡಿಗ (136), ಜೀವನ್ ಕುಮಾರ್ (135) ಹಾಗೂ ಅಂತಿಮ ಬಿ.ಕಾಂ.ಡಿ ವಿಭಾಗದ ಪ್ರತೀಕ್ಷಾ (200) ತೇರ್ಗಡೆ ಹೊಂದಿರುತ್ತಾರೆ. ಇವರು ಕುಂದಾಪುರದ ಸ್ಪೇಸ್ ಸಂಸ್ಥೆಯಿಂದ ತರಬೇತಿ ಪಡೆದಿರುತ್ತಾರೆ. ಕಾಲೇಜಿನ ಒಟ್ಟು 17 ವಿದ್ಯರ್ಥಿಗಳು ಸಿ.ಎಸ್. ಫೌಂಡೇಶನ್ ಪರೀಕ್ಷೆ ಬರೆದಿದ್ದು,14 ವಿದ್ಯರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ತಿಳಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆರಾಧನಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಿಗ್ಗೆ ಸ್ತೋತ್ರ ಪಠಣ, ಮಧ್ಯಾಹ್ನ ಶ್ರೀದೇವರಿಗೆ ಮಹಾಮಂಗಳಾರತಿ, ಗುರುಪೂಜೆ, ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ, ಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ತಾಂತ್ರಿಕ ಜಿ.ರಾಘವೇಂದ್ರ ಎನ್.ಆಚಾರ್ಯ ಮತ್ತು ದೇವಳದ ಆಡಳಿತ ಮಂಡಳಿ ಸದಸ್ಯ ಡಾ.ಕಾಶೀನಾಥ ಪೈ ಶ್ರೀಗಳ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಹಾಗೂ ಭಜಕರು ಶ್ರೀಗಳ ಆರಾಧಾನ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದೇಶಗಳಲ್ಲಿ ಈಗ ಕೊರೊನಾದ ಎರಡನೇ ಅಲೆ ಕಾಡುತ್ತಿದೆ. ನಮ್ಮಲ್ಲಿ ಅದರ ವಿರುದ್ಧ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಹಾಗೆಂದು ಯಾರೂ ಮೈಮರೆಯಬಾರದು’ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರೇಮಾನಂದ ಮನವಿ ಮಾಡಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕೋವಿಡ್-19 ಪ್ರಥಮ ಹಂತದ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಸಿಕೆಯ ಮೊದಲ ಡೋಸ್ ಪಡೆದ ಅವರು ಕೋವಿಡ್ ಲಸಿಕೆ ಪಡೆಯುವುದು ಒಂದು ಒಳ್ಳೆಯ ಅನುಭವ. ವದಂತಿಗಳಿಗೆ ಕಿವಿಗೊಡದೆ, ದೇಶಿ ಲಸಿಕೆ ಮೇಲೆ ವಿಶ್ವಾಸವಿರಿಸಿ, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡು ಕೋವಿಡ್ ನಿಂದ ರಕ್ಷಣೆ ಪಡೆಯಬೇಕು. 28 ದಿನಗಳ ಅಂತರದಲ್ಲಿ ಎರಡನೆಯ ಡೋಸ್ ಪಡೆಯುವುದು ಕಡ್ಡಾಯ ಎಂದರು. 50 ಆರೋಗ್ಯ ಸಿಬ್ಬಂದಿ ಪ್ರಥಮ ಹಂತದ ಲಸಿಕೆ ಪಡೆದರು. ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಯಿತು. ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಂದಿನಿ, ಶಸ್ತ್ರಚಿಕಿತ್ಸಕ ಡಾ. ಮಹೇಂದ್ರಕುಮಾರ್ ಶೆಟ್ಟಿ, ಸಹಾಯಕ ವೈದ್ಯಾಧಿಕಾರಿ ಡಾ. ಗೌತಮ್, ಆಯುಷ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕುಂದಾಪುರ ಪೊಲೀಸ್ ಠಾಣೆಯವರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಮಾಹಿತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕುಂದಾಪುರ ಪೊಲೀಸ್ ಠಾಣೆಯ ಸ್ಟೇಷನ್ ರೈಟರ್ ನವೀನ ಕುಮಾರ ಎಸ್. ಮಾತನಾಡಿ, ವೇಗದ ಮಿತಿಯ ಅರಿವು ಮತ್ತು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾಕಿರುವ ಅನೇಕ ಸೈನ್ ಬೋರ್ಡ್ ಗಳ ನಿಖರವಾದ ಮಾಹಿತಿ ಪಡೆದು ವಾಹನ ಚಲಾಯಿಸಬೇಕು. ಅಪಘಾತಗಳನ್ನು ತಪ್ಪಿಸುವಲ್ಲಿ ವಾಹನ ಸಂಚಾರದ ಮೂಲದಾಖಲಾತಿಯಿಲ್ಲದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಗಂಭೀರ ದುಷ್ಪರಿಣಾಮಗಳನ್ನು ನಿವಾರಿಸುವಲ್ಲಿ ಯವಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಕೇವಲ ಭಯದಿಂದ ಪಾಲಿಸುವಂತಾಗದೇ, ವಾಹನ ಚಲಾಯಿಸುವವರ ಮತ್ತು ಅನ್ಯ ವ್ಯಕ್ತಿಗಳ ಸುರಕ್ಷತೆಯ ಬಗ್ಗೆ ನಿಗಾ ವಹಿಸಿ ವಾಹನಗಳನ್ನು ಬಳಸಬೇಕೆಂದು ತಿಳಿಸಿದರು. ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್…
