Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ಮತ್ತು ತ್ರಾಸಿ ವಲಯದ ಆಶ್ರಯದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸೌಕೂರು ಏತ ನೀರಾವರಿ ಯೋಜನೆಯ ಯೋಜನಾ ಪ್ರದೇಶ, ಮಾವಿನಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ನೀರು ಶೇಖರಣ ಸ್ಥಾವರ, ರಾಜಾಡಿ, ಜಾಡಿ ಮೊದಲಾದ ಪ್ರದೇಶಗಳಿಗೆ ಭೇಟಿ ಮಾತನಾಡಿ, ಯಾವುದೇ ಯೋಜನೆ ಆಗಿರಲಿ ರೈತರು ಯೋಜನೆಯ ಆರಂಭದಲ್ಲಿ ಮುತುವರ್ಜಿ ವಹಿಸಿ, ಯೋಜನೆಯ ಬಗ್ಗೆ ತಿಳಿದುಕೊಂಡರೆ ಕಾಮಗಾರಿ ವ್ಯವಸ್ಥಿತವಾಗಿ ಅನುಷ್ಟಾನವಾಗಲು ಸಾಧ್ಯ. ಕಾಮಗಾರಿ ಅನುಷ್ಟಾನ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲು ಸಾದ್ಯವಿದೆ. ಕಾಮಗಾರಿ ಮುಗಿದ ನಂತರ ಎಚ್ಚೆತ್ತುಕೊಂಡರೆ ಏನು ಮಾಡಲೂ ಸಾಧ್ಯವಿಲ್ಲ ಎಂದರು. ಸುಮಾರು 73 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳ್ಳುತ್ತಿರುವ ಈ ಯೋಜನೆ 1350 ಹೆಕ್ಟೇರು ಪ್ರದೇಶದ ಭೂಮಿಗೆ ನೀರು ಸಿಗುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: 2019-20ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ‍್ಯಾಂಕ್‌ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು 32 ರ‍್ಯಾಂಕ್‌ಗಳನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಬಿ.ಪಿಎಡ್ ಫಲಿತಾಂಶಗಳು ಪ್ರಕಟಗೊಂಡಿವೆ. ಒಟ್ಟು 32 ರ‍್ಯಾಂಕ್‌ಗಳಲ್ಲಿ 14 ಪ್ರಥಮ, 5 ದ್ವಿತೀಯ, 6 ತೃತೀಯ, 1 ಐದನೇ ರ‍್ಯಾಂಕ್, 2 ಏಳನೇ ರ‍್ಯಾಂಕ್, 2 ಎಂಟನೇ ರ‍್ಯಾಂಕ್, 2 ಹತ್ತನೇ ರ‍್ಯಾಂಕ್ ಬಂದಿವೆ. ಪ್ರಥಮ ರ‍್ಯಾಂಕ್ ಬಿಎಸ್ಸಿ(ಎಫ್‌ಎನ್‌ಡಿ)ಯ ನಮಿತಾ ವಿ. (89%), ಬಿಎಸ್‌ಡಬ್ಲ್ಯೂನ ಸನಿಕಾ ಎಸ್.ಕುಮಾರ್ (87%), ಬಿವಿಎನ ಸಾಕ್ಷಿ ಸಿ.ಎ.(83.21%), ಬಿಪಿಎಡ್‌ನ ಶ್ರೇಯಾ ಕೆ.ಎಚ್(81.75%), ಎಂಕಾ ಐಬಿಎಮ್‌ನ ಬಾನವಿ ಎಚ್‌ವಿ(ಸಿಜಿಪಿಎ 7.76), ಎಂಎಸ್ಸಿ ಅನಾಲಿಟಿಕಲ್ ಕೆಮಿಸ್ಟಿçಯ ಆತಿಯಾ ಆರ್ ವೆರ್ಣೇಕರ್ (ಸಿಜಿಪಿಎ 7.72), ಎಂಎ ಎಕನಾಮಿಕ್ಸ್ನ ಟೋನ್‌ಟೊನ್ (ಸಿಜಿಪಿಎ 7.94), ಎಂಎಸ್‌ಡಬ್ಲ್ಯೂನ ಶರಣ್ಯ ರಾವ್ ಎಚ್. (ಸಿಜಿಪಿಎ 8.70),…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಟ್ಕಳದಿಂದ ಕೆಮ್ಮಣ್ಣುವಿಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಾರಿನ ಟಯರ್ ಸಿಡಿದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಸೇರಿ ಐದು ಮಂಂದಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಸಿಬ್ಬತುಲ್ಲ ಎಂಬುವವರ ಪತ್ನಿ ಸುಹಾನಾ (30) ಮೃತಪಟ್ಟಿದ್ದು, ಮಕ್ಕಳಾದ ಸಾಹಿಮ್ (7), ಸಿಬ್ರಾ (4), ಮನ್ಹಾ (2), ಮೂರು ತಿಂಗಳ ಮರಿಯಮ್ ಹಾಗೂ ಸಿಬ್ಬತುಲ್ಲ ಗಾಯಗೊಂಡವರು. ಭಟ್ಕಳದ ಪತ್ನಿ ಮನೆಯಿಂದ ಕೆಮ್ಮಣ್ಣು ಹೊಡೆಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದ್ದು, ಹೆಮ್ಮಾಡಿ ಬಳಿ ಕಾರಿನ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಸಿಬ್ಬತುಲ್ಲ ಕಾರು ಚಲಾಯಿಸುತ್ತಿದ್ದರು. ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಂಗಭೂಮಿ ಕಲಾವಿದೆ, ಲೇಖಕಿ ವಿನುತಾ ವಿಶ್ವನಾಥ್ ಅವರ ‘ಹುಣ್ಸ್‌ಮಕ್ಕಿ ಹುಳ’ ಪುಸ್ತಕ ಬೆಂಗಳೂರಿನ ಫಿಡಿಲೆಟಸ್ ಗ್ಯಾಲರಿಯಲ್ಲಿ ಬಿಡುಗಡೆಗೊಂಡಿತು. ಹೂವಿನಹೊಳೆ ಪ್ರತಿಷ್ಠಾನ ಬೆಂಗಳೂರು, ಫಿಡಿಲಿಟಸ್ ಗ್ಯಾಲರಿ, ಶಿಲ್ಪ ಫೌಂಡೇಶನ್, ಸುದಯ ಟ್ರಸ್ಟ್ ಬೆಂಗಳೂರು ಸಹಕಾರದೊಂದಿಗೆ ಭಾನುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಪುಸ್ತಕ ಬಿಡುಗಡೆಗೊಂಡಿತು. ಲೇಖಕ, ಪತ್ರಕರ್ತ ಜೋಗಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ದಿನದಲ್ಲಿ ಎರಡು ಬಾರಿ ಓದಿದ್ದೇನೆ. ಮೊದಲ ಬಾರಿ ಓದಿದಾಗ ಕಣ್ಣಂಚಲಿ ನೀರು ತುಂಬಿಕೊಂಡಿತ್ತು. ಎರಡನೇ ಬಾರಿ ಓದಿದಾಗ ಸಮಾಜದಲ್ಲಿ ವೃತ್ತಿ, ನೆಚ್ಚಿದ ಪ್ರೀತಿ, ಹಳ್ಳಿಯಿಂದ ನಗರಕ್ಕೆ ಬಂದಾಗ ಎದುರಾದ ಸಮಸ್ಯೆ, ನೋವು ಅಪಮಾನ ಇದನ್ನೆಲ್ಲೆ ಹೆದರಿಸಿ ಗೆಲ್ಲುತ್ತಿರುವ ದಿಟ್ಟ ಮಹಿಳೆಯನ್ನು ನೋಡಿದಂತಾಯಿತು ಎಂದರು. ಚಿತ್ರನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಮಾತನಾಡಿ ಲೇಖಕಿಯ ಮೊದಲ ಪುಸ್ತಕವಿದು.. ಮುಂದೆ ಹೆಚ್ಚು ಹೆಚ್ಚು ಬರೆದು ಕನ್ನಡಕ್ಕೆ ಇನ್ನಷ್ಟು ಸೇವೆ ಮಾಡಲಿ. ಸೋದರಿ ಸುಮನ್ ಕಿತ್ತೂರು ಅವರು ಬೆನ್ನುಡಿ ಬರೆದುಕೊಟ್ಟಿದ್ದಾರೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನ ಓದಿದರೆ ಯಾರೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಡುವರಿ ಗ್ರಾಮದ ಸುಮಂಗಲ ಆಚಾರ್ಯ ಮತ್ತು ರಾಜೇಶ್ ಆಚಾರ್ಯ ಮಗನಾದ ರಿಷಿಕ್ ಇವನು ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಭ್ಯಾಸ ಮಾಡುತಿದ್ದು ಕಳೆದ 5ವರ್ಷದಿಂದ ಥಲಸ್ಸಿಮಿಯಾ ಖಾಯಿಲೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಪಾಸಣೆ ನಡೆಸಿದ ವೈದ್ಯರು ಅಸ್ಥಿಮಜ್ಜೆ ಚಿಕಿತ್ಸೆ ಮಾಡಬೇಕೆಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ. ಚಿಕಿತ್ಸೆಗಾಗಿ 35ರಿಂದ 40ಲಕ್ಷ ವೆಚ್ಚವಾಗುವುದೆಂದು ವೈದ್ಯರು ತಿಳಿಸಿರುತ್ತಾರೆ ಅವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ರಿಷಿಕ್ ಅವರ ಕುಟುಂಬ ಕೂಲಿಕಾರ್ಮಿಕರಾಗಿದ್ದು ಇಷ್ಟು ದೊಡ್ಡ ಮಟ್ಟದ ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ಅಸಾಯಕರಾಗಿದು, ರಿಷಿಕ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕ್ ಆಫ್ ಬರೋಡಾ ಉಳಿತಾಯ ಸಂಖ್ಯೆ 81920100004582, ಐಎಫ್‌ಎಸ್‌ಸಿ ಕೋಡ್ಸBARB0VJNADA(fifth character is zero) phonepay-8105877136, google pay-8105877136 ಲ್ಲಿಸಬಹುದಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಇಲ್ಲಿನ ಎಂಟಿಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ ನಡೆಯಿತು. ಉದಯ ಹಂದೆಯವರು ತಮ್ಮ ಗ್ರಾಹಕ ಸ್ನೇಹಿ ಸ್ವಭಾವದಿಂದ ಮಾಲೀಕರಿಗೂ ಹಾಗೂ ಗ್ರಾಹಕರಿಗೂ ಪ್ರಿಯವಾದವರು. ತಮ್ಮ ಕೆಲಸದ ಜೊತೆಯಲ್ಲಿಯೇ ಹಲವಾರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಂಡಿರುವ ಹಂದೆಯವರು ದೇವಸ್ಥಾನ ಜೀರ್ಣೋದ್ಧಾರ, ಯಕ್ಷಗಾನ ಪ್ರದರ್ಶನಗಳ ಸಂಘಟನೆ ಮುಂತಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಧೂ-ವರರ ಸಂಪರ್ಕ ಸೇತುವಾಗಿ ಇದುವರೆಗೂ ಹಲವಾರು ಮದುವೆಗಳನ್ನು ಮಾಡಿಸಿರುವುದು ಇವರ ಹೆಗ್ಗಳಿಕೆ.  ವೃತ್ತಿಸೇವೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಬೆಂಗಳೂರಿನ ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುವುದರಿಂದ ಜೀವನದಲ್ಲಿ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ನಮ್ಮ ಪೂರ್ವಜರ ಅನೇಕ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡಬೇಕಾದ ಅವಶ್ಯಕತೆ ಇದ್ದು, ಶಿಶು ಮಂದಿರಗಳು ಈ ದಿಸೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ಅವಶ್ಯವಿರುವ ಶಿಕ್ಷಣ ನೀಡುತ್ತಿದೆ. ಗಂಗೊಳ್ಳಿಯಲ್ಲಿ ಕಳೆದ ೩೪ ವರ್ಷಗಳಿಂದ ನಮ್ಮ ಸಂಸೃತಿಗೆ ಪೂರಕವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕರಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಎಚ್. ಸುನೀಲ್ ನಾಯಕ್ ಹೇಳಿದರು. ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 34ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥ ಸುರೇಶ ಹೆಬ್ಬಾರ್ ಆಜ್ರಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕೃಪಾ ಸುನೀಲ್ ನಾಯಕ್ ಬಹುಮಾನ ವಿತರಿಸಿದರು. ಶಿಶು ಮಂದಿರದ ಸದಸ್ಯರಾದ ಆಶಾ ಸುದನೇಶ ಶ್ಯಾನುಭಾಗ್, ಉಷಾ ಪಾಂಡುರಂಗ ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ಅಶ್ವಿತಾ ಜಿ.ಪೈ, ವಸಂತಿ…

Read More

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು, ಹಳೆ ವಿದ್ಯಾರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಊರಿನ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯೊಂದಿಗೆ ಸಮವಸ್ತ್ರ, ನೋಟ್ ಪುಸ್ತಕ, ಮೂಲಭೂತ ಸೌಕರ್ಯ, ವಾಹನ ವ್ಯವಸ್ಥೆ, ದತ್ತು ಸ್ವೀಕಾರದಂತಹ ಮಹತ್ವದ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತಮ್ಮ ದುಡಿಮೆ ಹಣದಲ್ಲಿಯೇ ಶಾಲೆಗೆ ಸೇರುವ ಮಕ್ಕಳ ಹೆಸರಿನಲ್ಲಿ ಹಣ ರೇವಣಿ ಇಡುವ ಮೂಲಕ ಹಾಜರಾತಿ ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈ ವಿನೂತನ ‘ಬಾಂಡ್’ ಯೋಜನೆ ಅಳವಡಿಸಿಕೊಂಡವರು ಕುಂದಾಪುರ ತಾಲೂಕು ಶಂಕರನಾರಾಯಣ ರೇಖಾ ಪ್ರಭಾಕರ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ರೇಖಾ ಪ್ರಭಾಕರ ಅವರ ಕಾರ್ಯದಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ರೇಖಾ 2010ರಲ್ಲಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರಿಕೊಂಡ ಸಂದರ್ಭದಲ್ಲಿ ಶಾಲೆಯಲ್ಲಿ 1 ರಿಂದ 7 ತರಗತಿ ಓದುವ ಮಕ್ಕಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಅಲ್ಲಿನ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿಯಿಂದ ಆಭಾರಿ ಸೇವೆ ಭಾನುವಾರ ಸಂಪನ್ನವಾಯಿತು. ಕಡಲು ನದಿ ಕೈ ಅಳತೆ ನಡುವಿನ ಕಿರಿದಾದ ಪ್ರದೇಶದಲ್ಲಿ ಒಂದೇ ಗರ್ಭಗುಡಿಯಲ್ಲಿ ವರಾಹ, ವಿಷ್ಣು, ನಾರಸಿಂಹ ದೇವರ ಸನ್ನಿಧಿ ಮತ್ತು ಸನಿಹದಲ್ಲಿ ಗಂಗಾಧರೇಶ್ವರ ದೇವಸ್ಥಾನ ಇರುವ ಕಾರಣದಿಂದ ಕಾರಣಿಕ ಧಾರ್ಮಿಕ ಕೇಂದ್ರವೆನಿಸಿರುವ ಇಲ್ಲಿ ಭಕ್ತರು ಸಲ್ಲಿಸುವ ವಿಶೇಷ ಸೇವೆಗಳಲ್ಲಿ ’ಆಭಾರಿ’ ಕೂಡ ಒಂದು. ಮೀನುಗಾರರು ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆಗೆ ಮತ್ತು ವ್ಯವಸಾಯಗಾರರು ಅತಿವೃಷ್ಟಿ, ಅನಾವೃಷ್ಟಿ ಮುಕ್ತವಾದ ಕೃಷಿಗೆ ಪ್ರಾರ್ಥಿಸಿ ಈ ಹರಕೆ ಸಲ್ಲಿಸುತ್ತಾರೆ. ಇಂದಿನ ಆಭಾರಿ ಸೇವೆಯ ಭಾಗವಾಗಿ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ವರಾಹ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ ಹವನ, ವಿಷ್ಣುಸೂಕ್ತ ಹವನ, ಏಕಾದಶ ರುದ್ರ ಪುರಸ್ಸರ ರುದ್ರ ಹವನ, ಕಲಶಾಭಿಷೇಕ, ಮಹಾಪೂಜೆ, ಉತ್ಸವಗಳು ನಡೆದುವು. ದೇವಾಲಯಕ್ಕೆ ಹೊಂದಿಕೊಂಡಿರುವ ಸೌಪರ್ಣಿಕಾ ನದಿಯ ನೆಗಳನ ಗುಂಡಿಯಲ್ಲಿ ದೈವಸ್ವರೂಪಿ ಮೊಸಳೆ ನೆಲೆಸಿದೆ ಎಂಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಹಂಪಿ: ಮಲೆನಾಡಿನ ದಟ್ಟವಾದ ಕಾಡುಗಳ ಮಧ್ಯೆ ಇರುವ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವು ಕನ್ನಡೇತರರಿಗೆ ಆನ್‌ಲೈನ್ ಮೂಲಕ ಕನ್ನಡ ಕಲಿಸುವ ಮಹತ್ಕಾರ್ಯದ ಜೊತೆಗೆ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡವನ್ನು ಸಾಗರದಾಚೆಗೂ ವಿಸ್ತರಿಸಲು ಹೊರಟಿರುವುದು ಶ್ಲಾಘನೀಯ ಎಂದು ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ. ಚಿ. ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ಹಾಸನ ಜಿಲ್ಲೆಯ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದರು. ಅನ್ಯರಿಗೆ ನಮ್ಮ ಸಂಸ್ಕೃತಿಯನ್ನು, ಕನ್ನಡ ಪರ ಚಿಂತನೆಗಳನ್ನು ಪರಿಚಯಿಸುವ ಕಾರ್ಯ ಮುಖ್ಯವಾದುದು. ಕನ್ನಡವನ್ನು ಕಟ್ಟುವ ಕಾರ್ಯ ಇಂದು ವಿವಿಧ ನೆಲೆಗಳಲ್ಲಿ ಆಗಬೇಕಿದೆ. ಈ ಮೂಲಕ ಯುವ ಪೀಳಿಗೆಯನ್ನು ರಾಷ್ಟ್ರಕಟ್ಟುವ ಕಾರ್ಯದಲ್ಲಿ ಕೈಜೋಡಿಸಲು ಸನ್ನದ್ಧಗೊಳಿಸಬೇಕಾದ ತುರ್ತು ಇಂದು ನಮ್ಮ ಮುಂದಿದೆ. ಒಟ್ಟಿನಲ್ಲಿ ಶಿಕ್ಷಣದ ಮೂಲಕ ಪ್ರಜ್ಞಾವಂತ ನಾಗರೀಕರನ್ನು ತಯಾರು ಮಾಡಬೇಕು ಎಂದು…

Read More