ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ ಉಡುಪಿ ಜಿಲ್ಲೆಯ ಡಿ. ಡಿ. ಪಿ. ಐ ಎನ್. ಎಚ್. ನಾಗೂರ ಭೇಟಿ ನೀಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿದ ಶ್ರೇಯಾ ಮೇಸ್ತ ಮತ್ತು ಅವರ ಸಹೋದರ ಸಂಜಯ್ ಮೇಸ್ತ ಇವರಿಗೆ ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ ಭಗಿನಿ ಶುಭ ಎ. ಸಿ, ಶಿಕ್ಷಣ ಸಂಯೋಜಕರಾದ ಸಂತೋಷ್ ಕುಮಾರ್, ಜಂಟಿ ಕಾರ್ಯದರ್ಶಿ ಭಗಿನಿ ಜ್ಯೋತಿ, ಮುಖ್ಯ ಶಿಕ್ಷಕಿ ಭಗಿನಿ ಸಿ. ಕ್ರೆಸೆನ್ಸ್, ವಿದ್ಯಾರ್ಥಿಗಳ ತಾಯಿ ಪವಿತ್ರ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು ಭಜನೆ, ಭಾವಗೀತೆ, ವಚನಗಳಂತಹ ಅನ್ಯ ಪ್ರಕಾರಗಳನ್ನು ಸುಲಲಿತವಾಗಿ ಹಾಡಬಹುದು ಎಂದು ಸಂಗೀತ ಗುರು ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಹೇಳಿದರು. ಹಟ್ಟಿಯಂಗಡಿ ಶಂಕರನಾರಾಯಣ ದೇವಸ್ಥಾನದಲ್ಲಿ ಭಾನುವಾರ ಕೃಷ್ಣಾಷ್ಟ್ಟಮಿ ನಿಮಿತ್ತ ಕುಂದಾಪುರದ ಗುರುಪರಂಪರಾ ಸಂಗೀತ ಸಭಾದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಗೀತ ಸಭಾದ ವಿದ್ಯಾರ್ಥಿಗಳು ಈ ವರೆಗೆ ವಿವಿಧೆಡೆ ನಡೆಯುವ ಬೈಠಕ್ಗಳಲ್ಲಿ ಶಾಸ್ತ್ರೀಯ ಸಂಗಿತವನ್ನು ಹಾಡುತ್ತಿದ್ದರು. ಈ ಬಾರಿ ಅವರಿಗೆ ಭಜನೆಗಳನ್ನು ಹಾಡುವ ಅವಕಾಶ ಸಿಕ್ಕಿದೆ. ಹಾಡಿದ ಎಲ್ಲರೂ ತಮ್ಮ ಪ್ರೌಢಿಮೆಯನ್ನು ಸಾದರ ಪಡಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ವಿದ್ವಾನ್ ಸತೀಶ ಭಟ್ ಮತ್ತು ವಿದುಷಿ ಪ್ರತಿಮಾ ಭಟ್ ದಂಪತಿಯ ಶಿಷ್ಯರಾದ ಜಾಹ್ನವಿ, ವಂದಿತಾ, ವೇದಿತಾ, ಈಶ್ವರಿ, ಸಂಕಲ್ಪಕುಮಾರ್, ಚಿಂತನಾ ಧನ್ಯ, ಕೇದಾರ ಮರವಂತೆ, ನಾಗರಾಜ ಭಟ್, ವೀಣಾ ನಾಯಕ್, ಚಿನ್ಮಯಿ ಧನ್ಯ, ಪ್ರಮೀಳಾ ಕುಂದಾಪುರ ಭಜನೆಗಳನ್ನು ವಿವಿಧ ರಾಗಗಳಲ್ಲಿ ಹಾಡಿದರು. ಶ್ರೀಧರ ಭಟ್ ಹಾರ್ಮೋನಿಯಂ, ಶಶಿಕಿರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಆರ್ಗೆನಾನ್ ಮತ್ತು ಹೋಮಿಯೋಪತಿಕ್ ಫಿಲೋಸಫಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಆಳ್ವ ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೊಮೀಯೋಪತಿ ಅಧ್ಯಯನ ಮಂಡಳಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. 163ನೇ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಿದಂತೆ ಮುಂದಿನ ಮೂರು ವರ್ಷಗಳ ಕಾಲ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ರೋಶನ್ ಪಿಂಟೋ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಧಾರ್ಮಿಕ ಆಚರಣೆಗಳನ್ನು ನಡೆಯಬೇಕು ಎನ್ನುವುದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಆಚರಣೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಅಗತ್ಯ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಿಯಮವಳಿಗಳನ್ನು ರೂಪಿಸಿ ರಾಜ್ಯ ಸರಕಾರಗಳಿಗೆ ಸುತ್ತೊಲೆ ಕಳುಹಿಸಿದೆ. ಧಾರ್ಮಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ, ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಹಬ್ಬವನ್ನು ಆಚರಿಸುವುದು ಒಳ್ಳೆಯದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಅಕಾಡೆಮಿಯಲ್ಲಿ ಹೊಸತನ ತರುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಇಲಾಖೆಯ ನಿರ್ದೇಶಕರುಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲಾ ಅಕಾಡೆಮಿಗಳಿಗೆ ಜೀವ ತುಂಬುವ ಕಾರ್ಯವನ್ನು ಮಾಡುತ್ತೇನೆ ಎಂದರು. ಕೊಲ್ಲೂರು ಹಾಗೂ ಹಟ್ಟಿಯಂಗಡಿ ದೇವಸ್ಥಾನಳಿಗೆ ಕುಟುಂಬಿಕರೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಕ್ಕಟ್ಟೆ ಗ್ರಾಮದ ಕೊಮೆಯಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶನೇಶ್ವರ ಮಹಾಯಾಗದೊಂದಿಗೆ ಸಾಮೂಹಿಕ ಶನಿ ಶಾಂತಿ ಮತ್ತು ತುಲಾಭಾರ ಸೇವೆಗಳು ನಡೆಯಿತು. ವೇದಮೂರ್ತಿ ಎಮ್. ಮಧೂಸೂದನ ಬಾಯಿರಿ ನೇತೃತ್ವದಲ್ಲಿ ಸಕಲ ವೈದಿಕ ಧಾರ್ಮಿಕ ಕಾರ್ಯಕ್ರಮನಡೆಯಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಕೆ.ಎಸ್, ಕಾರ್ಯದರ್ಶಿ ಉಮೇಶ್ ಮೆಂಡನ್, ದೇವರ ದರ್ಶನ ಪಾತ್ರಿ ನರಸಿಂಹ ಕಾಂಚನ್, ದೇವಳದ ನಿಕಟ ಪೂರ್ವಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಆರ್ಚಕರು ಮತ್ತು ಸಿಬ್ಬಂದಿ ವರ್ಗ, ದೇವಳದ ಭಕ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಹಿಂದು ಜಾಗರಣ ವೇದಿಕೆಯ ಆಹ್ವಾನದ ಮೇರೆಗೆ ಉಪ್ಪಿನಕುದ್ರು ರಾಮ ಭಜನಾ ಮಂದಿರದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಂಡರು. ಸಚಿವರನ್ನು ಗೌರವಿಸಿದ ಗಂಗೊಳ್ಳಿಯ ಜಾಗರಣ ವೇದಿಕೆಯ ಮುಖಂಡರು ಗಂಗೊಳ್ಳಿಯ ಹಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಸಮಸ್ಯೆಯನ್ನು ಆಲಿಸಿ ಮನವಿಯನ್ನು ಸ್ವೀಕರಿಸಿದ ಸಚಿವರು ಪ್ರತಿ ಹಂತದಲ್ಲೂ ಹಿಂದು ಜಾಗರಣ ವೇದಿಕೆ ಸದಸ್ಯರ ಜೊತೆ ಇರುವುದಾಗಿ ಭರವಸೆ ನೀಡಿದರು. ಸದಾನಂದ ಉಪ್ಪಿನಕುದ್ರು, ಗಂಗೊಳ್ಳಿ ಹಿಂಜಾವೇ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ರಾಮಪ್ಪ ಖಾರ್ವಿ, ಗಣೇಶ ಶೆಣೈ, ಮೋಹನ್ ಖಾರ್ವಿ, ರಾಘವೇಂದ್ರ ಗಾಣಿಗ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿಯ ಸಂಘ ಪರಿವಾರದ ಪ್ರಮುಖರು, ಹಿರಿಯರು, ಬೈಂದೂರು ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲಸೀಮಿಯಾ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಬೈಂದೂರಿನ ಸುಶಾಂತ್ (4)ನ ಚಿಕಿತ್ಸೆಗಾಗಿ ಸಹೃದಯಿದಾನಿಗಳ ನೆರವಿನಿಂದ ಒಟ್ಟುಗೂಡಿಸಿದ ಒಟ್ಟು 42351 ರೂಪಾಯಿ (40351 ಚೆಕ್ ಮತ್ತು 2000 ನಗದು) ಹಣವನ್ನು ಕುಂದಾಪುರ ಪೋಲಿಸ್ ಠಾಣೆಯ ಠಾಣಾಧಿಕಾರಿಗಳಾದ ಸದಾಶಿವ್ ಗವರೋಜಿ ಅವರ ನೇತ್ರತ್ವದಲ್ಲಿ ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಬಾಲನಕ ತಂದೆಗೆ ಹಸ್ತಾಂತರಿಸಲಾಯಿತು. ಹೆಲ್ಪಿಂಗ್ ಹ್ಯಾಂಡ್ಸ್ ಸಮಾಜಸೇವೆಯನ್ನು ಮೆಚ್ಚಿದ ಠಾಣಾಧಿಕಾರಿಗಳಾದ ಸದಾಶಿವ್ ಗೌರವಜಿ ಅವರು ಮುಂದಿನ ದಿನದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಆಗುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಬಾಲಕನ ಚಿಕಿತ್ಸೆ ಫಲಕಾರಿಯಾಗಲೆಂದು ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಬಾಲಕನ ಹೆಸರಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಮೊಗವೀರ, ಗೌರವ ಸಲಹೆಗಾರರಾದ ರವೀಂದ್ರ ರಟ್ಟಾಡಿ, ಕಾರ್ಯದರ್ಶಿಗಳಾದ ಗುರುಪ್ರಸಾದ್ ಖಾರ್ವಿ, ಕಾರ್ಯಾಧ್ಯಕ್ಷರಾದ ಚರಣ್ ಗಂಗೊಳ್ಳಿ ,ಜೊತೆ ಕಾರ್ಯದರ್ಶಿ ಪ್ರಶಾಂತ್ ತಲ್ಲೂರು, ಸದಸ್ಯರಾದ ಸುನೀಲ್ ತಲ್ಲೂರು ಹಾಗೂ ಸುಕೇಶ್ ನಾಯ್ಕ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಡಿಯಲ್ಲಿ ಮಹಿಳಾ ಸುರಕ್ಷತಾ ಅಭಿಯಾನದ ಅಂಗವಾಗಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ ಕುರಿತು ಜಾಗೃತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಪಣಂಬೂರು ಎಸಿಪಿ ಮಹೇಶ್ ಪ್ರಸಾದ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ, ಇಂತಹ ಸಂದರ್ಭಗಳಲ್ಲಿ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಪೋಲಿಸ್ ಇಲಾಖೆಯ ಸದಾ ಸಿದ್ಧವಾಗಿರುತ್ತದೆ. ಮಹಿಳೆಯರಿಗೆ ಯಾವುದೇ ರೀತಿಯ ಅಭದ್ರತೆಯ ಪರಿಸ್ಥಿತಿ ಬಂದೊದಗಿದರೆ ತುರ್ತು ಸಹಾಯವಾಣಿ ೧೧೨ಕ್ಕೆ ಕರೆ ಮಾಡುವ ಮೂಲಕ ಪೋಲಿಸ್ ಸಹಾಯವನ್ನು ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಮೂಡುಬಿದಿರೆ ಪೋಲಿಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಎಸ್ಐಗಳಾದ ಸುದೀಪ್ ಹಾಗೂ ದಿವಾಕರ್ ರೈ, ಎಎಸ್ಐ ಕಾಂತಪ್ಪ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕುಂಧಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು ಇವರ ಆಶ್ರಯದಲ್ಲಿ ಕೋವಿಡ್ 19 ಜನ ಜಾಗೃತಿ ಕಾರ್ಯಕ್ರಮ ಕೊಲ್ಲೂ ರಿನಲ್ಲಿ ನಡೆಯಿತು. ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈಲೇಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಪಾಲಿಸಿ ಯಾವುದೇ ಆತಂಕ ಬೇಡ, ಧೈರ್ಯದಿಂದಿರಿ ಎಂದು ಸಲಹೆ ನೀಡಿದರು. ಇದೇ ಸಂದರ್ಭ ಕೋವಿಡ್ 19 ಜನ ಜಾಗೃತಿ ಕರಪತ್ರವನ್ನು ಸಂಘದ ಸದಸ್ಯರು ಕೊಲ್ಲೂರಿನ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಗ್ರಾಮದ ಸ್ಥಳೀಯರಿಗೆ ನೀಡಿ ಕೋವಿಡ್ 19 ಜನ ಜಾಗೃತಿ ಮೂಡಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮತ್ತು ಸಂಘದ ಸದಸ್ಯರಾದ ಸುಷ್ಮಾ, ಜಯಲಕ್ಷ್ಮಿ, ರತ್ನ, ಸುಗುಣ, ಗೌರಿ, ಉಷಾ, ಭವಾನಿ, ಮತ್ತು ಸ್ಥಳೀಯ ಅಂಗನವಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಸಿಟಿ ವತಿಯಿಂದ ಸೆಲ್ಯೂಟು ಸೈಲೆಂಟ್ ಎಂಬ ಕಾರ್ಯಕ್ರಮದಡಿಯಲ್ಲಿ ಸಮಾಜದ ಎಲೆಮರೆ ಕಾಯಿಯಂತೆ ಇದ್ದು ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರನ್ನು ಗುರುತಿಸುವ ನಿಟ್ಟಿನಲ್ಲಿ ಬೈಂದೂರು ಭಾಗದ ಯುವ ಯೋಧ ಪ್ರಸ್ತುತ ಜಮ್ಮು-ಕಾಶ್ಮೀರದ ಪುಲ್ವಾಮದ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ದೇವಾಡಿಗ ಅವರನ್ನು ಇಲ್ಲಿನ ಮಹಾಸತಿ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಬೈಂದೂರು ಸಿಟಿ ವಲಯಾಧಿಕಾರಿ ಮಣಿಕಂಠ ದೇವಾಡಿಗ, ಘಟಕದ ಉಪಾಧ್ಯಕ್ಷೆ ಸೌಮ್ಯ ಬಿಕೆ, ಸಕ್ಕು ಕಲ್ಮಕ್ಕಿ, ಭಾನುಮತಿ ಬಿಕೆ, ಚೈತ್ರ, ದೀಪಿಕಾ ಆಚಾರ್ಯ, ಪ್ರೇಮ ವಿ ಶೆಟ್ಟಿ, ರಾಘವೇಂದ್ರ ಪೂಜಾರಿ, ರಾಘವೇಂದ್ರ ಹೊಳ್ಳ, ರಾಘವೇಂದ್ರ ದೀಕ್ಷಾ ಮೊಬೈಲ್, ಅಶ್ರಫ್, ಸ್ಥಾಪಕ ಕಾರ್ಯದರ್ಶಿ ಸುಶಾಂತ್ ಆಚಾರ್ಯ, ಉಪಸ್ಥಿತರಿದ್ದರು. ಪ್ರಾಜೆಕ್ಟ್ ಡೈರೆಕ್ಟರ್ ಸತೀಶ್ ದೇವಾಡಿಗ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಸವಿತಾ ಗಾಣಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
