Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಕಛೇರಿಯಲ್ಲಿ ಜನಸಾಮಾನ್ಯರ ಕೆಲಸವಾಗದಿದ್ದರೆ ಅಧಿಕಾರಿಗಳು ಆ ಹುದ್ದೆಯಲ್ಲಿದ್ದೇನು ಪ್ರಯೋಜನ. ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ. ಹೀಗೆ ಜನರಿಗೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಿದ್ಧಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಬಡ ಕುಟುಂಬಗಳಿಗೆ 94ಸಿ ಹಕ್ಕುಪತ್ರ ನೀಡಿ ಆರ್‌ಟಿಸಿ ಮಾಡಿಕೊಳ್ಳುವ ಸಂದರ್ಭ ಆ ಜಾಗ ಡೀಮ್ಡ್ ಫಾರೆಸ್ಟ್‌ಗೆ ಸೇರಿದ್ದೆಂಬ ನೆಪ ಹೇಳುತ್ತಿರುವ ಬಗ್ಗೆ ಕುಂದಾಪುರ ತಹಶಿಲ್ದಾರರ ವಿರುದ್ಧ ಗರಂ ಆದರು. ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಇದೇ ಪರಿಸ್ಥಿತಿ ಇದೆ. ಜನಸಾಮಾನ್ಯನೊಬ್ಬ ಮನೆ ಕಟ್ಟಿಕೊಳ್ಳಲು ಪಡೆದ ನಿವೇಶನಕ್ಕೂ ಅಧಿಕಾರಿಗಳು ನಿಲ್ಲದ ನೆಪ ಹೇಳಿ ಮತ್ತೆ ಕಿತ್ತುಕೊಳ್ಳುವುದು ಸರಿಯಲ್ಲ. ಈ ವ್ಯವಸ್ಥೆ ಸರಿಪಡಿಸಿದ್ದರೆ ತಾನು ಖುದ್ದಾಗಿ ತಾಲೂಕು ಕಛೇರಿಯಲ್ಲಿ ಪ್ರತಿಭಟನೆ ಕೂರುತ್ತೇನೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿಯೇ ಸೃಜನಶೀಲ ಕಲೆಗಳ ಬಗ್ಗೆ ಆಸಕ್ತಿ ವಹಿಸುವುದು ಅವರ ಮುಂದಿನ ಬದುಕಿಗೆ ನೆರವಾಗಲಿದೆ. ಯಾವುದೇ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಳ್ಳುವುದಷ್ಟೇ ಮುಖ್ಯವಲ್ಲ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಕೂಡ ಗೆಲುವೇ ಆಗಿದೆ ಎಂದು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣದ ಸಂಪಾದಕ ಸುನಿಲ್ ಹೆಚ್. ಜಿ. ಹೇಳಿದರು. ಅವರು ಕುಂದಾಪುರ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕಿರುಚಿತ್ರ ಸ್ಪರ್ಧೆಯ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಾದರೆ ಅದನ್ನು ಇನ್ಯಾರಿಂದಲೋ ನಿರೀಕ್ಷಿಸುವ ಬದಲಿಗೆ ನಾವೇ ಬದಲಾವಣೆಗೆ ಸಾಕ್ಷಿಯಾಗಬೇಕಿದೆ ಎಂದರು. ಪ್ರಾಂಶುಪಾಲರಾದ ಡಾ. ಶಮೀರ್ ಅವರು ಮಾತನಾಡಿ ಕೇವಲ ವಿದ್ಯಾಭ್ಯಾಸ ಮಾತ್ರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ಅದರ ಜೊತೆಗೆ ಇತರ ಸಾಫ್ಟ್ ಸ್ಕಿಲ್‌ಗಳು ಕೂಡ ಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದಿಂದ ಸಂಶೋಧನ ವಿಧಾನದ ಕುರಿತು ಒಂದು ದಿನದ ಕಾರ‍್ಯಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್ ವಿದ್ಯಾರ್ಥಿಗಳಿಗೆ ಸಂಶೋಧನ ವಿನ್ಯಾಸ ಹಾಗೂ ವಿಧಾನಗಳ ಕುರಿತು ಮಾಹಿತಿ ನೀಡಿದರು. “ಜ್ಞಾನದ ಸೃಷ್ಠಿ ಸಂಶೋಧನೆಯಿಂದ ಮಾತ್ರ ಸಾಧ್ಯ. ಸಂಶೋಧನೆಯಲ್ಲಿ ಯಾವುದೇ ವಿಷಯದ ಕುರಿತು ಸಂಶೋಧಕನ ಜ್ಞಾನ ಹಾಗೂ ಆಸಕ್ತಿ ತುಂಬಾ ಮುಖ್ಯವಾಗುತ್ತವೆ. ಒಬ್ಬ ಸಂಶೋಧಕ ಜ್ಞಾನದ ಮೂಲಕ ಎಲ್ಲರಿಗೂ ದಾರಿ ತೋರಿಸುವವನಾಗಿರುತ್ತಾನೆ. ಅದಕ್ಕಾಗಿ ವಿಶ್ವಾಸಾರ್ಹತೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ” ಎಂದರು. ಸಂಶೋಧನೆ ಮಾಡಲು ವಿಷಯಗಳನ್ನು ಆಯ್ಕೆ ಮಾಡುವುದರ ಕುರಿತು ಹೇಳಿದ ಡಾ| ಕುರಿಯನ್, ಸ್ಪಷ್ಟವಾಗಿ ಯೋಚನೆ ಮಾಡಲು ಪ್ರಾರಂಭಿಸಿದಾಗ ಮಾತ್ರ ಸಂಶೋಧನೆ ಮಾಡಲು ಸಾಧ್ಯ ಎಂದು ಹೇಳಿದರು. ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಶೋಧನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಕಾರ್ಯಾಗಾರದಲ್ಲಿ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ, ಬಿಎಸ್‌ಡಬ್ಲ್ಯೂ ವಿಭಾಗದ ಉಪನ್ಯಾಸಕರಾದ ಡಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದೊಂದಿಗೆ ರಾಮ್ಸನ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಚತೆಯ ಅರಿವು ಕಾರ್ಯಕ್ರಮ ನಡೆಯಿತು. ಪ್ರಭಾರ ಮುಖ್ಯೋಪಾಧ್ಯಾಯರಾದ ನಾಗಮ್ಮ ನಾಯಕ್ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ್ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಇವರು ವಿದ್ಯಾರ್ಥಿಗಳಿಗೆ ಜಲವೆಂದರೆ ಬರೀ ನೀರಲ್ಲ ಅದು ಪಾವನ ತೀರ್ಥ ಜೀವಜಲದ ಮಹತ್ವತಿಳಿಸಿ ನೀರು ಕಲುಷಿತಗೊಳ್ಳುವ ಕುರಿತು ಸವಿಸ್ತಾರ ಮಾಹಿತಿನೀಡಿ ಕಿರು ಚಿತ್ರ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು . ಮುಖ್ಯ ಅತಿಥಿಗಳಾಗಿ ರಜನಿ ಎಸ್ ಹೆಗಡೆ ಹಿರಿಯ ಸಹ ಶಿಕ್ಷಕರು ಅಜಯ್ ಕುಮಾರ್ ಶೆಟ್ಟಿ ಸಹ ಶಿಕ್ಷಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಎನ್‌ಐಟಿ ಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್‌ನ ಪ್ರವೇಶಕ್ಕಾಗಿ ನಡೆದ ಜೆಇಇ ಮೈನ್‌ನ ಬಿ – ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಟಿ. ದೇವಾಡಿಗ 96.5 ಅಂಕ ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಹಾಗೆಯೇ ಆರ್ಕಿಟೆಕ್ಚರ್ ಡ್ರಾಯಿಂಗ್‌ನಲ್ಲಿ 99.7 ಅಂಕ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿನಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟ-2020-21ನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾದ ರಾಜೇಂದ್ರ ತೋಳಾರ್ ಇತ್ತೀಚೆಗೆ ಉದ್ಘಾಟಿಸಿದರು. ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟ್ರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಶ್ರೀ ಶಾರದಾ ಕಾಲೇಜು ಬಸ್ರೂರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು. ಕುಸ್ತಿ ಪಂದ್ಯಾಟದ ಫಲಿತಾಂಶ: 57 ಕೆ.ಜಿ ವಿಭಾಗ- ಪ್ರಥಮ- ಶ್ರೀನಿವಾಸ,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಮಹಮ್ಮದ್ ಸಯೀದ್,ಎಕ್ಷಲೆಂಟ್ ಪದವಿಪೂರ್ವಕಾಲೇಜು,ಸುಣ್ಣಾರಿ,ತೃತೀಯ- ಸುದೀಪ್,ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ 61ಕೆ.ಜಿ ವಿಭಾಗ- ಪ್ರಥಮ-ರವೀಶ್,ಶ್ರೀ ಶಾರದಾಕಾಲೇಜು ಬಸ್ರೂರು ದ್ವಿತೀಯ-ಸುದೀಪ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ದೀನದಯಾಳ್ ನಿಶಾದ್,ಮಹಾತ್ಮಗಾಂಧಿ ಪದವಿ ಪೂರ್ವಕಾಲೇಜು,ಉಡುಪಿ. 65 ಕೆ.ಜಿ ವಿಭಾಗ- ಪ್ರಥಮ-ಅಜಯ್‌ಕುಮಾರ್,ಸರಕಾರಿ ಪದವಿ ಪೂರ್ವಕಾಲೇಜು,ಕುಂದಾಪುರ, ದ್ವಿತೀಯ-ಅವಿನಾಶ್,ಶ್ರೀ ಶಾರದಾಕಾಲೇಜು ಬಸ್ರೂರುತೃತೀಯ-ವರುಣ್, ಶ್ರೀ ವೆಂಕಟರಮಣ ಪದವಿ ಪೂರ್ವಕಾಲೇಜು, ಕುಂದಾಪುರ 70 ಕೆ.ಜಿ ವಿಭಾಗ- ಪ್ರಥಮ-ಪ್ರಿನ್ಸನ್‌ಡಿಸೋಜಾ,ಶ್ರೀ ಶಾರದಾಕಾಲೇಜು ಬಸ್ರೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಸಾಂಪ್ರದಾಯಿಕ ಕ್ರೀಡೆಗಳ ಪಂದ್ಯಾಟವನ್ನು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಉದ್ಘಾಟಿಸಿದರು. ಇನ್ಫೋಸಿಸ್ ಕಂಪೆನಿ ಉದ್ಯೋಗಿ ಮತ್ತು ಪೂರ್ವ ವಿದ್ಯಾರ್ಥಿ ಶಿವಪ್ರಸಾದ್ ವಕ್ವಾಡಿ ಮಾತನಾಡಿ, ವಿದ್ಯುನ್ಮಾನ ಯುಗದ ಭರಾಟೆಯಲ್ಲಿ ಸಾಂಪ್ರದಾಯಿಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಕೈಂಕರ್ಯದಲ್ಲಿ ತೊಡಗಿರುವುದು ಸ್ತುತ್ಯಾರ್ಹ. ಇಂತಹ ಗ್ರಾಮೀಣ ಕ್ರೀಡೆಗಳು ಪರಿಸರ ಕಾಳಜಿಯನ್ನು ಮೂಡಿಸುವುದರ ಜೊತೆಗೆ ಮಾನವ ಸಂಬಂಧವನ್ನು ವರ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಂಜಿತ್ ಟಿ.ಎನ್., ಕ್ರೀಡಾ ಸಂಘದ ಕಾರ್ಯದರ್ಶಿಯಾದ ಲಕ್ಷ್ಮೀಶ ಮಂಜ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿ ಸುಪ್ರೀತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಚ್. ಎಮ್. ಎಮ್. ಆಂಗ್ಲ ಪ್ರಾಥಮಿಕ ಶಾಲೆ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ವಿಶ್ವ ಕರಾಟೆ ಫೆಡರೇಶನ್ ಐದನೇ ಡಾನ್ ಬ್ಲ್ಯಾಕ್ ಬೆಲ್ಟ್ ಶಿಹಾನ್ ಕೀರ್ತಿ ಜಿ. ಕೆ. ಮತ್ತು ತಂಡದವರಿಂದ ಸ್ವಆತ್ಮ ರಕ್ಷಣೆ ಕಲೆಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸರ್ವತ್ ಪರ್ವೀನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲೆ ಶುಭಾ ಕೆ. ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್, ಪ್ರೌಢ ಶಾಲಾ ಸಂಯೋಜಕರಾದ ಚಂದ್ರಶೇಖರ್, ಗೈಡ್ಸ್ ಶಿಕ್ಷಕಿ ರೇಖಾ ಕೆ. ಯು. ಉಪಸ್ಥಿತರಿದ್ದರು. ಕಂಪ್ಯೂಟ್ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಇತ್ತಿಚೆಗೆ ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು. ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ ಡಿಸೋಜಾ, ಕೋಶಾಧಿಕಾರಿ ಕೆರೋಲ್ ಗೊನ್ಸಾಲ್ವಿಸ್ ನಡೆಸಿಕೊಟ್ಟರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಸಚೇತಕಿ ಸಿಸ್ಟರ್ ಆಶಾ ಶುಭ ಕೋರಿದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಜೂಲಿಯಾನ ಮಿನೇಜಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್‌ಕ್ರಾಸ್ ಘಟಕ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ‘ನೆರೆಹೊರೆ – ಯುವಸಂಪತ್ತು’ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಂ.ಗೊಂಡ ಅವರು ಇಂದಿನ ದಿನಗಳಲ್ಲಿ ನೀರಿನ ಅಭಾವ ಮಿತಿಮೀರಿದೆ ಎಲ್ಲಿ ನೋಡಿದರೂ ಅಂತರ್ಜಲ ಮಟ್ಟ ಕುಸಿದು ನಗರ ಗ್ರಾಮ ಎಂಬ ಭೇದವೆನ್ನದೆ ನೀರಿನ ಕೊರತೆ ಅತಿದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆ ನೀಗಿಸುವ ಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ನಡೆಯುತ್ತಿರುವ ಮಳೆಕೊಯ್ಲು ಕುರಿತ ವಿಷಯ ಇಂದಿನ ವಿದ್ಯಾರ್ಥಿಗಳಿಗೆ ತೀರಾ ಅಗತ್ಯವಾಗಿದೆ. ಇದು ಖಂಡಿತ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಕಾರ್ಯಕ್ರಮವಾಗಿದೆ. ವಿದ್ಯಾಥಿಜೀವನದಲ್ಲಿ ಕೇವಲ ಅಂಕಗಳಿಗೆ ಮೀಸಲಾಗಿರದೇ ಯಾವುದೇ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಅವಕಾಶಗಳನ್ನು ಉಪಯೋಗಿಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ…

Read More