Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ನಾವುಂದ, ಮರವಂತೆ, ಬಡಾಕೆರೆ, ಹೇರೂರು ಗ್ರಾಮಗಳ ವ್ಯಾಪ್ತಿಯ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಸಕ್ತ ಅಧ್ಯಕ್ಷ ಎಸ್. ರಾಜು ಪೂಜಾರಿ ನೇತೃತ್ವದ ತಂಡ ಅವಿರೋಧವಾಗಿ ಚುನಾಯಿತವಾಗಿದೆ. ಹಾಲಿ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ವಾಸು ಪೂಜಾರಿ, ರಾಮಕೃಷ್ಣ ಖಾರ್ವಿ, ನಾರಾಯಣ ಶೆಟ್ಟಿ, ಎಂ. ನಾಗಮ್ಮ, ಸರೋಜಾ, ಪ್ರಕಾಶ ದೇವಾಡಿಗ, ರಾಮ ಗಾಂಧಿನಗರ, ಭೋಜ ನಾಯ್ಕ್ ಆಯ್ಕೆಯಾದ ಇತರರು. ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ ಎಸ್. ವಿ. ಇದನ್ನು ಪ್ರಕಟಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬರಲ್ಲಿಯೂ ಅಗಾಧವಾದ ಚೈತನ್ಯವಿದೆ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡರೆ ಗುರಿ ತಲುಪಲು ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದ್ದ ಸ್ವಾಮಿ ವಿವೇಕಾನಂದರು ಸರ್ವರಿಗೂ, ಸರ್ವಕಾಲಕ್ಕೂ ಸ್ಫೂರ್ತಿಯ ಚೇತನ ಎಂದು ಎಳಜಿತ ರಾಮಕೃಷ್ಣ ಕುಠೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಅವರು ವಸ್ರೆ- ಮೈಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಯಾವುದೇ ಕಾರ್ಯವನ್ನು ಶ್ರದ್ಧೆ, ಗುರಿ ಇಟ್ಟುಕೊಂಡು ಮಾಡಿದರೆ ಫಲ ಖಂಡವಾಗಿಯು ದೊರೆಯುತ್ತದೆ. ನಮ್ಮ ಶಕ್ತಿಯನ್ನು ಉತ್ತಮ ಉದ್ದೇಶಕ್ಕಾಗಿ ತೊಡಗಿಸಿದರೆ ಅದು ರಾಷ್ಟ್ರ ನಿರ್ಮಾಣ ಮಾಡಿದಂತೆಯೇ ಎಂದರು. ಶಾಲಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಗೆಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ವಸ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯಿನಿ ಮಹಾದೇವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ಭಾಗೀರಥಿ ಎಚ್., ನಿತ್ಯಾನಂದ, ಶಶಿಕಲಾ, ಪ್ರಮೋದಾ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಧ್ಯಯನ ನಡೆಸಲು ಪ್ರವಾಸ ಕೈಗೊಂಡಿರುವ ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ತಂಡವು ವಂಡ್ಸೆ ಮತ್ತು ಮರವಂತೆ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿತು. ಇಲ್ಲಿನ ಘನ, ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಪರಿಶೀಲಿಸಿ, ಆ ಮಾದರಿಯನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುವ ಸಾಧ್ಯಾಸಾಧ್ಯತೆಯನ್ನು ಅರಿಯುವುದು ಈ ಭೇಟಿಯ ಉದ್ದೇಶವಾಗಿತ್ತು. ವಂಡ್ಸೆಯಲ್ಲಿ ತಂಡವನ್ನು ಸ್ವಾಗತಿಸಿದ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ, ಅಂಗಡಿಗಳ ಕಸ ಸಂಗ್ರಹಣೆ, ಗ್ರಾಮ ಸ್ವಚ್ಛತೆ, ತ್ಯಾಜ್ಯದ ವೈಜ್ಞಾನಿಕ ವಿಂಗಡಣೆ, ಮೌಲ್ಯವರ್ಧಿಸಿ ಮಾರಾಟ, ಹಸಿಕಸ ಗೊಬ್ಬರವಾಗಿ ಮಾರ್ಪಾಡು, ಗೋಶಾಲೆಯಲ್ಲಿ ಬಳಕೆ, ದಾಖಲಾತಿ ನಿರ್ವಹಣೆ, ಘಟಕ ನಿರ್ವಹಣೆ, ಲಾಭಾಂಶ ಇತ್ಯಾದಿ ಮಾಹಿತಿ ನೀಡಿದರು. ಗ್ರಾಮದ ಜತೆಗೆ ಚಿತ್ತೂರು, ಇಡೂರು-ಕುಂಜ್ಞಾಡಿ ಪಂಚಾಯಿತಿಗಳ ತ್ಯಾಜ್ಯವನ್ನೂ ಇಲ್ಲಿ ನಿರ್ವಹಿಸಲಾಗುತ್ತದೆ ಎಂದು ಅವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಈ ಮಾದರಿಯ ಘಟಕಗಳ ಆರಂಭಕ್ಕೆ ಕಾರಣರಾದ ಗ್ರೀನ್ ಇಂಡಿಯಾ ಸರ್ವೀಸ್‌ನ ಯೋಜನಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತದ ಆಸ್ವಾದನೆಯಿಂದ ಎಲ್ಲಾ ದುಗುಡ ದೂರವಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅದರಲ್ಲಿ ಅಂತಹ ಶಕ್ತಿ ಅಡಗಿದೆ ಎಂದು ಎಂಆರ್‌ಜಿ ಗ್ರೂಪ್ ಮಾಲಕ ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಕಲಾಕ್ಷೇತ್ರ ಕುಂದಾಪುರ ದಶಮ ಸಂಭ್ರಮ ಕಾರ್ಯಕ್ರಮದ ಸಂದರ್ಭ ಇಲ್ಲಿನ ಬೋರ್ಡ್ ಹೌಸ್ಕೂಲ್ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಇನಿದದನಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅದ್ಬುತ ಸಂಗೀತ ಪ್ರತಿಭೆಗಳನ್ನು ಒಳಗೊಂಡು ಆಯೋಜಿಸಲಾದ ಇನಿದನಿ ಕಾರ್ಯಕ್ರಮ, ಸುಂದರ ವೇದಿಕೆ ಹಾಗೂ ಸಾಕ್ಷಿಯಾದ ಇಲ್ಲಿನ ಪ್ರೇಕ್ಷಕರು ಎಲ್ಲವೂ ಖುಷಿ ನೀಡಿತು ಎಂದರು. ಕೆನರಾ ಬ್ಯಾಂಕ್ ಚೀಫ್ ಮೆನೇಜರ್ ಎಂಪಿ ನಂದನ್, ಕೋರಲ್ ಎಡ್ಜ್ ಪಾಲುದಾರ ದಿನೇಶ್ ಕಾರಂತ, ಕೋಟ ಜನತಾ ಫಿಶ್ ಮಿಲ್ ಮಾಲಕ ಆನಂದ ಸಿ. ಕುಂದರ್, ಉಡುಪಿ ಲಿಗಾಡೋ ಸಂಸ್ಥೆಯ ಮಾಲಕ ಇಬ್ರಾಹಿಂ ಗೋವಾ, ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಪಂಜುರ್ಲಿ ರಾಜೇಂದ್ರ ಶೆಟ್ಟಿ, ಹುಂತ್ರಿಕೆ ಸುಧಾಕರ ಶೆಟ್ಟಿ ಮೊದಲಾದವರು ಅತಿಥಿಗಳಾಗಿದ್ದರು. ಎಂಆರ್‌ಜಿ ಗ್ರೂಪ್ ಮಾಲಕ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಆಜೆಕಾರು: ಎರಡು ದಶಕಗಳ ಸಾರ್ಥಕ ಸಂಭ್ರಮ ಕಂಡು ಮುಂದುವರಿಯುತ್ತಿರುವ ಅಜೆಕಾರು ಆದಿಗ್ರಾಮೋತ್ಸವದ ಪ್ರತಿಷ್ಠಿತ ರಾಜ್ಯಮಟ್ಟದ ಆದಿಗ್ರಾಮೋತ್ಸವ ಗೌರವವನ್ನು ವಾಗ್ಮಿ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಜನವರಿ 25 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿದ್ದಾರೆ ಎಂದು ಉತ್ಸವದ ರೂವಾರಿ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಕಲಾವಿದರಿಗೆ ಹಿರಿಯ ಸಾಧಕರಿಗೆ ನೀಡಲಾಗುವ ಅಜೆಕಾರು ಗ್ರಾಮ ಗೌರವಕ್ಕೆ ನಾದವೈಭವಂ ಉಡುಪಿ ವಾಸುದೇವ ಭಟ್ ಮತ್ತು ಸಮಾಜ ಸೇವಕ-ಉದ್ಯಮಿ ವಿಶ್ವನಾಥ ಶೆಣೈ ಅವರು ಪಾತ್ರರಾಗಲಿದ್ದಾರೆ. 17 ಮಂದಿಗೆ ಯುವ ಗೌರವ: ಯುವ ಗೌರವಕ್ಕೆ ನಾಡಿನ ವಿವಿದ ಕಡೆಯ ೧೭ ಮಂದಿ ಯುವ ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಂದಾ ಪ್ರೇಮ್‌ಕುಮಾರ್-ಶಿಕಾರಿಪುರ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಮಂಗಳೂರು, ನಾಗರಾಜ ಗುರುಪುರ, ಮುಂಬಯಿ,ಜೆಸಿಂತಾ ಡಿಸೋಜಾ, ನಿಟ್ಟೆ, ಉಪನ್ಯಾಸಕಿ ಜ್ಯೋತಿ ಜ್ಯು.ಕಾಲೇಜ್, ಸುಜಾತ ಲಕ್ಷ್ಮಣ ಆಚಾರ್ಯ- ವರಂಗ, ಮಾಲಿನಿ.ಜೆ.ಶೆಟ್ಟಿ-ಹಿರ್ಗಾನ, ಸದಾನಂದ ಆಚಾರ್ಯ ನೂರಾಳಬೆಟ್ಟು, ಕಿಶೋರ್ ರೈ-ಉಜಿರೆ, ಡಾ.ರಕ್ಷಿತಾ ಕೋಟ್ಯಾನ್-…

Read More

ಕುಂದಾಪ್ರ ಡಾಟ್ ಕಾಂ ಸುದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಇನ್ನಷ್ಟು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ವ್ಯವಸ್ಥಿತವಾಗಿ, ನಿಯಮಾವಳಿಗಳ ಅನುಸಾರ ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸ ರೂಪದೊಂದಿಗೆ ಸಕ್ರಿಯಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಭಂಡಾರ್ಕಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಹೇಳಿದರು. ಅವರು ಕಾಲೇಜಿನಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾಲೇಜಿನಲ್ಲಿ 1967ರಲ್ಲಿಯೇ ಹಳೆ ವಿದ್ಯಾರ್ಥಿ ಆರಂಭಗೊಂಡಿದ್ದರೂ ಕೂಡಾ ಕೆಲವು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಆ ನಂತರ ಪುನಃ ಅದಕ್ಕೆ ಆಗಿನ ಪ್ರಾಂಶುಪಾಲರಾಗಿದ್ದ ಡಾ|ಹೆಚ್.ಶಾಂತಾರಾಮ್ ಅವರು ಚಾಲನೆ ನೀಡಿದ್ದರು. ಮತ್ತೆ 1976ರಲ್ಲಿ ಕಾಮರ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಮೋಹನದಾಸ ಪೈ ಮತ್ತು ಡಾ|ರಾಮಮೋಹನ ಅವರ ಸಮರ್ಥ ನೇತೃತ್ವದಲ್ಲಿ ಸಕ್ರಿಯವಾಯಿತು. ಆನೇಕ ಮಂದಿ ಅಜೀವ ಸದಸ್ಯರನ್ನು ಒಟ್ಟು ಮಾಡಿ ಒಂದು ನಿಧಿಯನ್ನು ಸ್ಥಾಪಿಸಲಾಯಿತು. ಕಾಲ ಕ್ರಮೇಣ ಕಾಲೇಜಿನಲ್ಲಿ ಓದು ಮುಗಿಸಿ ಬಿಟ್ಟು ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಹಳೆ ವಿದ್ಯಾರ್ಥಿ ಸಂಘದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ರಜತ ಮಹೋತ್ಸವದ ಸಂಭ್ರಮದ 2ನೇ ದಿನ ಭಾನುವಾರ ಕಾರ್ಯಕ್ರಮದ ಅಂಗವಾಗಿ ಸ್ಮರನ ಸಂಚಿಕರ ಬಿಡುಗಡೆ ಮಾಜಿ ಅಧ್ಯಕ್ಷರಿಗೆ ಸನ್ಮಾನ, ಸಮಾರೋಪ ಸಮಾರಂಭ ಪ್ರತಿಭಾಪುರಸ್ಕಾರ, ವಿದ್ಯರ್ಥಿ ವೇತನ ವಿತರಣೆ ಕಾರ್ಯಕ್ರಮಗಳು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು. ರಜತ ಮಹೋತ್ಸವದ ಸಂಬ್ರಮದ ನೆನಪಿಗಾಗಿ ಬೆಳ್ಳಿರಥ ಸ್ಮರಣ ಸಂಚಿಕೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೃಷ್ಣಾನಂದ ಚಾತ್ರ ಬಿಡುಗಡೆಗೊಳಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಂಘಟನೆಯು ಉತ್ತಮವಾಗಿದ್ದು ಹಾಗೆಯೆ ಉಪ್ಪುಂದ ವಲಯವು ಕಳೆದ ೨೫ ವರ್ಷಗಳಿಂದಲೂ ಉತ್ತಮವಾಗಿ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು. ಸಂಘಟನೆಗೆ ತನ್ನದೇ ವಿಶೇಷ ಕೊಡುಗೆ ನೀಡಿದ್ದು ಜಿಲ್ಲೆಯಲ್ಲಿಯೇ ಗೌರವಕ್ಕೆ ಪಾತ್ರವಾದ ವಲಯವಾಗಿರುತ್ತದೆ ಎಂದು ಹೇಳಿದರು. ಈ ಸಂದಂರ್ಭದಲ್ಲಿ ವಲಯದ ಮಾಜಿ ಅಧ್ಯಕ್ಷರುಗಳಾದ ಯು. ರಮೇಶ್ ವೈದ್ಯ ಹಿರಿಯಣ್ಣ ರಾವ್, ದೀಟಿ ಸೀತಾರಾಮ ಮಯ್ಯ, ಬಿ. ಗಣೇಶ್ ಮಯ್ಯ, ಹೆಚ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ದಶಮಾನೋತ್ಸವ ಸಂಭ್ರಮದಲ್ಲಿರುವ ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ಆಯೋಜಿಸಿದ ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಸಂಸ್ಮರಣೆಯ ಭಜನ್ ಸಂಧ್ಯಾ ಕಾರ್ಯಕ್ರಮ ಬೋರ್ಡ್ ಹೈಸ್ಕೂಲು ಬಯಲು ರಂಗಮಂದಿರದಲ್ಲಿ ಶನಿವಾರ ಜರುಗಿತು. ಉಸ್ತಾದ್ ಹುಮಾಯುನ್ ಹರ್ಲಾಪುರ್ ಶಿವಮೊಗ್ಗ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರುಗಿತು. ತಬಲದಲ್ಲಿ ವಿದ್ವಾನ್ ಅಕ್ಷಯ್ ಜೋಶಿ ಹುಬ್ಬಳ್ಳಿ, ಸಹಗಾಯನದಲ್ಲಿ ನಿಶಾದ್ ಹರ್ಲಾಪುರ್, ಹಾರ್ಮೊನಿಯಂನಲ್ಲಿ ವಿದ್ವಾನ್ ಭರತ್ ಹೆಗಡೆ ಶಿರಸಿ, ತಂಬೂರಿಯಲ್ಲಿ ದಿಲ್‌ಶಾದ್ ಹರ್ಲಾಪುರ್ ಸಹಕರಿಸಿದರು. ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸಿದ ಖುಷಿ ಯಡಿಯಾಳ್, ಧ್ವನಿ ಯಡಿಯಾಳ್ ಅವ್ಯಕ್ತ ಹೆಬ್ಬಾರ್ ಹಾಗೂ ಅಲಕಾ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಚಕ್ರೇಶ್ ಯಡಿಯಾಳ್ ಕಲಾವಿದರನ್ನು ಗೌರವಿಸಿದರು. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಪ್ರಸ್ತಾವಿಕ ಮಾತುಗಳನ್ನಾಡಿದರು. ಭಜನ್ ಸಂಧ್ಯಾಕ್ಕೂ ಮುನ್ನ ಸುಮುಖ ಆಚಾರ್ಯ ಅವರಿಂದ ಸಿತಾರ್ ವಾದನ ಜರುಗಿತು. ರಾಜೇಶ್ ಭಾಗವತ್ ತಬಲಾ ವಾದಕರಾಗಿ ಸಹಕರಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ನಲ್ಲಿ ಡಿ.೯ರಂದು ವಿಷ ಕುಡಿದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅವರು ದಂಪತಿಗಳಲ್ಲ ಬದಲಿಗೆ ಈವರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳಿದ್ದರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ರಾಜಕುಮಾರ್ ಹಾಗೂ ಸಂಗೀತಾ ಇಬ್ಬರೂ ಕೂಡ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದೇ ಊರಿನವರು. ಮೃತ ರಾಜಕುಮಾರ್‌ಗೆ ಮೂರು ಮಕ್ಕಳಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತಾಗೆ ಇಬ್ಬರು ಮಕ್ಕಳಿದ್ದಾರೆ. ರಾಜಕುಮಾರ್ ಆದಿ ಉಡುಪಿಯಗೆ ಕೂಲಿ ಕೆಲಸಕ್ಕಾಗಿ ಬರುತ್ತಿದ್ದ. ಆತನ ಪತ್ನಿ ಮಕ್ಕಳು ಕೊಯಮತ್ತೂರಿನಲ್ಲಿಯೇ ವಾಸವಿದ್ದಾರೆ. ಸಂಗೀತಳ ಪತಿ ಕೂಡ ಅದೇ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕುಮಾರ್ ಮತ್ತು ಸಂಗೀತ ಇಬ್ಬರು ಪ್ರೇಮಿಗಳಾಗಿದ್ದು ಕೊಲ್ಲೂರಿಗೆ ಬರುವ ಮುನ್ನಾ ದಿನ ಊರು ಬಿಟ್ಟು ಇಲ್ಲಿಗೆ ಬಂದು ಬಸ್ಸಿನಲ್ಲಿ ವಿಷ ಸೇವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಘಟನೆಯಲ್ಲಿ ರಾಜ್‌ಕುಮಾರ್ ಮೃತಪಟ್ಟಿದ್ದು, ಸಂಗೀತ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಜ್‌ಕುಮಾರ್ ಬಲವಂತದಿಂದ ವಿಷ ಕುಡಿಸಿರುವ ಶಂಕೆ ಇದ್ದು ಘಟನೆಯ ಪೂರ್ಣ ಮಾಹಿತಿ ಇನ್ನಷ್ಟೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ. ವೈ. ರಾಘವೇಂದ್ರ ಅವರು ಇತ್ತಿಚಿಗೆ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ರೈಲು ನಿಲುಗಡೆಗೆ ಆದ್ಯತೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

Read More