ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕುದುರೆಮುಖ ವನ್ಯ ಜೀವಿ ವಿಭಾಗದ ಐ.ಎಫ್.ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ್ ಎಂ. ಬಾಬು ಅವರು ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ತರಬೇತಿಯು ಬಹಳ ಬೇಡಿಕೆಯಿರುವ ಕ್ಷೇತ್ರವಾಗಿರುವುದರಿಂದ ಆಸಕ್ತಿಯನ್ನು ಹೊಂದಿ ತರಬೇತಿಯಲ್ಲಿ ಪಾಲ್ಗೊಳ್ಳಿ ಎಂದರು. ಇಂತಹ ಅವಕಾಶಗಳನ್ನು ಎಂದಿಗೂ ವ್ಯರ್ಥ ಮಾಡದೇ, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೌಶಲ್ಯವನ್ನು ಕಲಿತು, ಪಕ್ವತೆ ಪಡೆದುಕೊಳ್ಳುವುದು ಬಹಳ ಮುಖ್ಯ. ನಾವು ಅರಸಿಕೊಂಡು ಹೋಗುವ ಉದ್ಯೋಗ ಕೈಗೆ ಸಿಗದಿದ್ದರೂ ನಮ್ಮಲ್ಲಿರುವ ಕೌಶಲ್ಯದಿಂದ ಬದುಕು ಕಟ್ಟಿಕೊಳ್ಳಬಹುದು. ಹಾಗಾಗಿ ಕೌಶಲ್ಯದಿಂದ ಬದುಕು ಹಸನಾಗುವುದು ಖಂಡಿತ. ಈ ನಿಟ್ಟಿನಲ್ಲಿ ಒಂದು ತಿಂಗಳು ತಮ್ಮ ಇತರೆ ಕೆಲಸಗಳನ್ನು ಬದಿಗಿರಿಸಿ, ಸಂಸ್ಥೆಯು ನೀಡುವ ತರಬೇತಿಯನ್ನು ಉತ್ತಮ ರೀತಿಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ವಿಶ್ಚ ಕುಂದಾಪ್ರ ದಿನದ ಅಂಗವಾಗಿ ಆಸಾಡಿ ಒಡ್ರ್ ಕಾರ್ಯಕ್ರಮ ಇದೇ ಬರುವ ಅಗಸ್ಟ್ 9ರ ಭಾನುವಾರ ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಜರಗಲಿಕ್ಕಿದ್ದು ಇದರ ಪೋಸ್ಟರ್ ಅನ್ನು ಸೋಮವಾರ ಕೋಟದ ಪಂಚವರ್ಣದ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಕುಂದಾಪ್ರ ಭಾಷೆ ಬದುಕಿನ ವಿಚಾರವನ್ನು ಮುಂದಿನ ತಲೆಮಾರಿಗೆ ಈ ಆಸಾಡಿ ಒಡ್ರ್ ಮೂಲಕ ಸಹಕಾರಿಯಾಗಲಿದೆ.ನಮ್ಮ ಕುಂದಾಪ್ರ ಭಾಷೆ ಮತ್ತು ಬದ್ಕ್ ತನ್ನದೆ ಆದ ವಿಶಿಷ್ಟತೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ.ಪಂಚವರ್ಣ ಸಂಘಟನೆಯ ಈ ಗ್ರಾಮೀಣ ಹಬ್ಬವನ್ನು ಮನೆ ಮನಮುಟ್ಟುವಂತೆ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಟೆಕ್ನೋ ಡೆಂಟಲ್ ಲ್ಯಾಬ್ ಮುಖ್ಯಸ್ಥೆ ಭಾರತಿ ಪ್ರವೀಣ್ ಪೂಜಾರಿ ಸಾಸ್ತಾನ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಸಾಮಾಜಿಕ ಕಾರ್ಯಕರ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಐಎಸ್ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2026-27ರ ಸ್ಪರ್ಧೆಗಳ ಅಂಗವಾಗಿ ದಿನಾಂಕ ಸೋಮವಾರ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಲಯ ಮಟ್ಟದ ’ಸಮತ್ವ’ – ಕರಾಟೆ ಮತ್ತು ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸ್ಪರ್ಧೆಗಳನ್ನು ಕಿರಣ ಕುಂದಾಪುರ ಉದ್ಘಾಟಿಸಿ, ಮಾತನಾಡಿ, ಶಾಲೆಯ ಪಠ್ಯದ ಜೊತೆಗೆ ಇಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿದರಷ್ಟೇ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಭಾಗವಹಿಸಿ ಸರ್ವವಿಧದ ಸಾಮರ್ಥ್ಯ ಬೆಳೆಸಿಕೊಳ್ಳುವುದು ಜೀವನಕ್ಕೆ ಅತ್ಯಗತ್ಯ. ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಯೋಗ ಅಧ್ಯಾಪಕರು ಮತ್ತು ಅಂತಾರಾಷ್ಟ್ರೀಯ ತರಬೇತಿದಾರರಾದ ಕೆ. ನರೇಂದ್ರ ಕಾಮತ್ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಯೋಗವೂ ಸ್ಪರ್ಧೆಯ ವಿಷಯವಾಗಿ ಬಂದು ವಿದ್ಯಾರ್ಥಿಗಳನ್ನು ಯೋಗಾಭ್ಯಾಸದತ್ತ ಚಿತ್ತೈಸುವಂತೆ ಮಾಡಿರುವುದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಭಾರತೀಯ ಪರಂಪರೆಯಲ್ಲಿ ಯೋಗವು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ರಾಜಾಶ್ರಯದಲ್ಲೂ ಕರಾಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ಸ್ ನಡೆಸಿದ ಸಿ.ಎಂ.ಎ. ಯುಎಸ್ ಜೂನ್ 2026ರ ಪರೀಕ್ಷೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಜಗದೀಶ್ ಮೊಗವೀರ ಹಾಗೂ ಜ್ಯೋತಿ ದಂಪತಿಯ ಪುತ್ರ ಸುಮಂತ್ ಅವರು ಸಿ.ಎಂ.ಎ. ಯುಎಸ್ ಪಾರ್ಟ್ 1 ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ ಕಾಲೇಜಿಗೆ ಹೆಮ್ಮೆಯ ಕೀರ್ತಿಯನ್ನು ತಂದಿದ್ದಾರೆ. ಸಿಎಂಎ ಯುಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ವಿದ್ಯಾರ್ಥಿಯ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಧ್ಯಯನದ ಪ್ರತೀಕವಾಗಿದೆ. ಅವರ ಈ ಸಾಧನೆಯು ಕಾಲೇಜಿನ ಶೈಕ್ಷಣಿಕ ಪರಂಪರೆಗೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದ್ದು, ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜಿನ ಸಾಧನೆಗೆ ಹೊಸ ಮೆರುಗು ನೀಡಿದೆ. ಅಲ್ಲದೆ, ವಾಣಿಜ್ಯ ವಿಭಾಗದ ಇತರ ವಿದ್ಯಾರ್ಥಿಗಳಿಗೆ ಇದು ಸ್ಫೂರ್ತಿದಾಯಕವಾಗಿದೆ. ವಿದ್ಯಾರ್ಥಿಯ ಈ ಗಮನಾರ್ಹ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಕ್ಷರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮಂಗಳವಾರದಂದು ಉದ್ಯಮಿ ಸ್ವಪ್ನ ಸುರೇಶ್ ಪ್ರಭು ಇವರ ವತಿಯಿಂದ ದುರ್ಗಾ ಹೋಮವನ್ನು ಆಯೋಜಿಸಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ್ ಬಾಯರಿ ನೆರವೆರಿಸಿದರು. ಪೂಜಾ ಕಾರ್ಯದಲ್ಲಿ ಸ್ವಪ್ನ ಸುರೇಶ್ ಪ್ರಭು ದಂಪತಿಗಳು ಭಾಗಿಯಾದರು. ಕುಟುಂಬದ ಪರವಾಗಿ ಸರೋಜನಿ ಬಾಲಕೃಷ್ಣ ಪ್ರಭು .ಸಹೋದರರಾದ ಉಮೇಶ್ ಪ್ರಭು, ವೆಂಕಟೇಶ ಪ್ರಭು, ಲತಾ ರಾಘವೇಂದ್ರ ಪೈ, ಕುಟುಂಬಿಕರಾದ ರಮೇಶ್ ಪ್ರಭು, ದೇಗುಲದ ಅಧ್ಯಕ್ಷರಾದ ಆನಂದ್ ಸಿ. ಕುಂದರ್, ಸದಸ್ಯರಾದ ಸುಧಾ ಎ. ಪೂಜಾರಿ, ಸುಬ್ರಾಯ ಜೋಗಿ, ಚಂದ್ರ ಆಚಾರ್, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ಶಿವ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಮಾಜಿ ಸದಸ್ಯ ಭುಜಂಗ ಗುರಿಕಾರ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಮಧ್ಯಾಹ್ನ ದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.07: ಅಂಗಾಂಗ ದಾನವು ಯುವಜನರಿಗೆ ಮಾತ್ರ ಸೀಮಿತ ಎಂಬುದು ಸಮಾಜದಲ್ಲಿರುವ ಸಾಮಾನ್ಯ ಕಲ್ಪನೆ. ಆದರೆ ಕರಾವಳಿ ಕರ್ನಾಟಕದ 76 ವರ್ಷದ ಮಹಿಳೆಯೊಬ್ಬರು ಆ ನಂಬಿಕೆಯನ್ನು ಸುಳ್ಳೆಂದು ಸಾಬೀತುಪಡಿಸಿ, ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂಬ ಸ್ಪೂರ್ತಿದಾಯಕ ಸಂದೇಶವನ್ನು ಸಾರಿದ್ದಾರೆ. ಗಂಗೊಳ್ಳಿಯ ನಿವಾಸಿಯಾಗಿದ್ದ 76 ವರ್ಷದ ಜೆನ್ನಿ ಡಿ’ಸೋಜಾ ಎಂಬುವವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ, ಅವರ ಕುಟುಂಬವು ಅತ್ಯಂತ ಮಾನವೀಯ ಹಾಗೂ ಮಾದರಿಯಾದ ನಿರ್ಧಾರ ಕೈಗೊಂಡು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿತು.ಹಠಾತ್ ತಲೆಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ತುರ್ತಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿರುವುದು ದೃಢಪಟ್ಟಿತು. ವೈದ್ಯರ ತಂಡವು ಅವರನ್ನು ಉಳಿಸಲು ಎಲ್ಲ ರೀತಿಯ ಚಿಕಿತ್ಸಾ ಪ್ರಯತ್ನಗಳನ್ನು ನಡೆಸಿದರೂ ಫಲಕಾರಿಯಾಗಲಿಲ್ಲ. ನಿಗದಿತ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ಗಳಂತೆ ನಡೆಸಲಾದ ಎಲ್ಲ ಪರೀಕ್ಷೆಗಳ ಬಳಿಕ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ಸೋಮವಾರ ಮಧ್ಯಾಹ್ನ ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ನಲ್ಲಿದ್ದ ತಂದೆ ಹಾಗೂ ಮಗಳು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ ಅವರ ಪುತ್ರ ದೀಪಕ್ ನಾಗಪ್ಪ ನಾಯ್ಕ (23)ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪಡುಕೋಣೆ ಹಡವು ನಿವಾಸಿ ಪ್ಯಾಟ್ರಿಕ್ ವಾಝ್ (63) ಹಾಗೂ ಅವರ ಪುತ್ರಿ ಪ್ಲೆನ್ಸಿಟಾ (24) ಎಂದು ಗುರುತಿಸಲಾಗಿದೆ. ಪ್ಯಾಟ್ರಿಕ್ ವಾಝ್ ಅವರು ತಮ್ಮ ಪುತ್ರಿಯನ್ನು ಬೈಕ್ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಎದುರಿನಿಂದ ಬಂದ ದೀಪಕ್ ಚಲಾಯಿಸುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದೀಪಕ್ ನಾಗಪ್ಪ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಗ್ರಾಮಾಂತರ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರಗೆಲಸ, ದೋಬಿ, ಕಮ್ಮಾರಿಕೆ, ಪ್ಲಂಬರ್, ಎಲೆಕ್ಟ್ರಿಷಿಯನ್, ಕ್ಷೌರಿಕ, ಬ್ಯೂಟಿಪಾರ್ಲರ್ ಹಾಗೂ ಟೈಲರಿಂಗ್ ವೃತ್ತಿಯ ಗರಿಷ್ಟ ರೂ.8,000/- ಮೊತ್ತದ ವಿದ್ಯುತ್ಚಾಲಿತ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಉಪಕರಣಗಳನ್ನು ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅರ್ಜಿದಾರರು ಆನ್ಲೈನ್ ವೆಬ್ಸೈಟ್ udupi.nic.in ನಲ್ಲಿ ನಮೂದಿಸಿದ ಲಿಂಕ್ನ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ದೃಢೀಕರಣದೊಂದಿಗೆ ಜುಲೈ 10 ರಿಂದ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ವ್ಯಾಪ್ತಿಯ ಕುಶಲಕರ್ಮಿಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ. ಅರ್ಜಿದಾರರು ಆನ್ಲೈನ್ ಮುಖಾಂತರ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಉಪ ನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, “ಬಿ ಬ್ಲಾಕ್”, # ನಂ.207, ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಕಛೇರಿಗೆ ತಪ್ಪದೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನೆ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಯೋಜನೆ ಅನುಷ್ಠಾನದಲ್ಲಿನ ವಿಚಾರಗಳ ಕುರಿತಾಗಿ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತಿದ್ದು, ಈ ಬಾರಿ ಉಡುಪಿ ಜಿಲ್ಲೆಯಲ್ಲಿ 21 ನೇ ಜಾನುವಾರು ಗಣತಿ ವರದಿ ಹೊರಬಿದ್ದಿದ್ದು, ದನ ಹಾಗೂ ಎಮ್ಮೆ 5 ವರ್ಷದ ಹಿಂದೆ ಇದ್ದ 2.57 ಲಕ್ಷ ಸಂಖ್ಯೆಯು ಇದೀಗ 1.96 ಲಕ್ಷಕ್ಕೆ ಅಂದರೆ ಶೇಕಡಾ 23 ರಷ್ಟು ಗಣನೀಯವಾಗಿ ಕುಸಿತ ಕಂಡಿದ್ದು ಆತಂಕ ಪಡುವ ವಿಚಾರವಾಗಿದೆ. ಹಾಗಾಗಿ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಜಾನುವಾರು ಸಂಖ್ಯೆ ಕುಸಿತವಾಗದಂತೆ ತಡೆಯಲು ಸಮಗ್ರ ಅಧ್ಯಯನದ ಜೊತೆಗೆ ವಿನೂತನ ಉಪ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದರು ಔಷಧಿಗಳ ಕೊರತೆ ಆಗದಂತೆ ಕ್ರಮವಹಿಸಿ:ವಿವಿಧ ಪಶು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಿಳೆಯ ಪರ್ಸ್ನಲ್ಲಿದ್ದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳಾ ಆರೋಪಿಗಳನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜೋಶ್ ಹಾಗೂ ಅವರ ಪತ್ನಿ ನಿಮಿಶಾ ಎಂಬವರು ಜು.5ರಂದು ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಬಂದರು. ಆಗ ನಿಮಿಶಾ ತನ್ನ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಬಂದರು. ಆಗ ನಿಮಿಶಾ ತನ್ನ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್ನ ಜಿಪ್ ತೆರೆದುಕೊಂಡಿದ್ದು, ಅದರಲ್ಲಿದ್ದ 80,000ರೂ. ಹಣವಿದ್ದ ಪರ್ಸ್ ಕಳವಾಗಿರುವುದು ಕಂಡುಬಂತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
