ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರಿನಲ್ಲಿ ಕಳೆದ 30 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಶನ್ ಹೋಮಿಯೋಪಥಿ ಕ್ಲಿನಿಕ್ ಇದೀಗ ವಿಸ್ತರಣೆಗೊಳ್ಳುತ್ತಿದ್ದು ಕುಂದಾಪುರದಲ್ಲಿ ನೂತನ ಕ್ಲಿನಿಕ್ ಆರಂಭಿಸಲಾಗುತ್ತಿದೆ.
ಕುಂದಾಪುರದ ಸಾಯಿ ಸೆಂಟರ್ ಮೊದಲ ಮಹಡಿಯಲ್ಲಿ ನವೆಂಬರ್ 22ರ ಭಾನುವಾರ ಬೆಳಿಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ಬೈಂದೂರು ರೋಶನ್ ಹೋಮಿಯೋಪಥಿ ಕ್ಲಿನಿಕ್ನಲ್ಲಿ ಡಾ. ರೋಷನ್ ಪಾಯಸ್ ಅವರು ಕಾರ್ಯನಿರ್ವಹಿಸುತ್ತಿದ್ದು, ಮುಂದೆ ಬೈಂದೂರು ಹಾಗೂ ಕುಂದಾಪುರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಕುಂದಾಪುರದ ಕ್ಲಿನಿಕ್ನಲ್ಲಿ ಡಾ. ನೇಹಾ ಮರಿಟಾ ಪಾಯಸ್ ಅವರು ಕಾರ್ಯನಿರ್ವಹಿಸಲಿದ್ದಾರೆ. ರೋಷನ್ ಹೋಮಿಯೋಪತಿ ಕ್ಲಿನಿಕ್ ಬೈಂದೂರಿನಲ್ಲಿ ಬೆಳಿಗ್ಗೆ 09ರಿಂದ ರಾತ್ರಿ 08ರ ತನಕ ಹಾಗೂ ಕುಂದಾಪುರದಲ್ಲಿ ಬೆಳಿಗ್ಗೆ 09ರಿಂದ ಸಂಜೆ 06ರ ತನಕ ತೆರೆದಿರಲಿದೆ.











