ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಗ್ರಾಮದ ಸೂರ್ಗೊಳಿ ಎಂಬಲ್ಲಿ ನಡೆದಿದೆ. ಮೃತರನ್ನು ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯನಾರಾಯಣ ಭಟ್ ಅಲ್ಸೆ (52), ಅವರ ಪತ್ನಿ ಮಾನಸ (50), ಪುತ್ರ ಸುಧೀಂದ್ರ (14), ಸುದೇಶ್ (8) ಎಂದು ಗುರುತಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ಅಡುಗೆ ಭಟ್ಟರಾಗಿದ್ದ ಸೂರ್ಯನಾರಾಯಣ ಭಟ್ ತನ್ನ ಮನೆಯಲ್ಲಿಯೇ ಪತ್ನಿ ಹಾಗೂ ಮಕ್ಕಳನ್ನು ಮಾರಕಾಯುಧದಿಂದ ಕೊಲೆಗೈದ ಬಳಿಕ ತಾನು ಅಲ್ಲಿಯೇ ನೇಣಿಗೆ ಶರಣಾಗಿರಬಹುದು. ನಿನ್ನೆ ರಾತ್ರಿ ಘಟನೆ ನಡರದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಬಗೆಗೆ ಇನ್ನಷ್ಟೇ ವಿವರ ತಿಳಿಯಬೇಕಿದೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಜನಸೇವಾ ಟ್ರಸ್ಟ್ ರಿ. ಮೂಡುಗಿಳಿಯಾರು ಇವರ ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ 2020 ಕಾರ್ಯಕ್ರಮ ಫೆಬ್ರವರಿ ತಿಂಗಳ 8 ರಂದು ಮೂಡುಗಿಳಿಯಾರಿನಲ್ಲಿ ಜರುಗಲಿದ್ದು ಈ ವರ್ಷದ ಕೀರ್ತಿಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ರವರಿಗೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ ಮಂದಾರ್ಥಿ ಮೂಲದವರಾದ ಯೋಗರಾಜ್ ಭಟ್ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಠಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದವರು. ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಭಟ್. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಶ್ರೀಯುತರ ಜೀವಮಾನದ ಸಾಧನೆಯನ್ನು ಗುರುತಿಸಿ ಅವರ ತವರು ನೆಲದಲ್ಲಿ ಕೀರ್ತಿಕಳಶ ಪುರಸ್ಕಾರವನ್ನ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳ್ತೂರು ಅರುಣ್ ಕುಮಾರ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಸಂದರ್ಭ ಟೀಮ್ ಅಭಿಮತದ ಸಂಚಾಲಕರಾದ ಪ್ರವೀಣ್ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಪಡುಕರೆ,ಜನಸೇವಾ ಟ್ರಸ್ಟ್ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯಗಾರರು ಮೊದಲು ನಮ್ಮನ್ನು ನಾವೇ ಹಾಸ್ಯ ಮಾಡಿ ಹಾಸ್ಯಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಎಲ್ಲರನ್ನೂ ನಗಿಸಲು ಸಾಧ್ಯವಿದೆ ಎಂದು ಸಾಹಿತಿ, ವಕೀಲರಾದ ಎಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಜರುಗಿದ ನಾಲ್ಕು ದಿನಗಳ ಕಾರ್ಟೂನು ಹಬ್ಬದ ಕೊನೆಯ ದಿನ ಕುಂದಾಪ್ರ ಕನ್ನಡ ಕಾಮಿಡಿ ‘ನಿತ್ಕ ಕಾಮಿಡಿ ಕೂತ್ಕ ನಗಾಡಿ’ಗೆ ಚಾಲನೆ ನೀಡಿ ಮಾತನಾಡಿ ಬದುಕಿನ ಪ್ರತಿಹೆಜ್ಜೆಯಲ್ಲಿಯೂ ಹಾಸ್ಯ ಕಾಣಬಹುದಾಗಿದ್ದು ಅದನ್ನು ಗ್ರಹಿಸುವ ಗುಣವಿರಬೇಕು. ಕಾರ್ಟೂನು ದೇಶದ ಆಗು ಹೋಗುಗಳ ಬಗ್ಗೆ ತಿಳಿಸುವ ವಕ್ರರೇಖೆಗಳ ಪ್ರತಿಫಲನ. ಅಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಆಶಯವಿರುತ್ತದೆ ಎಂದರು. ಸಮಾರಂಭದಲ್ಲಿ ಕುಂದಾಪುರದ ಕ್ರೀಡಾ ತರಬೇತುದಾರರಾದ ನಿತ್ಯಾನಂದ ಕೆ., ಶ್ರೀನಿವಾಸ್ ಶೆಟ್ಟಿ ಆನಗಳ್ಳಿ, ಪ್ರದೀಪ್ ವಾಜ್, ಗೌತಮ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಂದಾಪ್ರ ಕನ್ನಡ ಕಾಮಿಡಿ ಕಿಲಾಡಿಗಳಾದ ಮನು ಹಂದಾಡಿ, ಚೇತನ್ ನೈಲಾಡಿ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಟೂನು ಹಬ್ಬದ ಸಂಘಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.27: ಇಲ್ಲಿನ ಅಂಕದಕಟ್ಟೆಯಲ್ಲಿ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳಿಸಲಾದ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಟಿ ಜೇಮ್ಸ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಮೂಲಕ ಕುಂದಾಪುರ ಆಸುಪಾಸಿನ ಸಿಸಿ ಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ಹಿಡಿತದಲ್ಲಿಯೇ ನಡೆಯಲಿದೆ. ಪೊಲೀಸ್ ಇಲಾಖೆಗೆ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯ ಹಂತದಲ್ಲಿ ಅತ್ಯಂತ ಉಪಯೋಗಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಹೇಳಿದರು. ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ನಿಜಾಂಶಗಳನ್ನು ತಿಳಿದುಕೊಳ್ಳಲು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಅತ್ಯಂತ ಉಪಯುಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಸುಳ್ಳು ಮಾಹಿತಿ ನೀಡಲು ಸಾಧ್ಯವಾಗೋದಿಲ್ಲ. ವಾಹನಗಳ ಅಪಘಾತ ಮಾಡಿ ಪರಾರಿಯಾಗುವ ವಾಹನಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಮುದ್ರಿತ ದೃಶ್ಯಾವಳಿಗಳ ಬದಲು ನೇರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ ಚಿರತೆಯೊಂದು ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ. ಗುಡ್ಡಟ್ಟು ಭಾಗದಲ್ಲಿ ಚಿರತೆ ಸಾಕಷ್ಟು ಉಪಟಳ ನೀಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಬೋನು ಇರಿಸಿದ್ದ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳು, ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ರವಾನಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜ ಪ್ರಗತಿಯನ್ನು ಸಾಧಿಸಲು ಆರ್ಥಿಕ ವ್ಯವಸ್ಥೆ ಮುಂಚೂಣಿಯಲ್ಲಿ ಇರಬೇಕು. ಇಂದು ಸಹಕಾರಿ ಕ್ಷೇತ್ರವೂ ಬೆಳೆದಿದೆ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಅದರ ಉಪಯೋಗ ಪಡೆದವರ ಉನ್ನತಿಯೂ ಆಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಶಿರೂರು ಮೇಲ್‌ಪೇಟೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೭ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರ ಕೃಷಿಕರು, ಕಾರ್ಮಿಕರ ವರ್ಗಕ್ಕೆ ರಕ್ಷಣಾ ಕವಚವಾಗಿ ಸಹಕಾರಿ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟಿರುವ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಗ ಮೇಲೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರ ಮತ್ತಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ್ ಕಂಪ್ಯೂಟರ್ ಉದ್ಘಾಟನೆ ಮಾಡಿದರು. ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ ಭದ್ರತಾ ಕೊಠಡಿ ಉದ್ಘಾಟಿಸಿದರು. ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸತ್ಯ, ನ್ಯಾಯಕ್ಕಾಗಿ ಹೋರಾಟ ಮಾಡಿರುವ ಕೋಟಿ ಚೆನ್ನಯರನ್ನು ದೈವವಾಗಿ ತುಳುನಾಡಿನ ಸಂಸ್ಕೃತಿಯೊಂದಿಗೆ ಆರಾಧಿಸಿಕೊಂಡು ಬರಲಾಗುತ್ತಿದ್ದು, ಅವರ ತತ್ವಾದರ್ಶಗಳಿಂದ ಭಕ್ತರ ಮನದಲ್ಲಿ ನೆಲೆಯಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾರಂಭದಲ್ಲಿಯೇ ವೀರ ಪುರುಷರಾದ ಕೋಟಿ ಚೆನ್ನಯ್ಯರ ಅದ್ಭುತ ಗರಡಿ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಬುಧವಾರ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಮಾತನಾಡಿ ಕೋಟಿ ಚೆನ್ನಯರ ಮೂಲ ಗರಡಿಗಳಲ್ಲಿ ಕಟ್ಟಕಡೆಯದಾದರೂ ಕೂಡ ಉಳಿದೆಲ್ಲಾ ಗರಡಿಗಳನ್ನು ಮೀರಿಸುವಂತೆ ಬೈಂದೂರಿನ ಗರಡಿ ನಿರ್ಮಾಣಗೊಳ್ಳುತ್ತಿದೆ. ಇದು ಇಡಿ ಊರಿಗೆ ಮೆರಗು ನೀಡುತ್ತಿದೆ ಎಂದರು. ಈ ಸಂದರ್ಭ ಖಂಬದಕೋಣೆ ರೈತರ ಸೇವಾ ಸಹಕಾರಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಯಡ್ತರೆ ಗ್ರಾಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವಕ್ಕೆ ಸಹಸ್ರಾರು ಭಕ್ತರ ಸಾಕ್ಷಿಯಾದರು. ಮಂಗಳವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂಜೆ ಪ್ರಣತಿ ದೀಪ ಬೆಳಗಿಸಲು ಸಹಸ್ರಾರು ಭಕ್ತರು ಕೈಜೋಡಿಸಿದರು. ಹಣತೆಯಿಂದ ಹಣತೆಗೆ ದೀಪ ಬೆಳಗಿಸಿ ಸಂಭ್ರಮಿಸಿದರು. ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಕುಂದೇಶ್ವರ ರಾಜ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದ್ದರಿಂದ ಕುಂದೇಶ್ವರ ಎಂಬ ಹೆಸರು ಬರಲು ಕಾರಣ ಎಂಬ ನಂಬಿಕೆಯಿದೆ. ಪ್ರಾತಕಾಲ ಪೂಜೆ, ರುದ್ರಾಭಿಷೇಕ ಹಾಗೂ ಶಿವನಿಗೆ ಪ್ರಿಯವಾದ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆದಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಣೆ ಕೂಡಾ ನಡೆಯಿತು. ಕುಂದೇಶ್ವರ ದೇವಸ್ಥಾನ ಬೀದಿ ದೀಪಾಲಂಕೃತವಾಗಿದ್ದು, ದೇವಸ್ಥಾನಕ್ಕೆ ಅಳವಡಿಸಿದ ಬಣ್ಣದ ದೀಪಗಳಿಂದ ಮತ್ತಷ್ಟು ಮೆರಗು ಬಂದಿತ್ತು. ಕುಂದೇಶ್ವರ ದೇವಸ್ಥಾನ ಪುಷ್ಕ್ಕರಣಿಗೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಿದ್ದು, ಪುಸ್ಕರಣಿಗೊಂದು ಹೊಸ ಕಳೆ ಮೂಡಿಸಿತ್ತು. ಹಾಗೆ ದೇವಸ್ಥಾನ ಬಳಿ ಇರುವ ಅಶ್ವಥಕಟ್ಟೆ ಬಳಿ ನಿರ್ಮಿಸಿದ ಬೃಹತ್ ಆಂಜನೇಯ ಮೂರ್ತಿ ಎಲ್ಲರ ಆಕರ್ಷಿಣೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ನ.26: ಕುಂದಾಪುರ ತಾಲೂಕು ಪಂಚಾಯತಿಯ ಡಾ. ವಿಎಸ್ ಆಚಾರ್‍ಯ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಸದಸ್ಯರ ಜಟಾಪಟಿ, ಅಧಿಕಾರಿಗಳಿಗೆ ತರಾಟೆ ಮೊದಲಾದವುಗಳಿಗೆ ಸಾಕ್ಷಿಯಾಯಿತು. ಆಲೂರಿನಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಗಣಿ ನಿಂತ ಬಗ್ಗೆ ಸದಸ್ಯೆ ಇಂದಿರಾ ಶೆಟ್ಟಿ ಮಾತನಾಡಿ ಆಲೂರು ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೆಂಪುಕಲ್ಲು ಗಣಿ ನಡೆಸಲು ಅವಕಾಶ ಮಾಡಿಕೊಡಬೇಕು. ಕಲ್ಲು ಕ್ವಾರಿ ನಿಂತಿದ್ದರಿಂದ ಬಡವರಿಗೆ ಕೆಲಸ ಇಲ್ಲದಂತಾಗಿದೆ. ಕಲ್ಲುಕ್ವಾರಿ ನಿಯಮಗಳನ್ನು ಸರಳಿಕರಿಸಿ ಕೆಂಪುಕಲ್ಲು ಗಣಿಗೆ ಮತ್ತೆ ಅವಕಾಶ ಮಾಡಿಕೊಡಬೇಕು. ಹಿಂದೆಲ್ಲಾ ದಾಳಿ ಮಾಡುವಾಗ ಮಾಹಿತಿ ಕೊಟ್ಟು ಅಧಿಕಾರಿಗಳು ದಾಳಿ ನಡೆಸುತ್ತಿದ್ದರು. ಈ ಭಾರಿ ಮಾಹಿತಿ ನೀಡದೇ ದಾಳಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದ್ದು ಗಣಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ತೆರೆದಿಟ್ಟಿತು. ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ಮಹೇಶ್ ಜಿಲ್ಲೆಯಲ್ಲಿ ಒಂದು ಕೆಂಪುಕಲ್ಲು ಗಣಿ ಹೊರತುಪಡಿಸಿ ಉಳಿದೆಲ್ಲ ಗಣಿಗಾರಿಕೆಯೂ ಅಕ್ರಮವಾಗಿ ನಡೆಯುತ್ತಿದೆ. ಗಣಿ ನಡೆಸುವವರಿಗೆ ಪರವಾನಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ಕುಂದಾಪುರ ವಲಯದ ಬೆಳ್ಳಿ ಹಬ್ಬದ ಸವಿ ನೆನೆಪು ಹಾಗೂ ೨೬ನೇ ಪದಗ್ರಹಣ ಸಮಾರಂಭ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಸುರೇಶ್ ಡಿ ಪಡುಕೋಣೆ ಮಾತನಾಡಿ ಛಾಯಾಗ್ರಾಹಕರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ತಮ್ಮ ಮನಸ್ಸು, ಕನಸುಗಳನ್ನು ಜನರಿಗೆ ಅರ್ಪಿಸಿ ಪ್ರಾಮಾಣಿಕ ಸೇವೆ ನೀಡುವ ಛಾಯಗ್ರಾಹಕರಿಗೆ ದೇವರು ಎಂದಿಗೂ ಒಳ್ಳೇದನ್ನೇ ಕರುಣಿಸುತ್ತಾನೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಪಿಎ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ, ಹಿಂದಿನಿಂದಲೂ ಎಸ್‌ಕೆಪಿಎ ಕುಂದಾಪುರ ವಲಯ ಸಮಾಜಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಪ್ರಮೋದ್ ಚಂದನ್ ಅವರ ಮುಂದಾಳತ್ವದಲ್ಲಿ ಸಂಘವು ಅನೇಕ ಚಟುವಟಿಕೆಗಳನ್ನು ನಡೆಸಿದೆ. ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ನಾಯಕತ್ವದಲ್ಲಿ ಶೀಘ್ರವೇ ಈ ಭಾಗದಲ್ಲಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಛಾಯಾ ಭವನ ನಿರ್ಮಾಣಗಳ್ಳಲಿ. ತನ್ಮೂಲಕ ಛಾಯಾಗ್ರಾಹಕರಿಗೆ ಈ…
