ಕುಂದಾಪ್ರ ಡಾಟ್ ಕಾಂ ಕುಂದಾಪುರ: ಕುಂದಾಪುರ ತಾಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಎಚ್.ಇಂದಿರಾ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 37 ಸದಸ್ಯ ಬಲವಿದ್ದ ಕುಂದಾಪುರ ತಾಲ್ಲೂಕು ಪಂಚಾಯಿತಿ, ನೂತನವಾಗಿ ಬೈಂದೂರು ತಾಲ್ಲೂಕು ರಚನೆಯಾದ ಬಳಿಕ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕು ಪಂಚಾಯಿತಿಯಾಗಿ ಬೇರೆ ಬೇರೆಯಾಗಿತ್ತು. 14 ಸದಸ್ಯರು ಬೈಂದೂರು ತಾಲ್ಲೂಕು ಪಂಚಾಯಿತಿಯಲ್ಲಿ ಹಿಂದೆ ಅವಿಭಜಿತ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಶ್ಯಾಮಲಾ ಕುಂದರ್ ಅವರು ಸೇರಿದ್ದರಿಂದಾಗಿ ಕುಂದಾಪುರ ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆದಿತ್ತು. ಉಪಾಧ್ಯಕ್ಷರಾಗಿ ರಾಮ್ಕಿಶನ್ ಹೆಗ್ಡೆ ಮುಂದುವರೆದಿದ್ದಾರೆ. ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯನ್ನು ಪೂರೈಸಿ, ನೂತನ ಅಧ್ಯಕ್ಷರಿಗೆ ಪುಷ್ಟ ಗುಚ್ಛವನ್ನು ನೀಡಿ ಅಭಿನಂದನೆ ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್ ಇದ್ದರು. ಅಂಗನವಾಡಿ ಶಿಕ್ಷಕಿಯಾಗಿದ್ದ ಇಂದಿರಾ ಶೆಟ್ಟಿ ಹರ್ಕೂರು ಹುದ್ದೆ ರಾಜಿನಾಮೆ ನೀಡಿ ರಾಜಕೀಯ ಕ್ಷೇತ್ರವನ್ನು ಪ್ರತಿನಿಧಿಸಿ ವಂಡ್ಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿದ್ದರು. ವಂಡ್ಸೆ ಜಿಲ್ಲಾ ಪಂಚಾಯಿತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಮೀನುಗಾರಿಕಾ ಹೊರಬಂದರಿನ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಅದನ್ನು ಪೂರ್ಣಗೊಳಿಸಲು ರಾಜ್ಯ ಬಜೆಟ್ನಲ್ಲಿ ಮೀಸಲಿರಿಸಿದ ರೂ ೮೬ ಕೋಟಿ ಬಳಸಿಕೊಂಡು ನಡೆಸುವ ಎರಡನೆ ಹಂತದ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಬಂದರು ಪ್ರದೇಶಕ್ಕೆ ಭೇಟಿನೀಡಿ ಅಪೂರ್ಣ ಕಾಮಗಾರಿ ಮತ್ತು ಅಲ್ಲಿ ಕಡಲ್ಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಅಹವಾಲು ಸಲ್ಲಿಸಿದ ಸ್ಥಳೀಯ ಮೀನುಗಾರರಿಗೆ ಈ ಆಶ್ವಾಸನೆ ನೀಡಿದರು. ಮೀನುಗಾರರ ಶ್ರೀರಾಮ ಮಂದಿರದ ಅಧ್ಯಕ್ಷ ಮೋಹನ ಖಾರ್ವಿ, ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ, ಮಾರುಕಟ್ಟೆ ವಿಭಾಗದ ಅಧ್ಯಕ್ಷ ಶಂಕರ ಖಾರ್ವಿ, ಕಾರ್ಯದರ್ಶಿ ಕೆ. ಎಂ. ಸತೀಶ ಖಾರ್ವಿ, ಉಪಾಧ್ಯಕ್ಷ ವಾಸು .ಖಾರ್ವಿ ಅಪೂರ್ಣವಾಗಿರುವ ಬಂದರು ಮತ್ತು ಅದರಿಂದ ಪ್ರತಿವರ್ಷ ಸಂಭವಿಸುವ ಕಡಲ್ಕೊರೆತದಿಂದ ಕರಾವಳಿ ರಸ್ತೆ ಹಾಗೂ ಸಮೀಪದ ಜನತಾ ಕಾಲನಿಯ ಮನೆಗಳಿಗೆ ಆಗುತ್ತಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.10ರ ಮಂಗಳವಾರ 219 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 68, ಉಡುಪಿ ತಾಲೂಕಿನ 115 ಹಾಗೂ ಕಾರ್ಕಳ ತಾಲೂಕಿನ 33 ಮಂದಿಗೆ ಪಾಸಿಟಿವ್ ಬಂದಿದೆ. 3 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 58 ಸಿಂಥಮೇಟಿವ್ ಹಾಗೂ 161 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 140 ಪುರುಷರು, 79 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 112 ಮಂದಿ ಆಸ್ಪತ್ರೆಯಿಂದ ಹಾಗೂ 71 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. 48 ವರ್ಷದ ಬೈಂದೂರಿನ ಪುರುಷ, 66 ಹಾಗೂ 41 ವರ್ಷದ ಉಡುಪಿಯ ಪುರುಷರು ಸೇರಿ ನಾಲ್ವರು ವ್ಯಕ್ತಿಗಳು ಇಂದು ಮೃತರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 64, ILI 39 ಪ್ರಕರಣ, ಸಾರಿ 2 ಪ್ರಕರಣವಿದ್ದು, 112 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಒಂದು ಪ್ರಕರಣ ಬೇರೆ ರಾಜ್ಯ ಹಾಗೂ ಒಂದು ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. 1,203…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು, ಅ11: ನೂತನವಾಗಿ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕು ಪಂಚಾಯತಿಯ ಪ್ರಥಮ ಅಧ್ಯಕ್ಷರಾಗಿ ಮಹೇಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಮಾಲಿನಿ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೈಂದೂರು ತಾಲೂಕು ಪಂಚಾಯತಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಮಾಲಿನಿ ಕೆ. ನಾಮಪತ್ರ ಸಲ್ಲಿಸಿದ್ದು, ಬೇರಾರೂ ನಾಮಪತ್ರ ಸಲ್ಲಿಸದಿರುವುದರಿಂದ ಅವಿರೋಧ ಆಯ್ಕೆ ನಡೆದಿದೆ. ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗುವಂತಾಯಿತು. ಬೆಂಬಲಿಸಿದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಅಭಿವೃದ್ಧಿಯ ಬಗ್ಗೆ ಎಲ್ಲರೂ ಒಟ್ಟಾಗಿ ಹೆಚ್ಚಿನ ಗಮನ ಹರಿಸುತ್ತೇವೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಉಪವಿಭಾಗಾಧಿಕಾರಿ ರಾಜು ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಭಾರತಿ ಅವರು ಉಪಸ್ಥಿತರಿದ್ದರು. ಈ ಸಂದರ್ಭ ಬೈಂದೂರು ಬಿಜೆಪಿ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಡಿ ಭಾಗದ ಕಡಲ್ಕೋರೆತ ಪ್ರದೇಶಕ್ಕೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಕೆಲವು ದಿನಗಳಿಂದ ನಿರಂತರವಾಗಿದ ಗಾಳಿಮಳೆ ಇರುವ ಹಿನ್ನೆಲೆಯಲ್ಲಿ ಎಂ ಕೋಡಿಯಿಂದ ಹಾಯ್ಗುಳಿ ಬಸ್ ನಿಲ್ದಾಣದ ತನಕ ಕಡಲ್ಕೋರೆತ ಉಂಟಾಗಿದ್ದು, ಸಚಿವರು ಈ ಬಗ್ಗೆ ಮಾಹಿತಿ ಪಡೆದುಕೊಂಡ ಕಡಲ್ಕೊರೆತ ತಡೆಗೋಡೆ ವಿಸ್ತರಿಸುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರು ಈ ಸಂದರ್ಭ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು, ಅ11: ನೂತನವಾಗಿ ರಚನೆಗೊಂಡ ಬೈಂದೂರು ತಾಲೂಕಿನಲ್ಲಿ ಎರಡೂವರೆ ವರ್ಷಗಳ ಬಳಿಕ ಸ್ವಂತ ತಾಲ್ಲೂಕು ಪಂಚಾಯಿತಿ ಅಸ್ವಿತ್ವಕ್ಕೆ ಬಂದಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ತಾಲೂಕು ಪಂಚಾಯತ್ ಸಭೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಒಂದು ವರ್ಷದ ಹಿಂದೆ ಸರ್ಕಾರ 14 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಒಳಗೊಂಡ ಬೈಂದೂರು ತಾಲ್ಲೂಕು ಪಂಚಾಯಿತಿ ರಚನೆಯ ಆದೇಶ ಹೊರಡಿಸಿ, ಉಡುಪಿ ಜಿಲ್ಲಾ ಪಂಚಾಯಿತಿಯ ಯೋಜನಾ ವಿಭಾಗದ ಅಧಿಕಾರಿ ಭಾರತಿ ಅವರನ್ನು ಮೊದಲ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತ್ತು. ಪಂಚಾಯಿತ್ 14 ಕ್ಷೇತ್ರಗಳನ್ನು ಮೌಲಾನಾ ದಸ್ತಗೀರ್ (ಶಿರೂರು 1), ಪುಷ್ಪರಾಜ ಶೆಟ್ಟಿ (ಶಿರೂರು 2), ಗಿರಿಜಾ ಖಾರ್ವಿ (ಪಡುವರಿ), ಪ್ರಮೀಳಾ ದೇವಾಡಿಗ (ಉಪ್ಪುಂದ), ಜಗದೀಶ ದೇವಾಡಿಗ (ಕೆರ್ಗಾಲ್), ಗ್ರೀಷ್ಮಾ ಬಿಡೆ (ಕೊಲ್ಲೂರು), ವಿಜಯ ಶೆಟ್ಟಿ (ಕಾಲ್ತೋಡು), ಮಹೇಂದ್ರ ಪೂಜಾರಿ (ಖಂಬದ ಕೋಣೆ), ಶ್ಯಾಮಲಾ ಕುಂದರ್ (ನಾವುಂದ), ಜಗದೀಶ ಪೂಜಾರಿ (ಮರವಂತೆ), ಸುಜಾತಾ ದೇವಾಡಿಗ (ಯಡ್ತರೆ), ಮಾಲಿನಿ ಕೆ (ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನಗರ ಭಾಗದಲ್ಲಿ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆ ಹೊಳೆಯಾಗುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸಂಚರಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಂಬಂಧಿತ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಬಳಿಕ ಬಸ್ರೂರು ಮೂರುಕೈನಿಂದ ವಿನಾಯಕ ಟಾಕೀಸ್ ತನಕ ರಸ್ತೆಯಲ್ಲಿ ತಕ್ಷಣವೇ ತುರ್ತು ದುರಸ್ತಿ ಕಾರ್ಯ ಆರಂಭಿಸಲಾಯಿತು. ನೀರು ಹರಿದು ಹೋಗಲು ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಯಿತು. ಶಾಸಕರು ಖುದ್ದು ನಿಂತು ಸಮಸ್ಯೆ ಸರಿಪಡಿಸಿಲು ಸೂಚಿಸಿದರು. ಶನಿವಾರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಸಚಿವರ ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ದೊರೆಯುವಂತೆ ಮಾಡಿದ್ದರು. ಭಾನುವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿ ಪರಾಮರ್ಶಿಸಿದ್ದರು. ಇದನ್ನೂ ಓದಿ: ► ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.10ರ ಸೋಮವಾರ 90 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 6290 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 3462 ಮಂದಿ ಬಿಡುಗಡೆಯಾಗಿದ್ದು, ಒಟ್ಟು 2762 ಸಕ್ರಿಯ ಪ್ರಕರಣಗಳು ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ಹಾಗೂ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 66 ಮಂದಿ ಮೃತಪಟ್ಟಿದ್ದಾರೆ. ಇಂದು ಒಟ್ಟು 117 ಬಿಡುಗಡೆಗೊಂಡಿದ್ದಾರೆ. ಇದನ್ನೂ ಓದಿ: ► ಉಪ್ಪುಂದದ ಸುರಭಿ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ. 625ರಲ್ಲಿ 624 ಅಂಕ – https://kundapraa.com/?p=40173 . ► ಎಸ್ಎಸ್ಎಲ್ಸಿ: ಶ್ರಾವ್ಯ ಎಸ್. ಮೊಗವೀರ ಜಿಲ್ಲೆಗೆ ದ್ವಿತೀಯ. 621 ಅಂಕ – https://kundapraa.com/?p=40194 . ► ಎಸ್.ಎಸ್.ಎಲ್ಸಿ ಪರೀಕ್ಷೆ ಫಲಿತಾಂಶ: ಉಡುಪಿ ಜಿಲ್ಲೆಗೆ ಎ ಗ್ರೇಡ್, 7ನೇ ಸ್ಥಾನ – https://kundapraa.com/?p=40160 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಬಡಕೆರೆ, ಕೋಣ್ಕಿ, ಚಿಕ್ಕಳ್ಳಿ, ನಾವುಂದ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಬೈಂದೂರು ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಅವರು ಸೋಮವಾರ ಭೇಟಿ ನೀಡಿದರು. ಈ ಸಂದರ್ಭ ಜನರ ಸಮಸ್ಯೆ ಆಲಿಸಿದ ಬಳಿಕ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ ನಾಡ, ನಾವುಂದ ಗ್ರಾಮಗಳಿಗೆ ನೆರವಾಗುವ ಸ್ಥಳದಲ್ಲಿ ಪುನರ್ವಸತಿ ಕೇಂದ್ರ ಮತ್ತು ಜಾನುವಾರು ಕೊಟ್ಟಿಗೆ ಮಾಡಿ ಅಲ್ಲಿಗೆ ಸ್ಥಳಾಂತರಗೊಳಿಸಿ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಾವುಂದ ಗ್ರಾಮದ ಸಾಲ್ಬುಡದಲ್ಲಿ ನೆರೆಯಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ದೋಣಿಯ ಅವಶ್ಯಕತೆಯಿದ್ದು ಅದನ್ನು ಕೂಡಲೇ ವ್ಯವಸ್ಥೆ ಮಾಡುವಂತೆ ಸ್ಥಳೀಯ ತಹಶೀಲ್ದಾರ್ ಅವರಿಗೆ ಸೂಚಿಸಿದರು. ಕಳೆದ ಬಾರಿ ದೋಣಿ ನಾವಿಕರಿಗೆ ಸಂಭಾವನೆ ನೀಡಿಲ್ಲ ಎನ್ನುವ ಸ್ಥಳೀಯರ ದೂರಿಗೆ ಈ ಬಾರಿ ಅದನ್ನು ಕೂಡಲೇ ವ್ಯವಸ್ಥೆ ಮಾಡಬೇಕು. ಅಲ್ಲದೇ ಸ್ಥಳೀಯರ ಸಮಸ್ಯೆಗಳನ್ನು ನಮ್ಮ ಗಮನಕ್ಕೆ, ಇಲ್ಲಿಯ ಪಂಚಾಯತ್ ಅಧಿಕಾರಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಸ್ರೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ಯಾವ್ಯ ಎಸ್. ಮೊಗವೀರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ. ಈಕೆ ಶೇಖರ ಮೊಗವೀರ ಹಾಗೂ ಗುಲಾಬಿ ದಂಪತಿಗಳ ಪುತ್ರಿ. ಶ್ರಾವ್ಯ ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿ 100, ಗಣಿತ 98, ವಿಜ್ಞಾನ 98 ಹಾಗೂ ಸೋಶಿಯಲ್ ಸ್ಟಡೀಸ್ನಲ್ಲಿ 100 ಅಂಕ ಪಡೆದಿದ್ದಾಳೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ಮುಂದೆ ವೈದ್ಯಳಾಗುವ ಕನಸು ಹೊತ್ತಿದ್ದಾಳೆ. ವಿದ್ಯಾರ್ಥಿನಿಯನ್ನು ಶಾಲೆಯ ಮುಖ್ಯೋಪಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ. ಇದನ್ನೂ ಓದಿ: ► ಉಪ್ಪುಂದದ ಸುರಭಿ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ. 625ರಲ್ಲಿ 624 ಅಂಕ – https://kundapraa.com/?p=40173 . ► ಎಸ್.ಎಸ್.ಎಲ್ಸಿ ಪರೀಕ್ಷೆ ಫಲಿತಾಂಶ: ಉಡುಪಿ ಜಿಲ್ಲೆಗೆ ಎ ಗ್ರೇಡ್, 7ನೇ ಸ್ಥಾನ – https://kundapraa.com/?p=40160 .
