ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯುನ್ಮಾನ ಜಗತ್ತು ಕೊಡಮಾಡುತ್ತಿರುವ ತಾಂತ್ರಿಕ ಸೌಲಭ್ಯಗಳನ್ನು ಬದುಕಿನೊಳಗಿನ ಆಯ್ಕೆಯನ್ನಾಗಿಸಿಕೊಳ್ಳದೆ, ಬದುಕಿನ ಅನಿವಾರ್ಯತೆಯನ್ನಾಗಿಸಿಕೊಂಡಿರುವ ಮನುಕುಲ ತನ್ನೊಳಗಿನ ತಂತ್ರಜ್ಞಾನಕ್ಕೂ ಮೀರಿದ ಅಧಿಕ ಜ್ಞಾನದ ಕುರಿತು ಅರಿವನ್ನು ಹೊಂದಿಲ್ಲದಿರುವುದು ದುರಂತ. ತಂತ್ರಜ್ಞಾನದ ದಾಸರಾಗದೆ, ಅಂತರ್ಗತ ಜ್ಞಾನದಿಂದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ರಘು ನಾಯ್ಕ್ ಹೇಳಿದರು. ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ’ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಎಡೇರಿ ವಿಜಯ ಬ್ಯಾಂಕ್ನ ನಿವೃತ್ತ ಅಧಿಕಾರಿ ಮಂಜಯ್ಯ ಶೆಟ್ಟಿ ಬೆಳ್ಳಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಲ್ತೋಡು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ನಾಗಯ್ಯ ಶೆಟ್ಟಿ, ವಲಯ ಅಂಚೆ ಅಧಿಕಾರಿ ಜನಾರ್ಧನ್ ನಾಯಕ್, ಕೆಳಮನೆ ರಾಘವೇಂದ್ರ ಪೂಜಾರಿ, ಕಾಲ್ತೋಡು ಪ್ರವೀಣ್ ಪೂಜಾರಿ, ವಾಣಿಜ್ಯ ಉಪನ್ಯಾಸಕಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆ 1970ರಲ್ಲಿ ಜನತಾ ಗರ್ಲ್ಸ್ ಹೈಸ್ಕೂಲ್ ಎಂಬ ಹೆಸರಿನೊಂದಿಗೆ ಆರಂಭಗೊಂಡು ಇಂದು ಜನತಾ ಪ್ರೌಢಶಾಲೆಯಾಗಿ ಮುನ್ನಡೆಯುತ್ತಿದ್ದು, ಜನವರಿ 3 ಹಾಗೂ 4ರಂದು ಸುವರ್ಣ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಶ್ರೀ ವಿ.ವಿ.ವಿ ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರಿನ ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ – 2020 ಪೂರ್ವಭಾವಿಯಾಗಿ ಹಮ್ಮಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜನವರಿ 3ರಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಅವರು ಸುವರ್ಣ ಸಂಭ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ ಅವರು ಭಾಗವಹಿಸಲಿದ್ದಾರೆ. ಎರಡೂ ದಿನವೂ ವಿವಿಧ ಅತಿಥಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಳೆ ವಿದ್ಯಾರ್ಥಿಗಳೊಂದಿಗೆ ಸ್ನೇಹ ಸಮ್ಮಿಲನ, ಶಿಕ್ಷಕರೊಂದಿಗೆ ಸಂವಾದ, ಶೈಕ್ಷಣಿಕ ವಿಚಾರಗೋಷ್ಠಿ, ಶೈಕ್ಷಣಿಕ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೌಡದಲ್ಲಿ ಶಾಲಾ ವಾರ್ಷಿಕೋತ್ಸವ ಬಿದಿಗೆ ಸಂಭ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತಾ ಉದಯ್ ಕುಲಾಲ್ ಇವರು ನೆರವೇರಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಸವಿತಾ ಮೊಗವೀರ ಇವರು ವಹಿಸಿ ಶಾಲೆಯ ಬೇಡಿಕೆಗಳಿಗೆ ಕೂಡಲೆ ಸ್ಪಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ಆರ್ ಅಡಿಗ ಇವರು ಮಖ್ಯ ಅತಿಥಿಯಾಗಿ ಶಾಲೆಯನ್ನು ಉತ್ತಮವಾಗಿ ಪ್ರಗತಿ ಪಥದತ್ತ ಸಾಗಲು ಅಧ್ಯಾಪಕರ ಜೊತೆ ವಿಧ್ಯಾಭಿಮಾನಿಗಳ ಸಹಕಾರ ಅತ್ಯಗತ್ಯ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರು ಹಾಗು ಪ್ರಭಾರ ಶಿಕ್ಷಣ ಸಂಯೋಜಕರಾಗಿರುವ ಸೂರಪ್ಪ ಹೆಗ್ಡೆ, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾರಾಮ್ ಶೆಟ್ಟಿ, ಕೆನೆರಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಚಂದ್ರಶೇಖರ ಅಡಿಗ ಹೆಗ್ದೆಜೆಡ್ಡು, ಶಾಲಾ ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಡಿ.26: ತಾಲೂಕಿನ ಕನ್ಯಾನ ಕಲ್ಕಂಬ ಎಂಬಲ್ಲಿ ಡಿ.17ರಂದು ಹಗಲು ಹೊತ್ತಿನಲ್ಲಿಯೇ ನಡೆದ ಜೋರ್ಮಕ್ಕಿ ಬಾಬು ಶೆಟ್ಟಿಯವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ನೇತ್ರತ್ವದ ಪೊಲೀಸರ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಬಾಬು ಶೆಟ್ಟಿ ಕೊಲೆ ಪ್ರಕರಣಕ್ಕೆ ವೈಯುಕ್ತಿಕ ದ್ವೇಷವೇ ಕಾರಣ. ಈ ಹಿಂದೆ ಹರೀಶ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ ಹಾಗೂ ಬಾಬು ಶೆಟ್ಟಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಬಾಬು ಶೆಟ್ಟಿಯನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ ತೇಜಪ್ಪ ಶೆಟ್ಟಿ ಸಂಚು ರೂಪಿಸಿದ್ದರು. ಕೊಲೆ ನಡೆದ ದಿನ ಮಧ್ಯಾಹ್ನ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಗೊಬ್ಬರ ಸಾಗಾಟ ಮಾಡಬೇಕಿದ್ದು ಅದನ್ನು ತೋರಿಸುತ್ತೇವೆ ಕರೆಸಿ, ಬೈಕಿನಲ್ಲಿ ಬಂದ ಬಾಬು ಶೆಟ್ಟಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದರು. ಆರೋಪಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕ್ರಿಸ್ತನ ಜನನ ಮತ್ತು ಜೀವನ ಶೋಷಿತರ ಉದ್ಧಾರಕ್ಕಾಗಿ. ಪ್ರಾಮಾಣಿಕತೆ ಮತ್ತು ಬಡ ಜನರ ಕಷ್ಟದಲ್ಲಿ ಗುರುತಿಸಿಕೊಳ್ಳುವುದೆ ನಿಜವಾದ ಆಚರಣೆ ಎಂದು ಮಂಗಳೂರಿನ ಧರ್ಮಗುರುಗಳಾದ ವಂದನೀಯ ಎಫ್. ಎಕ್ಸ್. ಗೋಮ್ಸ್ ಹೇಳಿದರು. ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ 2019 ಸಾಲಿನ ಆಳ್ವಾಸ್ ಕ್ರಿಸ್ಮಸ್ ಆಚರಣೆಯ ಪ್ರಾರ್ಥನ ಕೂಟದಲ್ಲಿ ಬೈಬಲ್ ವಾಚನ ಹಾಗೂ ಸಂದೇಶವನ್ನು ನೀಡಿದರು. ಪ್ರೀತಿಸುವ, ಹಂಚುವ, ಕ್ಷಮಿಸುವ ಮತ್ತು ನಗುವ ಪ್ರತಿ ದಿನವೂ ಹಬ್ಬವಿದ್ದಂತೆ. ಮದರ್ ತೆರೆಸಾ ಮತ್ತು ಮಹಾತ್ಮಾ ಗಾಂಧಿಯಂತ ವ್ಯಕ್ತಿತ್ವಗಳು ಹುಟ್ಟಿಕೊಂಡಾಗ ಶೋಷಿತರಿಗೆ ನೆಲೆಯಾಗಿತ್ತು. ಇಂದು ಸಮಾಜದಲ್ಲಿ ಇಂತಹ ವ್ಯಕ್ತಿತ್ವಗಳ ಸಂಖ್ಯೆ ಸಾವಿರ ಲಕ್ಷಗಳಲ್ಲಿ ಮೂಡಿಬರಲಿ. ಆಗ ಕ್ರಿಸ್ತನ ಜೀವಿತದ ಧ್ಯೇಯ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆಯ ಕೋರ್ಪುಸ್ ಕ್ರಿಸ್ತಿ ಚರ್ಚನ ಧರ್ಮಗುರುಗಳಾದ ಅತಿ ವಂದನೀಯ ಪಾವ್ಲ್ ಸಿಕ್ವೇರ ಕ್ರಿಸ್ಮಸ್ ಸಂದೇಶ ನೀಡುತ್ತಾ, ಕ್ರಿಸ್ಮಸ್ ಒಂದು ಸಂತೋ?ವನ್ನು ಹಂಚುವ ಹಬ್ಬ. ಈ ಆಚರಣೆಯ ಪ್ರತಿಯೊಂದು ಅಂಶಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲೆ ಸಂಗೀತದ ಆಸ್ವಾದನೆಯಿಂದ ಮನಸ್ಸು ಉಲ್ಲಾಸಗೊಳ್ಳುವುದಲ್ಲದೇ ಸದಾ ಚಟುವಟಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ಸೃಜನಶೀಲ ಕಲೆಗಳು ಸೂಕ್ಷ್ಮಕಾಯದ ಬೆಳವಣಿಗೆ ಪೂರಕವಾದವುಗಳು ಎಂದು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ ಬಿ. ವಿಶ್ವೇಶ್ವರ ಅಡಿಗ ಹೇಳಿದರು. ಅವರು ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ರಂಗಮಂಟಪದಲ್ಲಿ ಬುಧವಾರ ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ, ವಿ. ಆರ್. ಬಾಲಚಂದ್ರ ಮುಂಬೈ ಅವರ ಸಹಯೋಗದೊಂದಿಗೆ ಆಯೋಜಿಸಲಾದ ರಂಗಕರ್ಮಿ ಬಿ. ಸೀತಾರಾಮ ಶೆಟ್ಟಿ ಕೂರಾಡಿ ಸಂಸ್ಮರಣೆಯ ನೀನಾಸಂ ತಿರುಗಾಟ – 2019 ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾ ಜನಾರ್ದನ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ ಮೋಹನದಾಸ್ ಅವರನ್ನು ಅಭಿನಂಧಿಸಲಾಯಿತು. ಲಾವಣ್ಯದ ಗಿರೀಶ್ ಬೈಂದೂರು ಸ್ವಾಗತಿಸಿ, ಕಾರ್ಯದರ್ಶಿ ಮೂರ್ತಿ ಬೈಂದೂರು ವಂದಿಸಿದರು. ಸುಬ್ರಹ್ಮಣ್ಯ ಜಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಸೋಡು ಪ್ರೆಂಡ್ಸ್ ಅವರು ಆಯೋಜಿಸಿದ ಪ್ರೊ. ಡಾ. ಅಸೋಡು ಅನಂತರಾಮ ಶೆಟ್ಟಿ ವೃತ್ತ ಹಾಗೂ ಹೈಮಾಸ್ಟ್ ವಿದ್ಯುತ್ ದೀಪವನ್ನು ಹಂಗಳೂರಿನ ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಶ್ರೀ ಕೆ. ಆರ್. ನಾಯ್ಕ್ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎ. ಎ. ಶೆಟ್ಟಿಯವರು ಮಾತನಾಡಿ, ಹೆತ್ತವರು ಮಕ್ಕಳಿಗೆ ಓದಿನೊಂದಿಗೆ ಸಂಗೀತಾ, ಸಾಹಿತ್ಯ ಮತ್ತು ಕಲೆಗಳ ಕುರಿತು ಆಸಕ್ತಿಯನ್ನು ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ಭಾಷಾ ಮಾಧ್ಯಮ ತೊಡಕಾಗುವುದಿಲ್ಲ, ಆದರೆ ಓದಿನೊಂದಿಗೆ ಸಂಸ್ಕಾರಯುತವಾದ ಜೀವನ ಕೌಶಲ್ಯಗಳನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಅಸೋಡಿನ ಏಕೋಪಾಧ್ಯಾಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆದಿದ್ದು ನನಗೆ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯನಾಗಲು ಸಾಧ್ಯವಾಯಿತು. ಗುರುವಿನ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯಿಂದ ಯುವಜನತೆ ಮಾಹಾನ್ ಸಾಧನೆ ಮಾಡಲು ಸಾಧ್ಯ ಎಂದರು. ಕಾಳಾವಾರ ಗ್ರಾಮ ಪಂಚಾಯತ್ನ ಅಧ್ಯಕ್ಷ ಸುಖಾನಂದ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅಸೋಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಚ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವತಿಯಿಂದ ಖಗೋಳ ಕೌತುಕದ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ದಶಕಗಳಿಗೊಮ್ಮೆ ನಡೆಯುವ ಬಾಹ್ಯಕಾಶದ ವಿಸ್ಮಯವನ್ನು ವೀಕ್ಷಿಸಿದರು. ಪ್ರೋಜೆಕ್ಟರ್ ಡಿಸ್ಪ್ಲೇಯ ಜತೆಯಲ್ಲಿ ಸೋಲಾರ್ ನೆಬ್ಯೂಲರ್ ಕನ್ನಡಕವನ್ನು ಧರಿಸಿ ವೀಕ್ಷಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ಶಶಿಧರ್ ಭಟ್ ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ನಡೆಯುವ ಪರಿಯನ್ನು ಹಂತ ಹಂತವಾಗಿ ವಿವರಿಸಿದರು. ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ನಿಖಾಯದ ಡೀನ್ ರಮ್ಯ ರೈ ಪಿ.ಡಿ ಹಾಗೂ ಪದವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ನಿಶಾ ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಹೆತ್ತವರು ಧನ್ಯತಾ ಭಾವವನ್ನು ಕಾಣುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಪರಿವರ್ತನೆಯ ಪ್ರವರ್ಧಮಾನ ಕಾಲದಲ್ಲಿ ಮನುಷ್ಯ ತನ್ನ ತನವನ್ನು ಕಳೆದುಕೊಳ್ಳುವ ಸ್ಥಿತಿಯತ್ತ ಹೆಚ್ಚು ವಾಲುತ್ತಿದ್ದಾನೆ. ಜೀವನದ ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ವಿದ್ಯಾರ್ಥಿಯಾಗಿರುವವರು ಮಾತ್ರ ಸಾಧನೆ ಉತ್ತುಂಗ ತಲುಪುತ್ತಾರೆ. ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ. ಜೀವನದಲ್ಲಿ ಕಾಣುವ ಪ್ರತಿಯೊಂದು ಏರಿಳಿತಗಳನ್ನು ಸಂಯಮ ಹಾಗೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು. ಇಲ್ಲಿನ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಮಂಗಳವಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೫ ನೇ ಹುಟ್ಟುಹಬ್ಬದ ಆಚರಣೆ, ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಡಾ.ಎಂ.ಮೋಹನ್ಆಳ್ವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ಆಳ್ವ, ಪ್ರಶಸ್ತಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಫೇಸ್ಬುಕ್ನಲ್ಲಿ, ಸೌದಿ ದೊರೆಯ ವಿರುದ್ಧ ಪೋಸ್ಟ್ ಮಾಡಿದ ಅರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ, ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಅವರ ಕುರಿತು ಸೋಮವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ವೀಕ್ಷಿಸಿದ, ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕೂಡಲೇ ರಿಯಾದ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಮಾಹಿತಿ ಪಡೆದರು. ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು, ಆದಷ್ಟು ಶೀಘ್ರದಲ್ಲಿ ಹರೀಶ್ ಬಂಗೇರಾ ಅವರ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಈ ಪ್ರಕರಣವು ಕಾನೂನು ಮೂಲಕ ಇತ್ಯರ್ಥವಾಗಬೇಕಿದ್ದು, ಸ್ವಲ್ಪ ವಿಳಂಬವಾಗಲಿದ್ದು, ಬಂಧನದಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ದೂತವಾಸದ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ಮಂಗಳವಾರ, ಹರೀಶ್ ಬಂಗೇರಾ ಅವರ ಪತ್ನಿ ಶ್ರೀಮತಿ. ಸುಮನ ಬಂಗೇರಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕಾರ್ಯದರ್ಶಿಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಸರ್ಕಾರವು ತಮ್ಮ ಪರವಾಗಿ ನಿಂತಿದ್ದು, ಆದಷ್ಟು…
