ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ: ವಿಶೇಷ ಉಪನ್ಯಾಸ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯುನ್ಮಾನ ಜಗತ್ತು ಕೊಡಮಾಡುತ್ತಿರುವ ತಾಂತ್ರಿಕ ಸೌಲಭ್ಯಗಳನ್ನು ಬದುಕಿನೊಳಗಿನ ಆಯ್ಕೆಯನ್ನಾಗಿಸಿಕೊಳ್ಳದೆ, ಬದುಕಿನ ಅನಿವಾರ್ಯತೆಯನ್ನಾಗಿಸಿಕೊಂಡಿರುವ ಮನುಕುಲ ತನ್ನೊಳಗಿನ ತಂತ್ರಜ್ಞಾನಕ್ಕೂ ಮೀರಿದ ಅಧಿಕ ಜ್ಞಾನದ ಕುರಿತು ಅರಿವನ್ನು ಹೊಂದಿಲ್ಲದಿರುವುದು ದುರಂತ. ತಂತ್ರಜ್ಞಾನದ ದಾಸರಾಗದೆ, ಅಂತರ್ಗತ ಜ್ಞಾನದಿಂದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ರಘು ನಾಯ್ಕ್ ಹೇಳಿದರು.

Call us

Click Here

ಅವರು  ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ’ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಎಡೇರಿ ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಂಜಯ್ಯ ಶೆಟ್ಟಿ ಬೆಳ್ಳಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಲ್ತೋಡು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ನಾಗಯ್ಯ ಶೆಟ್ಟಿ, ವಲಯ ಅಂಚೆ ಅಧಿಕಾರಿ ಜನಾರ್ಧನ್ ನಾಯಕ್, ಕೆಳಮನೆ ರಾಘವೇಂದ್ರ ಪೂಜಾರಿ, ಕಾಲ್ತೋಡು ಪ್ರವೀಣ್ ಪೂಜಾರಿ, ವಾಣಿಜ್ಯ ಉಪನ್ಯಾಸಕಿ ವೀಣಾ ಭಟ್, ಎನ್.ಎಸ್.ಎಸ್. ಶಿಬಿರಾಧಿಕಾರಿ ಸತೀಶ್ ಶೆಟ್ಟಿ ಹೆಸ್ಕತ್ತೂರು, ಸಹ ಶಿಬಿರಾಧಿಕಾರಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ಸ್ವಯಂ ಸೇವಕ ಅವಿನಾಶ್ ಸ್ವಾಗತಿಸಿ, ಸೌಜನ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿಧಿ ವಂದಿಸಿ, ಸನಿಯಾ ನಿರೂಪಿಸಿದರು.

Leave a Reply