ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ದೇಶದ ಸರ್ವೋಚ್ಛ ನ್ಯಾಯಾಲಯವು ಅಯೋಧ್ಯೆ ವಿವಾದಿತ ಪ್ರದೇಶದ ಬಗೆಗೆ ಅಂತಿಮ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರತಿಬಂದಕಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಸಾರ್ವಜನಿಕ ಶಾಂತಿ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನ.9ರ ಬೆಳಿಗ್ಗೆ 10ಗಂಟೆಯಿಂದ ನ.10ರ ಬೆಳಿಗ್ಗೆ 6 ಗಂಟೆಯ ತನಕ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮತ್ತು ಜೆಲ್ಲೆಯಲ್ಲಿನ ಎಲ್ಲಾ ಮದ್ಯದ ಅಂಗಡಿಗಳನ್ನು ನ.11ರ ಬೆಳಿಗ್ಗೆ 6ರ ತನಕ ಮುಚ್ಚುವಂತೆ ಆದೇಶಿಸಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಪ್ರತಿವರ್ಷ ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ ನೀಡಲ್ಪಡುವ ಪಂಚವರ್ಣ ರಾಜೋತ್ಸವ ಪುರಸ್ಕಾರಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಆಯ್ಕೆ ಯಾಗಿದ್ದಾರೆ. ನವೆಂಬರ 16ರಂದು ಕೋಟ ವರುಣ ತೀರ್ಥ ಕೆರೆಯ ಸಮೀಪ ಅಮೃತೇಶ್ವರಿ ಪಾರ್ಕಿಂಗ್ ಸ್ಥಳದಲ್ಲಿ ನಡೆಯುವ ಅದ್ದೂರಿಯ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನ ಮಾಡಲಿದ್ದಾರೆ. ಪಂಚವರ್ಣ ರಾಜೋತ್ಸವ ಪ್ರಶಸ್ತಿಯೊಂದಿಗೆ ಬೆಳ್ಳಿಯ ಸ್ಮರಣಿಕೆ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕೋಡಿ ಕನ್ಯಾಣದ ಪ್ರಗತಿ ಯುವಕ ಮಂಡಲಕ್ಕೆ ಪಂಚವರ್ಣ ವಿಶೇಷ ಪುರಸ್ಕಾರ ಹಾಗೂ ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆ ನೆರವೆರಲಿದೆ. ಪ್ರತಿಭಾ ಪುರಸ್ಕಾರ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ, ಮಣೂರು ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ, ಸಾಂಸ್ಕ್ತಿಕ ಕಾರ್ಯಕ್ರಮದ ಸಲುವಾಯ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಪುಟಾಣಿಗಳ ನೃತ್ಯ,ರಾತ್ರಿ 9:30ಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕ್ರತ ತೆಲಿಕದಬೋಳ್ಳಿ ದೇವದಾಸ ಕಾಪಿಕಾಡ್ ನೇತ್ರತ್ವದಲ್ಲಿ ನಮಸ್ತೆ ಮೇಸ್ಟ್ರೆ ನಾಟಕ ಪ್ರದರ್ಶನಗೊಳ್ಳಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ, 10:42pm: ಅಯೋಧ್ಯಾ ಪ್ರಕರಣದ ತೀರ್ಪು ನವಂಬರ್ 09 ಶನಿವಾರ ಪ್ರಕಟವಾಗಲಿದೆ. ನಾಳೆ ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಈ ತೀರ್ಪನ್ನು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬೀಗು ಬಂದೋವಸ್ತ್ ಏರ್ಪಡಿಸಲಾಗಿದ್ದು, ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ಶನಿವಾರ ರಜೆ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು ಅವರಿಗೆ ರಜೆ ನೀಡುವುದನ್ನು ಕುಲಪತಿಗಳ ವಿವೇಚನೆಗೆ ಬಿಡಲಾಗಿದೆ ಎಂದಿದ್ದಾರೆ. (ಈಗ ಕರ್ನಾಟಕ ರಾಜ್ಯ ಸರಕಾರವೇ ರಜೆ ಘೋಷಣೆ ಮಾಡಿದೆ.) ಕುಂದಾಪ್ರ ಡಾಟ್ ಕಾಂ ಸುದ್ದಿ. ಶತಮಾನಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ರಾಮಜನ್ಮಭೂಮಿ ವಿವಾದಕ್ಕೆ ಈ ತೀರ್ಪಿನ ಮೂಲಕ ತಾರ್ಕಿಕ ಅಂತ್ಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಐತಿಹಾಸಿಕ ಅಯೋಧ್ಯಾ ತೀರ್ಪು ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ವಿವಾದದ ಕೇಂದ್ರಬಿಂದು ಅಯೋಧ್ಯೆಯಲ್ಲಿ ಅಕ್ಷರಶಃ ಭದ್ರತಾ ಚಕ್ರವ್ಯೂಹವನ್ನು ರಚಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಒರಿಸ್ಸಾದ ಬೆಹರಂಪುರದಲ್ಲಿ ಇತ್ತೀಚಿಗೆ ನಡೆದ ಅಂಚೆ ಇಲಾಖಾ ಮಟ್ಟದ ೩೫ನೇ ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಎಂ. ಗುರುದೀಪಕ ಕಾಮತ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವರು ತ್ರಾಸಿ ಅಂಚೆ ಕಛೇರಿಯ ಉದ್ಯೋಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಧಿಕಾರಿಗಳು ಸಭೆಗೆ ಬಾರದಿದ್ದರೆ ಅವರು ಉಡುಪಿ ಜಿಲ್ಲೆಯನ್ನೇ ಬಿಟ್ಟುಹೋಗುವುದು ಒಳಿತು. ತಾಲೂಕಿನಲ್ಲಿ ಜನರಿಗೆ ನೂರಾರು ಸಮಸ್ಯೆಗಳಿವೆ. ಪ್ರತಿ ಇಲಾಖೆಯಲ್ಲಿಯೇ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಇದರ ಬಗ್ಗೆ ಸರಿಯಾದ ಮಾಹಿತಿ ನೀಡಲು ಕೆಡಿಪಿ ಸಭೆಗೂ ಅಧಿಕಾರಿಗಳು ಸರಿಯಾಗಿ ಭಾಗವಹಿಸದಿದ್ದರೆ ಅವರ ಬಗ್ಗೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕು ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅವರು ತಾಲೂಕಿನಲ್ಲಾಗುತ್ತಿರುವ ಮರಳು ಸಮಸ್ಯೆಗಳ ಬಗೆಗೆ ಪ್ರಸ್ತಾಪಿಸಿ, ಅದರ ಬಗೆಗೆ ಸ್ಪಷ್ಟನೆ ಕೇಳಲು ಅಧಿಕಾರಿಗಳೇ ಇಲ್ಲದಿರುವುದನ್ನು ಸಭೆಯ ಗಮನಕ್ಕೆ ತಂದ ಸಂದರ್ಭ ಅವರು ಹೀಗೆ ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆಯ ಸಿಬ್ಬಂಧಿಗಳಿಂದ ರೋಗಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಮಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟಡ ಈಜು ಸ್ವರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿ ಅವರು ೫೦ ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, ೧೦೦ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಹಾಗೂ ೨೦೦ಮೀ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕ ವಿಜೇತರಾಗಿ ಗುಜರಾತಿನ ವಡೋದರದಲ್ಲಿ ೨೦೨೦ರ ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜುಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಪ್ರಸ್ತುತ ಬಂಟ್ವಾಳ ಸ.ಹಿ.ಪ್ರಾ ಶಾಲೆಯಲ್ಲಿ ಪದವೀಧರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಖಾರ್ವಿ ಅವರು ಸ.ಹಿ.ಪ್ರಾ.ಶಾಲೆ ಕಂಚುಗೋಡು, ಸ.ಹಿ.ಪ್ರಾ ಶಾಲೆ ಗುಜ್ಜಾಡಿ ಮತ್ತು ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆವಿದ್ಯಾರ್ಥಿಯಾಗಿದ್ದಾರೆ. ರೇಷ್ಮೆ ಇಲಾಖೆಯ ಬಿ. ಕೆ. ನಾಯ್ಕ್ ರವರು ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಕ್ರೂಟ್ ಕಿರುಚಿತ್ರದ ಮುಹೂರ್ತ ಸಮಾರಂಭ ಶ್ರೀ ಬ್ರಾಹ್ಮೀ ಕಲಾ ವೇದಿಕೆ ಶಿರಿಯಾರ ಇಲ್ಲಿ ನೆರವೇರಿತು. ಶ್ರೀ ವಿಘ್ನೇಶ್ವರ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಯು ಪ್ರಸಾದ್ ಭಟ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಅಧ್ಯಾಪಕ, ಸಾಹಿತಿ ನರೇಂದ್ರ ಕುಮಾರ್ ಕೋಟ, ಶಿರಿಯಾರ ಹಿ ಪ್ರಾ ಶಾಲಾ ಮುಖ್ಯೋಪಾಧ್ಯಾಯ ಸಾಧು ಸೇರೆಗಾರ್, ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಶೆಟ್ಟಿ, ಶಿವರಾಮ ಕಾರ್ಕಡ, ಕೃಷ್ಣ ಭಟ್, ದರ್ಶನ್ ಶೆಟ್ಟಿ ಉಪಸ್ಥಿತರಿದ್ದರು. ಕಿರುಚಿತ್ರದ ಕಥೆ, ಚಿತ್ರ ಕಥೆ, ನಿರ್ದೇಶನ-ರಾಘವೇಂದ್ರ ಶಿರಿಯಾರ, ಛಾಯಾಗ್ರಹಣ-ರೋಹಿತ್ ಅಂಪಾರ್, ಸಂಕಲನ-ಸುಮಂತ್ ಭಟ್, ಸಂಭಾಷಣೆ-ಸತೀಶ ವಡ್ಡರ್ಸೆ, ಕಲೆ-ಶಶಿ ಶೆಟ್ಟಿ ಹಲ್ತೂರು, ಸಹ ನಿರ್ದೇಶನ-ಸುರೇಶ ಶೆಟ್ಟಿ ಮಂದಾರ್ತಿ, ಆದರ್ಶ ಕೆ ಜೆ. ಪ್ರಮುಖ ಕಲಾವಿದರಾಗಿ ಯೋಗೇಶ್ ಬಂಕೇಶ್ವರ್, ಕರಾವಳಿಯ ಬಹುಮುಖ ಪ್ರತಿಭೆ ಬಾಲನಟ ರೋಶನ್ ಗಿಳಿಯಾರು, ಪ್ರಭಾಕರ ಬಿ ಕುಂದರ್, ಗುಂಡ್ಮಿ ರಾಮಚಂದ್ರ ಐತಾಳ್,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನು ಹಬ್ಬದ ’ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್’ ಸ್ಪರ್ಧೆಯ ಪ್ರಯುಕ್ತ ನವೆಂಬರ್ 23ರಂದು ಬೋರ್ಡ್ ಹೈಸ್ಕೂಲ್, ರೋಟರಿ ಕಲಾಮಂದಿರ ಕುಂದಾಪುರ ಇಲ್ಲಿ ಮಧ್ಯಾಹ್ನ 2 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. 5ನೇ ತರಗತಿಯ ತನಕ ಸ್ಪರ್ಧೆಯ ವಿಷಯವಾಗಿ ’ಗಾಂಧೀಜಿ’ಯವರ ಚಿತ್ರ ರಚನೆ – ಪ್ರಥಮ ಬಹಮಾನ ರೂ.6000-, ದ್ವಿತೀಯ ರೂ.4000/-. ತೃತೀಯ ರೂ. 2000/- ಮತ್ತು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಕಾರ್ಟೂನು ರಚನೆ – ಪ್ರಥಮ ಬಹುಮಾನ 8000/- ದ್ವಿತೀಯ ರೂ.6000/-, ತೃತೀಯ ರೂ. 3000/- ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಚಿತ್ರರಚನೆ ಇದ್ದು – ಪ್ರಥಮ ರೂ. 10000/-, ದ್ವಿತೀಯ ರೂ. 7000/-, ತೃತೀಯ ರೂ. 4000/- ಆಗಿರುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕಾಗಿರುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ವರ್ಷದುದ್ದಕ್ಕೂ ಮಾತ್ರವಲ್ಲ, ಜೀವನದುದ್ದಕ್ಕೂ ಕನ್ನಡವನ್ನು ನಾವು ಅನುಭವಿಸುತ್ತಾ, ಅದರ ಸವಿಯನ್ನು ಸವಿಯುವುದು ನಾವು ನಾಡಿಗೆ ಸಲ್ಲಿಸುವ ಅತೀ ದೊಡ್ಡ ಸೇವೆಯಾಗಿದೆ ಎಂದು ಮೊಳಹಳ್ಳಿ-ಹುಣ್ಸೆಮಕ್ಕಿ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ ಹೇಳಿದರು. ಅವರು ಬಿದ್ಕಲ್‌ಕಟ್ಟೆಯಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಳೀಯ ಕನ್ನಡ ರಾಜ್ಯೋತ್ಸವ ಸಮಿತಿ ಏರ್ಪಡಿಸಿಕೊಂಡು ಬರುತ್ತಿರುವ ಕನ್ನಡ ದಿನಾಚರಣೆಯ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ದೀನಪಾಲ ಶೆಟ್ಟಿ, ಸಂಘಟಕರಾದ ವಿಶ್ವನಾಥ ಶೆಟ್ಟಿ, ಸ್ಥಳೀಯ ಉದ್ಯಮಿ ಹಾಗೂ ಇನ್ನೀರ್ವ ಮುಖ್ಯ ಅತಿಥಿಗಳಾದ ಶಂಕರ ಹೆಗ್ಡೆ, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಕಾಳಾವರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಮಳೆಗಾಲದಲ್ಲಿ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಸಂಭವಿಸಿದ್ದ ಕಡಲ್ಕೊರೆತ ಅಲ್ಲಿನ ನಿವಾಸಿಗಳಾದ ಮೀನುಗಾರರನ್ನು ಕಂಗೆಡಿಸಿತ್ತು. ಈಚಿಗಿನ ಗಾಳಿಮಳೆಯಿಂದ ಹೊರಬಂದರಿನ ಉತ್ತರದ ತಡೆಗೋಡೆಯ ಉತ್ತರ ದಿಕ್ಕಿನಲ್ಲಿ ಮತ್ತೆ ನಡೆಯುತ್ತಿರುವ ಕೊರೆತ ಅವರನ್ನು ಚಿಂತೆಗೀಡುಮಾಡಿದೆ. ಸುಮಾರು ೨೦೦ ಮೀಟರು ಉದ್ದದ ತೀರಪ್ರದೇಶದಲ್ಲಿ ಐದಾರು ಮೀಟರು ಭೂಭಾಗ ಇಷ್ಟರಲ್ಲೇ ಸಮುದ್ರ ಸೇರಿದೆ. ಹತ್ತಾರು ತೆಂಗಿನ ಮರಗಳು ಉರುಳಿವೆ. ಕೆಲವೆಡೆ ಆ ವಸತಿ ಪ್ರದೇಶದ ಸಂಪರ್ಕದ ಕೊಂಡಿಯಾಗಿರುವ ಕರಾವಳಿ ಮಾರ್ಗದ ತನಕವೂ ಕೊರೆತ ಆಗುತ್ತಿದೆ. ಕೊರೆತ ನಿಲ್ಲದೆ ಮುಂದುವರಿದರೆ ರಸ್ತೆ ಹಾಗೂ ಅದರಾಚೆಗಿನ ಮನೆಗಳಿಗೂ ಅಪಾಯ ತಟ್ಟಬಹುದು ಎಂಬ ಭೀತಿ ಆವರಿಸಿದೆ. ಈ ವರೆಗೆ ಬಂದರಿನ ಒಳಭಾಗದ ಪ್ರದೇಶದ ದಂಡೆ ಕೊರೆಯಲ್ಪಡುತ್ತಿತ್ತು. ಅಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಲ್ಲುಗಳನ್ನು ಪೇರಿಸಿ ಕೊರೆತ ತಡೆಗಟ್ಟುವ ಪ್ರಯತ್ನ ನಡೆಸಿತ್ತು. ಅದನ್ನೂ ಮೀರಿ ಅಲೆಗಳು ದಾಳಿ ನಡೆಸಿ ತೀವ್ರ ಅಪಾಯ ಸೃಷ್ಟಿಸಿದಾಗ ಮೀನುಗಾರರೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮರಳು ತುಂಬಿಸಿದ…
