ಹರೇಕಳ ಹಾಜಬ್ಬ ಅವರಿಗೆ ಪಂಚವರ್ಣ ರಾಜೋತ್ಸವ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರತಿವರ್ಷ ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ ನೀಡಲ್ಪಡುವ ಪಂಚವರ್ಣ ರಾಜೋತ್ಸವ ಪುರಸ್ಕಾರಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಆಯ್ಕೆ ಯಾಗಿದ್ದಾರೆ.

Call us

Click Here

ನವೆಂಬರ 16ರಂದು ಕೋಟ ವರುಣ ತೀರ್ಥ ಕೆರೆಯ ಸಮೀಪ ಅಮೃತೇಶ್ವರಿ ಪಾರ್ಕಿಂಗ್ ಸ್ಥಳದಲ್ಲಿ ನಡೆಯುವ ಅದ್ದೂರಿಯ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನ ಮಾಡಲಿದ್ದಾರೆ.

ಪಂಚವರ್ಣ ರಾಜೋತ್ಸವ ಪ್ರಶಸ್ತಿಯೊಂದಿಗೆ ಬೆಳ್ಳಿಯ ಸ್ಮರಣಿಕೆ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕೋಡಿ ಕನ್ಯಾಣದ ಪ್ರಗತಿ ಯುವಕ ಮಂಡಲಕ್ಕೆ ಪಂಚವರ್ಣ ವಿಶೇಷ ಪುರಸ್ಕಾರ ಹಾಗೂ ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆ ನೆರವೆರಲಿದೆ. ಪ್ರತಿಭಾ ಪುರಸ್ಕಾರ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ, ಮಣೂರು ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ, ಸಾಂಸ್ಕ್ತಿಕ ಕಾರ್ಯಕ್ರಮದ ಸಲುವಾಯ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಪುಟಾಣಿಗಳ ನೃತ್ಯ,ರಾತ್ರಿ 9:30ಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕ್ರತ ತೆಲಿಕದಬೋಳ್ಳಿ ದೇವದಾಸ ಕಾಪಿಕಾಡ್ ನೇತ್ರತ್ವದಲ್ಲಿ ನಮಸ್ತೆ ಮೇಸ್ಟ್ರೆ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply