ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಪ್ರಸಕ್ತ ವರ್ಷದಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 14.96% ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ 68.03% ಫಲಿತಾಂಶಗಳಿಸಿದೆ. ಆಳ್ವಾಸ್ ಕಾಲೇಜಿನ 147 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷದಲ್ಲಿ ಆಳ್ವಾಸ್‌ನ 42 ವಿದ್ಯಾರ್ಥಿಗಳು ಸಿಎ ಫೈನಲ್‌ನಲ್ಲಿ, 30 ವಿದ್ಯಾರ್ಥಿಗಳು ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸಿಎ ಪ್ರತಿ ಹಂತದಲ್ಲೂ ಉತ್ತಮ ಫಲಿತಾಂಶ ಪ್ರಕಟವಾಗಿದೆ. ಸುಮೀತ್ ವರ್ಧಮಾನ್ ರೂಗೆ (̳304), ಶಿವಪ್ರಸಾದ್ (295), ಆರ‍್ಯನ್ ಕಾರ್ಯಪ್ಪ ಎ. (287), ಶಿವಶೇಷ್ ಕೆ. ಆರ್. (283), ಹರೀಶ್ ಕುಲಕರ್ಣಿ (283), ಕನ್ಯಾ ಪ್ರಭು (281), ಗಿರೀಶ್ ಚಂದ್ರಪ್ಪ (277), ಆಕಾಶ್ ಜೆ. ಭಟ್ (276), ಹಿತೇಶ್ ಎಂ. ಎಸ್. (273), ದಿನೇಶ್ ಎನ್ (268), ಸಾಹುನ್ ಪಿಂಟೋ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎ, ಸಿಎಸ್‌ಇಇಟಿ ವೃತ್ತಿ ಪರ ಕೋರ್ಸ್‌ಗಳಿಗೆ ಹನ್ನೆರಡು ವರ್ಷಗಳ ತರಬೇತಿ ನೀಡುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಗಳು ನಡೆಸಿದ ಸಿಎ ಮತ್ತು ಸಿಎಸ್‌ಇಇಟಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಸಿಂಚನಾ ಎಸ್. ಶೆಟ್ಟಿ (270) ಅಭಿಷೇಕ ಅಡಿಗ (269) ಸಿಂಚನ ಎಸ್. ಬಸ್ರೂರ್ (255) ಪ್ರಣವ್ (249) ಹರ್ಷಿತಾ ಡಿ. ಎಸ್ (208) ಮಾನ್ಯ (200) ಹಾಗೆ ಸಿಎಸ್ ಫೌಂಡೇಶನ್‌ನಲ್ಲಿ ಶ್ರೇಯಾ (104) ಸಿದ್ದಾಂತ್ (100) ಅಂಕಗಳನ್ನು ಪಡೆಯುವುದರೊಂದಿಗೆ ಉತ್ತೀರ್ಣರಾಗುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಸಿಎ ಫೌಂಡೇಶನ್ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ. ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊಲ್ಲೂರು ಪಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ವರ್ಷಗಳಿಂದ ಆಂಬ್ಯುಲೆನ್ಸ್ ಸೇವೆ ಇಲ್ಲದ್ದರಿಂದ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದು, ಇದೀಗ ನೂತನ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ನೂತನ ಅಂಬ್ಯುಲೆನ್ಸ್ ಹಸಿರು ನಿಶಾನೆ ತೋರುವ ಮೂಲಕ ಓಡಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ.ಗಡಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ಕೇದ್ರದ ವೈದ್ಯಾಧಿಕಾರಿ ಡಾ. ಶೈಲೇಶ್, 108 ಉಡುಪಿ ಜಿಲ್ಲಾ ವ್ಯವಸ್ಥಾಪಕ ಮಹಾಬಲ, ಗ್ರಾಪಂ ಅಧ್ಯಕ್ಷೆ ವನಿತಾ, ಇಎಂಟಿ ನಾಗರಾಜ್, ರಾಘವೇಂದ್ರ, ಪೈಲೆಟ್ ಚಂದ್ರಪ್ಪ, ಪಿಐ ಬಸವರಾಜ್ ಪವಾರ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಗೇರು, ಅಂಗಾಂಶ ಬಾಳೆ, ಕಾಳುಮೆಣಸು, ಕೋಕೋ, ಹಲಸು, ಜಾಯಿಕಾಯಿ, ರಾಮ್ ಬೂತಾನ್, ಡ್ರ್ಯಾಗನ್ ಪ್ರೂಟ್ ಮತ್ತು ಮಲ್ಲಿಗೆ ಪ್ರದೇಶ ವಿಸ್ತರಣೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಕೃಷಿ ಜಮೀನು ಹಾಗೂ ಉದ್ಯೋಗ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಜನಾಂಗ, ಬುಡಕಟ್ಟು ಜನಾಂಗ, ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬ, ಸ್ತ್ರೀ ಪ್ರಧಾನ ಕುಟುಂಬ, ವಿಕಲ ಚೇತನ ಪ್ರಧಾನ ಕುಟುಂಬ, ಭೂ ಸುಧಾರಣಾ ಫಲಾನುಭವಿಗಳು, ಇಂದಿರಾ ಆವಾಜ್ ಯೋಜನೆ ಫಲಾನುಭವಿಗಳು, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳು ಹಾಗೂ ಸಣ್ಣ ಮತ್ತು ಅತೀ ಸಣ್ಣ ರೈತರು ಸದರಿ ಯೋಜನೆಯಡಿ ಮಾರ್ಗಸೂಚಿಯಂತೆ ಹೊಸ ತೋಟಗಳನ್ನು ನಿರ್ಮಾಣ ಮಾಡಿ, ಕೂಲಿ ಹಾಗೂ ಸಾಮಾಗ್ರಿ ವೆಚ್ಚವನ್ನು ಸಹಾಯಧನದ ರೂಪದಲ್ಲಿ ಪಡೆಯಬಹುದಾಗಿರುತ್ತದೆ. ಆಸಕ್ತ ರೈತರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಶಾಲೆ ಉಳಿಯಬೇಕಾದರೆ ಸಮುದಾಯದ ಪಾತ್ರ ಅತಿ ಮಹತ್ವದ್ದು. ಸಮುದಾಯದಿಂದ ಸರಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಮತ್ತು ಅವುಗಳನ್ನು ಉಚಿತ ರೀತಿಯಲ್ಲಿ ಬಳಸಿಕೊಳ್ಳುವುದು ಸರಕಾರಿ ಶಾಲೆಯ ಬೆಳವಣಿಗೆಗೆ ಪೂರಕ. ವರ್ಷದಿಂದ ವರ್ಷಕ್ಕೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಪೂರಕ ಸೌಲಭ್ಯಗಳು ಆಗಬೇಕಾಗಿದೆ ಎಂದು ಗೀತಾ ಎಚ್. ಎಸ್. ಎನ್. ಫೌಂಡೇಶನ್ ಅಧ್ಯಕ್ಷರಾದ ಶಂಕರ ಐತಾಳ್ ಅವರು ಅಭಿಪ್ರಾಯಪಟ್ಟರು. ಅವರು ಸರಕಾರಿ ಬೀಜಾಡಿ ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಗೀತಾ ಎಚ್. ಎಸ್. ಎನ್. ಫೌಂಡೇಶನ್ ನ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ಗಳನ್ನು ವಿತರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಅವರು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುವ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸಿ, ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕ್ರಮ ಪ್ರಕಾರ ಬಳಸಿಕೊಂಡು ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದೆ. ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್. ಐ. ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2024” ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಂತರ “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಓ. ಟಿ. ಪಿ ಆಯ್ಕೆಯನ್ನು ಮಾಡಬೇಕು. ನಂತರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ. ಟಿ. ಪಿಯನ್ನು ದಾಖಲಿಸಬೇಕು. ರೈತರ ಎಫ್. ಐ. ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬದುಕು ನಿಂತ ನೀರಾಗಿರದೇ ಸಾಧಿಸುವ ಛಲವಿರಬೇಕು ಜೊತೆಗೆ ಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳು ಹತ್ತಲು ಸುಲಭವಾಗುತ್ತದೆ. ಯುವಕರು ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯ ಚಟುವಟಿಕೆಗಳಿಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಬೇಕು ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅವರು ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಉಡುಪಿ ಡಾ. ಶಿವರಾಮ ಕಾರಂತ ಟ್ರಸ್ಟ್ ರಿ., ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಚಿತ್ರನಟ ಡಾ. ರಮೇಶ್ ಅರವಿಂದ್ ಪ್ರಾಯೋಜಿತ ದತ್ತಿ ಪುರಸ್ಕಾರವನ್ನು ಪ್ರಥ್ವೀಶ್ ಭಟ್ ಹಾಗೂ ರವೀಂದ್ರ ಶೆಟ್ಟಿ ತಂತ್ರಾಡಿ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್, ಯಕ್ಷಗಾನ ಪ್ರಸಂಗಕರ್ತ ವಿಷ್ಣುಮೂರ್ತಿ ನಾಯಕ್ ಬೇಳೂರು, ಗೋವಿಗಾಗಿ ಮೇವು ಅಭಿಯಾನ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬ್ರಹ್ಮ ನಾರಾಯಣಗುರು ಸೇವಾ ಸಂಘ ರಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ಲಯನ್ಸ್ ಕ್ಲಬ್ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಗಾಯತ್ರಿ ಸಭಾಭವನ ಕುಂಭಾಶಿಯಲ್ಲಿ ಜರುಗಿತು. ಪ್ರತಿಜ್ಞಾವಿಧಿ ಬೋಧಿಸಿ ಪದಪ್ರಧಾನ ನಡೆಸಿಕೊಟ್ಟ ಮಾಜಿ ಜಿಲ್ಲಾ ಗವರ್ನರ್ ನೀಲಕಂಠ ಎಮ್. ಹೆಗ್ಡೆ ಮಾತನಾಡಿ, ತೆಕ್ಕಟ್ಟೆ ಲಯನ್ಸ್ ಕ್ಲಬ್ ದಶಮಾನೋತ್ಸವವನ್ನು ಪೂರೈಸಿಕೊಂಡು ಲಯನ್ಸ್ ತತ್ವ ಆದರ್ಶಗಳ ಪ್ರಕಾರ ಸಮಾಜಕ್ಕೆ ಬಡವರಿಗೆ ಸೇವೆ ಸಹಾಯ ನೀಡುತ್ತಾ ಬಂದು ಉತ್ತಮ ಕ್ಲಬ್ ಆಗಿ ನಡೆದು ಬಂದುದನ್ನು ಪ್ರಶಂಸಿದರು. ಕ್ಲಬ್‌ನ ನೂತನ ಅಧ್ಯಕ್ಷ ಹರ್ಷವರ್ಧನ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ, ಖಜಾಂಚಿ ರಮೇಶ್ ಕೆ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧನಸಹಾಯ ಮಾಡಲಾಯಿತು. ತೆಕ್ಕಟ್ಟೆ ಲಯನ್ಸ್ ಕ್ಲಬ್ 2022-23ರಲ್ಲಿ ದತ್ತು ಪಡೆದ 4 ವಿಧ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಕೃಷಿಯಲ್ಲಿ ಸಾಧನೆ ಮಾಡಿ ಕೇಂದ್ರ ಸರ್ಕಾರದ ಬಿಲೇನಿಯರ್ ಫಾರ್ಮರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಯ ಲೋಕಸಭಾ ಸಚೇತಕರಾಗಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನೇಮಕಗೊಳಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಮಿಳುನಾಡಿನ ಸ್ಟಾರ್ ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ರಿಸರ್ಚ್ ಆಂಡ್ ಎಜುಕೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ ಕೊಡಮಾಡುವ ಎಸ್.ಐ.ಎಫ್.ಆರ್.ಐ ಇಂಟರ್ನ್ಯಾಷನಲ್ ಬೆಸ್ಟ್ ಟೀಚರ್ ಅವಾರ್ಡ್- 2024ಕ್ಕೆ ಕೃಷ್ಣಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ರವಿಚಂದ್ರ ಅವರು ಭಾಜನರಾಗಿದ್ದಾರೆ. ಜುಲೈ 28 ರಂದು ಈರೋಡ್ ಕೊಹಿನೂರ್ ಹೊಟೇಲ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರವಿಚಂದ್ರ ಅವರು ರೋವರ್ಸ್ ಘಟಕ ಹಾಗೂ ರೆಡ್ ಕ್ರಾಸ್ ಘಟಕದ ನೋಡೆಲ್ ಅಧಿಕಾರಿಯಾಗಿದ್ದು, ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಗೆ ಸಂಬಂಧಿಸಿದಂತೆ ಅತ್ಯುತ್ತಮ ಹಂತವಾದ ಹಿಮಾಲಯನ್ ವುಡ್ ಬ್ಯಾಡ್ಜ್ ಪದವಿ ಹೊಂದಿದವರು. ಕೋಟೇಶ್ವರ ಸಮೀಪದ ಮೂಡುಗೋಪಾಡಿಯವರಾದ ರವಿಚಂದ್ರ ಅವರು ಬಾಬು ಭಂಡಾರಿ ಮತ್ತು ಶಾರದಾ ಭಂಡಾರಿ ಅವರ ಪುತ್ರರಾಗಿದ್ದಾರೆ.
