Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ. ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಅಭಿಯಾನ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಜೊತೆಯಾಗಿ ರಾಜ್ಯದ ೬೨೩ ಕ್ಲಸ್ಟರ್ ಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವನ್ನು ಸಂಘಟಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿಯೂ ಈ ಹಬ್ಬ ಈಗ ಆರಂಭವಾಗಿದೆ. ಕ್ಲಸ್ಟರ್ ಮಟ್ಟದ ಹಬ್ಬವು ಎರಡು ದಿನಗಳ ಕಾಲ ನಡೆಯುತ್ತದೆ. ಆಯಾ ಕ್ಲಸ್ಟರ್ ನ ಸರಕಾರಿ ಶಾಲೆಗಳ ೬, ೭ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳನ್ನು ಒಂದು ಶಾಲೆಯಲ್ಲಿ ಸೇರಿಸಲಾಗುತ್ತದೆ. ಈ ಎಲ್ಲ ಮಕ್ಕಳು ವಿವಿಧ ಚಟುವಟಿಕೆ ಕಾರ್ನರ್ ಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ವಿಭಜನೆಯಾಗುತ್ತಾರೆ. ಪ್ರತಿ ಕಾರ್ನರ್‌ನಲ್ಲಿ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಎರಡುವವರೆ ಗಂಟೆಗಳಷ್ಟು ಸಮಯವನ್ನು ಮಕ್ಕಳು ಕಳೆಯುತ್ತಾರೆ. ಆ ಕಾರ್ನರ್ ನಲ್ಲಿನ ಚಟುವಟಿಕೆ ಮುಗಿದ ನಂತರ ಮಕ್ಕಳು ಇನ್ನೊಂದು ಕಾರ್ನರ್ ಗೆ ತೆರಳುತ್ತಾರೆ. ಅಲ್ಲಿ ಇನ್ನೂ ಭಿನ್ನವಾದ ಚಟುವಟಿಕೆಗಳಿರುತ್ತವೆ. ಹೀಗೆ ಎರಡು ದಿನಗಳಲ್ಲಿ ಹಬ್ಬಕ್ಕಾಗಿ ವಿನ್ಯಾಸಗೊಳಿಸಲಾದ ಎಲ್ಲಾ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸುತ್ತಾರೆ. ಭಾಷೆ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಬೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಲ್ಯಾಣಪುರದ ರೋಬೋಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯಿಂದ ಸಾಂಸ್ಥಿಕ ಸಾಮಾಜಿಕ ಜವಾಜ್ದಾರಿ ಕಾರ್ಯಕ್ರಮದಡಿಯಲ್ಲಿ ಶನಿವಾರ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಬೋಸಾಫ್ಟ್ ಪ್ರತಿನಿಧಿ ನಿರಂಜನ್ ಭಟ್ ಕ್ರೀಡಾ ಸಾಮಾಗ್ರಿ, ಪ್ರಿಂಟರ್, ಮಿಕ್ಸಿ, ಚಿಕ್ಕ ಯುಪಿಎಸ್‌ನ್ನು ಹಸ್ತಾಂತರಿಸಿದರು. ಬೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಪ್ರಭಾವತಿ ಶೆಟ್ಟಿ, ಪ್ರಭಾವತಿ ಟಿ. ಶೆಟ್ಟಿ, ಉಷಾ ಕೊಠಾರಿ, ಊರಿನ ಪ್ರಮುಖರಾದ ಸುರೇಶ್ ಮೊಗವೀರ, ಸತೀಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ವಿನಯ ಹೆಗ್ಡೆ, ರೇಣುಕಾ ಶೆಟ್ಟಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ, ಸದಸ್ಯೆ ದಯಾಮತಿ, ಕೇದೂರು ಕ್ಲಸ್ಟರ್‌ನ ಸಂಗೀತಾ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಧ್ಯಾಯಿನಿ ಉಷಾ ಸ್ವಾಗತಿಸಿದರು. ಶಿಕ್ಷಕ ರಮೇಶ್ ಶೆಟ್ಟಿ ವಂದಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ro

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಎಪಿಎಂಸಿ ಮಾರ್ಕೆಟ್ ಯಾರ್ಡಿನ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಹೆದ್ದಾರಿಯ ಬದಿಯ ಎರಡು ಕಡೆಗಳಲ್ಲಿ ವಿಭಜಕಕ್ಕೆ ಅಳವಡಿಸಿರುವ ಕಬ್ಬಿಣದ ತಡೆ ಬೇಲಿಯಿಂದಾಗಿ ಜನರಿಗೆ ಸಮಸ್ಯೆ ಆಗುತ್ತಿದ್ದು, ಕೂಡಲೇ ತೆರವು ಮಾಡುವಂತೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಶರತ್ಕುಮಾರ ಶೆಟ್ಟಿ, ಕುಂದಾಪುರ ಭಾಗದಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಅವ್ಯವಸ್ಥೆ ಬಗ್ಗೆ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಸ್ಪಂದನ ಸಿಗುತ್ತಿಲ್ಲ. ಎಪಿಎಂಸಿ ಮಾರ್ಕೆಟ್ ಯಾರ್ಡ್ ಎದುರು ನಡೆವ ಕಾಮಗಾರಿಯಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮಾರ್ಕೆಟ್ ಯಾರ್ಡ್ ಎದುರಿನ ಹೆದ್ದಾರಿ ದಾಟಲು ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕು. ಕುಂದಾಪುರ ಸಂತೆ ಹೋಗುವುದಕ್ಕೂ ಜನ ಪರದಾಟ ನಡೆಸುವಂತಾಗಿದೆ ಎಂದು ಅವರು ಆರೋಪಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ ಹೆಗ್ಡೆ, ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಜನರ ಸಮಸ್ಯೆಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಲ್ಲಿ ಮದುವೆ ಎಲ್ಲಾ ರೀತಿಯ ತಯಾರಿ ನಡೆದಿತ್ತು. ಇನ್ನೇನು ನಾಳೆ ಎಂದರೆ ಮದುವೆ. ಆದರೆ ಮದುವೆಗಾಗಿ ಬೆಂಗಳೂರಿನಿಂದ ಬರಬೇಕಿದ್ದ ಮಧುಮಗನ ಮಾತ್ರ ನಾಟ್ ರೀಚೆಬಲ್ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಬೈಂದೂರಿನ ಜೆಎನ್‌ಆರ್ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆಯೂ ನಿಂತು ಹೋಗಿದೆ. ತಾಲೂಕಿನ ಬಳ್ಕೂರಿನ ಪ್ರವೀಣ ಕುಮಾರ್ ನಾಪತ್ತೆಯಾದ ವ್ಯಕ್ತಿ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಉದ್ಯೋಗಿಯಾಗಿರುವ, ಬಳ್ಕೂರು ನಡುಮನೆ ರಾಮಚಂದ್ರ ಎಂಬುವವರ ಪುತ್ರ ಪ್ರವೀಣ ಕುಮಾರನ ಮದುವೆ ನ.29ರಂದು ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವತಿಯೊಂದಿಗೆ ನಿಗದಿಯಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಮದುವೆ ನಿಶ್ಚಿತಾರ್ಥವೂ ನಡೆದಿತ್ತು. ಇತ್ತ ಹುಡುಗಿ ಮನೆಯವರು ಮದುವೆಗೆ ಸಂಪೂರ್ಣ ತಯಾರಿ ನಡೆಸಿದ್ದರು. ಆದರೆ ನ.26ರಂದು ಬೆಂಗಳೂರಿನಿಂದ ಬಳ್ಕೂರಿಗೆ ಬರುವುದಾಗಿ ತಿಳಿಸಿದ್ದ ಹುಡುಗ ಮಾತ್ರ ಬಂದಿರಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. (ಕುಂದಾಪ್ರ ಡಾಟ್ ಕಾಂ) ಈ ಮೊದಲೇ ಮದುವೆಯಾಗಿತ್ತೇ? ಮಗ ನಾಪತ್ತೆಯಾಗಿರುವ ಬಗ್ಗೆ ತಂದೆ ರಾಮಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನೂತನ ವೃತ್ತನಿರೀಕ್ಷಕರ ಕಛೇರಿಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಸದಸ್ಯರಾದ ರಾಘವೇಂದ್ರ ಪೂಜಾರಿ, ನರಸಿಂಹ ನಾಯಕ್, ನಾಗರಾಜ ಪೂಜಾರಿ, ಸ್ಥಳೀಯರಾದ ರಾಜೇಂದ್ರ ಬಿಜೂರು, ಸುಬ್ರಹ್ಮಣ್ಯ ಬಿಜೂರು ಹಾಗೂ ಠಾಣಾ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಇಲ್ಲಿ ನೋಡಿ – srivaralaxmitrust.com/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವ್ಯಕ್ತಿಯೋರ್ವ ಪತ್ನಿ‌ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಗ್ರಾಮದ ಸೂರ್ಗೊಳಿ ಎಂಬಲ್ಲಿ ನಡೆದಿದೆ. ಮೃತರನ್ನು ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯನಾರಾಯಣ ಭಟ್ ಅಲ್ಸೆ (52), ಅವರ ಪತ್ನಿ ಮಾನಸ (50), ಪುತ್ರ ಸುಧೀಂದ್ರ (14), ಸುದೇಶ್ (8) ಎಂದು ಗುರುತಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ಅಡುಗೆ ಭಟ್ಟರಾಗಿದ್ದ ಸೂರ್ಯನಾರಾಯಣ ಭಟ್ ತನ್ನ ಮನೆಯಲ್ಲಿಯೇ ಪತ್ನಿ ಹಾಗೂ ಮಕ್ಕಳನ್ನು ಮಾರಕಾಯುಧದಿಂದ ಕೊಲೆಗೈದ ಬಳಿಕ ತಾನು ಅಲ್ಲಿಯೇ ನೇಣಿಗೆ ಶರಣಾಗಿರಬಹುದು. ನಿನ್ನೆ ರಾತ್ರಿ ಘಟನೆ ನಡರದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಬಗೆಗೆ ಇನ್ನಷ್ಟೇ ವಿವರ ತಿಳಿಯಬೇಕಿದೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಜನಸೇವಾ ಟ್ರಸ್ಟ್ ರಿ. ಮೂಡುಗಿಳಿಯಾರು ಇವರ ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ 2020 ಕಾರ್ಯಕ್ರಮ ಫೆಬ್ರವರಿ ತಿಂಗಳ 8 ರಂದು ಮೂಡುಗಿಳಿಯಾರಿನಲ್ಲಿ ಜರುಗಲಿದ್ದು ಈ ವರ್ಷದ ಕೀರ್ತಿಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ರವರಿಗೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ ಮಂದಾರ್ಥಿ ಮೂಲದವರಾದ ಯೋಗರಾಜ್ ಭಟ್ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಠಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದವರು. ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಭಟ್. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಶ್ರೀಯುತರ ಜೀವಮಾನದ ಸಾಧನೆಯನ್ನು ಗುರುತಿಸಿ ಅವರ ತವರು ನೆಲದಲ್ಲಿ ಕೀರ್ತಿಕಳಶ ಪುರಸ್ಕಾರವನ್ನ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳ್ತೂರು ಅರುಣ್ ಕುಮಾರ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಸಂದರ್ಭ ಟೀಮ್ ಅಭಿಮತದ ಸಂಚಾಲಕರಾದ ಪ್ರವೀಣ್ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಪಡುಕರೆ,ಜನಸೇವಾ ಟ್ರಸ್ಟ್ ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯಗಾರರು ಮೊದಲು ನಮ್ಮನ್ನು ನಾವೇ ಹಾಸ್ಯ ಮಾಡಿ ಹಾಸ್ಯಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಎಲ್ಲರನ್ನೂ ನಗಿಸಲು ಸಾಧ್ಯವಿದೆ ಎಂದು ಸಾಹಿತಿ, ವಕೀಲರಾದ ಎಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಜರುಗಿದ ನಾಲ್ಕು ದಿನಗಳ ಕಾರ್ಟೂನು ಹಬ್ಬದ ಕೊನೆಯ ದಿನ ಕುಂದಾಪ್ರ ಕನ್ನಡ ಕಾಮಿಡಿ ‘ನಿತ್ಕ ಕಾಮಿಡಿ ಕೂತ್ಕ ನಗಾಡಿ’ಗೆ ಚಾಲನೆ ನೀಡಿ ಮಾತನಾಡಿ ಬದುಕಿನ ಪ್ರತಿಹೆಜ್ಜೆಯಲ್ಲಿಯೂ ಹಾಸ್ಯ ಕಾಣಬಹುದಾಗಿದ್ದು ಅದನ್ನು ಗ್ರಹಿಸುವ ಗುಣವಿರಬೇಕು. ಕಾರ್ಟೂನು ದೇಶದ ಆಗು ಹೋಗುಗಳ ಬಗ್ಗೆ ತಿಳಿಸುವ ವಕ್ರರೇಖೆಗಳ ಪ್ರತಿಫಲನ. ಅಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಆಶಯವಿರುತ್ತದೆ ಎಂದರು. ಸಮಾರಂಭದಲ್ಲಿ ಕುಂದಾಪುರದ ಕ್ರೀಡಾ ತರಬೇತುದಾರರಾದ ನಿತ್ಯಾನಂದ ಕೆ., ಶ್ರೀನಿವಾಸ್ ಶೆಟ್ಟಿ ಆನಗಳ್ಳಿ, ಪ್ರದೀಪ್ ವಾಜ್, ಗೌತಮ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಂದಾಪ್ರ ಕನ್ನಡ ಕಾಮಿಡಿ ಕಿಲಾಡಿಗಳಾದ ಮನು ಹಂದಾಡಿ, ಚೇತನ್ ನೈಲಾಡಿ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಟೂನು ಹಬ್ಬದ ಸಂಘಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.27: ಇಲ್ಲಿನ ಅಂಕದಕಟ್ಟೆಯಲ್ಲಿ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳಿಸಲಾದ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಟಿ ಜೇಮ್ಸ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಮೂಲಕ ಕುಂದಾಪುರ ಆಸುಪಾಸಿನ ಸಿಸಿ ಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ಹಿಡಿತದಲ್ಲಿಯೇ ನಡೆಯಲಿದೆ. ಪೊಲೀಸ್ ಇಲಾಖೆಗೆ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯ ಹಂತದಲ್ಲಿ ಅತ್ಯಂತ ಉಪಯೋಗಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಹೇಳಿದರು. ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ನಿಜಾಂಶಗಳನ್ನು ತಿಳಿದುಕೊಳ್ಳಲು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಅತ್ಯಂತ ಉಪಯುಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಸುಳ್ಳು ಮಾಹಿತಿ ನೀಡಲು ಸಾಧ್ಯವಾಗೋದಿಲ್ಲ. ವಾಹನಗಳ ಅಪಘಾತ ಮಾಡಿ ಪರಾರಿಯಾಗುವ ವಾಹನಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಮುದ್ರಿತ ದೃಶ್ಯಾವಳಿಗಳ ಬದಲು ನೇರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ ಚಿರತೆಯೊಂದು ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ. ಗುಡ್ಡಟ್ಟು ಭಾಗದಲ್ಲಿ ಚಿರತೆ ಸಾಕಷ್ಟು ಉಪಟಳ ನೀಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಬೋನು ಇರಿಸಿದ್ದ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳು, ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ರವಾನಿಸಿದ್ದಾರೆ.

Read More