ವಿದ್ಯಾರ್ಥಿಗಳ ಕಲಿಕೆಯ ಹಬ್ಬವಾಗುತ್ತಿದೆ ಮಕ್ಕಳ ವಿಜ್ಞಾನ ಹಬ್ಬ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಅಭಿಯಾನ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಜೊತೆಯಾಗಿ ರಾಜ್ಯದ ೬೨೩ ಕ್ಲಸ್ಟರ್ ಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವನ್ನು ಸಂಘಟಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿಯೂ ಈ ಹಬ್ಬ ಈಗ ಆರಂಭವಾಗಿದೆ.

Call us

Click Here

ಕ್ಲಸ್ಟರ್ ಮಟ್ಟದ ಹಬ್ಬವು ಎರಡು ದಿನಗಳ ಕಾಲ ನಡೆಯುತ್ತದೆ. ಆಯಾ ಕ್ಲಸ್ಟರ್ ನ ಸರಕಾರಿ ಶಾಲೆಗಳ ೬, ೭ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳನ್ನು ಒಂದು ಶಾಲೆಯಲ್ಲಿ ಸೇರಿಸಲಾಗುತ್ತದೆ. ಈ ಎಲ್ಲ ಮಕ್ಕಳು ವಿವಿಧ ಚಟುವಟಿಕೆ ಕಾರ್ನರ್ ಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ವಿಭಜನೆಯಾಗುತ್ತಾರೆ. ಪ್ರತಿ ಕಾರ್ನರ್‌ನಲ್ಲಿ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಎರಡುವವರೆ ಗಂಟೆಗಳಷ್ಟು ಸಮಯವನ್ನು ಮಕ್ಕಳು ಕಳೆಯುತ್ತಾರೆ. ಆ ಕಾರ್ನರ್ ನಲ್ಲಿನ ಚಟುವಟಿಕೆ ಮುಗಿದ ನಂತರ ಮಕ್ಕಳು ಇನ್ನೊಂದು ಕಾರ್ನರ್ ಗೆ ತೆರಳುತ್ತಾರೆ. ಅಲ್ಲಿ ಇನ್ನೂ ಭಿನ್ನವಾದ ಚಟುವಟಿಕೆಗಳಿರುತ್ತವೆ. ಹೀಗೆ ಎರಡು ದಿನಗಳಲ್ಲಿ ಹಬ್ಬಕ್ಕಾಗಿ ವಿನ್ಯಾಸಗೊಳಿಸಲಾದ ಎಲ್ಲಾ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸುತ್ತಾರೆ.

ಭಾಷೆ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನ, ಗಣಿತ, ಶುದ್ಧ ವಿಜ್ಞಾನಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಟದ ರೂಪದಲ್ಲಿ ಮಕ್ಕಳು ನಿರ್ವಹಿಸುತ್ತಾರೆ. ಇಲ್ಲಿ ಕಲಿಕೆ ಸಂಭವಿಸುತ್ತದೆಯಾದರೂ ವರ್ಗಕೋಣೆಯ ರೀತಿಯ ಕಲಿಯುವ ಒತ್ತಾಯ ಇರುವುದಿಲ್ಲ. ಮ್ಯಾಚ್ ಬಾಕ್ಸಿಗೆ ದಾರ ಸುರಿದು ಏರುವ ಹಲ್ಲಿಯ ಆಟಿಕೆ ಮಾಡುವಾಗ ಘರ್ಷಣೆಗೆ ಸಂಬಂಧಿಸಿದ ತತ್ವಗಳನ್ನಾಗಲಿ ವ್ಯಾಖ್ಯಾನವಾಗಲಿ ಇರುವುದಿಲ್ಲ. ಮಗುವಿನಲ್ಲಿ ಹುಟ್ಟುವ ಪ್ರಶ್ನೆಗಳೇ ಮುಂದೆ ಪ್ರಜ್ಞೆಯಾಗಿ ರೂಪಾಂತರಗೊಳ್ಳಬೇಕೆಂಬ ಉದ್ಧೇಶದ ಇಂತಹ ಚಟುವಟಿಕೆಗಳಲ್ಲಿ ಮಗು ಸಂತಸದಿಂದ ಪಾಲ್ಗೊಳ್ಳುತ್ತದೆ. ಪ್ಲಾಸ್ಟಿಕ್ ಚೆಂಡಿಗೆ ಕನ್ನಡಿ ಅಂಟಿಸಿ ಬಾಲ್ ಮೌಂಟ್ ಪ್ರಾಜೆಕ್ಟರನ್ನು ತಯಾರಿಸಿದ ಮಗು ಡಿಸೆಂಬರ್ ೨೬ ರ ಕಂಕಣ ಸೂರ್ಯ ಗ್ರಹಣವನ್ನು ತನ್ನ ಸ್ನೇಹಿತರಿಗೆ, ಮನೆಯವರಿಗೆ ತೋರಿಸದಿರದು. ಕುತೂಹಲವೇ ಕಲಿಕೆಯ ಅಭೀಪ್ಸೆಯಾಗಿ ಅರಿವಿನ ಹೆಮ್ಮರವೊಂದು ಮಗುವಿನೆದೆಯಲ್ಲಿ ಅರಳುವ ಪರಿಯಿದು. ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟುಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಮಗು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಸಡಗರ ಅನಿವಾರ್ಯ ಕೂಡಾ. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಬಂಡವಾಳ ಮಾಡಿಕೊಂಡು ವಿಜ್ಞಾನ ಹಬ್ಬವು ಜೀವತಳೆಯುತ್ತಿದೆ.

ಜಿಲ್ಲಾಮಟ್ಟದ ಹಬ್ಬಗಳು ಮೂರು ದಿನಗಳವರೆಗೆ ನಡೆಯುವ ಸನಿವಾಸ ಕಾರ್ಯಕ್ರಮಗಳಾಗಿವೆ. ಅತಿಥಿ-ಅತಿಥೇಯ ಮಾದರಿಯಲ್ಲಿ ಕಾರ್ಯಕ್ರಮ ನಡೆಯುವ ಶಾಲೆಯ ಪ್ರತಿ ಮಗುವೂ ಬೇರೆ ಊರಿನಿಂದ ಬಂದ ಅತಿಥಿ ಮಗುವಿಗೆ ಅತಿಥೇಯನಾಗುತ್ತಾನೆ ಅಥವಾ ಆಗುತ್ತಾಳೆ. ಮೂರೂ ದಿನಗಳಲ್ಲೂ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ಆಟದ ರೀತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಪ್ರತೀ ಮಗುವೂ ತನ್ನದೇ ಜ್ಞಾನ ರಚನೆಯಲ್ಲಿ ಪಾಲ್ಗೊಳ್ಳುತ್ತದೆ. ಈ ಕಾರ‍್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿ ಮಗುವೂ ಎಂದೆಂದೂ ಮರೆಯದ ನೆನಪುಗಳನ್ನು ತನ್ನೊಡನೆ ಕೊಂಡೊಯ್ಯುತ್ತದೆ.

Click here

Click here

Click here

Click Here

Call us

Call us

ಉಡುಪಿ ಜಿಲ್ಲೆಯ ಕ್ಲಸ್ಟರ್ ಮಟ್ಟದ ಹಬ್ಬಗಳು ಈಗಾಗಲೇ ಆರಂಭಗೊಂಡಿವೆ. “ವಿಜ್ಞಾನ ಹಬ್ಬವು ಶಾಲೆಗಷ್ಟೇ ಸೀಮಿತಗೊಳ್ಳದೆ ಊರಹಬ್ಬವಾಗಬೇಕು. ಶಾಲಾ ಚಟುವಟಿಕೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಖಾತ್ರಿಗೊಳಿಸುವುದು ಈ ಹಬ್ಬದ ಸದಾಶಯಗಳಲ್ಲೊಂದು ಎನ್ನುತ್ತಾರೆ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶೇಷಶಯನ ಕಾರಿಂಜರವರು. ಜಿಲ್ಲಾ ಮಟ್ಟದಲ್ಲಿ ಈ ಹಬ್ಬದ ಉಸ್ತುವಾರಿ ಹೊತ್ತಿರುವ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ಉಪಸಮನ್ವಯಾಧಿಕಾರಿ ಶ್ರೀ ಪ್ರಭಾಕರ ಮಿತ್ಯಂತರವರು ಈ ಹಬ್ಬವು ವರ್ಗಕೋಣೆಯ ಕಲಿಕಾವಾತಾವರಣವನ್ನು ಈ ಹಬ್ಬವು ಸಾಕಷ್ಟು ಸುಧಾರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ವಿಜ್ಞಾನ ಹಬ್ಬದಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ಮಕ್ಕಳು ಖುಷಿಯಿಂದ ಪಾಲ್ಗೊಳ್ಳುವಂತೆ ವಿನ್ಯಾಸಗೊಳಿಸಿ ಕೈಪಿಡಿಯಲ್ಲಿ ನೀಡಲಾಗಿದೆ. ಈ ಕೈಪಿಡಿ ಚಟುವಟಿಕೆಗನ್ನು ನಡೆಸಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ. ಮಗುವಿನ ಹೊರ ಬದುಕಿನ ಅನುಭವಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತವೆ. ವಿದ್ಯಾರ್ಥಿಗಳು ತಮ್ಮ ತಮ್ಮಲ್ಲಿ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಇಲ್ಲಿ ಮಗುವು ತಂಡವಾಗಿ ಕಾರ್ಯನಿರ್ವಹಿಸುವ ಸಾಮಾಜಿಕ ಕೌಶಲವನ್ನು ಗಳಿಸಿಕೊಳ್ಳುತ್ತದೆ ಎನ್ನುತ್ತಾರೆ ಮಕ್ಕಳ ವಿಜ್ಞಾನ ಹಬ್ಬದ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ಕೈಪಿಡಿ ರಚನಾ ತಂಡದ ಸದಸ್ಯರಾದ ಉದಯ ಗಾಂವಕಾರ.

ಜನವಿಜ್ಞಾನ ಚಳುವಳಿಯಲ್ಲಿ ತೊಡಗಿಕೊಂಡಿರುವ ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಡುಪಿ ಘಟಕದ ಅಧ್ಯಕ್ಷರಾದ ಡಾ. ಪಿ.ವಿ ಭಂಡಾರಿಯವರು “ಮಕ್ಕಳು ಖುಷಿಡುವ ಏಕೈಕ ಉದ್ಧೇಶದಿಂದ ಶಾಲೆಗೆ ಬರಬೇಕು ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಬಿ.ಜಿ.ವಿ.ಎಸ್ ನ ಉಡುಪಿ ಜಿಲ್ಲಾ ಘಟಕವು ಶಿಕ್ಷಣ ಇಲಾಖೆಯ ಜೊತೆ ಸೇರಿ ವಿಜ್ಞಾನವನ್ನು ಬದುಕಾಗಿಸುವ ಕಾರ್ಯಗಳಲ್ಲಿ ತೊಡಗಲಿದೆ ಎಂದೂ ಭರವಸೆ ನೀಡುತ್ತಾರೆ.

ಮಗುವೇ ಕಲಿಕೆಯ ಸಂದರ್ಭಗಳನ್ನು ಸೃಷ್ಟಿಸುವ, ನಿಭಾಯಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ದೊರೆತ ಅನುಭವಗಳ ಮೂಲಕ ತನ್ನದೇ ಜ್ಞಾನ ಸೃಷ್ಟಿಯಲ್ಲಿ ತೊಡಗುವ ಕ್ಲಾಸ್ ರೂಮುಗಳನ್ನು ನಿಜವಾಗಿಸಲು ಇಂತಹ ಹಬ್ಬಗಳು ಅಗತ್ಯ.

 

ಉಡುಪಿ ಜಿಲ್ಲೆಯ ಕ್ಲಸ್ಟರ್ ಮಕ್ಕಳ ವಿಜ್ಞಾನ ಹಬ್ಬದ ದಿನಾಂಕಗಳು:

1.
25 ಮತ್ತು 26 /11/2019
ಹಿರಿಯಡ್ಕ ಕ್ಲಸ್ಟರ್
ಕೆ.ಪಿ.ಎಸ್ ಹಿರಿಯಡ್ಕ
ಬಿ.ಇ.ಓ ಉಡುಪಿ

2.
ಗರಡಿ ಮಜಲು ಕ್ಲಸ್ಟರ್
ಸ. ಹಿ.ಪ್ರಾ ಶಾಲೆ ಗರಡಿಮಜಲು
ಬಿ.ಇ.ಓ ಬ್ರಹ್ಮಾವರ

————–

27 ಮತ್ತು 28/11/2019

3.
ಸೈಬರ ಕಟ್ಟೆ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಕಾವಡಿ
ಬಿ.ಇ.ಓ ಬ್ರಹ್ಮಾವರ

4.
ವಳಕಾಡು ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ವಳಕಾಡು
ಬಿ.ಇ.ಓ ಉಡುಪಿ

5.
ಕೋಟೇಶ್ವರ ಕ್ಲಸ್ಟರ್
ಕೆ.ಪಿ.ಎಸ್ ಕೋಟೇಶ್ವರ
ಬಿ.ಇ.ಓ ಕುಂದಾಪುರ

6.
ಬಿದ್ಕಲಕಟ್ಟೆ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಬಿದ್ಕಲಕಟ್ಟೆ
ಬಿ.ಇ.ಓ ಕುಂದಾಪುರ

————–

29 ಮತ್ತು 30/11/2019

7.
ಸಂತೆಕಟ್ಟೆ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಸಂತೆಕಟ್ಟೆ
ಬಿ.ಇ.ಓ ಬ್ರಹ್ಮಾವರ

8.
ಮುದ್ರಾಡಿ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಮುದ್ರಾಡಿ
ಬಿ.ಇ.ಓ ಕಾರ್ಕಳ

9.
ನಾವುಂದ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಬಡಾಕರೆ
ಬಿ.ಇ.ಓ ಬೈಂದೂರು

—————–

2 ಮತ್ತು 3/12/2019

10.
ಉಪ್ಪುಂದ ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಕಂಚಿಕಾನ್
ಬಿ.ಇ.ಓ ಬೈಂದೂರು

11.
ಹೊಸ್ಮಾರು ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ನಲ್ಲೂರು
ಬಿ.ಇ.ಓ ಕಾರ್ಕಳ

—————-

4 ಮತ್ತು 5/12.2019

12.
ಬೈಂದೂರು ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಬೈಂದೂರು
ಬಿ.ಇ.ಓ ಬೈಂದೂರು

13.
ಸಾಣೂರು ಕ್ಲಸ್ಟರ್
ಸ.ಹಿ.ಪ್ರಾ ಶಾಲೆ ಪೆರ್ವಾಜೆ
ಬಿ.ಇ.ಓ ಕಾರ್ಕಳ

Leave a Reply